ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕಿಗೆ ಲವ್, ಓಡಿಹೋದ ಲೆಸ್ಬಿಯನ್ ಜೋಡಿಯಿಂದ ಹೊತ್ತಿ ಉರಿದ ಗ್ರಾಮ!

By Suvarna News  |  First Published Jul 5, 2023, 4:54 PM IST

ಶಾಲೆಗೆ ಹೋದವಳು ಮನೆಗೆ ಮರಳಿ ಬಾರದ ಕಾರಣ ಆತಂಗೊಂಡ ಪೋಷಕರು ದೂರು ದಾಖಲಿಸಿದ್ದಾರೆ. ಆದರೆ ವಿದ್ಯಾಭ್ಯಾಸ ಕಲಿಸಬೇಕಾದ ಶಿಕ್ಷಕಿ ಅಪ್ರಾಪ್ತ ಹಿಂದೂ ಬಾಲಕಿ ಮೇಲೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಬಳಿಕ ಬಾಲಕಿಯನ್ನು ಕರೆದುಕೊಂಡು ಚೆನ್ನೈಗೆ ಪರಾರಿಯಾಗಿದ್ದಾಳೆ.  ಆದರೆ ಮುಸ್ಲಿಂ ಶಿಕ್ಷಕಿ, ಹಿಂದೂ ಬಾಲಕಿ. ನಾವಿಬ್ಬರು ಲೆಸ್ಬಿಯನ್ ಎಂದು ಜೋಡಿ ಹೇಳಿದ್ದರೆ, ಇತ್ತ ಗ್ರಾಮ ಲವ್ ಜಿಹಾದ್ ದಗೆಯಿಂದ ಹೊತ್ತಿ ಉರಿಯುಂತೆ ಮಾಡಿದೆ.
 


ಬಿಕಾನೆರ್(ಜು.05)  ಇದೊಂದು ವಿಚಿತ್ರ ಪ್ರಕರಣ.ಶಾಲಾ ಶಿಕ್ಷಕಿಗೆ ತನ್ನ ವಿದ್ಯಾರ್ಥಿನಿ ಮೇಲೆ ಪ್ರೀತಿ. ಬಾಲಕಿಗೆ ತಾನು ಏನೂ ಎಂದು ಅರಿಯುವ ಮೊದಲೇ ಶಿಕ್ಷಕಿ ತನ್ನ ಇಚ್ಚೆಗೆ ತಕ್ಕಂತೆ ಆಕೆಯನ್ನು ಬದಲಿಸಿದ್ದಳು. ಇವರ ಲೆಸ್ಬಿಯನ್ ಪ್ರೀತಿ ಆಳಕ್ಕಿಳಿದಿದೆ. ಒಂದು ದಿನ ಶಾಲೆಗೆ ಬಂದ  ವಿದ್ಯಾರ್ಥಿನಿ ಜೊತೆಗೆ ಶಿಕ್ಷಕಿ ಓಡಿ ಹೋಗಿದ್ದಾಳೆ. ಇತ್ತ ಮನೆಗೆ ಬಾರದ ಮಗಳನ್ನು ಹುಡುಕಾಡಿದ ಪೋಷಕರು ದೂರು ನೀಡಿದ್ದಾರೆ. ಇತ್ತ ಸ್ಥಳೀಯರು ಸೇರಿದ್ದಾರೆ. ಈ ವೇಳೆ ಶಾಲಾ ಶಿಕ್ಷಕಿಯೇ ಅಪ್ರಾಪ್ತ ಬಾಲಕಿಯ ತಲೆಕೆಡಿಸಿ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಓಡಿ ಹೋಗಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಇದರ ಬೆನ್ನಲ್ಲೇ ಶಿಕ್ಷಕಿ ಹಾಗೂ ವಿದ್ಯಾರ್ಥಿ ಜೋಡಿ ವಿಡಿಯೋವೊಂದು ಪೋಸ್ಟ್ ಮಾಡಿದ್ದಾರೆ. ನಮ್ಮದು ಲೆಸ್ಬಿಯನ್ ಪ್ರೀತಿ ಎಂದಿದ್ದಾರೆ. ಅಷ್ಟರಲ್ಲೇ ಗ್ರಾಮದಲ್ಲಿ ಭಾರಿ ಪ್ರತಿಭಟನೆ ಆರಂಭಗೊಂಡಿದೆ. ಕಾರಣ ಇದರ ಹಿಂದೆ ಲವ್ ಜಿಹಾದ್ ಷಡ್ಯಂತ್ರ ಅಡಗಿದೆ ಅನ್ನೋ ಆರೋಪವೂ ಕೇಳಿಬಂದಿದೆ. ಈ ಘಟನೆ ನಡೆದಿರುವುದು ರಾಜಸ್ಥಾನದ ಬಿಕಾನೆರ್ ಜಿಲ್ಲೆಯಲ್ಲಿ.

