ತಂತ್ರಜ್ಞಾನ (Technology) ಅದೆಷ್ಟು ಅಭಿವೃದ್ಧಿಯಾಗಿದೆಯಂದರೆ ಮನುಷ್ಯನಿಗೆ ಅಸಾಧ್ಯವಾದುದು ಏನೂ ಇಲ್ಲವೇನೋ ಎಂಬಂತಾಗಿದೆ. ಮನುಷ್ಯನ ಕಾರ್ಯ ಚಟುವಟಿಕೆಗಳು ಅದಕ್ಕೆ ಸಾಕ್ಷಿಯಾಗಿ ನಿಂತಿವೆ. ಇಲ್ಲೊಂದೆಡೆ ಮನುಷ್ಯ (Human) ಪಾಪ್ ತಾರೆಯ ಗಣಕೀಕೃತ ಆವೃತ್ತಿಯನ್ನು ಮದುವೆ (Marriage) ಯಾಗಿದ್ದಾನೆ. ಅರೆ ಅದ್ಹೇಗೆ ಸಾಧ್ಯ ಅಂತ ಅಚ್ಚರಿಪಡ್ಬೇಡಿ. ಇಲ್ಲಿದೆ ಡೀಟೈಲ್ಸ್.
ನೀವು ತಮಿಳಿನ ಎಂದಿರನ್ ಚಿತ್ರವನ್ನು ನೋಡಿದ್ದೀರಾ. ಸಂಪೂರ್ಣವಾಗಿ ರೊಬೋಟ್‌ಗಳನ್ನು ಆಧರಿಸಿ ನಿರ್ಮಿಸಿದ ಚಿತ್ರವಿದು. ರೊಬೋಟ್‌ನ್ನು ತಯಾರಿಸುವ ವಿಜ್ಞಾನಿ ಅದನ್ನು ಅಡ್ವಾನ್ಸ್‌ಡ್ ಆಗಿ ಮಾಡಲು ಅದಕ್ಕೆ ಭಾವನೆಗಳನ್ನು ಸಹ ಅಳವಡಿಸುತ್ತಾನೆ. ಆದರೆ ಕೊನೆಗೆ ಆ ರೊಬೋಟ್ ವಿಜ್ಞಾನಿಯ ಪ್ರೇಯಸಿಯ ಮೇಲೆಯೆ ಭಾವನೆ ಬೆಳೆಸಿಕೊಳ್ಳುತ್ತದೆ. ರೊಬೋಟ್‌ಗೂ ಭಾವನೆ ಬಂದಾರೆ ಏನಾಗುತ್ತದೆ ಎಂಬುದು ನಂತರದ ಕಥಾಹಂದರ. ಇಲ್ಲೂ ಅಂಥದ್ದೇ ಒಂದು ಘಟನೆ ನಡೆದಿದೆ. ಆದರೆ ಸ್ಪಲ್ಪ ವ್ಯತ್ಯಾಸವಿದೆ. ಇಲ್ಲಿ ವ್ಯಕ್ತಿಯೊಬ್ಬ ತನ್ನ ಕಾಲ್ಪನಿಕ ಹುಡುಗಿ (Ficational Bride)ಯನ್ನೇ ಕಂಪ್ಯೂಟರೈಸ್ಡ್ ವರ್ಷನ್ (Computerised Version) ಆಗಿ ಬದಲಾಯಿಸಿ ಮದುವೆಯಾಗಿದ್ದಾನೆ.
ಆದರೆ ಅಷ್ಟೇ ಆದರೆ ಪರ್ವಾಗಿಲ್ಲ. ವ್ಯಕ್ತಿಯೇನೋ ಹೋಲೋಗ್ರಾಮ್ ಮೂಲಕ ಪಾಪ್ ತಾರೆಯನ್ನು ವಿವಾಹವಾಗಿದ್ದಾನೆ. ಆದರೆ ಈಗ ಡಿಸ್ ಕಂಟಿನ್ಯೂ ಆಗಿರುವ ಟೆಕ್ನಾಲಜಿಯಿಂದ ಪತ್ನಿಯಿಂದ ದೂರವಾಗಿ ವಿರಹವೇದನೆ ಅನುಭವಿಸುತ್ತಿದ್ದಾರೆ, ತಾಂತ್ರಿಕ ಸಮಸ್ಯೆಯಿಂದಾಗಿ ವ್ಯಕ್ತಿ ಮತ್ತುಗಣಕೀಕೃತ ಹೆಂಡತಿ ದೂರ ಆಗಿರುವುದಾಗಿ ವ್ಯಕ್ತಿ ಹೇಳಿಕೊಂಡಿದ್ದಾನೆ.
