ಸುಖ ಸಂಸಾರಕ್ಕೆ ಬಿಗ್​ಬಾಸ್​​ ಖ್ಯಾತಿ ಅರುಣ್​ ಸಾಗರ್​ ಗಾಳಿಪಟದ ಸೂತ್ರ ಹೀಗಿದೆ ನೋಡಿ!

By Suvarna News  |  First Published Oct 14, 2023, 11:46 AM IST

ಸಂಸಾರ ಸುಖವಾಗಿರಬೇಕು ಎಂದರೆ ಗಾಳಿಪಟದ ಸೂತ್ರದಂತಿರಬೇಕು ಎಂದ ಬಿಗ್​ಬಾಸ್​ ಖ್ಯಾತಿಯ ಅರುಣ್​ ಸಾಗರ್ ದಂಪತಿ ಹೇಳಿದ್ದೇನು?
 


ಸಂಸಾರ ಸುಖವಾಗಿ ಇರಬೇಕು ಎಂದರೆ ನಮ್ಮ ಹಿರಿಯರು 12 ಸೂತ್ರಗಳನ್ನು ಹೇಳಿದ್ದಾರೆ. ದಂಪತಿಗಳು ಸಾಮರಸ್ಯ ಇರಲು ಪರಸ್ಪರ ಹೇಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು, ಚಿಕ್ಕ ಪುಟ್ಟ ಸಮಸ್ಯೆ ಬಂದರೂ ಅದನ್ನು ನಿಭಾಯಿಸುವುದು ಹೇಗೆ ಎಂದೆಲ್ಲಾ ಮಾಹಿತಿಯನ್ನು ಹಿರಿಕರು ಕೊಡುವುದುಂಟು. ಇದೇ ಕಾರಣಕ್ಕೆ ಗಂಡ- ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುವ ನಾಣ್ಣುಡಿ ಇದೆ. ಆದರೆ ಇಂದು ಚಿಕ್ಕಪುಟ್ಟ ಜಗಳವಾದರೂ ಅದು ಕೋರ್ಟ್​ ಮೆಟ್ಟಿಲವರೆಗೆ ಹೋಗಿ ಕೊನೆಗೆ ವಿಚ್ಛೇದನವರೆಗೆ ಅನ್ನುವಂತಾಗಿದೆ. ಸುಖ ಸಂಸಾರಕ್ಕೆ 12 ಸೂತ್ರಗಳು ಎಂದು ಬಹಳ ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಸೂತ್ರಗಳು ಎಷ್ಟೇ ಇದ್ದರೂ ಇಂದು ಬಹುತೇಕ ಸಂಸಾರಗಳು ಛಿದ್ರ ಆಗುತ್ತಿರುವುದೇ ಹೆಚ್ಚು. ಚಿಕ್ಕ ಪುಟ್ಟ ವಿಷಯಗಳಿಗೂ ಜಗಳವಾಗಿ ಅದು ವಿಚ್ಛೇದನ ತಲುಪುತ್ತಿರುವುದು ಇತ್ತೀಚಿಗೆ ಮಾಮೂಲಾಗಿ ಬಿಟ್ಟಿದೆ. ಇದೇ ಕಾರಣಕ್ಕೆ ಗಂಡ-ಹೆಂಡತಿ (Husband and Wife) ಜಗಳ ಇಂದು  ಕೋರ್ಟ್​ ಕೇಸ್​ ಹಾಕುವವರೆಗೆ, ವಿಚ್ಛೇದನ ಪಡೆಯುವವರೆಗೆ ಎನ್ನುವ ಮಾತು ಈಗ ಸರ್ವಸತ್ಯವಾಗಿಬಿಟ್ಟಿದೆ. ತಪ್ಪು ಗಂಡಂದೋ, ಹೆಂಡತಿಯದ್ದೋ ಒಟ್ಟಿನಲ್ಲಿ ಸಂಸಾರ, ದಾಂಪತ್ಯಕ್ಕೆ ಇರುವ ಮಹತ್ವದ ಅರ್ಥವೇ ಇಂದು ಬದಲಾಗಿರುವುದಂತೂ ದಿಟ. ಕೋರ್ಟ್​ಗಳಲ್ಲಿ ದಾಖಲಾಗುವ ಒಂದೊಂದು ಡಿವೋರ್ಸ್​  ಕೇಸ್​ಗಳನ್ನು ಪರಿಶೀಲಿಸಿದರೆ ತೀರಾ ಕ್ಷುಲ್ಲಕ ಕಾರಣಕ್ಕೆ ಕೇಸ್​ ಹಾಕಿರುವುದನ್ನು ನೋಡಬಹುದು. ಒಂದು ಕಡೆ ಕೆಲವು ವರ್ಗಗಳಲ್ಲಿ ಮದುವೆಯಾಗಲು ಹೆಣ್ಣುಮಕ್ಕಳೇ ಸಿಗದ ಸ್ಥಿತಿ ಇರುವಾಗ, ಅದೇ ಇನ್ನೊಂದೆಡೆ ದಾಂಪತ್ಯದಲ್ಲಿ ಬಿರುಕುಗಳು ಹೆಚ್ಚುತ್ತಿವೆ. 

