ಹೆತ್ತ ಕಂದನ ಮೇಲೆ ಪ್ರೀತಿ ಇಲ್ಲದ ಹೆಂಡ್ತಿ ಒತ್ತಡ ನೋಡಿ ಮಗುವನ್ನು ದತ್ತು ನೀಡಲು ಪತಿ ನಿರ್ಧಾರ!

By Suvarna News  |  First Published Apr 2, 2024, 3:39 PM IST

ಕೆಲಸ ಮತ್ತೆ ಮಗು ಎಂಬ ಆಯ್ಕೆ ನೀಡಿದ್ರೆ ಜನರು ಮಗುವನ್ನು ಆಯ್ದುಕೊಳ್ತಾರೆ. ಆದ್ರೆ ಈ ದಂಪತಿ ಆಯ್ಕೆ ಭಿನ್ನವಾಗಿದೆ. ಜಗತ್ತಿನಲ್ಲಿ ಇಂಥ ಜನರೂ ಇರ್ತಾರಾ ಎಂಬ ಪ್ರಶ್ನೆ ಹುಟ್ಟುಹಾಕುವಂತಹ ನಿರ್ಧಾರ ಕೈಗೊಂಡಿದ್ದಾರೆ ದಂಪತಿ. 
 


ಪಾಲಕರಿಗೆ ಮಕ್ಕಳೇ ಪ್ರಪಂಚ. ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೇ ಧಾರೆ ಎರೆಯಲು ಸಿದ್ಧವಿರುವ ಪಾಲಕರು, ಮಕ್ಕಳ ಪಾಲನೆಗೆ ಹೆಚ್ಚು ಗಮನ ಹರಿಸ್ತಾರೆ. ಮಕ್ಕಳನ್ನು ಸರಿಯಾಗಿ ಆರೈಕೆ ಮಾಡಲು ಸಾಧ್ಯವಿಲ್ಲ ಎನ್ನುವ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರು ಕೆಲಸ ತೊರೆದು ಮನೆಯಲ್ಲಿರುತ್ತಾರೆ. ಮಕ್ಕಳ ಆರೈಕೆ ಹೊಣೆ ಹೊರುತ್ತಾರೆ. ಮಕ್ಕಳ ಜವಾಬ್ದಾರಿಯನ್ನು ಬಹುತೇಕ ತಾಯಿಯಾದವಳೇ ಹೊರುತ್ತಾಳೆ. ಗರ್ಭ ಧರಿಸಿದ ಸಮಯದಲ್ಲೇ ಕೆಲಸ ತೊರೆದು ಮನೆಯಲ್ಲಿ ವಿಶ್ರಾಂತಿ ಪಡೆಯುವ ಅನೇಕ ತಾಯಂದಿರಿದ್ದಾರೆ. ಮಕ್ಕಳಾದ್ಮೇಲೆ ಪತಿಯನ್ನೂ ಮರೆತು ಮಕ್ಕಳಿಗಾಗಿ ತಮ್ಮೆಲ್ಲ ಸಮಯ ತೆಗೆದಿಡುವ ಅಮ್ಮಂದಿರು, ಮಗು ಸ್ವಲ್ಪ ಅತ್ತರೂ ಟೆನ್ಷನ್ ಮಾಡಿಕೊಳ್ತಾರೆ. ಮೊದಲು ಮಗು ನಂತ್ರ ನಾವೆಲ್ಲ ಎನ್ನುವ ನಿರ್ಧಾರಕ್ಕೆ ಬರ್ತಾಳೆ. ಆದ್ರೆ ಎಲ್ಲ ಪಾಲಕರು ಹೀಗೆ ಇರಬೇಕು ಎಂದೇನಿಲ್ಲ. ಕೆಲ ಪಾಲಕರು ಇದಕ್ಕೆ ಅಪವಾದ ಎನ್ನಬಹುದು. ಆರ್ಥಿಕ ಸಂಕಷ್ಟ ಎನ್ನುವ ಕಾರಣಕ್ಕೆ ಹೆತ್ತ ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿದ ಅದೆಷ್ಟೋ ಪಾಲಕರು ನಮ್ಮಲ್ಲಿದ್ದಾರೆ. ಆದ್ರೆ ಇಲ್ಲೊಂದು ತಂದೆ – ತಾಯಿ ತೆಗೆದುಕೊಂಡ ತೀರ್ಮಾನ ದಂಗಾಗಿಸಿದೆ.

