ಪ್ರತಿ ದಿನ ನಡೆಸುವ ಸೆಕ್ಸ್ ಬೋರ್ ಆಗ್ಬಾರದು. ಅಪರೂಪಕ್ಕೆ ದೈಹಿಕ ಸಂಪರ್ಕ ನಡೆಸಿದ್ರೂ ಅದ್ರಲ್ಲಿ ಸಂಪೂರ್ಣ ಸುಖ ಸಿಗಬೇಕು. ಪರಾಕಾಷ್ಠೆ, ಆನಂದ ಸಿಗಬೇಕೆಂದ್ರೆ ಮಹಿಳೆಯರು ಕೆಲ ವಿಷ್ಯನ್ನು ತಿಳಿದಿರಬೇಕು.
ಸೆಕ್ಸ್, ಆನಂದ, ಪರಾಕಾಷ್ಠೆ, ತೃಪ್ತಿ ಸೇರಿದಂತೆ ಲೈಂಗಿಕ ಸಂತೋಷಕ್ಕೆ ಸಂಬಂಧಿಸಿದ ವಿಷ್ಯಗಳನ್ನು ಬಹಿರಂಗವಾಗಿ ಜನರು ಮಾತನಾಡ್ತಿರಲಿಲ್ಲ. ಅದ್ರಲ್ಲೂ ಮಹಿಳೆಯರು ಈ ವಿಷ್ಯವನ್ನು ಗುಪ್ತವಾಗಿಟ್ಟುಕೊಳ್ಳುತ್ತಿದ್ದರು. ಆದ್ರೀಗ ಮಹಿಳೆಯರ ಆಲೋಚನೆ ಬದಲಾಗಿದೆ. ಸೆಕ್ಸ್ ಬಗ್ಗೆ ಅವರು ಬಹಿರಂಗವಾಗಿ ಮಾತನಾಡ್ತಿದ್ದಾರೆ, ಚರ್ಚೆ ನಡೆಸುತ್ತಿದ್ದಾರೆ. ತಮಗೆ ಏನು ಬೇಕು ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಳ್ತಿದ್ದಾರೆ. ಆದ್ರೆ ತಮಗೆ ಬೇಕಾದ ಆನಂದ, ಪರಾಕಾಷ್ಠೆಯನ್ನು ಹೇಗೆ ಪಡೆಯಬೇಕು ಎಂಬುದು ಅನೇಕ ಮಹಿಳೆಯರಿಗೆ ತಿಳಿದಿಲ್ಲ. ಸ್ವಯಂ ಪ್ರೀತಿ ಮತ್ತು ಸ್ವಯಂ ಸಂತೋಷಕ್ಕಾಗಿ ಏನು ಮಾಡಬೇಕು ಎನ್ನುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.
ನಿಮ್ಮ ದೇಹವನ್ನು ಪ್ರೀತಿಸಿ (Love) : ಯಾವುದೇ ಮಹಿಳೆ ತನ್ನ ದೇಹದ ಬಗ್ಗೆ ಗೌರವ (Respect) ಹೊಂದಿರಬೇಕು. ಇನ್ನೊಂದು ಮಹಿಳೆಯಂತೆ ನೀವಿರಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮಹಿಳೆ ಆಕಾರ, ಬಣ್ಣ, ದೇಹ ಭಿನ್ನವಾಗಿರುತ್ತದೆ. ಹಾಗಾಗಿ ನಿಮ್ಮನ್ನು ನೀವು ಪ್ರೀತಿಸಬೇಕು. ನಿಮ್ಮ ದೇಹವನ್ನು ನೀವು ಗೌರವಿಸಿದಾಗ ಸಂತೋಷ ಹಾಗೂ ಪರಾಕಾಷ್ಠೆ ಪಡೆಯುವುದು ಸುಲಭವಾಗುತ್ತದೆ. ನಿಮ್ಮನ್ನು ಬೇರೆಯವರಿಗೆ ಹೋಲಿಕೆ ಮಾಡಿ, ನಿಮ್ಮನ್ನು ಕೀಳಾಗಿ ನೋಡಿದಾಗ ನಿಮ್ಮ ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ದೇಹದ ಬಗ್ಗೆ ಅಸುರಕ್ಷಿತರಾಗುತ್ತೀರಿ. ಇದ್ರಿಂದ ಸಂತೋಷ ಹಾಗೂ ಪರಾಕಾಷ್ಠೆ ಸಿಗುವುದಿಲ್ಲ. ಅದೇ ನಿಮ್ಮ ದೇಹ ಹೇಗಿದ್ದರೂ ನೀವು ಸ್ವೀಕರಿಸಿದ್ರೆ ಸಂತೋಷ ನಿಮ್ಮನ್ನು ಅರಸಿಬರುತ್ತದೆ.
