ಹೆಂಡ್ತಿ ಖುಷಿಗಾಗಿ ಕೋಟಿ ಕೋಟಿ ಸಂಬಳದ ಕೆಲಸ ಬಿಟ್ಟ ಗಂಡ, ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು!

Published : Aug 14, 2025, 05:54 PM IST
Pregnancy care

ಸಾರಾಂಶ

ಬೆಂಗಳೂರಿನ ವ್ಯಕ್ತಿಯೊಬ್ಬರು ವಾರ್ಷಿಕ ₹1 ಕೋಟಿಗಿಂತ ಹೆಚ್ಚಿನ ಸಂಬಳದ ಕೆಲಸ ತೊರೆದಿದ್ದಾರೆ. ಅದು ಯಾರಿಗಾಗಿ?, ಯಾವ ಉದ್ದೇಶಕ್ಕಾಗಿ ಎಂದು ಗೊತ್ತಾದರೆ ಬಹುಶಃ ನಿಮಗೂ ಸಂತೋಷವಾದರೆ ಆಶ್ಚರ್ಯವೇನಿಲ್ಲ.

ರೆಡ್ಡಿಟ್ ಬಳಕೆದಾರರೊಬ್ಬರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಅದರಲ್ಲಿರುವ ವಿಷಯ ಅಂತಹುದ್ದು, ಅವರ ಈ ಪೋಸ್ಟ್ ಬಹುಶಃ ಕೆಲವರಿಗೆ ಮಾದರಿಯಾದರೆ, ಮತ್ತೆ ಕೆಲವರಿಗೆ ಸ್ಫೂರ್ತಿಯಾಗಬಹುದು. ಹಾಗಾದರೆ ಈ ಪೋಸ್ಟ್‌ನಲ್ಲಿ ಅಂಥದ್ದೇನಿದೆ ಎಂದು ನೋಡುವುದಾದರೆ ಸಾಮಾನ್ಯವಾಗಿ ಸ್ವಂತ ಬ್ಯುಸಿನೆಸ್‌ ಮಾಡಲು ಕೆಲವರು ಉದ್ಯೋಗ ತೊರೆಯುವುದನ್ನ ನೋಡಿದ್ದೇವೆ. ಮತ್ತೆ ಕೆಲವರು ತಾವಿರುವ ಸ್ಥಳದಲ್ಲಿ ಅಥವಾ ನಗರದಲ್ಲಿ ಅಡಚಣೆಯುಂಟಾಗಿ ಜಾಬ್ ಕ್ವಿಟ್ ಮಾಡ್ತಾರೆ. ಆದರೆ ಇಲ್ಲೋರ್ವ ಬಳಕೆದಾರರು ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವಾರ್ಷಿಕ ₹1 ಕೋಟಿಗಿಂತ ಹೆಚ್ಚಿನ ಸಂಬಳದ ಕೆಲಸ ತೊರೆದಿದ್ದಾರೆ. ಅದು ಯಾರಿಗಾಗಿ?, ಯಾವ ಉದ್ದೇಶಕ್ಕಾಗಿ ಎಂದು ಗೊತ್ತಾದರೆ ಬಹುಶಃ ನಿಮಗೂ ಸಂತೋಷವಾದರೆ ಆಶ್ಚರ್ಯವೇನಿಲ್ಲ.

ಹೌದು, ಆ ವ್ಯಕ್ತಿ ಗರ್ಭಿಣಿ ಪತ್ನಿಯನ್ನ ನೋಡಿಕೊಳ್ಳುವ ಸಲುವಾಗಿ ಉದ್ಯೋಗ ತೊರೆದಿದ್ದಾರೆ. ಯಾತಕ್ಕಾಗಿ ಎಂಬುದನ್ನು ಸಹ ವಿವರವಾಗಿ ವಿವರಿಸಿದ್ದಾರೆ. ಆ ಬಳಕೆದಾರ ಕೇವಲ ಏಳು ವರ್ಷದಲ್ಲಿ ಉತ್ತಮ ವೃತ್ತಿಜೀವನವನ್ನು ಕಟ್ಟಿಕೊಂಡಿದ್ದು, ಕೆಲಸ ಬಿಟ್ಟಾಗ ಅವರ ಸಂಬಳ ₹1.2 ಕೋಟಿ. ವರ್ಕ್ ಫ್ರಂ ಹೋಂ ಸೌಲಭ್ಯ ಮತ್ತು ಬೆಂಗಳೂರಿನ ಜಯನಗರದಲ್ಲಿ ಆರಾಮದಾಯಕ ಜೀವನ. ಆದರೆ ಅವರ ಪತ್ನಿಯ ಗರ್ಭಧಾರಣೆಯ ನಂತರ ಅವರು ಕೆಲಸವನ್ನು ತ್ಯಜಿಸಲು ನಿರ್ಧರಿಸಿದರು.

