Relationship : ನಪುಂಸಕ ಪತಿಗೆ ಸ್ಪ್ರೇ ಹಾಕಿ ಯಡವಟ್ಟು ಮಾಡಿದ ಪತ್ನಿ!

Suvarna News   | Asianet News
Published : Jan 19, 2022, 06:06 PM IST
Relationship : ನಪುಂಸಕ ಪತಿಗೆ ಸ್ಪ್ರೇ ಹಾಕಿ ಯಡವಟ್ಟು ಮಾಡಿದ ಪತ್ನಿ!

ಸಾರಾಂಶ

ಪುರುಷ ಮಾತ್ರವಲ್ಲ ಮಹಿಳೆ ಕೂಡ ಸಂಭೋಗ ಸುಖ ಬಯಸ್ತಾಳೆ. ಪತಿಯಿಂದ ಇದು ಸಿಗದೆ ಹೋದಾಗ ನಿರಾಸೆಗೊಳ್ತಾಳೆ. ಲೈಂಗಿಕ ಜೀವನದಲ್ಲಿ ಸಮಸ್ಯೆಯಾದಾಗ ವೈದ್ಯರ ಬಳಿ ಹೋಗ್ಬೇಕು. ಆದ್ರೆ ಈ ಮಹಿಳೆ ಮಾಡಿದ್ದೇನು ಗೊತ್ತಾ?  

ಪತಿ-ಪತ್ನಿ (Husband wife) ಮಧ್ಯೆ ಪ್ರೀತಿ (Love)ಯಿದ್ದರೆ ಜೀವನ ಸುಗಮವಾಗಿ ಸಾಗಬಲ್ಲದು. ಆದ್ರೆ ದಾಂಪತ್ಯದಲ್ಲಿ ಸಂತೋಷ (Happiness )ದ್ವಿಗುಣಗೊಳ್ಳಬೇಕೆಂದ್ರೆ ಲೈಂಗಿಕ ಜೀವನ ಕೂಡ ಮುಖ್ಯವಾಗುತ್ತದೆ. ಸಂಭೋಗದಲ್ಲಿ ಸುಖ ಸಿಗದೆ ಹೋದಾಗ ದಾಂಪತ್ಯದಲ್ಲಿ ಬಿರುಕು ಮೂಡುವ ಸಾಧ್ಯತೆಯಿರುತ್ತದೆ. ಪತಿ-ಪತ್ನಿ ಮಧ್ಯೆ ಕಲಹ ಶುರುವಾಗಬಹುದು. ಸಂಭೋಗ(sex)ದ ಸಮಯದಲ್ಲಿ ನಿಮಿರುವಿಕೆ ಸಮಸ್ಯೆ ಬಗ್ಗೆ ನೀವು ಕೇಳಿರಬಹುದು. ಖಾಸಗಿ ಅಂಗ ಉತ್ತೇಜನಗೊಳ್ಳದೆ ಹೋಗುವುದನ್ನು ನಿಮಿರುವಿಕೆ ಎಂದು ಕರೆಯಲಾಗುತ್ತದೆ. ಇದನ್ನು ನಪುಂಸಕತೆ ಎಂದೂ ಹೇಳಲಾಗುತ್ತದೆ. ಈ ಸಮಸ್ಯೆ ಕಾಡಿದಾಗ ಪುರುಷ ಸಂಭೋಗ ಸುಖ ನೀಡಲು ವಿಫಲನಾಗುತ್ತಾನೆ. ಈ ಸಮಸ್ಯೆ ಕ್ರಮೇಣ ಕೀಳರಿಮೆಯ ರೂಪವನ್ನು ಪಡೆಯುತ್ತದೆ. ನಿಮಿರುವಿಕೆಗೆ ಅನೇಕ ಕಾರಣಗಳಿವೆ. ಸಂಗಾತಿ ಸುಖ ನೀಡದೆ ಹೋದಾಗ ಕೆಲ ಮಹಿಳೆಯರು ಸತ್ಯವನ್ನು ಸೆರಗಿನಲ್ಲಿ ಮುಚ್ಚಿಟ್ಟು ಸಂಸಾರ ನಡೆಸುತ್ತಾರೆ. ಮತ್ತೆ ಕೆಲ ಮಹಿಳೆಯರು ವಿಚ್ಛೇದನಕ್ಕೆ ಮುಂದಾಗ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಪತಿ ಸಮಸ್ಯೆ ಸರಿ ಮಾಡಲು ಹೋಗಿ ಯಡವಟ್ಟು ಮಾಡಿದ್ದಾಳೆ. ಪತ್ನಿಯ ಕೆಲಸಕ್ಕೆ ಪತಿ ಆಸ್ಪತ್ರೆ ಸೇರಿದ್ದಾನೆ. ಇಂದು ಇಬ್ಬರ ಮಧ್ಯೆ ಏನಾಯ್ತು ಎಂಬುದನ್ನು ಹೇಳ್ತೆವೆ.

ಸುಖ ನೀಡದ ಪತಿ : ಅಮೆರಿಕದಲ್ಲಿ ನೆಲೆಸಿರುವ 45 ವರ್ಷದ ವ್ಯಕ್ತಿಯೊಬ್ಬ ಬಹುಕಾಲದಿಂದ ನಿಮಿರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ. ಪ್ರತಿ ಬಾರಿಯೂ ಪತ್ನಿಗೆ ಸಂಭೋಗ ಸುಖ ಸಿಗ್ತರಲಿಲ್ಲ. ಪತ್ನಿಯ ಮುಂದೆ ಇದೇ ಕಾರಣಕ್ಕೆ ಆತ ನಿರಾಸೆ ಅನುಭವಿಸುತ್ತಿದ್ದ. ಪತಿ ಜೊತೆ ಸುಗಮ ಸಂಭೋಗಕ್ಕೆ ಮಹಿಳೆ ಪ್ಲಾನ್ ಮಾಡಿದ್ದಾಳೆ. ಪತಿ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದ್ದಾಳೆ. 

