ಡೇಟಿಂಗ್ ಮಾಡುವಾಗ ಪುರುಷರನ್ನು ಮನೆಗೆ ಕರೆದು ಪಾದ ಪೂಜೆ ಮಾಡಿಸಿ ಕೊಳ್ತಾಳಂತೆ ಇವಳು!

By Suvarna News  |  First Published Mar 12, 2024, 12:51 PM IST

ಡೇಟ್ ವೇಳೆ ಬಹುತೇಕ ಜೋಡಿ ಹೊಟೇಲ್, ಪಾರ್ಕ್ ಗೆ ಹೋಗ್ತಾರೆ. ಆದ್ರೆ ಈ ಮಹಿಳೆ ಪುರುಷರನ್ನು ಮನೆಗೆ ಕರೆಯುತ್ತಾಳೆ. ಅಲ್ಲಿ ಆಕೆ ಮಾಡುವ ಕೆಲಸ ವಿಚಿತ್ರವಾಗಿದೆ. ಮನೆಗೆ ಹೋದವರಿಗೆ ಮಾತ್ರ ಈ ಅನುಭವ ಸಿಗಲು ಸಾಧ್ಯ.
 


ನಮ್ಮ ಸಮಾಜದಲ್ಲಿ ಮಹಿಳೆ ಹಾಗೂ ಪುರುಷನ ಕೆಲಸವನ್ನು ಬೇರ್ಪಡಿಸಲಾಗಿದೆ. ಹಳ್ಳಿಯಲ್ಲಿ ಮಾತ್ರವಲ್ಲ ನಗರ ಪ್ರದೇಶದಲ್ಲಿ ಕೂಡ ಮನೆ ಕೆಲಸವನ್ನು ಮಹಿಳೆ ಮಾತ್ರ ಮಾಡಬೇಕು ಎನ್ನುವ ಅಲಿಖಿತ ನಿಯಮವಿದೆ. ಒಂದ್ವೇಳೆ ಪುರುಷ ಈ ಕೆಲಸ ಮಾಡಿದ್ರೆ, ಆತನನ್ನು ಪತ್ನಿ ಗಂಡ, ಪತ್ನಿಗೆ ಭಯಪಡುವ ವ್ಯಕ್ತಿ ಎಂದೆಲ್ಲ ಹೇಳಲಾಗುತ್ತದೆ. ಪತ್ನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುವ ಪುರುಷರು ಕೂಡ ತಾವು ಮಹಿಳೆಯರ ಕೆಲಸ ಮಾಡ್ತಿದ್ದೇವೆ ಎಂಬ ಭಾವನೆಯಲ್ಲಿರುತ್ತಾರೆ. ಪುರುಷರು ಮನೆ ಕೆಲಸ ಮಾಡ್ತಾರೆ ಎಂಬ ಕಾರಣಕ್ಕೆ ಮಹಿಳೆಯರು ಅವರ ಮೇಲೆ ವಿಶೇಷ ಸಹಾನುಭೂತಿ ತೋರಿಸುತ್ತಾರೆ. ಭಾರತದಲ್ಲಿ ಕೆಲಸ ಮಾಡುವ ಮಹಿಳೆಯರು ಮನೆ ಹಾಗೂ ಕಚೇರಿ ಎರಡೂ ಕೆಲಸವನ್ನು ಸಂಭಾಳಿಸಬೇಕು. ಅದೇ ವಿದೇಶದಲ್ಲಿ ಹಾಗಲ್ಲ. ಪತಿ – ಪತ್ನಿ ಇಬ್ಬರೂ ತಮ್ಮ ಕೆಲಸವನ್ನು ಹಂಚಿಕೊಂಡಿರುತ್ತಾರೆ. ಅಲ್ಲಿ ಪುರುಷರ ಕೆಲಸ, ಮಹಿಳೆ ಕೆಲಸ ಎನ್ನುವುದಿಲ್ಲ. ಪುರುಷರು ತಮ್ಮ ಮನೆಯಲ್ಲಿ ಕೆಲಸ ಮಾಡೋದು ವಿಶೇಷವಲ್ಲ. ಆದ್ರೆ ಹುಡುಗಿ ಜೊತೆ ಡೇಟ್ ಗೆ ಹೋದಾಗ ಆಕೆ ಮನೆಯಲ್ಲಿ ಕೆಲಸ ಮಾಡೋದು ಅಂದ್ರೆ?

ಡೇಟ್ (Date) ಬಗ್ಗೆ ನಮ್ಮೆಲ್ಲರ ಕಲ್ಪನೆ ಬೇರೆ ಇದೆ. ಹುಡುಗಿ ಜೊತೆ ಡೇಟ್ ಗೆ ಹೋದಾಗ ಹುಡುಗ್ರು ಅನೇಕ ಆಸೆಗಳನ್ನು ಹೊಂದಿರುತ್ತಾರೆ. ರೋಮ್ಯಾಂಟಿಕ್ ಡಾನ್ಸ್, ರುಚಿಯಾದ ಊಟ, ಒಂದು ಕಿಸ್, ಅಪ್ಪುಗೆ ಹೀಗೆ ಅವರ ಪಟ್ಟಿ ಮುಂದುವರೆದಿರುತ್ತದೆ. ಡೇಟ್ ಗೆ ಹುಡುಗಿ ಮನೆಗೆ ಕರೆದ್ರೆ ಈ ಕಸನು ಇನ್ನೊಂದು ಪಟ್ಟು ಹೆಚ್ಚಿರುತ್ತದೆ. ಅದೇ ಆಸೆಯಲ್ಲಿ ನೀವು ಅಮೆರಿಕದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ  ಕ್ಯಾಥರೀನ್ ಡ್ರೈಸ್ ಡೇಲ್ ಮನೆಗೆ ಹೋದ್ರೆ ಕಥೆ ಮುಗಿತು.

