ದಾಂಪತ್ಯವೆಂದ ಮೇಲೆ ಅಲ್ಲಿ ಕೋಳಿ ಜಗಳ ಸಾಮಾನ್ಯ.ಅಲ್ಲದೆ, ಆ ಜಗಳ ಆ ಕ್ಷಣಕ್ಕೆ ಮುಕ್ತಾಯವಾದ್ರೆ ಯಾವುದೇ ಸಮಸ್ಯೆಯಿಲ್ಲ.ಆದ್ರೆ ಜಗಳದ ಸಮಯದಲ್ಲಿ ಆಡೋ ಕೆಲವು ಮಾತುಗಳು ಪತಿ-ಪತ್ನಿ ನಡುವಿನ ಸಂಬಂಧದ ಗೋಡೆಯಲ್ಲಿ ದೊಡ್ಡ ಬಿರುಕು ಸೃಷ್ಟಿಸಬಲ್ಲವು.
ಮಾತು ಸಂಬಂಧ ಬೆಸೆಯಲೂಬಲ್ಲದು,ಹಾಗೆಯೇ ಮುರಿಯಲೂಬಲ್ಲದು.ಅದ್ರಲ್ಲೂ ದಾಂಪತ್ಯ ಬದುಕಿನ ನಂಬಿಕೆ,ಪ್ರೀತಿ ಹಾಗೂ ವಿಶ್ವಾಸದ ಗೋಡೆಗಳನ್ನುಮಾತೆಂಬ ಅಣುಬಾಂಬ್ ಕ್ಷಣಾರ್ಧದಲ್ಲಿ ಧರೆಗುರುಳಿಸಬಲ್ಲದು.ಹೀಗಾಗಿ ದಾಂಪತ್ಯ ಬದುಕು ಸುಖ, ನೆಮ್ಮದಿಯಿಂದ ಕೂಡಿರಬೇಕಂದ್ರೆ ಪತಿ-ಪತ್ನಿಇಬ್ಬರೂ ಮಾತಿನ ಮೇಲೆ ಹಿಡಿತ ಹೊಂದಿರೋದು ಅಗತ್ಯ.ಇಲ್ಲವಾದ್ರೆ ನಿತ್ಯ ಜಗಳ, ಮುನಿಸು ತಪ್ಪಿದ್ದಲ್ಲ.ಇನ್ನು ಬಹತೇಕ ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿರೋದಕ್ಕೆ ಕಾರಣ ಮಾತೇ ಆಗಿದೆ. ದಾಂಪತ್ಯದಲ್ಲಿ ಕೆಲವು ಮಾತುಗಳು ದೊಡ್ಡ ಕಲಹಕ್ಕೆ ಕಾರಣವಾಗಬಲ್ಲವು.ಅಂಥ ಮಾತುಗಳು,ವಿಷಯಗಳ ಬಗ್ಗೆ ತುಸು ಎಚ್ಚರಿಕೆ ವಹಿಸಿದ್ರೆ,ನಿಮ್ಮ ದಾಂಪತ್ಯ ಬದುಕಿನಲ್ಲಿ ಯಾವುದೇ ದೊಡ್ಡ ಸಮಸ್ಯೆಗಳು ಖಂಡಿತಾ ಕಾಣಿಸಿಕೊಳ್ಳೋದಿಲ್ಲ.ಅದ್ರಲ್ಲೂ ಜಗಳವಾಡೋ ಸಮಯದಲ್ಲಿ,ಕೆಲವು ವಿಷಯಗಳನ್ನುಅಪ್ಪಿತಪ್ಪಿಯೂ ಪ್ರಸ್ತಾಪಿಸಲು ಹೋಗಲೇಬಾರದು.ಹಾಗಾದ್ರೆ ಯಾವ ವಿಷಯಗಳನ್ನು ತಪ್ಪಿಯೂ ಮಾತಾಡಬಾರದು ಅಂತೀರಾ?