ಬಳಕೆದಾರರು ಬರೆದುಕೊಂಡಿರುವ ಪ್ರಕಾರ, "ನಾನು ಈಗ ಕ್ವಿಟ್ ಮಾಡಿದ ಕೆಲಸ ತುಂಬಾ ಚೆನ್ನಾಗಿತ್ತು. 1.2 ಕೋಟಿ ಸಂಬಳ, ಮನೆಯಿಂದಲೇ ಕೆಲಸ, ಜಯನಗರದಲ್ಲಿ ಉತ್ತಮ ಮನೆ. ಎರಡು ತಿಂಗಳ ಹಿಂದೆ ನನ್ನ ಹೆಂಡತಿ ಗರ್ಭಿಣಿಯಾದಳು. ನಾನು ಆಕೆಗೆ ಒಂದು ವರ್ಷ ಕೆಲಸ ಬಿಟ್ಟು ಈ ಸಮಯವನ್ನು ಆನಂದಿಸಲು ಹೇಳಿದೆ. ಆದರೆ ಅವಳು ಕೆಲಸ ಮುಂದುವರಿಸಲು ಮತ್ತು ಕಡಿಮೆ ಗಂಟೆಗಳ ಕಾಲ ಕೆಲಸ ಮಾಡಲು ಬಯಸಿದ್ದಳು. ಅವಳು ಮನೆಯಿಂದಲೇ ಕೆಲಸ ಮಾಡುತ್ತಾಳೆ. ಹಾಗಾಗಿ ನಾನು ನನ್ನ ಕೆಲಸವನ್ನು ಬಿಟ್ಟು ಅವಳೊಂದಿಗೆ ಇರುವುದರ ಜೊತೆಗೆ ಎಲ್ಲಾ ಮನೆಕೆಲಸಗಳನ್ನು ನೋಡಿಕೊಳ್ಳಬೇಕು ಎಂದು ಭಾವಿಸಿದೆ. ಈ ಸಮಯದಲ್ಲಿ ನಾನು ಅವಳನ್ನು ಸ್ವಲ್ಪ ಸಮಯದವರೆಗೆ ವಾಕಿಂಗ್‌ಗೆ ಕರೆದೊಯ್ಯುತ್ತೇನೆ, ಹೆತ್ತವರಿಗೆ ಕರೆ ಮಾಡುತ್ತೇನೆ. ನಾನು ಈ ಸಂಪೂರ್ಣ ಹಂತವನ್ನು ಎಂಜಾಯ್ ಮಾಡುತ್ತಿದ್ದೇನೆ.

ನಾನು ಒಂದು ಕೋಟಿ ರೂ.ಗಿಂತ ಹೆಚ್ಚಿನ ಸಂಬಳದ ಕೆಲಸವನ್ನು ಬಿಟ್ಟು, ನನ್ನ ಸಂಪರ್ಕ ಮತ್ತು ಅನುಭವದ ಆಧಾರದ ಮೇಲೆ ಯಾವುದೇ ಸಮಯದಲ್ಲಿ ಮತ್ತೆ ಕೆಲಸಕ್ಕೆ ಮರಳಬಹುದಾದ ಆರ್ಥಿಕ ಸ್ಥಿತಿಯಲ್ಲಿದ್ದೇನೆ ಎಂಬುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.

ಬಳಕೆದಾರರು ಹೇಳಿದ್ದೇನು?
ಈ ಪೋಸ್ಟ್ ವೈರಲ್ ಆದ ತಕ್ಷಣ ಅನೇಕ ಪ್ರತಿಕ್ರಿಯೆಗಳು ಬಂದವು. ಕೆಲವರು ಬಳಕೆದಾರರನ್ನು ಹೊಗಳಿದರೆ, ಮತ್ತೆ ಕೆಲವರು ತಮ್ಮ ಅಭಿಪ್ರಾಯವನ್ನು ಹೊರಹಾಕಿದರು. "ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರುವುದು ಜೀವನದ ಪ್ರಮುಖ ವಿಷಯ ಎಂದು ನಾನು ನಂಬುತ್ತೇನೆ. ನಿಮ್ಮ ಸಂಗಾತಿಗೆ ಅಗತ್ಯವಿರುವಂತೆ ನಿಮ್ಮ ಮಗುವಿಗೂ ನಿಮ್ಮ ಅಗತ್ಯವಿರುತ್ತದೆ ಅಥವಾ ನಿಮ್ಮ ಹೆತ್ತವರಿಗೆ ಸಪೋರ್ಟ್ ಬೇಕಾಗುತ್ತದೆ. ಉಳಿದೆಲ್ಲವೂ ಗೌಣ. ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯುವುದು ಸುಲಭ, ಆದರೆ ಈ ವಿಶೇಷ ಕ್ಷಣಗಳನ್ನು ಕಳೆದುಕೊಳ್ಳುವುದು ಮೂರ್ಖತನ" ಎಂದಿದ್ದಾರೆ. "ಎಲ್ಲರಿಗೂ ಅಂತಹ ಸೌಲಭ್ಯಗಳು ಸಿಗುವುದಿಲ್ಲ. ನೀವು ಅದೃಷ್ಟವಂತರು, ನಿಮ್ಮ ಹೆಂಡತಿ ಅದೃಷ್ಟವಂತರು, ಸಂತೋಷ", "ಇದು ಅತ್ಯುತ್ತಮ ನಿರ್ಧಾರ, ಜೀವನದ ನಿಜವಾದ ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅಭಿನಂದನೆಗಳು ಮತ್ತು ಶುಭಾಶಯಗಳು." "ಇಂದಿನ ಅಸ್ಥಿರ ಉದ್ಯೋಗ ಮಾರುಕಟ್ಟೆ ಮತ್ತು ಕೆಟ್ಟ ಕೆಲಸದ ಸ್ಥಳದ ಸಂಸ್ಕೃತಿಯಲ್ಲಿ, ಈ ಧೈರ್ಯವು ಶ್ಲಾಘನೀಯ. ಮಗುವಿಗೆ ಉತ್ತಮ ಸಮಯವನ್ನು ಕೊಡುತ್ತಿದ್ದೀರಿ, ಶುಭಾಶಯಗಳು" ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು