Love And Attraction: ನಿಮ್ಮದು ಪ್ರೀತಿಯೋ ಆಕರ್ಷಣೆಯೋ? ಹೀಗೆ ನಿರ್ಧರಿಸಿ

Suvarna News   | Asianet News
Published : Jan 19, 2022, 06:10 PM IST
Love And Attraction: ನಿಮ್ಮದು ಪ್ರೀತಿಯೋ ಆಕರ್ಷಣೆಯೋ? ಹೀಗೆ ನಿರ್ಧರಿಸಿ

ಸಾರಾಂಶ

ಲವ್ ಎಟ್ ಫಸ್ಟ್ ಸೈಟ್ ಎನ್ನುವುದು ಕೇವಲ ಭ್ರಮೆ. ಅದು ಕೇವಲ ಆಕರ್ಷಣೆಯಾಗಿರುವ ಸಾಧ್ಯತೆಯೇ ಹೆಚ್ಚು. ಯಾರದ್ದಾದರೂ ಆಕರ್ಷಣೆಯಲ್ಲಿರುವಾಗ ಅದನ್ನು ಪ್ರೀತಿ ಎಂದು ಭ್ರಮಿಸುವುದು ಸಾಮಾನ್ಯ. ಹಾಗಾಗದಿರಲು ನಮ್ಮದು ಪ್ರೀತಿಯೋ ಆಕರ್ಷಣೆಯೋ ಎಂದು ಗುರುತಿಸಿಕೋಳ್ಳಬೇಕು.  

ಒಮ್ಮೆ ನೆನಪಿಸಿಕೊಳ್ಳಿ. ಪ್ರೌಢಶಾಲೆಯಿಂದ ಹಿಡಿದು, ಉನ್ನತ ಹಂತದ ಓದು (Study) ಅಥವಾ ಪದವಿ ಮುಗಿಯುವವರೆಗೆ ಎಷ್ಟೆಲ್ಲ ಜನ ನಮ್ಮ ಮನಸೂರೆಗೊಂಡಿರುತ್ತಾರೆ. ಅಲ್ಲವೇ? ಅವರು ಸಹಪಾಠಿ(Classmate)ಗಳಿರಬಹುದು, ಲೆಕ್ಚರರ್ (Lecturer) ಆಗಿರಬಹುದು, ಸೀನಿಯರ್ ವಿದ್ಯಾರ್ಥಿಯಾಗಿರಬಹುದು, ಬಸ್ಸಿನಲ್ಲಿ ದಿನವೂ ಕಾಣಸಿಗುವ ಉದ್ಯೋಗಿಯಾಗಿರಬಹುದು. ಒಟ್ಟಿನಲ್ಲಿ ಹಲವಾರು ಮಂದಿಯತ್ತ ನಾವು ಯಾವ್ಯಾವುದೋ ಸನ್ನಿವೇಶದಲ್ಲಿ ಆಕರ್ಷಿತ(Attractive)ರಾಗಿರುತ್ತೇವೆ. ಕೆಲವು ದಿನಗಳ ಕಾಲ ಅವರದ್ದೇ ಗುಂಗಿನಲ್ಲಿದ್ದು, ಅದನ್ನು ಪ್ರೀತಿ (Love) ಎಂದೂ ಭ್ರಮಿಸಿರಬಹುದು. 

ಹೌದು, ಬದುಕಿನ ಆ ಹಂತ(Stage)ವೇ ಹಾಗಿರುತ್ತದೆ. ಯಾರದ್ದಾದರೂ ಪರಿಚಯವಾಗಿ, ಸ್ನೇಹ(Friendship)ವಾಗಿ, ಆಕರ್ಷಣೆ ಮೂಡಿದಾಗ ಅದನ್ನು ಪ್ರೀತಿ ಎಂದೇ ಭ್ರಮಿಸುತ್ತೇವೆ. ಆದರೆ, ಅದು ಕೇವಲ ಆಕರ್ಷಣೆ ಮಾತ್ರವಾಗಿರುವ ಸಾಧ್ಯತೆಯೇ ಹೆಚ್ಚು. ನಾವು ಇನ್ನೊಬ್ಬರ ಆಕರ್ಷಣೆಯಲ್ಲಿರುವಾಗ ಅದು ಪ್ರೀತಿಯೋ, ಆಕರ್ಷಣೆ ಮಾತ್ರವೋ ಎಂದು ನಿರ್ಧರಿಸಲಾಗದ ಹಂತದಲ್ಲಿರುತ್ತೇವೆ. ಆದರೂ ಪ್ರೀತಿ ಎನ್ನುವ ಭ್ರಮೆಗೆ ಬಿದ್ದು, ಅಷ್ಟು ಸಮಯವನ್ನು ಹಾಳು ಮಾಡಿಕೊಳ್ಳದಿರಲು ಹಾಗೂ ಮುಂದೆ ಮಾನಸಿಕವಾಗಿ ಹೆಚ್ಚು ಆಘಾತವಾಗದೆ ಇರಲು ನಮ್ಮ ಸ್ನೇಹ ಕೇವಲ ಆಕರ್ಷಣೆಯೋ ಅಥವಾ ಪ್ರೀತಿಯೋ ಎಂದು ಅರಿತುಕೊಳ್ಳುವುದು ಅಗತ್ಯ. ಇದು ನಮ್ಮದೇ ಒಳಿತಿಗಾಗಿ ಅನಿವಾರ್ಯ. 
ಹಾಗಿದ್ದರೆ ಆಕರ್ಷಣೆಯೋ ಪ್ರೀತಿಯೋ ಎಂದು ಹೇಗೆ ಗುರುತಿಸಬಹುದು? ಕೆಲವು ಟಿಪ್ಸ್ ನೋಡಿಕೊಳ್ಳಿ. 