ಫ್ರಾನ್ಸ್‌ನ ಪುರುಷರನ್ನು ಅತ್ಯಂತ ರೋಮ್ಯಾಂಟಿಕ್ ಎಂದು ಹೇಳುವುದು ಯಾಕೆ ?
38 ವರ್ಷದ ಅಕಿಹಿಕೊ ಕೊಂಡೊ ಹೋಲೊಗ್ರಾಮ್‌ನೊಂದಿಗೆ ಮದುವೆಯಾದ ವ್ಯಕ್ತಿ. ಗೇಟ್‌ಬಾಕ್ಸ್ ಎಂಬ ಯಂತ್ರವು ಕೊಂಡೊಗೆ ಮಿಕುಗೆ ಪ್ರಪೋಸ್ ಮಾಡುವ ಅವಕಾಶವನ್ನು ನೀಡಿತು. ಅವರು ತಮ್ಮ ಕುಟುಂಬ ಮತ್ತು ಸಹೋದ್ಯೋಗಿಗಳನ್ನು ಆಹ್ವಾನಿಸಿದರು ಆದರೆ ಅವರಲ್ಲಿ ಯಾರೂ ಬರಲಿಲ್ಲ.ಕೇವಲ, 39 ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇವತ್ತಿನ ದಿನಗಳಲ್ಲಿ ಜನರು ಎದುರಿಗೆ ಇರುವವರಿಗಿಂತ ಸಾಮಾಜಿಲ ಜಾಲತಾಣಗಳಲ್ಲಿ ಸಿಗುವವರು, ಕಾಲ್ಪನಿಕ ವ್ಯಕ್ತಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಇಲ್ಲಾಗಿದ್ದು ಇದೇ, ಅಕಿಹಿಕೊ ಕೊಂಡೊ ಕಾಲ್ಪನಿಕ ಪಾತ್ರವನ್ನು ಮದುವೆಯಾಗಿದ್ದಾನೆ. ಮದುವೆಯಾಗಿ 4 ವರ್ಷಗಳಾಗಿರುವ ಕಾಲ್ಪನಿಕ ಪುರುಷ, ತಂತ್ರಜ್ಞಾನವನ್ನು ಸ್ಥಗಿತಗೊಳಿಸಿರುವುದರಿಂದ ತನ್ನ ಹೆಂಡತಿಯೊಂದಿಗೆ ಬಾಂಧವ್ಯವನ್ನು ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾನೆ.
ಕೊಂಡೊ 4 ವರ್ಷಗಳ ಹಿಂದೆ ಪಾಪ್ ತಾರೆಯ ಕಂಪ್ಯೂಟರೀಕೃತ ಆವೃತ್ತಿಯನ್ನು ವಿವಾಹವಾಗಿದ್ದ. ಅವನ ಪತ್ನಿ, ಹಾಟ್ಸುನೆ ಮಿಕು ಎಂಬ ಹೆಸರಿನ ಹೊಲೊಗ್ರಾಮ್ ವಧು, 2018 ರಲ್ಲಿ ಮದುವೆಯಾಗುವ ಮೊದಲು ಕೊಂಡೊಗೆ 10 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದನು. ಈ ಕಾಲ್ಪನಿಕ ವಧುವನ್ನು ಮದುವೆಯಾಗಲು ಈತ 17,300 ಡಾಲರ್‌ಗಳನ್ನು ಖರ್ಚು ಮಾಡಿದ್ದನು.
