
ಅಪರಿಚಿತರ ಮದುವೆ (Marriage)ಗೆ ಹೋಗಿ ಊಟ ಮಾಡ್ವಾಗ ಯಾರಾದ್ರೂ ನೀವು ಯಾವ ಕಡೆಯವರು ಕೇಳಿದ್ರೆ ತಬ್ಬಿಬ್ಬು. ಛತ್ರದ ಮುಂದೆ ದೊಡ್ಡ ಬೋರ್ಡ್ ಕಾಣಿಸ್ತಿದ್ದಂತೆ ಮದುವೆ ಊಟ ಮಾಡೋ ಚಪಲವಾಗುತ್ತೆ. ತುಂಬಾ ದಿನ ಆಯ್ತು ಮದುವೆಗೆ ಹೋಗ್ದೆ, ಇಲ್ಲೇ ಊಟ ಮಾಡ್ಬಹುದಿತ್ತು ಅಂತ ಅನೇಕ ಬಾರಿ ನಾವು ತಮಾಷೆ ಮಾಡ್ತೇವೆ. ಅಪರಿಚಿತರ ಮದುವೆಗೆ ಹೋಗೋರ ಸಂಖ್ಯೆ ಬಹಳ ಅಪರೂಪ. ಅದು ಸಿನಿಮಾಗೆ ಮಾತ್ರ ಮೀಸಲು. ಇನ್ಮುಂದೆ ನೀವು ಅಪರಿಚಿತರ ಮದುವೆಗೆ ಹೋಗಿ ಎಂಜಾಯ್ ಮಾಡಿ, ಭರ್ಜರಿ ಊಟ ತಿಂದು ಬರ್ಬಹುದು. ನಿಮ್ಮನ್ನು ಪ್ರಶ್ನೆ ಮಾಡೋರು, ಅನುಮಾನದಿಂದ ನೋಡೋರು ಇಲ್ಲಿ ಯಾರೂ ಇರೋದಿಲ್ಲ. ಈಗ ಟಿಕೆಟ್ ಮದುವೆ (ticket wedding) ಹೊಸ ಟ್ರೆಂಡ್ ಶುರುವಾಗಿದೆ.
ಸಾರ್ವಜನಿಕರಿಂದ ಉತ್ತಮ ರೆಸ್ಪಾನ್ಸ್ : ಕಟಿಯಾ ಲೆಕಾರ್ಸ್ಕಿ ಅವರು ಇನ್ವಿಟಿನ್ ವೇದಿಕೆಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅನೇಕ ಜೋಡಿ ಮದುವೆಗೆ ಮುನ್ನ ಪ್ಲಾಟ್ಫಾರ್ಮ್ ಮೂಲಕ ಟಿಕೆಟ್ ಮಾರಾಟ ಮಾಡ್ತಿದ್ದಾರೆ. ಕೆಲವರು ಹಣಕ್ಕಾಗಿ ಟಿಕೆಟ್ ಮಾರಾಟಕ್ಕೆ ಮುಂದಾದ್ರೆ ಮತ್ತೆ ಕೆಲವರು ಮೋಜು – ಮಸ್ತಿಗಾಗಿ ಟಿಕೆಟ್ ಮಾರಾಟ ಮಾಡ್ತಿದ್ದಾರೆ. ಮದುವೆಗೆ ಹಾಜರಾಗಲು ಜನರು, ನೂರಾರು ಯೂರೋಗಳನ್ನು ಪಾವತಿಸಲು ಸಿದ್ಧರಿದ್ದಾರೆ.
ಜನರಿಗೆ ಏಕೆ ಇಷ್ಟವಾಗ್ತಿದೆ ಈ ಕಾನ್ಸೆಪ್ಟ್ : ಅನೇಕರ ಕುಟುಂಬ ತುಂಬಾ ಚಿಕ್ಕದ್ದು. ಅವರು ವರ್ಷಕ್ಕೆ ಒಂದು ಮದುವೆಯಲ್ಲೂ ಪಾಲ್ಗೊಳ್ಳೋದು ಅನುಮಾನ. ಹಾಗೆಯೇ ಒಂದೇ ಸಂಪ್ರದಾಯದ ಮದುವೆ ನೋಡಿ ಬೋರ್ ಆಗಿರ್ತಾರೆ. ಬೇರೆ ಸಂಸ್ಕೃತಿ – ಸಂಪ್ರದಾಯ ತಿಳಿಯಬೇಕು, ಬೇರೆ ಬೇರೆ ಮದುವೆಗೆ ಹೋಗ್ಬೇಕು ಎನ್ನುವವರಿಗೆ ಈ ಟಿಕೆಟ್ ಮದುವೆ ಇಷ್ಟವಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಮಿಶ್ರಪ್ರತಿಕ್ರಿಯೆ ಬಂದಿದೆ. ಕೆಲವರು ಇದನ್ನು ಒಪ್ಪಿಕೊಂಡ್ರೆ ಮತ್ತೆ ಕೆಲವರು ಮದುವೆ ಪವಿತ್ರವಾಗಿ ಉಳಿಯಬೇಕು ಎಂದಿದ್ದಾರೆ. ಹಣ ಒಂದು ಹಂತದಲ್ಲಿ ಮಾನವೀಯತೆಯನ್ನು ಹಾಳುಮಾಡುತ್ತದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.