ಯಾಕೋ ಈ ಮಗು ನನ್ನದಲ್ಲ ಎನಿಸಿದ ತಂದೆಗೆ, ಡಿಎನ್‍ಎ ರಿಪೋರ್ಟ್ ನೋಡಿ ಶಾಕ್!

ನಮ್ಮ ಮನಸ್ಸಿನಲ್ಲಿ ಮೂಡುವ ಅನೇಕ ಅನುಮಾನಕ್ಕೆ ಸೂಕ್ತ ದಾಖಲೆ ಇರೋದಿಲ್ಲ. ಕೆಲವೊಂದರ ಸಾಕ್ಷ್ಯ ಹುಡುಕ್ತಾ ಹೋದ್ರೆ ನಾವೇ ಮೂರ್ಖರಾಗ್ತೇವೆ. ಜನರ ಮೇಲೆ ವಿಶ್ವಾಸವಿಡುವ, ಮನಸ್ಸನ್ನು ನಿಗ್ರಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿಲ್ಲವೆಂದ್ರೆ ಈ ವ್ಯಕ್ತಿಯಂತೆ ಎಲ್ಲವನ್ನೂ ಕಳೆದುಕೊಳ್ತೇವೆ. 
 


ದಾಂಪತ್ಯದಲ್ಲಿ ಪ್ರೀತಿ ಜೊತೆ ನಂಬಿಕೆ, ವಿಶ್ವಾಸ, ಪರಸ್ಪರ ಗೌರವ ಮಹತ್ವದ ಪಾತ್ರವಹಿಸುತ್ತದೆ. ಸಂಗಾತಿ ಮಧ್ಯೆ ನಂಬಿಕೆ ಸತ್ತಹೋದಾಗ ದಾಂಪತ್ಯ ಗಟ್ಟಿಯಾಗಿ ಉಳಿಯಲು ಸಾಧ್ಯವಿಲ್ಲ. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗುತ್ತದೆ. ಸಂಗಾತಿ ಮತ್ತು ಮಕ್ಕಳನ್ನು ಅನುಮಾನದಿಂದ ನೋಡುವ ವ್ಯಕ್ತಿಯ ಜೊತೆ ಬಾಳ್ವೆ ನಡೆಸೋದು ಕಷ್ಟ. ಇದೇ ಕಾರಣಕ್ಕೆ ಅನೇಕರ ದಾಂಪತ್ಯ ಮುರಿದು ಬೀಳುತ್ತದೆ. ಈ ವ್ಯಕ್ತಿ ಕೂಡ ಈಗ ಅದೇ ತಪ್ಪು ಮಾಡಿದ್ದಾನೆ. ಮೂರು ಮಕ್ಕಳ ಸುಂದರ ಸಂಸಾರವನ್ನು ತಾನೇ ಹಾಳು ಮಾಡಿಕೊಂಡಿದ್ದಾನೆ. ಅನುಮಾನಕ್ಕೆ ಮನಸ್ಸನ್ನು ಒಡ್ಡಿ, ಸಂಗಾತಿ ಹಾಗೂ ಮಕ್ಕಳ ವಿಶ್ವಾಸ ಕಳೆದುಕೊಂಡಿದ್ದಲ್ಲದೆ, ಈಗ ಪತ್ನಿಗೆ ವಿಚ್ಛೇದನ ನೀಡುವ ಪರಿಸ್ಥಿತಿ ಎದುರಿಸುತ್ತಿದ್ದಾನೆ.

ರೆಡ್ಡಿಟ್ ನಲ್ಲಿ ವ್ಯಕ್ತಿ ತನ್ನ ಕಥೆಯನ್ನು ಹೇಳಿಕೊಂಡಿದ್ದಾನೆ. ಆತನಿಗೆ ಮೂವರು ಗಂಡು ಮಕ್ಕಳು. ಅದ್ರಲ್ಲಿ ಎರಡನೇ ಮಗನ ಮೇಲೆ ವ್ಯಕ್ತಿಗೆ ಅನುಮಾನವಿತ್ತು. ತನ್ನ ಪತ್ನಿ ತನಗೆ ಮೋಸ ಮಾಡಿದ್ದಾಳೆಂದು ಆತ ಮನಸ್ಸಿನಲ್ಲಿಯೇ ಸಂಶಯ ಪಿಶಾಚಿಯನ್ನು ಹೆಮ್ಮರವಾಗಲು ಬಿಟ್ಟಿದ್ದ. ಎರಡನೇ ಮಗನನ್ನು ಕೀಳಾಗಿ ನೋಡ್ತಿದ್ದ.