ಪೀರಿಯಡ್ಸ್ ಅಂದ್ರೇನು ಅಂತ ಗಂಡಸ್ರನ್ನು ಕೇಳಿದ್ರೆ ಹಿಂಗನ್ನೋದಾ..?
undefined
ಅಪ್ಪ, ಅಮ್ಮನ ವಿಷಯ ಬಂದ್ರೆ ಗ್ರಹಚಾರ ಕೆಡೋದು ಪಕ್ಕಾ
ದಾಂಪತ್ಯ ಎಂದ ಮೇಲೆ ಅಲ್ಲೊಂದಿಷ್ಟು ಜಗಳ ಕಾಮನ್. ಆದ್ರೆ ದಾಂಪತ್ಯದ ಕೋಳಿ ಜಗಳ ಗಂಭೀರ ಸ್ವರೂಪ ಪಡೆದುಕೊಳ್ಳೋಕೆ ಕಾರಣವಾಗೋ ಮುಖ್ಯ ಸಂಗತಿಗಳಲ್ಲಿ ಪರಸ್ಪರ ಅಪ್ಪ,ಅಮ್ಮನ ಹೆಸರನ್ನು ಎಳೆದು ತಂದು ಬೈಯೋದು ಸೇರಿದೆ.ಅಪ್ಪ, ಅಮ್ಮನ ಬಗ್ಗೆ ನೆಗೆಟಿವ್ ಕಾಮೆಂಟ್ ಕೇಳಿದ್ರೆ ಎಂಥವರ ಪಿತ್ತವೂ ನೆತ್ತಿಗೇರುತ್ತದೆ.ಹೀಗಿರೋವಾಗ ಮೊದಲೇ ಕೋಪದಲ್ಲಿ ಬುಸುಗುಟ್ಟುತ್ತಿರೋವಾಗ ಇಂಥ ಮಾತುಗಳನ್ನಾಡಿದ್ರೆ ಬೆಂಕಿಗೆ ತುಪ್ಪ ಸುರಿದಂತಾಗಿ ಗಲಾಟೆ ವಿಚ್ಛೇದನದ ಹಂತದವರೆಗೂ ತಲುಪಬಹುದು. ಸೋ,ಜಗಳದ ಸಮಯದಲ್ಲಿ ಅಥವಾ ಬೇರೆ ಯಾವುದೇ ಸಂದರ್ಭದಲ್ಲೂ ಗಂಡ-ಹೆಂಡ್ತಿ ಪರಸ್ಪರ ಇಬ್ಬರ ಅಪ್ಪ- ಅಮ್ಮ ಅಥವಾ ಕುಟುಂಬ ಸದಸ್ಯರ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಪಾಸ್ ಮಾಡದಿರೋದು ಉತ್ತಮ.