ಅವರಿಗೆ ಮಗು (Child) ವಿನ ಆರೈಕೆ ಮಾಡಲು ಹಣ (Money) ದ ಕೊರತೆ ಇಲ್ಲ. ಕೈತುಂಬ ಸಂಬಳ ಬರುವ ಕೆಲಸವೇ ಮಗುವನ್ನು ದೂರ ಮಾಡಲು ಕಾರಣ ಅಂದ್ರೆ ನೀವು ನಂಬ್ಲೇಬೇಕು. ರೆಡ್ಡಿಟ್ (Reddit) ನಲ್ಲಿ ವ್ಯಕ್ತಿಯೊಬ್ಬ ತನ್ನ ಕಥೆಯನ್ನು ಹೇಳಿಕೊಂಡಿದ್ದಾನೆ. ಪತ್ನಿ ಹಾಗೂ ಮಗುವಿನ ಹೆಸರನ್ನು ಬದಲಿಸಿ ಕಥೆ ಬರೆದ ವ್ಯಕ್ತಿ, ತನ್ನ ಪತ್ನಿ ಕ್ಯಾಥರೀನ್‌ ಗಾಗಿ ಮೂರು ತಿಂಗಳ ಮಗಳು ಎಲಿಜಬೆತ್ ಳನ್ನು ದತ್ತು ನೀಡಿರುವುದಾಗಿ ಹೇಳಿದ್ದಾನೆ.

Tap to resize

Latest Videos

63 ವರ್ಷದ ಸನ್ಯಾಸಿ ಜೊತೆ 12ರ ಬಾಲಕಿ ಮದ್ವೆ, ಇದು ಫೋರ್ಸಿನಿಂದ ಮಾಡಿದ ಮದ್ವೆಯಲ್ವಂತೆ!

ಪತ್ನಿ ಕ್ಯಾಥರೀನ್ ಮೂರು ತಿಂಗಳ ಹಿಂದೆ ಮುದ್ದಾದ ಎಲಿಜಬೆತ್ ಗೆ ಜನ್ಮ ನೀಡಿದ್ದಾಳೆ.  ಮಗುವಿಗೆ ಜನ್ಮ ನೀಡಿದ್ದು ಬಿಟ್ಟರೆ ಕ್ಯಾಥರೀನ್ ಗೆ ಮಗುವಿನ ಮೇಲೆ ಅಮ್ಮನ ಪ್ರೀತಿ ಇಲ್ಲ.. ಕ್ಯಾಥರೀನ್ ವರ್ಕೋಲಿಕ್. ಆಕೆಗೆ ಕೆಲಸದ ಮೇಲೆ ಅಪಾರ ಪ್ರೀತಿ. ಇಡೀ ದಿನ ಕಚೇರಿ ಕೆಲಸ ಮಾಡಲು ಕ್ಯಾಥರೀನ್ ಸಿದ್ಧವಿದ್ದಾಳೆ. ಮಗುವಿಗೆ ಅಗತ್ಯವಿದೆ ಎಂದಾಗ ಅನಿವಾರ್ಯವಾಗಿ ಮಗುವನ್ನು ಎತ್ತಿಕೊಳ್ತಾಳೆಯೇ ವಿನಃ. ಮಗು ಅತ್ತಾಗಲೂ ಅನೇಕ ಬಾರಿ ಅದನ್ನು ಸಂತೈಸಲು ಹಿಂದೇಟು ಹಾಕ್ತಾಳೆ. ಕ್ಯಾಥರೀನ್ ತಾಯಿ ಮನೆಯಲ್ಲಿರುವ ಕಾರಣ ಇಷ್ಟು ದಿನ ಸಮಸ್ಯೆ ಆಗಿರಲಿಲ್ಲ.