Latest Videos

ಮ್ಯಾಚ್​ಗೆ ಬಂದು ಹೊಟ್ಟೆ ಮೇಲೆ ಕೈಯಿಟ್ಟ ಅನುಷ್ಕಾ ಶರ್ಮಾ: ವಿಡಿಯೋ ನೋಡಿ ತಲೆ ಕೆಡಿಸಿಕೊಳ್ತೀರೋ ಫ್ಯಾನ್ಸ್​

ಕುಟುಂಬದ ಎಲ್ಲ ಸದಸ್ಯರಿಗಿಂತ ಎರಡನೇ ಮಗ (Son) ಸ್ವಲ್ಪ ಭಿನ್ನವಾಗಿದ್ದೇ ಇದಕ್ಕೆ ಕಾರಣವಾಗಿತ್ತು. ಎರಡನೇ ಮಗ ಯಾಕೆ ನಮ್ಮನ್ನು ಹೋಲುತ್ತಿಲ್ಲ ಎಂಬುದನ್ನು ಸದಾ ಚಿಂತಿಸುತ್ತಿದ್ದ ವ್ಯಕ್ತಿ, ಪತ್ನಿಯನ್ನು ಪ್ರಶ್ನಿಸಲು ಹೋಗಿರಲಿಲ್ಲ. ಆದ್ರೆ ಅನೇಕ ದಿನಗಳಿಂದ ಆತನ ತಲೆಯಲ್ಲಿ ಕೊರೆಯುತ್ತಿದ್ದ ವಿಷ್ಯವನ್ನು ಕ್ಲಿಯರ್ ಮಾಡಲು ಅಂತಿಮ ನಿರ್ಧಾರ ತೆಗೆದುಕೊಂಡ. ಮನೆಗೆ ಡಿಎನ್ ಎ ಕಿಟ್ ತರಿಸಿದ್ದ. ಕಿಟ್ ಬಂದ್ಮೇಲೆ ಮಗನ ಡಿಎನ್ ಎ (DNA) ಪರೀಕ್ಷೆ ಮಾಡುವುದಾಗಿ ಪತ್ನಿಗೆ ಹೇಳಿದ್ದ. ಎರಡನೇ ಮಗು, ನಮ್ಮಂತೆ ಇಲ್ಲ. ಹಾಗಾಗಿ ನನಗೆ ಸಂಶಯವಿದ್ದು, ಆತನ ಡಿಎನ್ ಎ ಪರೀಕ್ಷೆ ಮಾಡುವುದಾಗಿ ಪತ್ನಿಗೆ ಹೇಳಿದ್ದಾನೆ. ಈ ಮಾತನ್ನು ಕೇಳಿ ಪತ್ನಿ ದಂಗಾಗಿದ್ದಾಳೆ. ಡಿಎನ್ ಎ ಪರೀಕ್ಷೆ ಮಾಡುವ ಅಗತ್ಯವಿಲ್ಲವೆಂದು ಪತಿಗೆ ಹೇಳಿದ್ದಾಳೆ. ಆದ್ರೆ ಅದನ್ನು ನಿರ್ಲಕ್ಷ್ಯ ಮಾಡಿದ ಪತಿ, ಎರಡನೇ ಮಗನ ಡಿಎನ್ ಎ ಪರೀಕ್ಷಿಸಿದ್ದಾನೆ.

ಲಿಪ್​ಲಾಕ್​ ಸೀನ್​ ಮಾಡಿದ್ರೆ ಮನೆಯಲ್ಲಿ ಹೊಡೆದಾಟವೇ ನಡೆಯತ್ತೆ ಎಂದ ನಟ ನಾನಿ ಹೇಳಿದ್ದೇನು?

