Breakup Story : ಪ್ರೀತಿಯ ಗುಂಗಲ್ಲಿ ಗರ್ಲ್ ಫ್ರೆಂಡ್ ಜೊತೆ ಕಿಡ್ನಿಯನ್ನೂ ಕಳಕೊಂಡ ಹುಡುಗ!

By Suvarna News  |  First Published Jan 19, 2022, 6:16 PM IST

ಪ್ರೀತಿಗೆ ಭಾಷೆ, ಜಾತಿ, ಊರು ಗೊತ್ತಿರುವುದಿಲ್ಲ. ಪ್ರೀತಿ ಕುರುಡು. ನಂಬಿದ ವ್ಯಕ್ತಿ ಕೈ ಕೊಟ್ಟಾಗಲೆ ಕತ್ತಲು ಸರಿದು ಬೆಳಕು ಕಾಣಿಸುವುದು. ಸಂಗಾತಿ ಪ್ರೀತಿಯನ್ನು ಮತ್ತಷ್ಟು ಪಡೆಯಲು ಆಕೆ ತಾಯಿಗೆ ಕಿಡ್ನಿ ದಾನ ಮಾಡಿದ ವ್ಯಕ್ತಿಯೊಬ್ಬ ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.
 


ಪ್ರೀತಿ(Love)ಯಲ್ಲಿರುವ ವ್ಯಕ್ತಿಗಳು, ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಪ್ರೀತಿ,ಯುದ್ಧ ಜಯಿಸಬಲ್ಲ ಶಕ್ತಿಯನ್ನು ನೀಡುತ್ತದೆ. ಪ್ರೀತಿಯೊಂದಿದ್ದರೆ ಏಳು ಸಮುದ್ರವನ್ನು ಈಜಿ ದಡ ಸೇರಬಹುದು ಎಂಬ ಮಾತಿದೆ. ಅಂದ್ರೆ ಪ್ರೀತಿಗೆ ಎಷ್ಟೊಂದು ಶಕ್ತಿಯಿದೆ. ಪ್ರೀತಿಸಿದ ವ್ಯಕ್ತಿ ಸದಾ ಖುಷಿಯಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಸಂಗಾತಿಗೆ ಸರ್ವಸ್ವ ನೀಡಲು ಸಿದ್ಧರಿರುತ್ತಾರೆ. ಮುಂದೇನಾಗಬಹುದು?

ಮುಂದೇನಾಗುತ್ತದೆ ಎಂಬುದನ್ನು ಲೆಕ್ಕಿಸದೆ, ಭವಿಷ್ಯದ ಬಗ್ಗೆ ಚಿಂತೆ ಮಾಡದೆ, ಪ್ರೀತಿಸಿದವರಿಗಾಗಿ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಕುರುಡು ಪ್ರೀತಿ ನಮ್ಮ ಜೀವನ ಹಾಳು ಮಾಡುತ್ತದೆ. ಸಂಗಾತಿಯನ್ನು ಸಂಪೂರ್ಣ ನಂಬಿ, ಬೀದಿಗೆ ಬಿದ್ದವರಿದ್ದಾರೆ. ಇನ್ನು ಕೆಲಸವರ ಪರ್ಸ್ ಖಾಲಿಯಾಗಿದೆ. ಮತ್ತೆ ಕೆಲವರ ಆಸ್ತಿ ಖಾಲಿಯಾಗಿದೆ. ಈ ಖಾಲಿಗಳನ್ನು ಹೇಗಾದ್ರೂ ತುಂಬಿಸಬಹುದು. ಹೃದಯವೇ ಖಾಲಿಯಾದ್ರೆ? ಪ್ರೀತಿಸಿದವರೇ ಬಿಟ್ಟು ಹೋದ್ರೆ ಅದನ್ನು ತುಂಬಿಸಲು ಸಾಧ್ಯವಿಲ್ಲ. ಆ ನೋವು ಸಹಿಸಲು ಸಾಧ್ಯವಿಲ್ಲ. ಅದರಿಂದ ಹೊರ ಬರುವುದು ದೊಡ್ಡ ಸವಾಲು. ಇಲ್ಲೊಬ್ಬ, ಪ್ರೀತಿಸಿದ ಹುಡುಗಿ ಜೊತೆ ತನ್ನೊಂದು ಕಿಡ್ನಿಯನ್ನೂ ಕಳೆದುಕೊಂಡಿದ್ದಾನೆ. ಪ್ರೀತಿಯಲ್ಲಿ ಮಹಾ ಮೋಸ ಕಂಡವನ ಕಥೆಯನ್ನು ನಾವಿಂದು ಹೇಳ್ತೇವೆ.