ರಾಜಕುಮಾರ ಸಿಗುವ ಮೊದಲು ಹಲವು ಕಪ್ಪೆಗಳಿಗೆ ಮುತ್ತಿಕ್ಕಿದ್ದೇನೆ ಎಂದ ನಟಿ ತಾಪ್ಸಿ ಪನ್ನು
ಎರೋಜೆನಸ್ (Erogenous) ವಲಯಗಳನ್ನು ಗುರುತಿಸಿ : ಪ್ರತಿಯೊಬ್ಬರೂ ತಮ್ಮ ದೇಹದಲ್ಲಿ ವಿಭಿನ್ನ ಎರೋಜೆನಸ್ ವಲಯಗಳನ್ನು ಹೊಂದಿದ್ದಾರೆ. ಅದನ್ನು ಪ್ರಚೋದನೆಯ ವಲಯ ಎಂದು ಕರೆಯುತ್ತಾರೆ. ಇವು ದೇಹದ ಭಾಗಗಳಾಗಿದ್ದು, ಅವನ್ನು ಪ್ರಚೋದಿಸಿದಾಗ ಉತ್ಸಾಹ ಹೆಚ್ಚಾಗುತ್ತದೆ. ಸಂತೋಷ ಸಿಗುತ್ತದೆ. ಆನಂದ ಮತ್ತು ಪರಾಕಾಷ್ಠೆಗಾಗಿ ಮಹಿಳೆಯರು ಈ ಪ್ರದೇಶಗಳನ್ನು ಗುರುತಿಸುವುದು ಬಹಳ ಮುಖ್ಯ. ಇದನ್ನು ಸಂಗಾತಿಗೆ ತಿಳಿಸುವುದು ಮುಖ್ಯ.
ಖಾಸಗಿ ಭಾಗದ ಅನ್ವೇಷಣೆ : ಲೈಂಗಿಕ ಆನಂದಕ್ಕೆ (Sexual Pleasure) ಸಂಬಂಧ ಹೊಂದಿರುವ ಭಾಗವನ್ನು ನೀವು ಗುರುತಿಸಬೇಕು. ಖಾಸಗಿ ಅಂಗದ ಯಾವ ಜಾಗ ನಿಮ್ಮನ್ನು ಉತ್ತೇಜಿಸುತ್ತದೆ ಎಂಬುದನ್ನು ನೀವೇ ಪತ್ತೆ ಮಾಡಬೇಕು. ಬ್ರೆಸ್ಟ್, ಚಂದ್ರನಾಡಿ, ಯೋನಿ ಎಲ್ಲವೂ ಇದ್ರಲ್ಲಿ ಬರುತ್ತದೆ.