ಈ ಪ್ರೀತಿ ಪ್ರಕರಣ ಇಡೀ ಗ್ರಾಮದ ನಿದ್ದೆಗೆಡಿಸಿದೆ. ಒಂದೆಡೆ ಲೆಸ್ಬಿಯನ್, ಮತ್ತೊಂದೆಡೆ ಲವ್ ಜಿಹಾದ್. ಇಡೀ ಗ್ರಾಮದಲ್ಲಿ ಇದೀಗ ಉದ್ವಿಘ್ನ ವಾತಾವರಣ ನಿರ್ಮಾಣಗೊಂಡಿದೆ. ಕೋಮು ಸಂಘರ್ಷಕ್ಕೂ ಕಾರಣವಾಗಿದೆ. ಇದೀಗ ಕಾನೂನು ಸುವ್ಯವಸ್ಥೆಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಪ್ರತಿಭಟನೆಗಳು ನಡೆಯುತ್ತಲೇ ಇದೆ.

Tap to resize

Latest Videos

ಆನ್‌ಲೈನ್ ಮೂಲಕ ಲವ್ ಜಿಹಾದ್, ಹಿಂದೂ ವಿವಾಹಿತ ಮಹಿಳೆ ಇಸ್ಲಾಂಗೆ ಮತಾಂತರ!

ಬಿಕಾನೆರ್ ಜಿಲ್ಲೆಯ ಶಾಲೆಯಲ್ಲಿ ಮುಸ್ಲಿಂ ಶಿಕ್ಷಕಿ ನಿದಾ ಬಹ್ಲಿಮ್, ಹಿಂದೂ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಓಡಿ ಹೋಗಿದ್ದಾರೆ. ರಾಜಸ್ಥಾನದ ಬಿಕಾರನೆರ್‌ನಿಂದ ಚೆನ್ನೈಗೆ ರೈಲು ಹತ್ತಿ ಓಡಿ ಹೋಗಿದ್ದಾರೆ. ಇತ್ತ ಮಗಳನ್ನು ಕಾಣದ ಪೋಷಕರು ದೂರು ದಾಖಲಿಸಿದಾಗ ಶಾಲೆಯ ಶಿಕ್ಷಕಿಯೂ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಸಿಸಿಟಿವಿ ತಡಕಾಡಿದಾಗ ಶಿಕ್ಷಕಿ ಹಾಗೂ ಬಾಲಕಿ ಪರಾರಿಯಾಗಿರುವ ದೃಶ್ಯಗಳು ಲಭ್ಯವಾಗಿದೆ.ರೈಲು ನಿಲ್ದಾಣದಲ್ಲಿನ ಸಿಸಿಟಿವಿಯಲ್ಲಿ ಶಿಕ್ಷಕಿ ಹಾಗೂ ಬಾಲಕಿಯ ದೃಶ್ಯಗಳನ್ನು ಪತ್ತೆ ಹಚ್ಚಲಾಗಿದೆ.

ಈ ಮಾಹಿತಿ ತಿಳಿದ ಬೆನ್ನಲ್ಲೇ ಗ್ರಾಮದಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಹಿಂದೂ ಬಾಲಕಿಯನ್ನು ಮುಸ್ಲಿಂ ಶಿಕ್ಷಕಿ ಅಪಹರಿಸಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ. ಶಾಲೆ ಆವರಣ, ಪೋಲೀಸ್ ಠಾಣೆ ಸೇರಿದಂತೆ ಹಲೆವೆಡೆ ಪ್ರತಿಭಟನೆಗಳು ಆರಂಭೊಂಡಿದೆ. ಇತ್ತ ಶಿಕ್ಷಕಿ ವಾಸವಿರುವ ಕಾಲೋನಿ ಬಳಿಯೂ ಪ್ರತಿಭಟನೆ ಜೋರಾಗಿದೆ. ಇತ್ತ ಪ್ರತಿಭಟನೆ ಕೋಮು ಸಂಘರ್ಷಕ್ಕೆ ಕಾರಣಾಗಿದೆ.  

