ಹದಿನಾರರಲ್ಲೇ ಪ್ರೀತಿಗೆ ಬಿದ್ದ ಮಗ, ಪಾಲಕರ ರಿಯಾಕ್ಷನ್ ಹೇಗಿದ್ದರೆ ಒಳ್ಳೇದು?

By Roopa Hegde  |  First Published May 28, 2024, 12:32 PM IST

ಅಮ್ಮ, ನನಗೊಬ್ಬಳು ಗರ್ಲ್ ಫ್ರೆಂಡ್ ಇದಾಳೆ.. ಹೀಗಂತ ನಿಮ್ಮ 15 ವರ್ಷದ ಮಗ ಬಂದು ಹೇಳಿದ್ರೆ ಕೋಪ ಬರೋದು ಸಹಜ. ಹಾಗಂತ ನಿಮ್ಮ ಭಾವನೆ ಹೊರಹಾಕಿದ್ರೆ ಯಡವಟ್ಟಾಗೋದು ನಿಶ್ಚಿತ. 
 


ಮಕ್ಕಳು ದೊಡ್ಡವರಾಗ್ತಿದ್ದಂತೆ ಪಾಲಕರು ಬದಲಾಗಬೇಕು. ಚಿಕ್ಕ ಮಕ್ಕಳನ್ನು ಗದರಿಸಿ, ಬೆದರಿಸಿದಂತೆ ಹದಿಹರೆಯಕ್ಕೆ ಬಂದ ಮಕ್ಕಳನ್ನು ನೋಡಲು ಸಾಧ್ಯವಿಲ್ಲ. ಆ ವಯಸ್ಸಿನಲ್ಲಿ ಮಕ್ಕಳ ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಅನೇಕ ವಿಷ್ಯಗಳು ಅವರನ್ನು ಆಕರ್ಷಿಸುತ್ತವೆ. ಹದಿಹರೆಯದಲ್ಲಿ ಮಕ್ಕಳಿಗೆ ಸರಿಯಾದ ಮಾರ್ಗ ಸಿಕ್ಕಿದ್ರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸುವ ಜವಾಬ್ದಾರಿ ಪಾಲಕರ ಮೇಲಿರುತ್ತದೆ. ಹದಿಹರೆಯದ ಮಕ್ಕಳಿಗೆ ಕೋಪ ಹೆಚ್ಚು. ಹಾಗೆಯೇ ಅವರು ಪಾಲಕರಿಗಿಂತ ಸ್ನೇಹಿತರನ್ನು ಹೆಚ್ಚು ನಂಬುತ್ತಾರೆ. ನೀವು ನಿಮ್ಮ ಮಕ್ಕಳಿಗೆ ಪಾಲಕರಾಗುವ ಬದಲು ಸ್ನೇಹಿತರಾದ್ರೆ ಮಕ್ಕಳನ್ನು ತಿದ್ದುವ ಕೆಲಸ ಸುಲಭವಾಗುತ್ತದೆ. 

ಮಕ್ಕಳಿಗೆ ಗರ್ಲ್ ಫ್ರೆಂಡ್ (Girlfriend) ಅಥವಾ ಬಾಯ್ ಫ್ರೆಂಡ್ ಇದ್ದಾರೆ ಎಂಬುದು ನಿಮಗೆ ಗೊತ್ತಾದಾಗ ನೀವು ಹೇಗೆ ಪ್ರತಿಕ್ರಿಯೆ ನೀಡುತ್ತೀರಿ ಎಂಬುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಪಾಲಕರ ಪ್ರತಿಕ್ರಿಯೆ ಮಕ್ಕಳ ಮುಂದಿನ ಹೆಜ್ಜೆಯನ್ನು ನಿರ್ಧರಿಸುತ್ತದೆ. ಈಗಿನ ಮಕ್ಕಳು (Children) ಬಹಳ ಸೂಕ್ಷ್ಮವಾಗಿರುವ ಕಾರಣ, ಪ್ರೀತಿ (Love) ವಿಷ್ಯ ಬಂದಾಗ ಪಾಲಕರು ಮತ್ತಷ್ಟು ಅಲರ್ಟ್ ಆಗ್ಬೇಕು. ಬಟ್ಟೆಗೆ ಅಂಟಿದ ಮುಳ್ಳನ್ನು ಅತ್ಯಂತ ಎಚ್ಚರಿಕೆಯಿಂದ ತೆಗೆಯಬೇಕು. 

Tap to resize

Latest Videos

ಅಲ್ಲೇ ಡ್ರಾ ಅಲ್ಲೇ ಬಹುಮಾನ: ಅತ್ತೆ ಚಾಪೆ ಕೆಳಗೆ ನುಸುಳಿದ್ರೆ ಈ ಸೊಸೆಗೆ ರಂಗೋಲಿ ಕೆಳಗೆ ನುಸುಳೋದು ಗೊತ್ತಿಲ್ವಾ?

ನಿಮ್ಮ ಮಕ್ಕಳು 15, 16, 17ನ ವಯಸ್ಸಿನಲ್ಲಿದ್ದು, ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಹೊಂದಿದ್ದು, ಆ ವಿಷ್ಯವನ್ನು ನಿಮ್ಮ ಬಳಿ ಹೇಳಿದ್ರೆ ನೀವು ಏನು ಮಾಡ್ಬೇಕು? ಈ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಕೆಲ ದಿನಗಳ ಹಿಂದೆ ತಾಯಿಯೊಬ್ಬಳು ತನ್ನ ಮಗನ ಕಥೆ ಹೇಳಿದ್ದಳು. 16ನೇ ವಯಸ್ಸಿನಲ್ಲೇ ಮಗ ತಂದೆಯಾಗ್ತಿದ್ದಾನೆ, ಆತನ ಗರ್ಲ್ ಫ್ರೆಂಡ್ ಪ್ರೆಗ್ನೆಟ್. ಈ ವಿಷ್ಯ ತಿಳಿದ ನಾನು ಕೂಲ್ ಆಗಿ ಪ್ರತಿಕ್ರಿಯೆ ನೀಡಿದ್ದೆ. ಅದು ಅನಿವಾರ್ಯವಾಗಿತ್ತು ಎಂದಿದ್ದಳು. ಈಗಿನ ಪಾಲಕರು ಹೀಗೆ ರಿಯಾಕ್ಷನ್ ನೀಡೋದು ಈಗ ಅಗತ್ಯವಾಗಿದೆ.