•    ಮೊದಲ ನೋಟ(First Sight)ದಲ್ಲಿಯೇ ಪ್ರೀತಿ ಎನ್ನುವುದು ಭ್ರಮೆ (Illusion)
ಕೆಲವರಿಗೆ ಈ ಹೇಳಿಕೆಯ ಕುರಿತು ಭಿನ್ನಾಭಿಪ್ರಾಯ (Difference)ವ ಇರಬಹುದು. ಆದರೆ, ವಾಸ್ತವವಾಗಿ ಇದು ಭಾರೀ ಅಪರೂಪ (Rare) ಹಾಗೂ ಕಷ್ಟಸಾಧ್ಯ. ಮೊದಲ ನೋಟದಲ್ಲಾಗುವುದು ಕೇವಲ ಆಕರ್ಷಣೆ. ಈ ಸನ್ನಿವೇಶವನ್ನು ಹೇಗೆ ವಿಮರ್ಶೆ ಮಾಡಿಕೊಳ್ಳಬೇಕು ಗೊತ್ತೇ? “ಮೊದಲು ಆ ವ್ಯಕ್ತಿಯಲ್ಲಿ ನಾನು ಕಂಡಿದ್ದೇನು?’ ಎಂದು ಕೇಳಿಕೊಳ್ಳಿ. ಆತನ ಅಥವಾ ಆಕೆಯ ಸೌಂದರ್ಯ (Beauty) ನಿಮ್ಮನ್ನು ಸೆಳೆದಿರಬಹುದು. ಬಹಳಷ್ಟು ಬಾರಿ ಸೌಂದರ್ಯವೇ ಇನ್ನೊಬ್ಬರನ್ನು ಸೆಳೆದಿರುವ ಸಾಧ್ಯತೆ ಹೆಚ್ಚು. ಹಾಗೂ ಸೌಂದರ್ಯ ಎನ್ನುವುದು ನೀವು ಪ್ರೀತಿಯಲ್ಲಿ ಬೀಳುವ ಮಾನದಂಡವಲ್ಲ. ಹೀಗಾಗಿ, ಯಾರನ್ನಾದರೂ ನೋಡಿದ ತಕ್ಷಣ ಉಂಟಾಗುವುದು ಪ್ರೀತಿಯಲ್ಲ. ಅವರನ್ನು ಕಂಡಾಗ ಎದೆಬಡಿತ (Heartbeat) ಹೆಚ್ಚಾಗುವುದು, ಮುಖ ಕೆಂಪಡರುವುದು ಇವೆಲ್ಲ ಆಕರ್ಷಣೆಯಲ್ಲೂ ಸಂಭವಿಸುತ್ತವೆ. ಪ್ರೀತಿ ನಿರ್ಮಾಣವಾಗಲು ಕೆಲಸ ಸಮಯ (Time) ಬೇಕು, ವ್ಯಕ್ತಿಗಳ ನಡುವೆ ಒಡನಾಟವಾಗಬೇಕು. 

Food And Health: ಸೀಸನಲ್ ಫುಡ್ ಯಾಕೆ ಸೇವಿಸಬೇಕು ?

