ಈಗ ಮದುವೆ ಅರ್ಥವೇ ಬದಲಾಗಿದೆ. ಎರಡು ಜೀವದ ಜೊತೆ ಎರಡು ಕುಟುಂಬ ಒಂದಾಗುವ ಕಾಲ ಇದಲ್ಲ. ಈಗ ಹೆಸರಿಗೆ ಮಾತ್ರ ಮದುವೆ ನಡೆಯುತ್ತೆ, ದಂಪತಿ ಮಧ್ಯೆ ಸಂಬಂಧವೇ ಭಿನ್ನವಾಗಿರುತ್ತೆ.
ಮದುವೆ ಎಂಬ ಪವಿತ್ರ ಬಂಧನದಿಂದ ಈಗಿನ ಜನತೆ ದೂರ ಸರಿಯುತ್ತಿದ್ದಾರೆ. ಮದುವೆ ನಂತ್ರದ ಜವಾಬ್ದಾರಿ, ಬಂಧನದಲ್ಲಿ ಸಿಕ್ಕಿಕೊಳ್ಳಲು ಅವರಿಗೆ ಇಷ್ಟವಿಲ್ಲ. ಮದುವೆಯಾದ್ಮೇಲೆ ಪತಿ – ಪತ್ನಿ ಒಟ್ಟಿಗೆ ಇರಬೇಕು. ಒಂದಿಷ್ಟು ಜವಾಬ್ದಾರಿಗಳನ್ನು ನಿಭಾಯಿಸಬೇಕು. ಮಕ್ಕಳನ್ನು ಪಡೆದು, ಅವರನ್ನು ಬೆಳೆಸುವ ಜಬಾಬ್ದಾರಿ ಹೊರಬೇಕು. ಈ ಎಲ್ಲವೂ ಈಗಿನ ಯುವಜನತೆಗೆ ಉಸಿರುಗಟ್ಟಿಸುತ್ತಿದೆ. ಹಾಗಾಗಿಯೇ ಯುವಜನತೆ ಮದುವೆ ಬೇಡ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಮದುವೆಯಾದ್ರೂ ಜವಾಬ್ದಾರಿಯಿಂದ ನುಣುಚಿಕೊಳ್ಳೋದು ಹೇಗೆ ಎಂಬ ಆಲೋಚನೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಈಗ ಹೊಸ ಹೊಸ ಮದುವೆ ವಿಧಾನ, ವಿಚ್ಛೇದನ ಪದ್ಧತಿ ಜಾರಿಗೆ ಬರ್ತಿದೆ. ಒನ್ ನೈಟ್ ಸ್ಟ್ಯಾಂಡ್, ಸ್ಲೀಪಿಂಗ್ ಡಿವೋರ್ಸ್ ಪ್ರಸಿದ್ಧಿ ಪಡೆಯುತ್ತಿರುವ ಮಧ್ಯೆಯೇ ಕೆಲ ಮಹಿಳೆಯರು ಮದುವೆ ಬೇಡ ಮಕ್ಕಳು ಮಾತ್ರ ಬೇಕು ಎನ್ನುತ್ತಿದ್ದಾರೆ. ಈ ಮಧ್ಯೆ ಜಪಾನ್ ನಲ್ಲಿ ಈಗ ಹೊಸ ಟ್ರೆಂಡ್ ಶುರುವಾಗಿದೆ. ಫ್ರೆಂಡ್ಶಿಪ್ ಮ್ಯಾರೇಜ್ ಹೆಸರಿನಲ್ಲಿ ಜನರು ಮದುವೆ ಒಪ್ಪಂದ ಮಾಡಿಕೊಳ್ತಿದ್ದು, ಇದಕ್ಕೆ ಅನೇಕರು ಆಸಕ್ತಿ ತೋರಿಸುತ್ತಿದ್ದಾರೆ.