Tap to resize

Latest Videos

ಲವ್‌ ಬಾಂಬಿಂಗ್‌ ನಿಮಗೆ ಗೊತ್ತೇ? ಅವರ ವರ್ತನೆ ಹೀಗಿದ್ದಲ್ಲಿ ಎಚ್ಚರಿಕೆ ವಹಿಸಿ!

ಕ್ಯಾಥರೀನ್ ಡ್ರೈಸ್ ಡೇಲ್ ರಿಲೇಶನ್ಶಿಪ್ (Relationship) ಬಗ್ಗೆ ತರಬೇತಿ ನೀಡುವ ಮಹಿಳೆ. ಆಕೆಗೆ ಇನ್ನೂ ಮದುವೆ ಆಗಿಲ್ಲ. ತನ್ನ ಸಂತೋಷ (Happiness) ಕ್ಕೆ ಆಕೆ ಪುರುಷರ ಜೊತೆ ವಿಚಿತ್ರವಾಗಿ ಆಡ್ತಾಳೆ. ಆಕೆ ಡೇಟ್ ಗೆ ಪುರುಷರನ್ನು ತನ್ನ ಮನೆಗೆ ಕರೆಯುತ್ತಾಳೆ. ಪುರುಷರು ಮನೆಗೆ ಬಂದ್ಮೇಲೆ ಅವರ ಒಪ್ಪಿಗೆ ಪಡೆದು ಮನೆಯ ಕೆಲಸ ಎಲ್ಲ ಮಾಡಿಸ್ತಾಳೆ. ಆಕೆ ಮನೆಗೆ ಬರುವ  ಪುರುಷರು, ಬಟ್ಟೆ ಒಗೆಯಬೇಕು, ಪಾತ್ರೆ ತೊಳೆಯಬೇಕು, ಎ ಸ್ವಚ್ಛಗೊಳಿಸಬೇಕು, ನಾಯಿಯನ್ನು ನೋಡಿಕೊಳ್ಳಬೇಕು. ಅಷ್ಟೇ ಅಲ್ಲ ಕ್ಯಾಥರೀನ್ ಡ್ರೈಸ್ ಡೇಲ್ ಗೆ ಆಹಾರ (Food) ತಯಾರಿಸಿ ತಿನ್ನಿಸಬೇಕು. 

ವಿಚಿತ್ರ ಅಂದ್ರೆ ಆಕೆ ಜೊತೆ ಡೇಟ್ ಗೆ ಬರುವ ಎಲ್ಲ ಪುರುಷರು ಈ ಕೆಲಸ ಮಾಡಲು ಸಿದ್ಧವಿರುತ್ತಾರೆ. ಕ್ಯಾಥರೀನ್ ಡ್ರೈಸ್ ಡೇಲ್  23 ವರ್ಷದಲ್ಲಿರುವಾಗ ಸರ್ವೀಸ್ ಸಬ್ ಬಗ್ಗೆ ಕೇಳಿದ್ದಳು. ಲಾಸ್ ಏಂಜಲೀಸ್ ನಲ್ಲಿ ವಾಸವಾಗಿದ್ದ ಕ್ಯಾಥರೀನ್, ಟಿಂಡರ್ ನಲ್ಲಿ ಖಾತೆ ತೆರೆದಿದ್ದಳು. ಆಕೆ ಪರಿಚಯವಾದ ವ್ಯಕ್ತಿ ಕ್ಯಾಥರೀನ್ ಮನೆಗೆ ಬಂದಿದ್ದ. ಆತ, ಈಕೆ ಹೇಳಿದ್ದೆಲ್ಲವನ್ನು ಮಾಡಿದ್ದ. ಸ್ನಾನ ಕೂಡ ಮಾಡಿಸಿದ್ದ. ಆದ್ರೆ ಇಬ್ಬರ ಮಧ್ಯೆ ಅಂತರವಿತ್ತು. ಡೇಟ್ ಗೆ ಬಂದ ಇನ್ನೊಬ್ಬ ಆಕೆ ಪಾದ ಮುಟ್ಟಿ ಪೂಜೆ ಕೂಡ ಮಾಡ್ತಿದ್ದ. ಆತನನ್ನೂ ಕ್ಯಾಥರೀನ್ ಮನೆಗೆ ಕಳುಹಿಸಿದ್ದಳು. 

Intimate Health: ಮಹಿಳೆಯರ ಸೆಕ್ಸ್ ಡ್ರೈವ್ ಹೆಚ್ಚಾಗೋಕೆ ಇದು ಕಾರಣ

ಅನೇಕ ಪುರುಷರ ಜೊತೆ ನಾನು ಡೇಟ್ ಮಾಡಿದ್ದೇನೆ. ಎಲ್ಲರ ಜೊತೆ ಒಂದೇ ಸಮನೆ ನಡೆದುಕೊಳ್ತೇನೆ. ನಾನು ಏನೇ ಕೆಲಸ ನೀಡಿದ್ರೂ ಅವರು ಮಾಡ್ತಾರೆ. ಡೇಟಿಂಗ್ ಅಪ್ಲಿಕೇಷನ್ ನಲ್ಲಿ ನನ್ನ ವಿಚಿತ್ರ ವರ್ತನೆ ತಿಳಿದು ಡೇಟ್ ಮಾಡಲು ಅವರು ಉತ್ಸುಕರಾಗ್ತಾರೆ ಎಂದು ಕ್ಯಾಥರೀನ್ ಹೇಳಿದ್ದಾಳೆ.  

click me!