ನಿಮ್ಮ ಮಗ ಅಥವಾ ಮಗಳು ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಹೊಂದಿದ್ದಾರೆ ಎಂದು ನಿಮ್ಮ ಬಳಿ ಹೇಳಿದ್ರೆ ನೀವು ಸ್ವಲ್ಪ ನೆಮ್ಮದಿ ಆಗ್ಬಹುದು. ನಿಮ್ಮ ಮಕ್ಕಳು ನಿಮ್ಮನ್ನು ಸ್ನೇಹಿತರಂತೆ ನೋಡ್ತಿದ್ದಾರೆಂದು ಖುಷಿಪಡಬಹುದು. ಆದ್ರೆ ಮಕ್ಕಳ ಮುಂದೆ ಆ ಕ್ಷಣದಲ್ಲಿ ಖುಷಿಯನ್ನಾಗ್ಲಿ ಇಲ್ಲ ಕೋಪವನ್ನಾಗ್ಲಿ ವ್ಯಕ್ತಪಡಿಸಲು ಹೋಗ್ಬೇಡಿ. ಶಾಂತವಾಗಿ ಅವರು ಹೇಳಿದ ಪ್ರತಿಯೊಂದು ಮಾತನ್ನು ಕೇಳಿ.

ಮಕ್ಕಳು, ಗರ್ಲ್ ಫ್ರೆಂಡ್ ಬಗ್ಗೆ ಹೇಳ್ತಿದ್ದಂತೆ ನೀವು ಕೋಪಗೊಂಡು ಕಿರುಚಾಡಿದ್ರೆ ಮಕ್ಕಳ ಬದಲಾಗ್ತಾರೆ. ನಿಮ್ಮ ಮುಂದೆ ಮತ್ತ್ಯಾವ ವಿಷ್ಯವನ್ನೂ ಹೇಳೋದಿಲ್ಲ. ಕೆಲ ಸೂಕ್ಷ್ಮ ಮಕ್ಕಳ ಮನನೊಂದು ಪ್ರಾಣ ಕಳೆದುಕೊಳ್ಳುವ ಅಪಾಯ ಕೂಡ ಇದೆ. ನೀವು 25ನೇ ವಯಸ್ಸಿನಲ್ಲಿ ಮಾಡಿದ ಕೆಲಸವನ್ನು ನಿಮ್ಮ ಮಕ್ಕಳು 16ನೇ ವಯಸ್ಸಿನಲ್ಲಿ ಮಾಡಿದ್ದಾರೆ ಎಂಬ ಸತ್ಯ ಅರಿತುಕೊಳ್ಳಿ. ನಂತ್ರ ಮಕ್ಕಳಿಗೆ ಶಾಂತವಾಗಿ ಬುದ್ಧಿ ಹೇಳಿ. ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಹೊಂದುವ ಸಮಯ ಇದಲ್ಲ. ಅದಕ್ಕೆ ಇನ್ನೂ ಬೇಕಾದಷ್ಟು ಅವಕಾಶವಿದೆ. ಈಗ ಓದು ಹಾಗೂ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲಿ ಎಡವಿದ್ರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ನೀವು ಮಕ್ಕಳಿಗೆ ತಿಳಿಹೇಳಿ.

ಆನ್‌ಲೈನ್‌ನಲ್ಲಿ ಭೇಟಿಯಾದ ಹುಡುಗಿ ಜೊತೆ ಯುವಕನ ವಿವಾಹ, 12 ದಿನದ ಮೇಲೆ ಗೊತ್ತಾಯ್ತು ಆಕೆ ಅವಳಲ್ಲ ಅವನು!

ಕೆಲ ಪಾಲಕರು ಮಕ್ಕಳ ಬಗ್ಗೆ ಸರಿಯಾಗಿ ತಿಳಿಯುವ ಪ್ರಯತ್ನ ನಡೆಸೋದಿಲ್ಲ. ಮಕ್ಕಳ ವರ್ತನೆಯಲ್ಲಾದ ಬದಲಾವಣೆಯನ್ನು ಗಮನಿಸೋದಿಲ್ಲ. ನನ್ನ ಮಗು ಹಾಗಲ್ಲ, ಅವರಿಗೆ ಏನೂ ತಿಳಿದಿಲ್ಲ, ಸಭ್ಯ ಎನ್ನುವ ಭ್ರಮೆಯಲ್ಲಿ ಬದುಕುತ್ತಿರುತ್ತಾರೆ. ಮೊದಲು ನಿಮ್ಮ ಮಕ್ಕಳನ್ನು ನೀವು ಅರಿಯಬೇಕು. ಅವರ ಜೀವನದಲ್ಲಾಗ್ತಿರುವ ಬದಲಾವಣೆಯನ್ನು ಗಮನಿಸಬೇಕು. ಸ್ನೇಹಿತರಂತೆ ಅವರ ಜೊತೆ ಮಾತನಾಡಿ, ಅವರನ್ನು ಸರಿದಾರಿಗೆ ತರಬೇಕು. 

click me!