ಹೀಯಾಳಿಕೆ ಜಾಸ್ತಿಯಾದ್ರೆ ಪ್ರೀತಿ ಕಡಿಮೆಯಾಗುತ್ತೆ
ಗಂಡ-ಹೆಂಡ್ತಿ ಪರಸ್ಪರ ಒಬ್ಬರನ್ನೊಬ್ಬರು ಛೇಡಿಸಿಕೊಂಡು,ಕೀಚಾಯಿಸಿಕೊಂಡು ನಗು ನಗುತ್ತಿದ್ರೆ ಚೆಂದ. ಆದ್ರೆ ಈ ಮೂದಲಿಕೆ ಅಥವಾ ಹೀಯಾಳಿಕೆ ಅತಿಯಾದ್ರೆ ಅದೇ ಸಂಬಂಧಕ್ಕೆ ಕಹಿಯಾಗುತ್ತದೆ. ಪತಿ ಎಲ್ಲರ ಮುಂದೆ ಪತ್ನಿಯ ಆಸಕ್ತಿಗಳು, ಕೆಲ್ಸ, ಜ್ಞಾನದ ಕುರಿತು ಜೋಕ್ ಮಾಡಿದ್ರೆ ಪತ್ನಿಗೆ ಖಂಡಿತಾ ಅವಮಾನ ಆಗೇಆಗುತ್ತೆ.ಇಂಥ ಛಾಳಿಯನ್ನು ಪತಿ ಟೇಕನ್ ಫಾರ್ ಗ್ರಾಂಟೆಡ್ ಎಂಬಂತೆ ಆಗಾಗ ಮುಂದುವರಿಸಿದ್ರೆ ಒಂದು ದಿನ ಪತ್ನಿಯ ಮನಸ್ಸಿನೊಳಗೆ ಕುದಿಯುತ್ತಿರೋ ಜ್ವಾಲಾಮುಖಿ ಸ್ಫೋಟಗೊಳ್ಳೋದು ಪಕ್ಕಾ.ಅದೇರೀತಿ ಪತ್ನಿ ಪತಿಯ ಉದ್ಯೋಗ,ವೇತನ,ವರ್ತನೆ ಬಗ್ಗೆ ಕೀಳಾಗಿ ಮಾತನಾಡಿದ್ರೆ ದಾಂಪತ್ಯದಲ್ಲಿ ಮುನಿಸು ಮೂಡುವ ಎಲ್ಲ ಸಾಧ್ಯತೆಗಳೂ ಇವೆ. ಅದ್ರಲ್ಲೂ ಜಗಳವಾಡೋ ಸಮಯದಲ್ಲಿ ನಿಮ್ಮ ಸಂಬಳ ಯಾವುದಕ್ಕೂ ಸಾಲಲ್ಲ,ಇಂಥ ಕೆಲ್ಸ ಅನ್ನೋದು ಗೊತ್ತಿದ್ರೆ,ನಿಮ್ಮನ್ನು ಕಟ್ಟಿಕೊಳ್ತೀರಲಿಲ್ಲ ಎಂಬ ಮಾತುಗಳು ಜಗಳವನ್ನು ತಾರಕಕ್ಕೇರಿಸಬಲ್ಲವು.
ಪ್ರೇಮಿಗಳಿಲ್ಲಿ ಕೇಳಿ, ಅಮಿತಾಭ್ ಕೊಟ್ರು ಲವ್ ಅಡ್ವೈಸ್
ಮದುವೆಗೂ ಮುಂಚಿನ ವಿಷಯಗಳ ಪ್ರಸ್ತಾಪ
ಮದುವೆಗೂ ಮುನ್ನ ಇಬ್ಬರ ಬದುಕಿನಲ್ಲೂ ಪ್ರೀತಿ-ಗೀತಿ ಆಗಿರಬಹುದು.ಆ ವಿಷಯ ಇಬ್ಬರಿಗೂ ಗೊತ್ತಿರಬಹುದು.ಭೂತಕಾಲದಲ್ಲಿ ನಡೆದದ್ದು ವರ್ತಮಾನ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರೋದಿಲ್ಲ ಎಂಬುದು ಗೊತ್ತಿದ್ದರೂ ಜಗಳದ ಸಮಯದಲ್ಲಿ ಎಕ್ಸ್‌ಗಳನ್ನು ಎಳೆದು ತಂದು ನಡತೆಯ ಬಗ್ಗೆ ಕೆಟ್ಟದ್ದಾಗಿ ಮಾತನಾಡೋದು ಇಲ್ಲವೆ ಭಾವನೆಗಳಿಗೆ ನೋವಾಗುವಂತೆ ಚುಚ್ಚಿ ಮಾತನಾಡೋದು ಮಾಡಿದ್ರೆ ಇಬ್ಬರ ನಡುವೆ ಅದೆಷ್ಟೇ ಭದ್ರವಾದ ಪ್ರೀತಿ ಗೋಡೆಯಿದ್ರೂ ಅಲ್ಲೊಂದು ಬಿರುಕು ಖಂಡಿತಾ ಮೂಡುತ್ತದೆ.