DNA ಫಲಿತಾಂಶ ಏನು? : ಡಿಎನ್ ಎ ಪರೀಕ್ಷೆ (Test) ಫಲಿತಾಂಶ ಪತಿಗೆ ನೆಮ್ಮದಿ ನೀಡಿದೆ. ಯಾಕೆಂದ್ರೆ ಆತನ ಪತ್ನಿ ಯಾವುದೇ ದ್ರೋಹ ಮಾಡಿರಲಿಲ್ಲ. ಎರಡನೇ ಮಗ ಕೂಡ ಈತನದ್ದೇ ಆಗಿತ್ತು. ಇದ್ರಿಂದ ವ್ಯಕ್ತಿ ಖುಷಿಯಾಗ್ಬೇಕು ಎನ್ನುವಷ್ಟರಲ್ಲಿ ಪತ್ನಿ ಶಾಕ್ ನೀಡಿದ್ದಾಳೆ. ಪತಿಗೆ ವಿಚ್ಛೇದನ ನೀಡಲು ಆಕೆ ಮುಂದಾಗಿದ್ದಾಳೆ. ಪತಿಯ ಈ ಪರೀಕ್ಷೆ ಆಕೆ ಮನಸ್ಸನ್ನು ಘಾಸಿಗೊಳಿಸಿದೆ. ತನ್ನ ಮೇಲೆ ವಿಶ್ವಾಸವಿಲ್ಲದ ವ್ಯಕ್ತಿ ಜೊತೆ ಜೀವನ ನಡೆಸಲು ಇಷ್ಟವಿಲ್ಲ ಎಂದ ಪತ್ನಿ, ಮಕ್ಕಳ ಜೊತೆ ತವರು ಸೇರಿದ್ದಾಳೆ. ಮಕ್ಕಳು ಕೂಡ ಅಪ್ಪನ ಅನುಮಾನದಿಂದ ಕೋಪಗೊಂಡಿದ್ದಾರೆ.

ಮುಂದೇನು ಮಾಡ್ಲಿ? : ಪತಿಯನ್ನು ಅನುಮಾನಿಸಿದ್ದ ಪತಿಗೆ ಈಗ ತಾನು ಮಾಡಿದ ತಪ್ಪಿನ ಅರಿವಾಗಿದೆ. ನನ್ನ ಮೊದಲ ಎರಡು ಸಂಬಂಧಗಳಲ್ಲಿ ನಾನು ಮೋಸ ಮಾಡಿದ್ದೇನೆ. ಆದರೆ ನಾನು ನನ್ನ ಹೆಂಡತಿಗೆ ಎಂದಿಗೂ ಮೋಸ ಮಾಡಿಲ್ಲ. ಅವರು ನನಗೆ ಎಂದಿಗೂ ಮೋಸ ಮಾಡಿಲ್ಲ. ಆದ್ರೆ ನಾನು ಮಾಡಿದ ಈ ದೊಡ್ಡ ತಪ್ಪು ನನಗೆ ಈಗ ತೊಂದರೆ ತಂದಿದೆ ಎಂದು ವ್ಯಕ್ತಿ ಬರೆದಿದ್ದಾನೆ. ಎರಡನೇ ಮಗ ನನ್ನ ಜೊತೆ ಮಾತುಬಿಟ್ಟಿದ್ದಾನೆ. ಪತ್ನಿ ವಿಚ್ಛೇದನ ಕೇಳ್ತಿದ್ದಾಳೆ ಏನು ಮಾಡ್ಲಿ ಎಂದು ಪ್ರಶ್ನೆ ಮಾಡಿದ್ದಾನೆ.

ರೆಡ್ಡಿಟ್ ನಲ್ಲಿ ಅನೇಕರು ಈತನ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ DNA Test ಮಾಡಿಸಿದ್ದಕ್ಕೆ ನಿನ್ನನ್ನು ಬಿಟ್ಟು ಹೋಗಿಲ್ಲ, ನಿನ್ನ ಮಗನ ಜೊತೆ ನೀನು ನಡೆದುಕೊಂಡ ರೀತಿ ಹಾಗೂ ಆಕೆಯನ್ನು ಅನುಮಾನಿಸಿದ್ದು ಅವಳ ಮನಸ್ಸನ್ನು ಘಾಸಿಗೊಳಿಸಿದೆ ಎಂದು ಅನೇಕರು ಹೇಳಿದ್ದಾರೆ. 
 

click me!