ಮಗುವಿನ ಆರೈಕೆಗೆ ಸಂಬಂಧಿಸಿದಂತೆ ಕ್ಯಾಥರೀನ್ ಸ್ವಲ್ಪ ಒತ್ತಡಕ್ಕೆ ಒಳಗಾಗಿದ್ದಾಳೆ. ಅದನ್ನು ಗಮನಿಸಿದ ಪತಿ ಮಹತ್ವದ ನಿರ್ಧಾರಕ್ಕೆ ಬಂದಿದ್ದಾನೆ. ತನ್ನ ಮಗಳನ್ನು ದತ್ತು ನೀಡುವ ಆಲೋಚನೆ ಮಾಡಿದ್ದಾನೆ. ಇದು ಕ್ಯಾಥಲೀನ್ ಅಮ್ಮನಿಗೆ ಇಷ್ಟವಾಗಿಲ್ಲ. ಹಾಗಾಗಿ ಆಕೆಯೇ ಮೊಮ್ಮಗಳು ಎಲಿಜಬೆತ್ ಗಳನ್ನು ದತ್ತು ಪಡೆದಿದ್ದಾಳೆ. 

ಊಟಕ್ಕೆ ಕೂತಾಗ ಮಕ್ಕಳೊಂದಿಗೆ ಮಾತಿಗೆ ತೊಡಗಲು ಈ ಪ್ರಶ್ನೆಗಳನ್ನು ಕೇಳಿ..

ಕ್ಯಾಥಲೀನ್ ಅಂದ್ರೆ ನನಗೆ ಇಷ್ಟ. ನಾನು ಮಗಳನ್ನು ಬಿಟ್ಟು ಬದುಕಬಲ್ಲೆ. ಆದ್ರೆ ಪತ್ನಿ ಕ್ಯಾಥಲೀನ್ ಇಲ್ಲದ ಪ್ರಪಂಚದಲ್ಲಿರೋದು ಕಷ್ಟ. ನನಗೆ ಮಗಳ ಮೇಲೆ ಪ್ರೀತಿ ಇಲ್ಲವೆಂದಲ್ಲ. ಕ್ಯಾಥರೀನ್ ಆರೋಗ್ಯವೂ ಮುಖ್ಯ. ಹಾಗಾಗಿಯೇ ನಾನು ನನ್ನ ಮಗುವನ್ನು ದತ್ತು ನೀಡ್ತಿದ್ದೇನೆ ಎಂದು ವ್ಯಕ್ತಿ ಹೇಳಿದ್ದಾನೆ. ಮೂರು ತಿಂಗಳ ಮಗುವನ್ನು ಆತನ ಅತ್ತೆಯೇ ದತ್ತು ಪಡೆದಿದ್ದಾಳೆ. ನಾನು ಕೈಗೊಂಡ ಈ ನಿರ್ಧಾರದಿಂದ ತಾಯಿ – ಮಗಳು ಇಬ್ಬರು ಖುಷಿಯಾಗಿರ್ತಾರೆಂದು ನಾನು ಭಾವಿಸುತ್ತೇನೆ ಎಂದು ವ್ಯಕ್ತಿ ರೆಡ್ಡಿಟ್ ನಲ್ಲಿ ಪೋಸ್ಟ್ ಹಾಕಿದ್ದಾನೆ. ಇದನ್ನು ನೋಡಿದ ಬಳಕೆದಾರರು ದಂಗಾಗಿದ್ದಾರೆ. ಇಂಥ ತಾಯಿ ಇರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ತನ್ನ ಮಗುವನ್ನೇ ದತ್ತು ಯಾರು ನೀಡ್ತಾರೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ರೆ, ಮಗುವಿನ ಮೇಲೆ ಪ್ರೀತಿಯೇ ಇಲ್ಲ ಎಂದಾದ್ರೆ ಮಗುವಿಗೆ ಜನ್ಮ ಏಕೆ ನೀಡ್ಬೇಕಿತ್ತು ಎಂದು ಬಳಕೆದಾರರು ಕೋಪ ವ್ಯಕ್ತಪಡಿಸಿದ್ದಾರೆ.    

click me!