ಸಾಮಾಜಿಕ ಜಾಲತಾಣಗಳು ಹೊಸ ಹೊಸ ವಿಷ್ಯಗಳನ್ನು ಹೊರ ಹಾಕ್ತಿರುತ್ತವೆ. ಚಿತ್ರ-ವಿಚಿತ್ರ ಜನರ ಪರಿಚಯ ಮಾಡುತ್ತದೆ. ವಿಶ್ವದ ಯಾವುದೋ ಮೂಲೆಯಲ್ಲಿ ನಡೆದ ಘಟನೆಯನ್ನು ನಾವಿಂದು ತಿಳಿಯಬಹುದು. ವ್ಯಕ್ತಿಯೊಬ್ಬ ತನ್ನ ನೋವಿನ ಕಥೆಯನ್ನು ಎಲ್ಲರ ಮುಂದಿಟ್ಟಿದ್ದಾನೆ. 

ಶಿಕ್ಷಕನ ಬಾಳಲ್ಲಿ ಆಗಿದ್ದೇನು ? 
ಈಗ ನಾವು ಹೇಳಲು ಹೊರಟಿರುವ ಘಟನೆ ನಡೆದಿರುವುದು ಮೆಕ್ಸಿಕೋ(Mexican)ದಲ್ಲಿ. ಪ್ರೀತಿಯಲ್ಲಿ ಮೋಸ ಹೋದ ವ್ಯಕ್ತಿ ಹೆಸರು ಉಜಿಯೆಲ್ ಮಾರ್ಟಿನೆಜ್ (Uziel Martínez). ಈತ ವೃತ್ತಿಯಲ್ಲಿ ಶಿಕ್ಷಕ (Teacher). ಈತ ಹುಡುಗಿಯೊಬ್ಬಳನ್ನು  ಪ್ರೀತಿಸಿದ್ದನಂತೆ. ಆಕೆಯ ತಾಯಿಗೆ ಅನಾರೋಗ್ಯ ಕಾಡಿದೆ. ಪ್ರಿಯತಮೆಯ ತಾಯಿಯನ್ನು ಉಳಿಸಲು ಮಾರ್ಟಿನೆಜ್ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾನೆ. ಇದು ಖುಷಿಯ ಸಂಗತಿ ನಿಜ. ಆದ್ರೆ ಇದಾದ ನಂತ್ರ ನಡೆದ ಘಟನೆಯನ್ನು ಮಾರ್ಟಿನೆಜ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.

Tap to resize

Latest Videos

Relationship Tips: ಸಂಗಾತಿಯನ್ನು ಖುಷಿಪಡಿಸಲು ಸಿಂಪಲ್ ಟಿಪ್ಸ್

ಒಂದು ತಿಂಗಳ ನಂತ್ರ ಸಿಗ್ತು ಹೃದಯ ಒಡೆಯುವ ಸುದ್ದಿ : ಮಾರ್ಟಿನೆಜ್ ಪ್ರಕಾರ, ಆತ ಗರ್ಲ್ ಫ್ರೆಂಡ್ ತಾಯಿಗೆ ಕಿಡ್ನಿದಾನ ಮಾಡಿದ ಒಂದು ತಿಂಗಳಲ್ಲಿಯೇ ಆತನಿಗೆ ಶಾಕ್ ಕಾದಿತ್ತು. ಪ್ರಿಯತಮೆ ತನ್ನ ಕೆಲಸಕ್ಕೆ ಮೆಚ್ಚಿರುತ್ತಾಳೆ. ಆಕೆಗೆ ನನ್ನ ಮೇಲಿರುವ ಪ್ರೀತಿ ದುಪ್ಪಟ್ಟಾಗುತ್ತದೆ ಎಂದು ಮಾರ್ಟಿನೆಜ್ ಭಾವಿಸಿದ್ದ. ಆದ್ರೆ ಎಲ್ಲವೂ ಉಲ್ಟಾ ಆಗಿತ್ತು. ಮಾರ್ಟಿನೆಜ್ ನನ್ನು ಆಕೆ ತಿರಸ್ಕರಿಸಿದ್ದಳು. 