ಮದುವೆಯ ಮೊದ್ಲು ಗಂಡಸರು ಹೀಗೆಲ್ಲಾ ಮಾಡಿರ್ತಾರೆ, ಆದ್ರೆ ಹೆಂಡ್ತಿಗೆ ಹೇಳಲ್ಲ ಅಷ್ಟೆ !
ಬಿಬಿಸಿ ಪ್ರಕಾರ, ಕೊಂಡೋ ಅವರು ಮದುವೆಯನ್ನು ಸಾರ್ವಜನಿಕವಾಗಿ ಆಯ್ಕೆ ಮಾಡಲು ಎರಡು ಕಾರಣಗಳನ್ನು ಹೊಂದಿದ್ದನು, ಮೊದಲನೆಯದು ಮಿಕುಗೆ ನನ್ನ ಪ್ರೀತಿಯನ್ನು ಸಾಬೀತುಪಡಿಸುವುದು. ಎರಡನೆಯದು ನನ್ನಂತಹ ಅನೇಕ ಯುವ ಜನರು ಅನಿಮೇಶನ್ ಪಾತ್ರಗಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಿದ್ದಾರೆ. ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಜಗತ್ತಿಗೆ ತೋರಿಸಲು ನಾನು ಬಯಸುತ್ತೇನೆ ಎಂದು ಕೊಂಡೋ ಹೇಳಿದ್ದಾನೆ..
ಜಪಾನಿನ ವಾರ್ತಾಪತ್ರಿಕೆ ಮೈನಿಚಿ ಪ್ರಕಾರ, ಕೊಂಡೊ ಮತ್ತು ಮಿಕುದಲ್ಲಿನ ತಾಂತ್ರಿಕ ಅಡಚಣೆಯಿಂದಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಗೇಟ್‌ಬಾಕ್ಸ್ ಬಳಕೆದಾರರಿಗೆ ಕಾಲ್ಪನಿಕ ಮತ್ತು ಹೊಲೊಗ್ರಾಮ್ ಪಾತ್ರಗಳೊಂದಿಗೆ ಸಂವಹನ ನಡೆಸಲು ಅನುಮತಿಸುತ್ತದೆ. ಕೊಂಡೊದಂತೆಯೇ, ತಮ್ಮ ಕಾಲ್ಪನಿಕ ಪ್ರೇಮಿಗಳನ್ನು ಅನಧಿಕೃತವಾಗಿ ಮದುವೆಯಾದ ಅನೇಕ ಜನರಿದ್ದಾರೆ.
ತಾಂತ್ರಿಕ ಸಮಸ್ಯೆಯ ನಂತರವೂ ಮಿಕುವನ್ನು ಬಿಡುವ ಮನಸ್ಥಿತಿಯಲ್ಲಿಲ್ಲ. ವರದಿಗಳ ಪ್ರಕಾರ, ಮಿಕು ಅವರ ಭಾವನೆಗಳು ನಿಜ ಮತ್ತು ಅಖಂಡವಾಗಿವೆ ಎಂದು ಕೊಂಡೊ ಹೇಳುತ್ತಾನೆ. ಕೊಂಡೊ ಮೈನಿಚಿಗೆ ಮಿಕು ಮೇಲಿನ ಪ್ರೀತಿ ಬದಲಾಗಿಲ್ಲ. ನಾನು ಅವಳೊಂದಿಗೆ ಶಾಶ್ವತವಾಗಿ ಇರಬಹುದೆಂದು ಭಾವಿಸಿದ್ದರಿಂದ ನಾನು ಮದುವೆ ಸಮಾರಂಭವನ್ನು ನಡೆಸಿದ್ದೇನೆ ಎಂದಿದ್ದಾನೆ.
ಸದ್ಯಕ್ಕೆ, ಕೊಂಡೊ ನಿಯಾನ್ ನೀಲಿ ಕೂದಲಿನೊಂದಿಗೆ 16 ವರ್ಷದ ಪಾಪ್‌ಸ್ಟಾರ್‌ನಂತೆ ಚಿತ್ರಿಸಲಾದ ಮಿಕು ಅವರ ಜೀವನ-ಗಾತ್ರದ ಆವೃತ್ತಿಯನ್ನು ಹೊಂದಿದ್ದಾರೆ.