ಮದುವೆ ಮಂಟಪದಿಂದ ಅರ್ಧಕ್ಕೆ ಎದ್ದು ಬರೋದು ಒಳ್ಳೆಯದಲ್ಲ. ಅದ್ರಲ್ಲೂ ಸಪ್ತಪದಿ ಅರ್ಧಕ್ಕೆ ನಿಂತ್ರೆ ಮದುವೆ ಪೂರ್ಣಗೊಳ್ಳೋದಿಲ್ಲ. ಇದೇ ಕಾರಣಕ್ಕೆ ಮಳೆಯನ್ನೂ ಲೆಕ್ಕಿಸದೆ ಜೋಡಿಯೊಂದು ಮದುವೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.
ಜೀವನದಲ್ಲಿ ಒಮ್ಮೆ ನಡೆಯುವ ಮದುವೆ ಯಾವಾಗ್ಲೂ ಅವಿಸ್ಮರಣೀಯವಾಗಿರಬೇಕೆಂದು ಬಯಸ್ತಾರೆ. ಇದೇ ಕಾರಣಕ್ಕೆ ತಿಂಗಳುಗಟ್ಟಲೆ ಮದುವೆಗೆ ತಯಾರಿ ನಡೆಸ್ತಾರೆ. ಜೂನ್, ಜುಲೈ ತಿಂಗಳಿನಲ್ಲಿ ಮದುವೆ ಮಾಡಿಕೊಳ್ಳೋರ ಸಂಖ್ಯೆ ಕಡಿಮೆ. ಯಾಕೆಂದ್ರೆ ಮಳೆ ಅಬ್ಬರ ಮದುವೆ ಸಂಭ್ರಮಕ್ಕೆ ಅಡ್ಡಿ ಮಾಡುತ್ತೆ ಎನ್ನುವುದು ಮುಖ್ಯ ಕಾರಣ. ಕೆಲ ಬಾರಿ ನಾವು ಊಹಿಸದೆ ಮಳೆರಾಯ ಮದುವೆಗೆ ಬಂದು ಬಿಟ್ಟಿರುತ್ತಾನೆ. ಮದುವೆ ಮನೆಯನ್ನೆಲ್ಲ ಕೊಳಕು ಮಾಡಿ, ಅವಾಂತರವೆಬ್ಬಿಸಿ ಹೋಗಿರ್ತಾನೆ.
ಮದುವೆ (Marriage) ಸಮಯದಲ್ಲಿ ಮಳೆ ಬಂದ್ರೆ ಸಾಮಾನ್ಯವಾಗಿ ಬಂದು – ಹೋಗೋರಿಗೆ ತೊಂದರೆ. ಮಂಟಪದಲ್ಲಿ ಬೆಚ್ಚಗೆ ಕುಳಿತು ವಧು – ವರರು ಮದುವೆಯಾಗ್ತಿರುತ್ತಾರೆ. ಆದ್ರೆ ಇಲ್ಲೊಂದು ಮದುವೆಯಲ್ಲಿ ವಧು – ವರರೇ ಮಳೆಯಲ್ಲಿ ತೊಯ್ಯುವಂತಾಗಿದೆ. ಏಕಾಏಕಿ ಬಂದ ಭಾರೀ ಮಳೆ (Rain) ಗೆ ಮದುವೆ ಮಕ್ಕಳ ಅಂಜಲಿಲ್ಲ. ಒಂದೇ ಸಮನೆ ಮಳೆ ಬರ್ತಿದ್ದರು ಜಾಗ ಕದಲಿಸದೆ ಅಲ್ಲಿಯೇ ಇದ್ದ ವಧು – ವರ, ಸಪ್ತಪದಿ ತುಳಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ (Social Network) ದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. @giedde ಹೆಸರಿನ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ದೇವರು ನಿಮಗೆ ಸಂಕೇತವನ್ನು ನೀಡುತ್ತಿರುವಾಗ ಎಂದು ಶೀರ್ಷಿಕೆ ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿ ಕಮೆಂಟ್ ಮಾಡಿದ್ದಾರೆ.
KEGEL EXERCISE: ಹೆರಿಗೆ ನಂತರ ಸೆಕ್ಸ್ ಸುಖ ಸಿಗ್ತಿಲ್ವಾ? ಯೋನಿ ಬಿಗಿಯಾಗಿಸೋ ವ್ಯಾಯಾಮವಿದು!
