ರೀಲ್ಸ್ ಮಾಡುತ್ತಿದ್ದಂತೆ ಶುರುವಾದ ಪ್ರೀತಿ, ಇಬ್ಬರು ಮಕ್ಕಳು ಪತಿ ಬಿಟ್ಟು ಯುವತಿ ಮದುವೆಯಾದ ಮಹಿಳೆ

Published : Apr 20, 2026, 04:19 PM IST
Woman marry woman

ಸಾರಾಂಶ

ರೀಲ್ಸ್ ಮಾಡುತ್ತಿದ್ದಂತೆ ಶುರುವಾದ ಪ್ರೀತಿ, ಇಬ್ಬರು ಮಕ್ಕಳು ಪತಿ ಬಿಟ್ಟು ಯುವತಿ ಮದುವೆಯಾದ ಮಹಿಳೆ, ದೇವಸ್ಥಾನದಲ್ಲಿ ಹಾರ ಬದಲಿಸಿ ಮದುವೆಯಾಗಿದ್ದಾರೆ. ಈ ಮದುವೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬುಕ್ಸರ್ (ಏ.20) ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಅನ್ನೋ ಕೂಗು ಕಳೆದ ಹಲವು ವರ್ಷಗಳಿಂದ ತೀವ್ರಗೊಳ್ಳುತ್ತಿದೆ. ಇತ್ತ ಯುವ ಸಮೂಹ ಮದುವೆ, ಸಂಸಾರಕ್ಕಿಂತ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ಬಿಹಾರದ ಬುಕ್ಸರ್‌ನಲ್ಲಿ ಮದುವೆ ಭಾರಿ ಚರ್ಚೆಯಾಗುತ್ತಿದೆ. ಎರಡು ಮಕ್ಕಳ ತಾಯಿ ಹಾಗೂ ಮತ್ತೊಬ್ಬ ಯುವತಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಲು ಆರಂಭಿಸಿದ್ದಾರೆ. ಕಳೆದ 15 ದಿನಗಳಿಂದ ಈ ರೀಲ್ಸ್ ವಿಡಿಯೋ ಸಾಹಸ ಆರಂಭಗೊಂಡಿದೆ. ಆದರೆ ಇವರ ಪೇಜ್ ಮಾನಿಟೈಸೇಶನ್ ಆಗುವ ಮೊದಲೇ ಇವರ ಬಾಳಲ್ಲಿ ಹೊಸ ತಿರುವು ಸಿಕ್ಕಿದೆ. ಎರಡು ಮಕ್ಕಳನ್ನು, ಪತಿಯನ್ನು ಬಿಟ್ಟು ರೀಲ್ಸ್ ಮಾಡುತ್ತಿದ್ದ ಯುವತಿ ಜೊತೆ ಮಹಿಳೆ ಮದುವೆಯಾಗಿದ್ದಾಳೆ.

