ಭಾರಿ ಮಳೆ, ಸೂರು ಕಳೆದುಕೊಂಡ ಕುಟುಂಬಳ ಮನವಿ, ರಸ್ತೆ, ವಿದ್ಯುತ್ ಸಂಪರ್ಕ ಕಡಿತ ದೂರು, ಆಶ್ರಯ ಕೇಂದ್ರ, ಶಾಲೆ ಸೇರಿದಂತೆ ಸಾಲು ಸಾಲು ಮನವಿಗಳನ್ನು ಬಹುತೇಕಾ ಜಿಲ್ಲಾಧಿಕಾರಿಗಳು ಆದ್ಯತೆ ನೀಡಿ ವಿಲೇವಾರಿ ಮಾಡುತ್ತಿದ್ದಾರೆ. ಇದರ ನಡುವೆ ಯುವಕನ ಅರ್ಜಿ ಜಿಲ್ಲಾಧಿಕಾರಿಯನ್ನೇ ದಂಗಾಗಿಸಿದೆ. ಗೆಳತಿ ಭೇಟಿ ಮಾಡಲು ಅವಕಾಶ ಕೊಡುವಂತೆ ಈತ ಜಿಲ್ಲಾದಿಕಾರಿಗೆ ಮನವಿ ಸಲ್ಲಿಸಿದ್ದಾನೆ.
ರಾಯ್‌ಪುರ್(ಜು.25) ಭಾರತದ ಬಹುಕೇ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಅನಾಹುತಗಳು ಸೃಷ್ಟಿಯಾಗಿದೆ. ಸ್ಥಳೀಯ ಜಿಲ್ಲಾಡಳಿತ ಸಾಗಾರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಸೂಚಿಸುತ್ತಿದೆ. ಇತ್ತ ಮಳೆಯಿಂದಾದ ಹಾನಿ, ಬೆಳೆ ನಷ್ಟ, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಸೂಚಿಸುತ್ತಿದ್ದಾರೆ. ಇತ್ತ ಕಚೇರಿಗೆ ಪ್ರತಿ ದಿನ ನೂರಾರು ಪರಿಹಾರ ಅರ್ಜಿಗಳು ಬರುತ್ತಿದೆ. ಇದರ ನಡುವೆ ಜಿಲ್ಲಾಧಿಕಾರಿಗೆ ಬಂದ ಮನವಿಯೊಂದು ಎಲ್ಲರ ಗಮನಸೆಳೆದಿದೆ. ತನ್ನ ಗರ್ಲ್‌ಫ್ರೆಂಡ್ ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಯುವಕನೊಬ್ಬ ಜಿಲ್ಲಾಧಿಕಾರಿಗೆ ಲಿಖಿತ ಅರ್ಜಿ ಸಲ್ಲಿಸಿದ್ದಾನೆ. ಇದೀಗ ಈ ಯುವಕನ ಅರ್ಜಿ ಭಾರಿ ವೈರಲ್ ಆಗುತ್ತಿದೆ.
ಚತ್ತೀಸಘಡದ ದಮ್ತಾರಿ ಜಿಲ್ಲೆಯ ಯುವಕ ಯಶ್ ಕುಮಾರ್ ಜಿಲ್ಲಾಧಿಕಾರಿ ನಮ್ರತಾ ಗಾಂಧಿಗೆ ಮನವಿ ಮಾಡಿದ್ದಾನೆ. ಯಶ್ ಕುಮಾರ್ ಕಳೆದೊಂದು ವರ್ಷದಿಂದ ಅದೇ ಜಿಲ್ಲೆಯ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಇವರಿಬ್ಬರ ಪ್ರೀತಿ ಯುವತಿ ಮನೆಗೆ ಗೊತ್ತಾಗಿದೆ. ಯುವತಿ ಮನೆಯಲ್ಲಿ ರಂಪಾಟಾ ಶುರುವಾಗಿದೆ.
undefined
ನೀವು ಲವ್ ಮಾಡ್ತಿದ್ದೀರಾ? ಚುಚ್ಚು ಮಾತಿನ ಸವಾಲು ಸ್ವೀಕರಿಸಿ ಜಾತ್ರೆಯಲ್ಲೇ ಚುಂಬಿಸಿದ ಜೋಡಿ!
ಯುವತಿ ಕೈಯಿಂದ ಮೊಬೈಲ್ ಫೋನ್ ಕಿತ್ತುಕೊಂಡ ಪೋಷಕರು, ಮನೆ ಬಿಟ್ಟು ತೆರಳದಂತೆ ತಾಕೀತು ಮಾಡಿದ್ದಾರೆ. ಇತ್ತ ಯುವತಿಯನ್ನು ಫೋನ್ ಮೂಲಕ ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ಕೊನೆಗೆ ಯುವತಿಯ ಗೆಳತಿಯರನ್ನು ಸಂಪರ್ಕಿಸಿದಾಗ ನಡೆದಿರುವ ಘಟನೆ ಯಶ್ ಕುಮಾರ್‌ಗೆ ತಿಳಿದಿದೆ. ಇದಾದ ಬಳಿಕ ಯುವತಿ ಮನೆಯತ್ತ ತೆರಳಿದ ಯುವಕ ಭೇಟಿ ಮಾಡುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಗ್ರಾಮಸ್ಥರು ವಾರ್ನಿಂಗ್ ನೀಡಿದ್ದಾರೆ. ಈ ಏರಿಯಾದಲ್ಲಿ ಕಾಣಿಸಿಕೊಂಡರೆ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗೆಳತಿಯನ್ನು ಭೇಟಿ ಮಾಡಲು ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಹೀಗಾಗಿ ಬೇರೆ ದಾರಿ ಕಾಣದ ಯಶ್ ಕುಮಾರ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಖುದ್ದಾಗಿ ನೀಡಿದ್ದಾನೆ. ಜಿಲ್ಲಾಧಿಕಾರಿ ನಮ್ರತಾ ಗಾಂಧಿ ಯುವಕನಿಂದ ಈ ಮನವಿ ಪತ್ರ ಸ್ವೀಕರಿಸಿದ್ದಾರೆ. ಆದರೆ ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೆಳತಿ ಭೇಟಿ ಮಾಡಲು ಎಲ್ಲಾ ಪ್ರಯತ್ನಗಳು ವಿಫಲಗೊಂಡಿರುವ ಕಾರಣ ಜಿಲ್ಲಾಧಿಕಾರಿ ಮೂಲಕ ಭೇಟಿ ಮಾಡುವ ಕೊನೆಯ ಆಸೆಯೊಂದನ್ನು ಯಶ್ ಕುಮಾರ್ ಇಟ್ಟುಕೊಂಡಿದ್ದಾನೆ. ತನಗೆ ಜಿಲ್ಲಾಧಿಕಾರಿಗಳಿಂದ ನ್ಯಾಯ ಸಿಗಲಿದೆ ಅನ್ನೋ ವಿಶ್ವಾಸವಿದೆ ಎಂದಿದ್ದಾನೆ. ಇದೀಗ ಜಿಲ್ಲಾಧಿಕಾರಿ ಪ್ರತಿಕ್ರಿಯೆಗೆ ಯುವಕ ಕಾಯುತ್ತಿದ್ದಾನೆ.
ಏಳಡಿ ಎತ್ತರದ ಗರ್ಲ್‌ಫ್ರೆಂಡ್ ಜೊತೆ ಮೂರಡಿ ರಾಜನ ಮಸ್ತಿ, ಜೋಡಿ ವಿಡಿಯೋಗೆ ಚಿಂದಿ ಕಮೆಂಟ್!