ವಿಡಿಯೋದಲ್ಲಿ ವಧು – ವರ ಸಪ್ತಪದಿ ಹಾಕ್ತಿರೋದನ್ನು ನೀವು ನೋಡ್ಬಹುದು. ಒಂದು ಕಡೆ ಮಳೆ ಬೀಳ್ತಿದೆ. ಗಾಳಿ ಜೋರಾಗಿ ಬೀಸುತ್ತಿದೆ. ಮದುವೆಗೆ ಬಂದವರು ಮಂಟಪ ಬೀಳದಿರಲಿ ಅಂತಾ ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಮತ್ತೆ ಕೆಲವರು ಮಳೆಯಲ್ಲೇ ಓಡಾಡ್ತಿದ್ದಾರೆ. ವಧು- ವರರು ಮಳೆಯಲ್ಲಿ ತೊಯ್ದುಕೊಂಡು, ತಲೆ ಬಗ್ಗಿಸಿ ಸಪ್ತಪದಿ ತುಳಿಯುತ್ತಿದ್ದಾರೆ. ವಧುವಿನ ಜೊತೆ ಆಂಟಿಯೊಬ್ಬರು ಇರೋದು ಈ ವಿಡಿಯೋದ ಬಹುಮುಖ್ಯ ಚರ್ಚೆಯ ವಿಷ್ಯವಾಗಿದೆ.
ವಧು – ವರರ ಜೊತೆ ಏಳು ಸುತ್ತು ಹಾಕಿದ ಆಂಟಿ : ವಧು – ವರರ ಜೊತೆ ವಿಡಿಯೋದಲ್ಲಿ ನೀವು ಮಹಿಳೆಯೊಬ್ಬರನ್ನು ನೋಡ್ಬಹುದು. ಆ ಮಹಿಳೆ ಕೂಡ ಏಳು ಸುತ್ತು ಹಾಕಿದ್ದಾಳೆ. ವಧುವಿನ ಡ್ರೆಸ್ ಸಂಭಾಳಿಸ್ತಾ, ವಧುವನ್ನು ಹಿಡಿದುಕೊಂಡು ಸುತ್ತು ಸುತ್ತಿದ್ದಾಳೆ. ಮಹಿಳೆ ಮಾಡಿದ ಕೆಲಸ ಕೆಲವರಿಗೆ ತಮಾಷೆಯ ವಿಷ್ಯವಾಗಿದೆ.
ಅಬ್ಬಾ ನೋಡಿದ್ರೇನೆ ಭಯವಾಗುತ್ತೆ..ಚಲಿಸುವ ರೈಲಿನಲ್ಲಿ ಜೋಡಿಯಿಂದ ಇದೆಂಥಾ ಹುಚ್ಚಾಟ..!
ಇದು ಶುದ್ಧ ಪ್ರೀತಿ : ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ಒಂದಿಷ್ಟು ಕಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡ್ರೆ ಮತ್ತೆ ಕೆಲವರು ಇದನ್ನು ಶುದ್ಧ ಪ್ರೀತಿ ಎಂದಿದ್ದಾರೆ. ಇವರನ್ನು ನೋಡಿ ಎಲ್ಲರೂ ಕಲಿಯಬೇಕು. ಪರಿಸ್ಥಿತಿ ಎಷ್ಟೇ ಕೆಟ್ಟದಾದರೂ ಪ್ರೀತಿ ನಿಮ್ಮೊಂದಿಗೆ ಇದ್ದರೆ ಕೊನೆಯಲ್ಲಿ ಎಲ್ಲವೂ ಚೆನ್ನಾಗಿ ಆಗುತ್ತದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ವ್ಯಕ್ತಿ, ಚಿಕ್ಕಮ್ಮ ಕೂಡ ಏಳು ಸುತ್ತು ಸುತ್ತಿದ್ದಾರೆ ಎಂದು ತಮಾಷೆ ಕಮೆಂಟ್ ಹಾಕಿದ್ದಾರೆ. ಹೆಂಡತಿ ಸುಂದರವಾಗಿರೋಳು ಸಿಕ್ಕರೆ ಬೇಗ ಬೇಗ ಮದುವೆ ಆಗ್ಬೇಕು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಅಗ್ನಿ ಆರಿ ಹೋಗಿದ್ರೂ ಸಪ್ತಪದಿ ತುಳಿಯುತ್ತಿದ್ದಾರೆ ಎಂದು ಮತ್ತೊಬ್ಬ ತಮಾಷೆ ಮಾಡಿದ್ದಾನೆ. ಒಂದಕ್ಕೆ ಒಂದು ಫ್ರೀ ಅಂತಾ ಕೆಲವರು ಬರೆದಿರೋದನ್ನು ನೀವು ನೋಡ್ಬಹುದು. ನಿಸರ್ಗ ಕೂಡ ಈ ಮದುವೆಯಿಂದ ಖುಷಿಯಾಗಿದೆ ಎಂದು ಮತ್ತೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರ ಕಮೆಂಟ್ ಮಾಡಿದ್ದಾನೆ.
ಮಳೆಯಲ್ಲಿ ಮದುವೆಯಾದ ಜೋಡಿ ವಿಡಿಯೋಗಳು ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ವಿಡಿಯೋಗಳು ಸುದ್ದಿ ಮಾಡಿದ್ದವು. ಛತ್ರಿ ಹಿಡಿದು ಮದುವೆಯಾಗಿದ್ದ ಜೋಡಿಯೂ ನಮ್ಮಲ್ಲಿದ್ದಾರೆ.