ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನ ಸಂಜೀವಿನಿ. ಅಪರಿಚಿತ ಮಹಿಳೆ ಈ ದಂಪತಿ ಮಡಿಲು ತುಂಬುವ ಕೆಲಸ ಮಾಡ್ತಾಳೆ. ನಮ್ಮಲ್ಲಿ ಇದು ಗುಪ್ತವಾಗಿರುತ್ತದೆ. ಆದ್ರೆ ಚೀನಾದ ಕಂಪನಿಯೊಂದು ವಿಚಿತ್ರ ಜಾಹೀರಾತು ನೀಡಿ ಬೆರಗಾಗಿಸಿದೆ.
ದಾಂಪತ್ಯ ಜೀವನದ ಸಂತೋಷವನ್ನು ಮಕ್ಕಳು ಹೆಚ್ಚು ಮಾಡ್ತಾರೆ. ದಂಪತಿ ಮಡಿಲಿಗೆ ಒಂದು ಮಗು ಬಂದ್ರೆ ಅದರ ಆನಂದವೇ ಬೇರೆ. ಪ್ರತಿಯೊಬ್ಬ ದಂಪತಿ ಮಕ್ಕಳನ್ನು ಬಯಸ್ತಾರೆ. ಆದ್ರೆ ಈಗಿನ ದಿನಗಳಲ್ಲಿ ಆರೋಗ್ಯವಂತ ಒಂದು ಮಗುವನ್ನು ಪಡೆಯೋದು ಸುಲಭವಲ್ಲ. ಮಹಿಳೆ ಮಾತ್ರವಲ್ಲ ಪುರುಷರಿಗೂ ಮಕ್ಕಳನ್ನು ಪಡೆಯಲು ಸಮಸ್ಯೆ ಆಗ್ತಿದೆ. ವಿಚ್ಛೇದನ ಪಡೆದ ಮಹಿಳೆ ಅಥವಾ ವಿಧವೆ, ಮದುವೆಯಾಗದೆ ಮಕ್ಕಳನ್ನು ಪಡೆಯುವ ಮಹಿಳೆಯರಿಗೆ ಈಗ ನಾನಾ ವಿಧಾನಗಳು ಬಂದಿವೆ. ಅದ್ರಲ್ಲಿ ಬಾಡಿಗೆ ತಾಯ್ತನ ಕೂಡ ಒಂದು. ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಕೆಲ ಕಾನೂನಿದ್ದು, ಅದರಲ್ಲಿ ಕೆಲ ಬದಲಾವಣೆ ತರಲಾಗಿದೆ. ಇದು ಮಕ್ಕಳಿಲ್ಲದವರಿಗೆ ನೆಮ್ಮದಿ ನೀಡಿದೆ. ಭಾರತದಲ್ಲಿ ಬಾಡಿಗೆ ತಾಯ್ತನಕ್ಕೆ ಒಪ್ಪಿಕೊಳ್ಳುವ ಮಹಿಳೆಯನ್ನು ಗುಪ್ತವಾಗಿಡಲಾಗುತ್ತದೆ. ಅವರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿರೋದಿಲ್ಲ. ಆದ್ರೆ ಕೆಲ ದೇಶದಲ್ಲಿ ಇದು ಬಹಿರಂಗವಾಗಿ ನಡೆಯುತ್ತದೆ.
ನೆರೆ ದೇಶ ಚೀನಾ (China) ದ ಒಂದು ಕಂಪನಿಯೊಂದು ಬಾಡಿಗೆ ತಾಯ್ತನದ ಮೂಲಕ ಮಹಿಳೆಯರಿಗೆ ಕೆಲಸ ನೀಡಿ, ಹಣ ಸಂಪಾದನೆ ಮಾಡುವ ಅವಕಾಶ ನೀಡುವ ಆಫರ್ (Offer) ನೀಡಿದೆ.
ಲವ್ ಬಾಂಬಿಂಗ್ ನಿಮಗೆ ಗೊತ್ತೇ? ಅವರ ವರ್ತನೆ ಹೀಗಿದ್ದಲ್ಲಿ ಎಚ್ಚರಿಕೆ ವಹಿಸಿ!
ಚೀನಾ ಕಂಪನಿ ನೀಡಿದೆ ವಿಚಿತ್ರ ಆಫರ್ : ಕಂಪನಿಗಳು ಉದ್ಯೋಗಿಗಳ ನೇಮಕಾತಿ ವೇಳೆ ಜಾಹೀರಾತು (Advertisement) ನೀಡುತ್ತವೆ. ಈ ಕಂಪನಿ ಕೂಡ, ಬಾಡಿಗೆ ತಾಯ್ತನದ ಬಗ್ಗೆ ಬಹಿರಂಗ ಜಾಹೀರಾತು ನೀಡಿದೆ. ಮಕ್ಕಳನ್ನು ಪಡೆದು ಹಣ ಗಳಿಸಿ ಎಂದು ಅದು ಜಾಹೀರಾತಿನಲ್ಲಿ ಹೇಳಿದೆ. ಬಾಡಿಗೆ ತಾಯಿಯಾಗಲು ಬಯಸುವ ಮಹಿಳೆಯರು ಆ ಕಂಪನಿಯನ್ನು ಸಂಪರ್ಕಿಸಬೇಕು. ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಹುಚೆನ್ ಹೌಸ್‌ಕೀಪಿಂಗ್ ಕಂಪನಿ ಮಹಿಳೆಯರಿಗೆ ಕೆಲಸ ನೀಡ್ತಿದೆ. ನಿಮ್ಮ ವಯಸ್ಸಿಗೆ ತಕ್ಕಂತೆ ನಿಮಗೆ ಸಂಭಾವನೆ ಸಿಗುತ್ತದೆ. ಒಂದ್ವೇಳೆ ನಿಮ್ಮ ವಯಸ್ಸ 28 ವರ್ಷವಾಗಿದ್ದು, ನೀವು ಬಾಡಿಗೆ ತಾಯಿಯಾಗಲು ಸಿದ್ಧವಿದ್ದರೆ ನಿಮಗೆ ಕಂಪನಿ 220,000 ಯುವಾನ್ ಅಂದರೆ 25,23,783 ರೂಪಾಯಿ ನೀಡುತ್ತದೆ. ಅದೇ ನಿಮ್ಮ ವಯಸ್ಸು ಹೆಚ್ಚಾಗ್ತಾ ಹೋದಂತೆ ಸಂಭಾವನೆ ಕಡಿಮೆ ಆಗುತ್ತದೆ.