ಫ್ರೆಂಡ್ಶಿಪ್ (Friendship) ಮ್ಯಾರೇಜ್ ಎಂದ್ರೇನು? : ಫ್ರೆಂಡ್ಶಿಪ್ ಮದುವೆ (Friendship Wedding) ಅಂದ್ರೆ ಆಪ್ತ ಸ್ನೇಹಿತರು ಅಥವಾ ಬಾಲ್ಯ ಸ್ನೇಹಿತರ ಜೊತೆ ಮದುವೆ ಆಗೋದಲ್ಲ. ಮದುವೆ ನಂತ್ರ ಎಲ್ಲ ಜವಾಬ್ದಾರಿಗಳಿಂದ ದೂರ ಉಳಿದು ಸ್ನೇಹಿತರಂತೆ ಜೀವನ ಮಾಡೋದು. ಈ ಮದುವೆ ಅಲೈಂಗಿಕ ಜನರು, ಸಲಿಂಗಕಾಮಿ (gay) ಗಳು ಮತ್ತು ಭಿನ್ನಲಿಂಗೀಯರನ್ನು ನಡುವೆ ಹೆಚ್ಚಾಗಿ ನಡೆಯುತ್ತದೆ. ಮದುವೆ ಮೇಲೆ ನಂಬಿಕೆ ಕಳೆದುಕೊಂಡ ಹಾಗೂ ಪ್ರೀತಿ ಮೇಲೆ ಭರವಸೆ ಕಳೆದುಕೊಂಡ ಜನರು ಈ ಫ್ರೆಂಡ್ಶಿಪ್ ಮದುವೆಗೆ ಮೊರೆ ಹೋಗ್ತಾರೆ.
undefined
ಲವ್ ಮ್ಯಾರೇಜ್ ಆದ್ರೂ ಸಮಸ್ಯೆ ಹುಟ್ಟಿಕೊಳ್ಳೋದಕ್ಕೆ ಕಾರಣವೇ ಈ ನಾಲ್ಕು ಗ್ರಹಗಳು!
ಫ್ರೆಂಡ್ಶಿಪ್ ಮ್ಯಾರೇಜ್ ನಲ್ಲಿ ಜನರು ಏನು ಬಯಸುತ್ತಾರೆ? : ಜಪಾನ್ ನಲ್ಲಿ ಈ ರೀತಿ ಮದುವೆ ಹೊಸದಲ್ಲ. 2015 ರಿಂದಲೇ ಇಂಥ ಮದುವೆ ಟ್ರೆಂಡ್ ಶುರುವಾಗಿದೆ. 2015ರಿಂದ ಈವರೆಗೆ ಸುಮಾರು 500ಕ್ಕೂ ಹೆಚ್ಚು ಮಂದಿ ಫ್ರೆಂಡ್ಶಿಪ್ ಮದುವೆಗೆ ಒಳಗಾಗಿದ್ದಾರೆ ಎಂದು ವರದಿಯೊಂದು ಹೇಳಿದೆ. ತಮ್ಮ ಆಸಕ್ತಿ ಹಾಗೂ ಮೌಲ್ಯಕ್ಕೆ ತಕ್ಕಂತೆ ಸಂಗಾತಿಯನ್ನು ಅವರು ಆಯ್ಕೆ ಮಾಡಿಕೊಳ್ತಾರೆ.
