ಫರ್ಮಾನ್‌ ಖಾನ್‌ ಜೊತೆ ಲವ್‌ಗೆ ಪೋಷಕರ ವಿರೋಧ, ಕೇರಳ ಪೊಲೀಸರ ಸಹಾಯ ಪಡೆದ ಕುಂಭಮೇಳದ ವೈರಲ್‌ ಗರ್ಲ್‌ ಮೋನಾಲಿಸಾ!

Published : Mar 11, 2026, 04:31 PM ISTUpdated : Mar 11, 2026, 04:33 PM IST
monalisa-lover

ಸಾರಾಂಶ

ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರಿ ವೈರಲ್ ಆಗಿದ್ದ ಮೋನಿ ಭೋಂಸ್ಲೆ, ತನ್ನ ಪ್ರಿಯಕರ ಫರ್ಮಾನ್‌ ಖಾನ್‌ ಜೊತೆಗಿರಲು ಕುಟುಂಬದ ವಿರೋಧದ ನಡುವೆ ಕೇರಳದಲ್ಲಿ ಪೊಲೀಸ್ ರಕ್ಷಣೆ ಕೋರಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯ ನಂತರ ಮೋನಿ ತನ್ನ ಪ್ರಿಯಕರನೊಂದಿಗೆ ತೆರಳಲು ಅನುಮತಿ ಪಡೆದರು.

ತಿರುವನಂತಪುರ (ಮಾ.11): ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮಿಂಚಿನ ಕಣ್ಣಿನ ಹುಡುಗಿ ಮೋನಿ ಭೋಂಸ್ಲೆ ಅಲಿಯಾಸ್‌ ಮೊನಾಲಿಸಾ ಸೋಶಿಯಲ್‌ ಮೀಡಿಯಾಲದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದಳು. ಈಗ ಆಕೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ತಾನು ಫರ್ಮಾನ್‌ ಖಾನ್‌ ಎನ್ನುವ ಹುಡುಗನನ್ನು ಪ್ರೀತಿ ಮಾಡುತ್ತಿದ್ದು, ಇದಕ್ಕೆ ಪೋಷಕರು ಒಪ್ಪುತ್ತಿಲ್ಲ. ಹಾಗಾಗಿ ನಮಗೆ ರಕ್ಷಣೆ ನೀಡುವಂತೆ ಕೇರಳದ ತಿರುವನಂತಪುರಂನ ತಂಬನೂರು ಪೊಲೀಸ್ ಠಾಣೆಯಲ್ಲಿ ಆಶ್ರಯ ಕೋರಿದ್ದಾರೆ.

ಮಧ್ಯಪ್ರದೇಶದ ಇಂದೋರ್ ಮೂಲದ ಮೋನಿ ಮತ್ತು ಮಹಾರಾಷ್ಟ್ರದ ಫರ್ಮಾನ್ ಖಾನ್ ಕಳೆದ ಒಂದೂವರೆ ವರ್ಷಗಳಿಂದ ಫೇಸ್‌ಬುಕ್ ಮೂಲಕ ಪ್ರೀತಿಸುತ್ತಿದ್ದರು. ಆದರೆ ಇವರ ಸಂಬಂಧಕ್ಕೆ ಕುಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ತನ್ನ ತಂದೆ ತನ್ನನ್ನು ಬೇರೆಯವರೊಂದಿಗೆ ವಿವಾಹ ಮಾಡಲು ಒತ್ತಾಯಿಸುತ್ತಿದ್ದಾರೆ, ಆದರೆ ತನಗೆ ಫರ್ಮಾನ್ ಜೊತೆ ಬದುಕಲು ಇಷ್ಟವಿದೆ ಎಂದು ಮೋನಿ ಪೊಲೀಸರಿಗೆ ತಿಳಿಸಿದ್ದಾರೆ.