•    ಪ್ರೀತಿಯಲ್ಲಿ ಕಾಳಜಿ (Care) ಸಹಜ
ನೀವು ವ್ಯಕ್ತಿಯೊಬ್ಬರ ಬಳಿ ಸದಾಕಾಲ ಇರಬೇಕು ಎಂದು ಬಯಸುತ್ತೀರಿ, ಅವರೊಡನೆ ದಿನವಿಡೀ ಕಳೆದರೂ ಬೇಸರವಾಗುವುದಿಲ್ಲ, ಹೀಗಾಗಿ ಅದನ್ನು ಪ್ರೀತಿ ಎಂದುಕೊಳ್ಳುತ್ತೀರಿ. ಆದರೆ, ಅವರ ಸಮಸ್ಯೆಗಳಿಗೆ, ನೋವಿಗೆ ನಿಮ್ಮ ಹೃದಯ ಮಿಡಿಯುವುದಿಲ್ಲ. ಅವರೊಂದಿಗೆ ಇರುವುದಷ್ಟೇ ನಿಮಗೆ ಖುಷಿಯೇ ವಿನಾ, ಅವರ ನೋವು (Problems) ನಿಮ್ಮನ್ನು ತಟ್ಟುವುದಿಲ್ಲ. ಅವರನ್ನು ಕಾಳಜಿ ಮಾಡಬೇಕೆಂದು ಮನಸಾರೆ ಅನ್ನಿಸುವುದಿಲ್ಲ. ಅಂದರೆ ಅದು ಆಕರ್ಷಣೆ ಮಾತ್ರ. ಏಕೆಂದರೆ, ಪ್ರೀತಿಯಲ್ಲಿ ನಿಜವಾದ ಕಾಳಜಿ ಇರುತ್ತದೆ. ಅವರು ನೊಂದುಕೊಂಡಾಗ ಹೃದಯ ಹಿಂಡುತ್ತದೆ. ಅವರನ್ನು ಕಾಳಜಿ ಮಾಡಬೇಕೆಂದೆನಿಸುತ್ತದೆ. ಕೆಲವೊಮ್ಮೆ ಅವರ ಮೇಲೆ ಪ್ರೀತಿಯಿದೆ ಎಂದು ತೋರಿಸಲು ಉದ್ದೇಶಪೂರ್ವಕವಾಗಿ ಕಾಳಜಿ ವ್ಯಕ್ತಪಡಿಸುವುದೂ ಇದೆ. ಇದೂ ಸಹ ಕೇವಲ ತೋರಿಕೆಯಾಗುತ್ತದೆಯೇ ವಿನಾ ಪ್ರೀತಿಯಲ್ಲ. ಕಾಳಜಿ ಮತ್ತು ಪ್ರೀತಿ ಜತೆಯಾಗಿಯೇ ಅಂತರಾಳದಿಂದ ಮೂಡುತ್ತವೆ. ಅವು ಸಹಜವಾಗಿ ಮೂಡದೆ, ಪ್ರಯತ್ನಪೂರ್ವಕವಾಗಿ ಕಾಳಜಿ ಮಾಡಲು ಯತ್ನಿಸಿದರೆ ಅದು ಕೇವಲ ಆಕರ್ಷಣೆ ಎಂದು ಅರಿತುಕೊಳ್ಳಿ.

Relationship : ನಪುಂಸಕ ಪತಿಗೆ ಸ್ಪ್ರೇ ಹಾಕಿ ಯಡವಟ್ಟು ಮಾಡಿದ ಪತ್ನಿ!

•    ಏಕಾಂಗಿ(Alone)ಯಾಗಿರುವಾಗ ಮಾತ್ರ ನೆನಪು 
ನೀವು ಸ್ನೇಹಿತರೊಂದಿಗೆ ಹೊರಗೆ ಸುತ್ತಾಡಲು ಹೋಗಿದ್ದೀರಿ, ಅಲ್ಲೆಲ್ಲೂ ನಿಮಗೆ ಆ ವ್ಯಕ್ತಿಯ ನೆನಪಾಗುವುದಿಲ್ಲ. ಯಾವಾಗ ಮನೆಗೆ ಬರುತ್ತೀರೋ, ಒಬ್ಬರೇ ಇರುತ್ತೀರೋ ಆಗ ಅವರು ನೆನಪಾಗುತ್ತಾರೆ. ನೀವು ಒಬ್ಬರೇ ಇದ್ದಾಗ ಅಥವಾ ನಿಮಗೆ ಬೋರಾಗಿದ್ದಾಗ ಅವರೊಂದಿಗೆ ಸಂಪರ್ಕದಲ್ಲಿರಲು ನಿಮಗೆ ಆಸೆಯಾಗುತ್ತದೆ ಎಂದಾದರೆ, ಅದು ಆಕರ್ಷಣೆ. ಏಕೆಂದರೆ, ಪ್ರೀತಿಯಾಗಿದ್ದರೆ ಸಮಯ, ಸ್ಥಳಗಳ ಅರಿವಿಲ್ಲದೆ ಆಗಾಗ ಆ ವ್ಯಕ್ತಿ ಸ್ಮರಣೆಗೆ ಬರುತ್ತಲೇ ಇರುತ್ತಾರೆ. ಸದಾಕಾಲ ಮನಸ್ಸಿನಲ್ಲೇ ಇರುತ್ತಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!