ಪ್ರತಿಭಟನೆ ಜೋರಾಗುತ್ತಿದ್ದಂತೆ ಚೆನ್ನೈನಿಂದ ಶಿಕ್ಷಕಿ ಹಾಗೂ ವಿದ್ಯಾರ್ಥಿನಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಾವು ಲೆಸ್ಬಿಯನ್, ನಮ್ಮಿಬ್ಬರ ಪ್ರೀತಿಗೆ ಅಡ್ಡಿಯಾಗಬೇಡಿ ಎಂದು ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಈ ವಿಡಿಯೋ ಆಧರಿಸಿ ರಾಜಸ್ಥಾನ ಪೊಲೀಸರು ಚೆನ್ನೈ ಪೂಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಚೆನ್ನೈ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿರುವ ರಾಜಸ್ಥಾನ ಪೊಲೀಸರು ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯನ್ನು ಬಂಧಿಸಲು ಮುಂದಾಗಿದ್ದಾರೆ.

 

ನಾಲ್ವರು ಹಿಂದೂಗಳನ್ನೇ ಮದ್ವೆಯಾಗಿರೋ ಲವ್‌ಜಿಹಾದಿಯಿಂದ ಮತ್ತೊಬ್ಳು ಹಿಂದೂ ಯುವತಿ ಕಿಡ್ನ್ಯಾಪ್‌

ಇತ್ತ ಶಿಕ್ಷಕಿ ಸಹೋದರ ಕೂಡ ಮನೆಯಲ್ಲಿ ಇಲ್ಲ. ಹೀಗಾಗಿ ಶಿಕ್ಷಕಿ ಹಿಂದೆ ಆಕೆಯ ಸಹೋದರನ ಕೈವಾಡವಿದೆ. ಇದು ಲವ್ ಜಿಹಾದ್. ಇಷ್ಟೇ ಅಲ್ಲ ಶಿಕ್ಷಕಿ ಕುಟುಂಬವೂ ಇದರಲ್ಲಿ ಶಾಮೀಲಾಗಿದೆ. ಇದೀಗ ಲೆಸ್ಬಿಯನ್ ನಾಟಕವಾಡುತ್ತಿದ್ದಾರೆ ಎಂದು ಬಾಲಕಿ ಕುಟುಂಬಸ್ಥರು ಆರೋಪಿಸಿದ್ದಾರೆ. ನಮ್ಮ ಮಗಳು ಲೆಸ್ಬಿಯನ್ ಅಲ್ಲ. ಇದೀಗ ಲವ್ ಜಿಹಾದ್ ಹಾಗೂ ಪ್ರಕರಣದ ಗಂಭೀರತೆ ಅರಿತಿರುವ ಶಿಕ್ಷಕಿ ಲೆಸ್ಬಿಯನ್ ನಾಟಕ ಆಡುತ್ತಿದ್ದಾರೆ ಎಂದಿದ್ದಾರೆ

ಇತ್ತ ಬಿಕಾನೆರ್ ಬಿಜೆಪಿ ಘಟಕ ಹಿಂದೂ ಕುಟುಂಬಕ್ಕೆ ಬೆಂಬಲ ನೀಡಿದೆ. ರಾಜ್ಯದಲ್ಲಿ ಲವ್ ಜಿಹಾದ್ ಹಾಗೂ ಮತಾಂತರ ನಡೆಯುತ್ತಲೇ ಇದೆ. ಸರ್ಕಾರ ಮೃದ ಧೋರಣೆ ತಳೆದಿರುವ ಕಾರಣ ಪ್ರಕರಣಗಳು ಮರುಕಳಿಸುತ್ತಿದೆ ಎಂದಿದೆ.
 

click me!