ಸಿನಿಮಾ ಶೂಟಿಂಗ್ ವೇಳೆ ಪೊಲೀಸ್ ಠಾಣೆಗೆ ದೌಡು

ಮೋನಿ ಸದ್ಯ ಪೂವರ್‌ನಲ್ಲಿ ನಡೆಯುತ್ತಿರುವ ಸಿನಿಮಾ ಶೂಟಿಂಗ್‌ಗಾಗಿ ಕೇರಳಕ್ಕೆ ಬಂದಿದ್ದರು. ಶೂಟಿಂಗ್ ಮುಗಿಯುತ್ತಿದ್ದಂತೆಯೇ ತನ್ನ ಪ್ರಿಯಕರನೊಂದಿಗೆ ತಂಬನೂರು ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದಾರೆ. ಮೋನಿ ನೀಡಿದ ದೂರಿನ ಮೇರೆಗೆ ಆಕೆಯ ತಂದೆ ಜೈ ಸಿಂಗ್ ಭೋಂಸ್ಲೆ ಅವರನ್ನು ಪೊಲೀಸರು ಠಾಣೆಗೆ ಕರೆಸಿದರು. ಮೋನಾಗೆ ಈಗ 18 ವರ್ಷ ತುಂಬಿರುವುದರಿಂದ, ತನಗೆ ಇಷ್ಟ ಬಂದವರ ಜೊತೆ ಬದುಕುವ ಕಾನೂನುಬದ್ಧ ಹಕ್ಕು ಆಕೆಗೆ ಇದೆ ಎಂದು ಪೊಲೀಸರು ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ಮೋನಿ ತನ್ನ ಪ್ರಿಯಕರನ ಜೊತೆಗೆ ತೆರಳಿದ್ದಾರೆ.

ಸಿನಿಮಾ ಹೀರೋಯಿನ್‌ ಆದ ರುದ್ರಾಕ್ಷಿ ಮಾರೋ ಹುಡುಗಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದ್ದ ಮಹಾಕುಂಭಮೇಳದಲ್ಲಿ ಮೋನಿ ರುದ್ರಾಕ್ಷಿಯ ಮಾಲೆಗಳನ್ನು ಮಾರುತ್ತಿದ್ದರು. ಆಕೆಯ ಕಣ್ಣಿನ ಸೌಂದರ್ಯಕ್ಕೆ ಮಾರುಹೋಗಿದ್ದ ನೆಟ್ಟಿಗರು ಆಕೆಯನ್ನು ವೈರಲ್ ಮಾಡಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆದ ಬಳಿಕ, ಸನೋಜ್ ಮಿಶ್ರಾ ನಿರ್ದೇಶನದ 'ದಿ ಡೈರಿ ಆಫ್ ಮಣಿಪುರ್' ಎಂಬ ಬಾಲಿವುಡ್ ಚಿತ್ರಕ್ಕೆ ಈಕೆ ನಾಯಕಿಯಾಗಿ ಆಯ್ಕೆಯಾದ ಸುದ್ದಿಯೂ ಹೊರಬಿದ್ದಿತ್ತು. ಚಿತ್ರರಂಗದ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಮೋನಿ ಈಗ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಬಾಬಿ ಚೆಮ್ಮಣ್ಣೂರು ಜ್ಯುವೆಲ್ಲರಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮೋನಿ ಕೇರಳಕ್ಕೆ ಆಗಮಿಸಿದ್ದು ಕೂಡ ಸುದ್ದಿಯಾಗಿತ್ತು.

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯುವಕರನ್ನು ಕಾಡುವ ಅದೃಶ್ಯ ಭಯ: ಪೀನಿಯಾಫೋಬಿಯಾ!
ಪ್ರಾಣಿಗಳಿಗಿದೆ, ಮನುಷ್ಯರಿಗೇಕಿಲ್ಲ ಮಿಲನಕ್ಕೊಂದು ಪ್ರತ್ಯೇಕ ಕಾಲ?