ಇದು ದಾಂಪತ್ಯದ ಕಲಹದ ಮಾತಾದರೆ, ಇನ್ನು ಗಂಡ- ಹೆಂಡತಿಯ ಸಂಬಂಧದ ಕುರಿತು ಮಾಡುವ ಜೋಕ್ಸ್​, ಮೀಮ್ಸ್​ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಹೆಂಡತಿಯರ ಮೇಲಿನ ಜೋಕ್ಸ್​ಗಳೇ ಹೆಚ್ಚು ಎಂದರೂ ತಪ್ಪಾಗಲಿಕ್ಕಿಲ್ಲ. ದಂಪತಿ ನಡುವಿನ ಜೋಕ್ಸ್​ಗಳನ್ನು ಯಾರೂ ಹೆಚ್ಚಾಗಿ ಸೀರಿಯಸ್​ ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿಯೂ ಹೀಗೆಯೇ ಎಂದು ಅಂದುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ ಇವುಗಳ ಜೋಕ್ಸ್​, ಮೀಮ್ಸ್​ಗಳು ಸಕತ್​ ವೈರಲ್​ ಆಗುತ್ತವೆ.  

Tap to resize

Latest Videos

ಸಿಟ್ಟು ಬಂದ್ರೆ ಗಂಡ ದಡಬಡ ಅಂತ ಮನೆಯಿಂದ ಹೊರ ಹೋಗ್ಬೇಕು, ಸುಖ ಸಂಸಾರಕ್ಕೆ ಹರೀಶ್ ಈ ಸೂತ್ರ ವರ್ಕ್ ಔಟ್ ಆಗುತ್ತಾ?