ಸಮಸ್ಯೆಗೆ ಪತ್ನಿಯಿಂದ ಚಿಕಿತ್ಸೆ : ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಸಮಸ್ಯೆಯನ್ನು ಹೋಗಲಾಡಿಸಲು ಸಾಕಷ್ಟು ಪ್ರಯತ್ನ ನಡೆದಿದೆ. ಪತ್ನಿ ಅನೇಕ ಔಷಧಿಗಳನ್ನು ಪತಿಗೆ ನೀಡಿದ್ದಾಳೆ. ಆದ್ರೆ ಯಾವುದೂ ಪರಿಣಾಮ ಬೀರಲಿಲ್ಲ. ಅಲ್ಲಿ ಇಲ್ಲಿ ಜಾಲಾಡಿದ ಪತ್ನಿ ಇನ್ಸುಲೇಶನ್ ಸ್ಪ್ರೇ ಕ್ಯಾನ್ ಖರೀದಿ ಮಾಡಿದ್ದಾಳೆ. 

ಸರಾಗವಾಗಿ ನಡೆದಿತ್ತು ಲೈಂಗಿಕ ಕ್ರಿಯೆ : ಒಂದು ರಾತ್ರಿ ಪತ್ನಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾಳೆ. ಖರೀದಿಸಿದ್ದ ಇನ್ಸುಲೇಶನ್ ಸ್ಪ್ರೇಯನ್ನು ಗಂಡನ ಖಾಸಗಿ ಭಾಗದ ಮುಂಭಾಕ್ಕೆ ಸಿಂಪಡಿಸಿದ್ದಾಳೆ. ಸ್ಪ್ರೇ ಒಳಗೆ ಹೋಗ್ತಿದ್ದಂತೆ ಖಾಸಗಿ ಅಂಗದ ರೂಪ ಬದಲಾಗಿದೆ. ಖಾಸಗಿ ಅಂಗ ಬಲ ಪಡೆದಿದೆ. ಇದಾದ ನಂತರ ಇಬ್ಬರ ನಡುವೆ ಸಸೂತ್ರವಾಗಿ ಸಂಭೋಗ ನಡೆದಿದೆ. ಅದೊಂದೇ ದಿನವಲ್ಲ ಎರಡು ಮೂರು ದಿನಗಳ ಕಾಲ ದಂಪತಿ, ಲೈಂಗಿಕ ಸುಖ ಅನುಭವಿಸಿದ್ದಾರೆ.

Relationship Tips: ಸಂಗಾತಿಯನ್ನು ಖುಷಿಪಡಿಸಲು ಸಿಂಪಲ್ ಟಿಪ್ಸ್

ಸ್ಪ್ರೇ ತಂದ ಸಮಸ್ಯೆ : ಮೂರ್ನಾಲ್ಕು ದಿನಗಳ ಕಾಲ ಇಬ್ಬರ ಮಧ್ಯೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಕ್ರಮೇಣ ಗಂಡನಿಗೆ ಸಮಸ್ಯೆ  ಶುರುವಾಗಿದೆ. ಸ್ಪ್ರೇನ ನೊರೆ ಒಳಗೆ ಹೋಗುವಾಗ ಕಲ್ಲಿನಂತೆ ಗಟ್ಟಿಯಾಗಿತ್ತಂತೆ. ಇದರಿಂದಾಗಿ ಮೂತ್ರ ವಿಸರ್ಜನೆಗೆ ತೊಂದರೆಯಾಗಿದೆ. ಸುಮಾರು 3 ವಾರಗಳ ನಂತರ, ಗಂಡನ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 

New Dad: ಮೊದಲ ಬಾರಿ ತಂದೆಯಾಗ್ತಿದ್ದರೆ ನಿಮ್ಮ ತಯಾರಿ ಹೀಗಿರಲಿ

ಆಸ್ಪತ್ರೆ ಸೇರಿದ ಪತಿ : ಮೂತ್ರ ವಿಸರ್ಜನೆ ಸಾಧ್ಯವಾಗದ ಕಾರಣ ಪತಿ ಆಸ್ಪತ್ರೆಗೆ ಹೋಗಿದ್ದಾನೆ. ಪರೀಕ್ಷೆ ನಡೆಸಿದ ವೈದ್ಯರು ಎಲ್ಲ ಮಾಹಿತಿ ಪಡೆದಿದ್ದಾರೆ. ಮೂತ್ರ ವಿಸರ್ಜನೆ ಮಾಡಲು ಪತಿ ಒತ್ತಡ ಹೇರಿದ್ದರಿಂದ ಖಾಸಗಿ ಅಂಗದ ರಕ್ತನಾಳಗಳು ಒಡೆದಿವೆ ಎಂದು ವೈದ್ಯರು ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಫೋಮ್ ತೆಗೆಯಲು ಅವರು ಮುಂದಾಗಿದ್ದಾರೆ. ಆದ್ರೆ ಅದು ಸಾಧ್ಯವಾಗಲಿಲ್ಲ. ನಂತ್ರ ಛೇದಕವನ್ನು ಬಳಸಿ ಫೋಮ್ ಹೊರಗೆ ತೆಗೆದಿದ್ದಾರಂತೆ. ಖಾಸಗಿ ಅಂಗವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಪಾಪದ ಪತಿ ಆಸ್ಪತ್ರೆಯಲ್ಲಿದ್ದಾನೆ. ಇನ್ನೂ ಒಂದು ತಿಂಗಳ ಕಾಲ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!