ನಿಮ್ಮ ವಯಸ್ಸು 28 ವರ್ಷದ ಬದಲು 29 ವರ್ಷವಾಗಿದ್ದು, ನೀವು ಬಾಡಿಗೆ ತಾಯಿಯಾಗಿ ಮಗುವಿಗೆ ಜನ್ಮ ನೀಡಿದರೆ ನಿಮಗೆ 210,000 ಯುವಾನ್ ಅಂದರೆ 24,19,057 ರೂಪಾಯಿ ಸಿಗುತ್ತದೆ. ಈ ಕಂಪನಿ ಬಾಡಿಗೆ ತಾಯಿ ಕೆಲಸಕ್ಕೆ ಬರುವವರಿಗೆ ವಯಸ್ಸಿನ ಮಿತಿ ವಿಧಿಸಿಲ್ಲ. ಆದ್ರೆ ಸಂಬಳ ಕಡಿಮೆ ನೀಡುವುದಾಗಿ ಹೇಳಿದೆ. 40 ರಿಂದ 42 ವರ್ಷ ವಯಸ್ಸಿನ ಮಹಿಳೆ ಬಾಡಿಗೆ ತಾಯಿಯಾಗಲು ಬಯಸಿದರೆ ಆಕೆಗೆ ಇಪ್ಪತ್ತು ಲಕ್ಷ ರೂಪಾಯಿ ಸಿಗುತ್ತದೆ.
ಚೀನಾದ ಈ ಕಂಪನಿ ಜಾಹೀರಾತು ವೈರಲ್ ಆಗಿದೆ. ಕಂಪನಿ ಕ್ಸಿನ್ಯಾಂಗ್ ಮತ್ತು ಶಾಂಘೈನಲ್ಲಿ ವ್ಯವಹಾರ ನಡೆಸುತ್ತಿದೆ. ಗ್ರಾಹಕರ ಇಚ್ಛೆಯಂತೆ ಹಣದ ವ್ಯವಹಾರ ನಡೆಯುತ್ತದೆ. ಆದ್ರೆ ಚೀನಾದಲ್ಲಿ ಇದು ಕಾನೂನು ಬಾಹಿರವಾಗಿದೆ. ಕಂಪನಿ ವಿರುದ್ಧ ತನಿಖೆಗೆ ನಿರ್ಧರಿಸಲಾಗಿದೆ. ಈ ಕಂಪನಿಗಳು ಮಾನವ ಕಳ್ಳಸಾಗಣೆಗೆ ಉತ್ತೇಜನ ನೀಡುತ್ತವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ ನಟ ಹೃತಿಕ್ ರೋಶನ್ ದುಃಖ-ದುಮ್ಮಾನಗಳ ಬಗ್ಗೆ ಈಗ ಯಾಕೆ ಮಾತನಾಡಿದ್ದಾರೆ?
ಬಾಡಿಗೆ ತಾಯಿಯಾಗಲು ಇರುವ ನಿಯಮ : ಬಾಡಿಗೆ ತಾಯಿಗೆ ಸಂಬಂಧಿಸಿದಂತೆ ಭಾರತದಲ್ಲಿ ಕೆಲ ನಿಯಮವಿದೆ. ಬಾಡಿಗೆ ತಾಯಿಯು ವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯಾಗಬಹುದು. ಆದ್ರೆ ಕನ್ಯೆಗೆ ಇದ್ರ ಅವಕಾಶವಿಲ್ಲ. ಕನಿಷ್ಠ ಒಂದು ಮಗುವನ್ನು ಹೊಂದಿರುವ ಮಹಿಳೆ ಬಾಡಿಗೆ ತಾಯಿಯಾಗಲು ಅವಕಾಶವಿದೆ. ಭಾರತೀಯ ಕಾಯಿದೆಗಳ ಪ್ರಕಾರ, ಬಾಡಿಗೆ ತಾಯಿಯಾಗುವ ಮಹಿಳೆ ಭಾರತೀಯ ಪ್ರಜೆಯಾಗಿರಬೇಕು ಮತ್ತು ಆ ಮಹಿಳೆಯ ವಯಸ್ಸು 25 ರಿಂದ 35 ವರ್ಷಗಳ ಒಳಗಿರಬೇಕು.