ಈ ಮದುವೆ ಕಾನೂನು ರೀತಿಯಲ್ಲಿಯೇ ನಡೆಯುತ್ತದೆ. ಆದ್ರೆ ದಂಪತಿಯಂತೆ ಜೀವನ ನಡೆಸೋದಿಲ್ಲ. ಒಟ್ಟಿಗೆ ಸಂಸಾರ ನಡೆಸುವುದಿಲ್ಲ. ಇಬ್ಬರ ಮಧ್ಯೆ ದೈಹಿಕ ಸಂಪರ್ಕವಿರೋದಿಲ್ಲ, ಮಕ್ಕಳನ್ನು ಪಡೆಯಲು ಆಸಕ್ತಿ ಹೊಂದಿರೋದಿಲ್ಲ. ಒಂದೇ ಮನೆಯಲ್ಲಿ ಸ್ನೇಹಿತರಂತಿರುವ ಇವರು ಒಟ್ಟಿಗೆ ಸುತ್ತಾಡುತ್ತಾರೆ. ಪರಸ್ಪರ ಸಮಸ್ಯೆಗಳನ್ನು ಹಂಚಿಕೊಳ್ತಾರೆ. ಒಬ್ಬರಿಗೊಬ್ಬರು ನೆರವಾಗ್ತಾರೆ. ಒಂದೇ ಮನೆಯಲ್ಲಿ ವಾಸಿಸುವ ಕಾರಣ ತಮ್ಮ ಕೆಲಸಗಳನ್ನು ಹಂಚಿಕೊಳ್ತಾರೆ. ಹಾಗಂತ ಅವರು ಒಂದೇ ಮನೆಯಲ್ಲಿ ವಾಸಮಾಡ್ಬೇಕು ಎನ್ನುವ ನಿಯಮವೂ ಇಲ್ಲಿಲ್ಲ. ಮದುವೆಯಾಗಿದ್ರೂ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸುವ ಸ್ವಾತಂತ್ರ್ಯವನ್ನು ಅವರು ಹೊಂದಿರುತ್ತಾರೆ. ಮಗು ಅಗತ್ಯ ಎನ್ನಿಸಿದಾಗ ಕೃತಕ ವಿಧಾನದ ಮೂಲಕ ಅವರು ಮಗುವನ್ನು ಪಡೆಯುತ್ತಾರೆ. ಫ್ರೆಂಶ್ಶಿಪ್ ಮ್ಯಾರೇಜ್ ಮಾಡಿಕೊಳ್ಳುವ ಜನರು ಜೀವನ ಸಂಗಾತಿಯನ್ನು ಹುಡುಕುವ ಬದಲು ರೂಮ್ ಮೆಂಟ್ ಹುಡುಕಾಟ ನಡೆಸುತ್ತಾರೆ.
ಇಂಗ್ಲಿಷ್ ಬಾರದ ಅಮ್ಮನನ್ನು ಫ್ರೆಂಡ್ಸ್‌ಗೆ ಪರಿಚಯಿಸದ ಮಕ್ಕಳು, ಬದಲಾಯಿತು ಅಮ್ಮನ ವ್ಯಾಖ್ಯಾನ!
ಜಪಾನ್ ನಲ್ಲಿ 32 ವರ್ಷಕ್ಕಿಂತ ಮೇಲ್ಪಟ್ಟ ಜನರು ಹೆಚ್ಚಾಗಿ ಸ್ನೇಹ ವಿವಾಹದತ್ತ ಒಲವು ತೋರಿಸುತ್ತಿದ್ದಾರೆ. ಮದುವೆಗೆ ಮೊದಲೇ ಅವರು ಈ ವಿಷ್ಯದ ಬಗ್ಗೆ ಚರ್ಚೆ ನಡೆಸಿ ಒಂದು ಒಪ್ಪಂದಕ್ಕೆ ಬರುತ್ತಾರೆ. ಮದುವೆಗೆ ಮುನ್ನ ಒಟ್ಟಿಗೆ ಸಮಯ ಕಳೆದು, ತಮ್ಮ ಜೀವನದ ಬಗ್ಗೆ ಮಾತುಕತೆ ನಡೆಸಿ, ಒಟ್ಟಿಗಿದ್ರೂ ಏನೆಲ್ಲ ಕೆಲಸವನ್ನು ಒಟ್ಟಿಗೆ ಮಾಡಬೇಕು ಯಾವುದನ್ನು ಬೇರೆಯಾಗಿ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರ್ತಾರೆ. ಜಪಾನ್ ಅಲ್ಲದೆ ಬೇರೆ ದೇಶಗಳಲ್ಲೂ ಈ ಪ್ರವೃತ್ತಿ ಹೆಚ್ಚಾಗ್ತಿದೆ.