ಹಿಂದೆ ಮಾಡಿದ ತಪ್ಪನ್ನು ಎತ್ತಿ ಆಡೋದು
ಪತಿ ಹಾಗೂ ಪತ್ನಿಗೆ ಯಾವುದೋ ವಿಷಯಕ್ಕೆ ಹಿಂದೆ ವೈಮನಸ್ಸು ಮೂಡಿರುತ್ತದೆ ಅಥವಾ ಯಾರೋ ಒಬ್ಬರು ತಪ್ಪು ಮಾಡಿ ಆ ಬಳಿಕ ಕ್ಷಮೆ ಕೇಳಿರುತ್ತಾರೆ. ಅಲ್ಲಿಗೆ ಆ ಅಧ್ಯಾಯ ಮುಕ್ತಾಯವಾಗಿರುತ್ತದೆ. ಆದ್ರೆ ಆಗಾಗ ಆ ಹಿಂದಿನ ತಪ್ಪನ್ನು ಎತ್ತಿ ಆಡೋದು ಅಥವಾ ಆ ಘಟನೆ ಬಗ್ಗೆ ಕೆದಕೋದ್ರಿಂದ ಗಲಾಟೆ ಇನ್ನಷ್ಟು ಹೆಚ್ಚಿ,ಇಬ್ಬರ ನಡುವಿನ ವಿಶ್ವಾಸ, ಪ್ರೀತಿ ಹಾಗೂ ನಂಬಿಕೆಗಳು ಮತ್ತಷ್ಟು ದುರ್ಬಲಗೊಳ್ಳುತ್ತವೆ.
ಮನದ ಕತ್ತಲೆ ಓಡಿಸುವ ಬೆಳಕಿನ ಕಥೆಗಳು ನಿಮಗಾಗಿ
ಪ್ರತಿ ಮಾತಿನಲ್ಲೂ ತಪ್ಪು ಹುಡುಕೋದು
ಜಗಳ ನಡೆಯುತ್ತಿರೋ ಸಮಯದಲ್ಲಿ ಹಿಂದಿನ ಮಾತನ್ನು ಅಥವಾ ಆ ಕ್ಷಣಕ್ಕೆ ಆಡಿದ ಪ್ರತಿ ಮಾತನ್ನು ತಮಗೆ ಬೇಕಂತೆ ಅರ್ಥೈಸಿಕೊಳ್ಳೋದು ಅಥವಾ ಅದ್ರಲ್ಲಿ ತಪ್ಪುಹುಡುಕೋದ್ರಿಂದ ಮನಸ್ತಾಪ ಇನ್ನಷ್ಟು ,ಹೆಚ್ಚಾಗುತ್ತೆ.
ಪ್ರೀತಿಪಾತ್ರರ ಬಗ್ಗೆ ಕೀಳಾಗಿ ಮಾತಾಡೋದು
ಪತಿಯ ಸ್ನೇಹಿತರು ಅಥವಾ ಸಮೀಪ ಬಂಧುಗಳ ಬಗ್ಗೆ ಪತ್ನಿ ಕೀಳಾಗಿ ಮಾತನಾಡಿದ್ರೆ ಅಥವಾ ಪತ್ನಿಯ ಹಿತೈಷಿಗಳ ಬಗ್ಗೆ ಪತಿ ಕೆಟ್ಟ ಮಾತುಗಳನ್ನಾಡಿದ್ರೆ ಇಬ್ಬರ ನಡುವಿನ ಮುನಿಸು ಇನ್ನಷ್ಟು ಹೆಚ್ಚಿ ಸಂಬಂಧದಲ್ಲಿನ ಬಿರುಕು ದೊಡ್ಡದಾಗೋ ಸಾಧ್ಯತೆ ಅಧಿಕವಿದೆ