New Dad: ಮೊದಲ ಬಾರಿ ತಂದೆಯಾಗ್ತಿದ್ದರೆ ನಿಮ್ಮ ತಯಾರಿ ಹೀಗಿರಲಿ

ಇನ್ನೊಬ್ಬನ ಕೈ ಹಿಡಿದಿದ್ದ ಮಾಜಿ : ಬರೀ ಕೈಕೊಟ್ಟಿದ್ದು ಮಾತ್ರವಲ್ಲ ಮಾರ್ಟಿನೆಜ್ ಮಾಜಿ ಗೆಳತಿ ಇನ್ನೊಬ್ಬನನ್ನು ಮದುವೆಯಾಗಿದ್ದಾಳಂತೆ. ಟಿಕ್ ಟಾಕ್ ನಲ್ಲಿ ಈ ವಿಷ್ಯವನ್ನು ಮಾರ್ಟಿನೆಜ್ ಹಂಚಿಕೊಂಡಿದ್ದಾನೆ. ತುಂಬಾ ಬೇಸರದಲ್ಲಿರುವ ಮಾರ್ಟಿನ್ ವಿಡಿಯೋ ಫುಲ್ ವೈರಲ್ ಆಗಿದೆ. ಈವರೆಗೆ 14 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ ಮಾಡಲಾಗಿದೆ. 

ಮಾರ್ಟಿನೆಜ್ ಗೆ ಸಿಕ್ಕಿದೆ ಬಳಕೆದಾರರ ಬೆಂಬಲ : ಮಾರ್ಟಿನೆಜ್ ವಿಡಿಯೋಕ್ಕೆ ಬಳಕೆದಾರರಿಂದ ಪ್ರತಿಕ್ರಿಯೆ ಸಿಕ್ಕಿದೆ. ಆಕೆ ಒಳ್ಳೆಯ ಪ್ರೇಮಿಯನ್ನು ಕಳೆದುಕೊಂಡಿದ್ದಾಳೆ. ಚಿಂತೆ ಮಾಡ್ಬೇಡ. ನಿನಗೆ ಪರ್ಫೆಕ್ಟ್ ಹುಡುಗಿ ಸಿಗುತ್ತಾಳೆಂದು ಬಳಕೆದಾರನೊಬ್ಬ ಕಮೆಂಟ್ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾರ್ಟಿನೆಜ್, ನನಗೆ ಮಾಜಿ ಬಗ್ಗೆ ಯಾವುದೇ ದ್ವೇಷವಿಲ್ಲ. ನಾನು ಚೆನ್ನಾಗಿದ್ದೇನೆ ಎಂದಿದ್ದಾನೆ. ನನಗೆ ಅವಳ ಬಗ್ಗೆ ಯಾವುದೇ ಕೆಟ್ಟ ಭಾವನೆಯಿಲ್ಲ. ನಾವಿಬ್ಬರೂ ಸ್ನೇಹಿತರಲ್ಲ. ಆದ್ರೆ ಪರಸ್ಪರ ದ್ವೇಷಿಸುವುದಿಲ್ಲ.ನಾನು ಟಿಕ್ ಟಾಕ್ ಗಾಗಿ ಈ ವಿಡಿಯೋ ಮಾಡಿದ್ದೇನೆ. ಇದ್ರಿಂದ ಎಲ್ಲವೂ ಸರಿಯಾಗುತ್ತದೆ ಎಂದಲ್ಲವೆಂದು ಮಾರ್ಟಿನೆಜ್ ಕಮೆಂಟ್ ಮಾಡಿದ್ದಾನೆ.

click me!