ತಾಯಿಯಾಗುತ್ತಿದ್ದಾರೆ ಲವ್‌ ಮಾಕ್‌ಟೇಲ್‌-3 ನಟಿ: ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡು ಸಿಹಿ ಸುದ್ದಿ ನೀಡಿದ ಮೈಸೂರು ಬೆಡಗಿ!

Published : Nov 03, 2026, 04:33 PM IST
Rajani Bharadwaj  Pregnant

ಸಾರಾಂಶ

ಲವ್‌ ಮಾಕ್‌ಟೇಲ್‌-3 ಸಿನಿಮಾದಲ್ಲಿ ಟೀಚರ್ ಪಾತ್ರ ಮಾಡಿದ್ದ ನಟಿ ರಜನಿ ಭಾರದ್ವಾಜ್ ತಾವು ತಾಯಿಯಾಗುತ್ತಿರುವ ವಿಚಾರವನ್ನು ಫೋಟೋಶೂಟ್ ಮೂಲಕ ಹಂಚಿಕೊಂಡಿದ್ದಾರೆ. ಮೈಸೂರಿನ ಉದ್ಯಮಿ ಸಂಭವ್‌ ಶಾ ಅವರನ್ನು ವಿವಾಹವಾಗಿರುವ ಇವರು, ಯಾವುದೇ ಗಾಡ್‌ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ.

ಲವ್‌ ಮಾಕ್‌ಟೇಲ್‌-3 ಸಿನಿಮಾ ನೋಡಿರುವವರಿಗೆ ಈ ಮುಖ ನೆನಪಿರುವುದು ಖಂಡಿತ. ಹೀರೋ ಡಾರ್ಲಿಂಗ್‌ ಕೃಷ್ಣ ಅವರನ್ನು ಇಷ್ಟಪಡುವ ಟೀಚರ್‌ ಪಾತ್ರ. ಪುಟ್ಟ ನಿಧಿಯ ಕ್ಲಾಸ್‌ ಟೀಚರ್‌ ಆಗಿ ನಟಿಸಿರುವ ನಟಿ ರಜನಿ ಭಾರದ್ವಾಜ್‌ ಸೋಶಿಯಲ್‌ ಮೀಡಿಯಾ ಮಂದಿಗೆ ಸಖತ್‌ ಶಾಕ್‌ ನೀಡಿದ್ದಾರೆ. ಗುಂಗುರು ಕೂದಲು ಹಾಗೂ ತಮ್ಮ ಸಹಜ ಸೌಂದರ್ಯದಿಂದ ಪ್ರೇಕ್ಷಕರನ್ನು ಸೆಳೆದಿದ್ದ ರಜನಿ ಭಾರದ್ವಾಜ್‌ ತಾವು ಮೊದಲ ಮಗುವಿಗೆ ತಾಯಿಯಾಗುತ್ತಿರುವುದಾಗಿ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಶೂಟ್‌ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

ಲವ್‌ ಮಾಕ್‌ಟೇಲ್‌-3 ಸಿನಿಮಾದಲ್ಲಿ ರಜನಿ ಸೌಂದರ್ಯವನ್ನು ನೋಡಿ ಎಲ್ಲರೂ ಮೆಚ್ಚಿದ್ದರು. ಹೆಚ್ಚಿನವರು ಆ ಸಮಯದಲ್ಲಿ ಈಕೆ ಮದುವೆಯಾಗಿಲ್ಲ ಎಂದೇ ಅಂದುಕೊಂಡಿದ್ದರು. ಆದರೆ, ಕೆಲ ದಿನಗಳ ಹಿಂದೆ ಪ್ರೆಗ್ನೆನ್ಸಿ ಫೋಟೋಶೂಟ್‌ಅನ್ನು ಅವು ಹಂಚಿಕೊಂಡಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿ ಹೊಸ ರೋಲ್‌ ಮಾಡಲು ಸಿದ್ಧವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಟಿ ರಜನಿ ಭಾರದ್ವಾಜ್ ವಿವಾಹವಾಗಿರುವುದು ಪ್ರಸಿದ್ಧ ಉದ್ಯಮಿ ಸಂಭವ್‌ ಶಾ (Sambhav Shah) ಅವರನ್ನು. ಸಂಭವ್ ಶಾ ಅವರು ಕಳೆದ 40 ವರ್ಷಗಳಿಂದ ಮೈಸೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 'ಹೀರೋ ಮೋಟರ್‌ಸೈಕಲ್‌'ನ (Hero MotoCorp) ಅಧಿಕೃತ ಡೀಲರ್‌ಶಿಪ್ ಹೊಂದಿರುವ 'ಶಾ ಮೊಬೈಕ್ಸ್' (Shah Mobikes) ಸಂಸ್ಥೆಯ ಮಾಲೀಕರಾಗಿದ್ದಾರೆ. ಯಾವ ವರ್ಷದಲ್ಲಿ ಮದುವೆಯಾಗಿದೆ ಎನ್ನುವ ವಿವರ ಇಲ್ಲವಾದರೂ, ಸೋಶಿಯಲ್‌ ಮೀಡಿಯಾದಲ್ಲಿ ಪತಿಯ ಜೊತೆಗಿರುವ ಕೆಲವೊಂದು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಕೋವಿಡ್‌ಗೂ ಮುನ್ನ ಆರಂಭವಾದ ಸ್ಯಾಂಡಲ್‌ವುಡ್ ಪಯಣ

ಸಿನಿಮಾ ರಂಗದಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲದೆ ಸ್ವಂತ ಬಲದಿಂದ ಬೆಳೆಯುತ್ತಿರುವ ರಜನಿ ಭಾರದ್ವಾಜ್, ಮೂಲತಃ ಮೈಸೂರಿನವರಾಗಿದ್ದು ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನವೇ ಚಂದನವನಕ್ಕೆ ಪದಾರ್ಪಣೆ ಮಾಡಿದ್ದರು. ಎಸ್‌ಡಿ ಅರವಿಂದ್ ನಿರ್ದೇಶನದ 'ಮಾಟಾಶ್‌' (Mataash) ಚಿತ್ರದ ಮೂಲಕ ಬೆಳ್ಳಿಪರದೆಯ ಪಯಣ ಆರಂಭಿಸಿದ ರಜಿನಿ, ಬಳಿಕ ಶ್ರೇಯಸ್ ಮಂಜು ಅಭಿನಯದ 'ರಾಣಾ' (Raana) ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.