ದೇವಸ್ಥಾನದಲ್ಲಿ ನಡೆದ ಮದುವೆ

ವಿಂದ್ಯಾಚಲದ ಅಷ್ಟಭುಜ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ಇನ್ನು ಬುಕ್ಸರ್‌ನಲ್ಲಿರುವ ರಾಮೇಶ್ವರ ದೇವಸ್ಥಾನದಲ್ಲಿ ಮದುವೆಯ ಇತರ ಕಾರ್ಯಕ್ರಮಗಳು ನಡೆದಿದೆ. ಮದುವೆ ಬಳಿಕ ಮಾತನಾಡಿದ ಎರಡು ಮಕ್ಕಳ ತಾಯಿ, ನಾವು ವಿಡಿಯೋ ಮಾಡುತ್ತಲೇ ಪ್ರೀತಿ ಶುರುವಾಗಿದೆ. ನಾವಿಬ್ಬರು ಹೆಚ್ಚು ಹೊತ್ತು ಫೋನ್ ಮೂಲಕ ಮಾತನಾಡುತ್ತಿದ್ದೇವೆ. ಮಾತುಕತೆಯಲ್ಲಿ ಪ್ರೀತಿ ಶುರುವಾಗಿದೆ. ಹೀಗಾಗಿ ನಿನ್ನೆ ರಾತ್ರಿ ಈ ಕುರಿತು ಚರ್ಚಿಸಿದ್ದೇವೆ. ಬಳಿಕ ಮದುವೆಯಾಗುವ ಕುರಿತು ಮಾತನಾಡಿದ್ದೇವೆ. ಚರ್ಚಿಸಿ ನಿರ್ಧಾರ ತೆಗೆದುಕೊಂಡು ಇಂದು ಮದುವೆಯಾಗಿದ್ದೇವೆ ಎಂದು ಎರಡು ಮಕ್ಕಳ ತಾಯಿ ಹೇಳಿದ್ದಾರೆ.

ಮದುವೆ ಬಗ್ಗೆ ಸ್ಥಳೀಯರ ಅನುಮಾನ

ಮದುವೆ ಬಳಿಕ ಇಬ್ಬರು ಮಹಿಳೆಯರು ಮಾಧ್ಯಮ ಜೊತೆ ಮಾತನಾಡಿದ್ದಾರೆ. ನಮಲ್ಲಿ ಪ್ರೀತಿ ಶುರುವಾಯಿತು ಹೀಗಾಗಿ ಮಜುವೆಯಾಗಿದ್ದೇವೆ ಎಂದಿದ್ದಾರೆ. ಆದರೆ ಸ್ಥಳೀಯರು ಈ ಮದುವೆಯಲ್ಲಿ ಕೆಲ ಅನುಮಾನ ವ್ಯಕ್ತಪಡಿಸಿದ್ದಾರೆ. ಯುವತಿಯನ್ನು ಒತ್ತಾಯಿಸಿ, ತಲೆಕೆಡಿಸಿ ಮದುವೆಯಾಗಿದ್ದಾರೆ. ಗಂಡ ಹಾಗೂ ಮಕ್ಕಳನ್ನು ನೋಡಿಕೊಳ್ಳದ ಈ ಮಹಿಳೆ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.ರೀಲ್ಸ್, ವಿಡಿಯೋ ಎಂದು ಪ್ರತಿ ದಿನಾ ಮನೆಯಿಂದ ಹೊರಗೆ ಹೋಗುತ್ತಿದ್ದ ಈಕೆ, ರಾತ್ರಿಯಾದ ಬಳಿಕ ಮನೆ ಸೇರುತ್ತಿದ್ದಳು. ಇದರ ನಡುವೆ ಮಕ್ಕಳ ಕುರಿತು ಕಿಂಚಿತ್ತು ಕಾಳಜಿ ವಹಿಸುತ್ತಿರಲಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಸ್ಥಳೀಯರು ಎರಡು ಮಕ್ಕಳ ತಾಯಿ ಮನೆ ಕೆಲಸ, ಮಕ್ಕಳ ಪಾಲನೆಯಿಂದ ಮುಕ್ತಿ ಪಡೆಯಲು ಈ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಾನು ಸೆಕೆಂಡ್ ಮದರ್' ಎಂದ ರಶ್ಮಿಕಾ ಮಂದಣ್ಣ; ಅವರಿಬ್ಬರ ಲವ್‌-ಕೇರಿಂಗ್‌ ನೋಡಿ ಹಲವರು ಶಾಕ್!
ಬಾಬಾ ವಂಗಾ ಪ್ರಕಾರ ಮುಂದಿನ 7 ದಿನ 5 ರಾಶಿ ಲಕ್ಕಿ , ಏಪ್ರಿಲ್ ನಾಲ್ಕನೇ ವಾರ ಕೋಟ್ಯಾಧಿಪತಿ ಯೋಗ