ಸಂಗಾತಿ ಜೊತೆ ಸಂವಹನ (Communication with Spouce) : ದೇಹವನ್ನು ಉತ್ತಮ ರೀತಿಯಲ್ಲಿ ಅನ್ವೇಷಿಸಲು ಸಂಗಾತಿಯ ಸಹಾಯವನ್ನು ಪಡೆಯಬೇಕು. ದೇಹವನ್ನು ಲೈಂಗಿಕವಾಗಿ ಅರ್ಥಮಾಡಿಕೊಳ್ಳಬೇಕು. ಸಂಗಾತಿಯೊಂದಿಗೆ ವಿಭಿನ್ನ ಸ್ಥಾನಗಳನ್ನು ಪ್ರಯತ್ನಿಸಿ ಮತ್ತು ನೀವು ಯಾವ ಸ್ಥಾನದಲ್ಲಿ ಉತ್ತಮ ಆನಂದವನ್ನು ಪಡೆಯುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ ಎನ್ನುತ್ತಾರೆ ತಜ್ಞರು. ಸಂಗಾತಿ ಜೊತೆ ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ಕೂಡ ಮುಖ್ಯವಾಗುತ್ತದೆ.
ಲವ್ ಬಾಂಬಿಂಗ್ ನಿಮಗೆ ಗೊತ್ತೇ? ಅವರ ವರ್ತನೆ ಹೀಗಿದ್ದಲ್ಲಿ ಎಚ್ಚರಿಕೆ ವಹಿಸಿ!
ಬರೀ ನಿಮ್ಮ ಸಂತೋಷ ಮಾತ್ರವಲ್ಲ ನಿಮ್ಮ ಸಂಗಾತಿ ಸಂತೋಷ ಕೂಡ ಮುಖ್ಯವಾಗುತ್ತದೆ. ಹಾಗಾಗಿ ಸಂಗಾತಿ ಜೊತೆ ಮಾತನಾಡಿ, ಅವರ ಇಷ್ಟಕಷ್ಟಗಳ ಬಗ್ಗೆ ತಿಳಿಯಬೇಕು. ಅವರಿಗೆ ಏನು ಅಗತ್ಯವಿದೆ ಎಂಬುದನ್ನು ಅರಿಯಬೇಕು. ಅವರ ಆಸೆ, ಇಷ್ಟಗಳು ನಿಮ್ಮ ಲೈಂಗಿಕ ಆನಂದಕ್ಕೆ ಸಹಕಾರಿಯಾಗುತ್ತವೆ.
ಲೈಂಗಿಕ ಆಟಿಕೆ – ಲೂಬ್ರಿಕಂಟ್ (Lubricant) : ನಿಮ್ಮ ದೇಹದ ಬಗ್ಗೆ ಇನ್ನಷ್ಟು ತಿಳಿಯಲು, ಉತ್ತೇಜನದ ಬಗ್ಗೆ ಸರಿಯಾಗಿ ಅನ್ವೇಷಣೆ ಮಾಡಲು ನೀವು ಲೈಂಗಿಕ ಆಟಿಕೆ ಮತ್ತು ಲೂಬ್ರಿಕಂಟ್ ಸಹಾಯ ಪಡೆಯಬಹುದು. ಇದು ಮೃದುವಾಗಿದ್ದು, ನೀವು ಯಾವ ಸ್ಥಾನದಲ್ಲಿ ಪರಾಕಾಷ್ಠೆ ತಲುಪುತ್ತೀರಿ ಎಂಬುದನ್ನು ಹೇಳುತ್ತದೆ. ಸಂಗಾತಿ ಇಲ್ಲದ ಮಹಿಳೆಯರಿಗೆ ಈ ಆಟಿಕೆ ನೆರವಾಗುತ್ತದೆ. ಆಟಿಕೆ ಬಳಸುವ ವೇಳೆ ಅದ್ರ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಲೈಂಗಿಕ ಸಂತೋಷದ ಜೊತೆ ಸ್ವಚ್ಛತೆ ಕೂಡ ಮುಖ್ಯವಾಗುವ ಕಾರಣ ಅದ್ರ ಬಗ್ಗೆಯೂ ಹೆಚ್ಚು ಗಮನ ನೀಡಬೇಕು.