ನಟ ಶರಣ್ ಅಭಿನಯದ 'ಚೂ ಮಂತರ್' (Choo Mantar) ಚಿತ್ರವು ರಜನಿ ಅವರ ವೃತ್ತಿಜೀವನದ ಮೊದಲ ದೊಡ್ಡ ಮಲ್ಟಿಸ್ಟಾರರ್ ಸಿನಿಮಾ ಆಗಿತ್ತು. ಥಿಯೇಟರ್‌ಗಳಿಗೆ ಭೇಟಿ ನೀಡಿದ ವೇಳೆ ಪ್ರೇಕ್ಷಕರು ತಮ್ಮ ಮುಖಚರ್ಯೆ ಹಾಗೂ ನಟನೆಯನ್ನು ಮೆಚ್ಚಿಕೊಂಡಿದ್ದು ತಮಗೆ ಭಾರಿ ಆತ್ಮವಿಶ್ವಾಸ ನೀಡಿದೆ ಎಂದು ರಜನಿ ಸ್ಮರಿಸುತ್ತಾರೆ. ಆ ಬಳಿಕ ಕಮರೊಟ್ಟು ಚೆಕ್‌ಪೋಸ್ಟ್‌-2 ಸಿನಿಮಾದಲ್ಲಿಯೂ ನಟಿಸಿದ್ದ ರಜಿನಿಯನ್ನು ಜನ ಹೆಚ್ಚಾಗಿ ಗುರುತಿಸುವಂತೆ ಮಾಡಿದ್ದು ಲವ್‌ಮಾಕ್‌ಟೇಲ್‌-3 ಸಿನಿಮಾದ ಟೀಚರ್‌ ಪಾತ್ರ.

ತಮ್ಮ ಸಿನಿಮಾ ಆಯ್ಕೆಯ ಕುರಿತು ಮಾತನಾಡುವ ರಜನಿ, "ಚಿತ್ರರಂಗದಲ್ಲಿ ಭಾರಿ ಸ್ಪರ್ಧೆಯಿದೆ ನಿಜ. ಆದರೆ ನಾನು ನನ್ನದೇ ಆದ ಸ್ವಂತ ಹಾದಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಕಥೆ ನನಗೆ ಇಷ್ಟವಾಗುವುದು ಅತ್ಯಂತ ಮುಖ್ಯ. ಎಷ್ಟೇ ದೊಡ್ಡ ನಟರಿದ್ದರೂ ಕಥೆ ಸರಿ ಇಲ್ಲದಿದ್ದರೆ ಅದು ನಮಗೆ ಸೂಕ್ತ ಸಿನಿಮಾವಾಗುವುದಿಲ್ಲ. ನನ್ನ ಪ್ರಕಾರ, ಕೆಟ್ಟ ಸಿನಿಮಾ ಮಾಡುವ ಬದಲು ಯಾವುದೇ ಸಿನಿಮಾ ಮಾಡದೇ ಇರುವುದೇ ಒಳ್ಳೆಯದು' ಎನ್ನುತ್ತಾರೆ.

ಅಷ್ಟೇ ಅಲ್ಲದೆ, ರೊಮಾಂಟಿಕ್‌ ಪಾತ್ರಗಳಿಗಿಂತ ಕಾಮಿಡಿ ಪಾತ್ರಗಳನ್ನು ಮಾಡಲು ಹೆಚ್ಚು ಇಷ್ಟಪಡುವ ಅವರು, ಕನ್ನಡ ಸಿನಿರಂಗದ ನಿರ್ದೇಶಕರು ಸ್ಥಳೀಯ ನಟ-ನಟಿಯರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಅವಕಾಶಗಳನ್ನು ನೀಡಬೇಕು ಎನ್ನುತ್ತಾರೆ. ಕೇವಲ ಸೌಂದರ್ಯದಿಂದಷ್ಟೇ ಅಲ್ಲದೆ ತಮ್ಮ ಅಭಿನಯದ ಶಕ್ತಿಯಿಂದ ಚಿತ್ರರಂಗದಲ್ಲಿ ತಮ್ಮದೇ ಆದ ಬಲವಾದ ಹೆಜ್ಜೆಗುರುತು ಮೂಡಿಸುವ ಛಲ ನಟಿ ರಜಿನಿಯವರದ್ದಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಾಸನಾಂಬೆ ದೇವಿಗೆ ಮಡಿಲಕ್ಕಿ ತುಂಬಿದ ಮುಸ್ಲಿಂ ಮಹಿಳೆ ಹಸೀನಾ ಲತೀಫ್! ಆಕೆಯ ಒಂದು ಮಾತು ಎಲ್ಲರಿಗೂ ಇಷ್ಟವಾಯ್ತು!
Friendship vs Crush: ಪ್ರೀತಿ, ರೊಮ್ಯಾನ್ಸ್ ಏನೂ ಇಲ್ಲ, ಆದರೂ ಅವರೇ ಇಷ್ಟ! Gen Z ಹೊಸ ಟ್ರೆಂಡ್‌ನ ಅಸಲಿ ಕಥೆ