ಇದೀಗ  ಬಿಗ್​ಬಾಸ್​ ಖ್ಯಾತಿಯ ನಟ-ಕಲಾ ನಿರ್ದೇಶಕ ಅರುಣ್ ಸಾಗರ್​ ಹಾಗೂ ಪತ್ನಿ ಮೀರಾ ಸಾಗರ್​ ಅವರು ಸುಖ ಸಂಸಾರಕ್ಕೆ ಗಾಳಿಪಟದ ಸೂತ್ರವನ್ನು ಹೇಳಿದ್ದಾರೆ. ಅದೇನೆಂದರೆ, ಜೀವನ ಎನ್ನೋದು ದೊಡ್ಡ ಪ್ರಪಂಚ ಇದ್ದಂತೆ. ಇದು ಸುಂದರ ಆಗಿರ್ಬೇಕು ಎಂದರೆ ಗಾಳಿಪಟದ ಸೂತ್ರವನ್ನು ಅನುಸರಿಸಬೇಕು. ಗಾಳಿ ಮತ್ತು ಪಟ ಒಂದಕ್ಕೊಂದು ಪೂರಕವಾಗಿದೆ. ಗಾಳಿಗೆ ಪಟ ಬೇಕು, ಪಟಕ್ಕೆ ಗಾಳಿ ಬೇಕು. ಇವೆರಡೂ ಸರಿ ಹೊಂದಿಕೊಂಡು ಹೋಗಲು ಸೂತ್ರ ಬೇಕಾಗುತ್ತದೆ. ಸೂತ್ರ ಸರಿಯಾಗಿದ್ದರೆ ಗಾಳಿಪಟ ಸರಿಯಾಗಿರುತ್ತದೆ ಎಂದಿದ್ದಾರೆ. ಅದಕ್ಕೆ ದನಿಗೂಡಿಸಿದ ಪತ್ನಿ ಮೀರಾ, ಇಲ್ಲಾಂದ್ರೆ ಪಟ ಪಟ ಅಂತ ಬೀಳತ್ತೆ ಎಂದು ತಮಾಷೆ ಮಾಡಿದ್ದಾರೆ. 

 ಮೊನ್ನೆಯಷ್ಟೇ  ಕಾಮಿಡಿ ಕಿಲಾಡಿಯ ಸೀಸನ್​ 4ರ ವಿಜೇತ ಹರೀಶ್​ ಹಿರಿಯೂರು (Harish Hiriyuru) ಅವರು ತಮ್ಮ ಎಂದಿನ ಹಾಸ್ಯದ ರೂಪದಲ್ಲಿಯೇ ಸುಖ ಸಂಸಾರಕ್ಕೆ 12ನೇ ಸೂತ್ರದ ಬದಲು 13ನೇ ಸೂತ್ರದ ಕುರಿತು ಹೇಳಿದ್ದಾರೆ. ಇದನ್ನು ಮಾಡಿದರೆ ಸಂಸಾರದಲ್ಲಿ ಯಾವುದೇ ಜಗಳ ಬರುವುದೇ ಇಲ್ಲ ಎಂದಿದ್ದರು.  ಗಂಡ ಹೆಂಡ್ತಿ ಅಂದ್ಮೇಲೆ ಜಗಳ ಇದ್ದೇ ಇರುತ್ತದೆ, ಅವಳು ಬೈಯೋದು, ಇವನು ಬೈಯೋದು ಎಲ್ಲವೂ ಮಾಮೂಲು. ಅದಕ್ಕೇ ಗಂಡಸರು ಸಮಾಧಾನದಿಂದ ಇರಬೇಕು. ಗಂಡಸರು ಸಿಟ್ಟಿಗೆದ್ರೆ ಕೆಲ್ಸ ಆಗಲ್ಲ. ಹೆಂಡ್ತಿ ಅಂತೂ ಸಿಟ್ಟಿಗೆದ್ದಿರ್ತಾಳೆ. ಅದಕ್ಕೆ ಗಂಡ ಸಿಟ್ಟಿಗೇಳ್ಬಾರ್ದು. ಸೀದಾ ಮನೆ ದಡಬಡ ಎಂದು ಮನೆಗೆ ಹೋಗಬೇಕು. ಆ ಕಡೆ ಕ ಕಡೆ ನೋಡಿ, ಏನೇ ಅಂತ ಸಿಟ್ಟಿನಿಂದ ನೋಡಿ ಆಮೇಲೆ ಕಾಲು ಹಿಡಿದುಕೊಂಡು ಬಿಟ್ಟರೆ ಎಲ್ಲವೂ  ಸುಗಮವಾಗುತ್ತದೆ ಎಂದಿದ್ದಾರೆ. 

Viral Video: ಗಂಡನಾದವ ಈ ವಿಷಯ ತಿಳಿದುಕೊಂಡ್ರೆ ಸಂಸಾರದಲ್ಲಿ ಸುಖವೋ ಸುಖ...

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!