ಕಣ್ಣು ತೆರೆಸಿದ ಕ್ಲೌಡ್ ಪ್ಲೇ : ಪತಿ ಪರಸಂಗ ಗೊತ್ತಾಗ್ತಿದಂಗೆ ಹೆಸರಿನ ಮುಂದಿದ್ದ ಗಂಡನ ಹೆಸರು ಡಿಲೀಟ್

Published : Jul 18, 2025, 04:55 PM ISTUpdated : Jul 18, 2025, 04:59 PM IST
Chris Martin exposes and alleged affair of Astronomer CEO Andy Byron with firm's HR head Kristin Cabot

ಸಾರಾಂಶ

ಕ್ಲೌಡ್ ಪ್ಲೇ ಕನ್ಸರ್ಟ್‌ನ ಕಿಸ್ ಕ್ಯಾಮ್‌ನಲ್ಲಿ ಸಿಇಒ ಆಂಡಿ ಬೈರಾನ್ ತನ್ನ ಸಹೋದ್ಯೋಗಿಯೊಂದಿಗೆ ಸೆರೆಯಾಗಿದ್ದು, ಪತ್ನಿ ಮೇಗನ್ ಕೆರ್ರಿಗನ್ ಗಂಡನ ಹೆಸರನ್ನು ತೆಗೆದುಹಾಕಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೈತಿಕ ಸಂಬಂಧದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಕ್ಲೌಡ್ ಪ್ಲೇ ಕನ್ಸರ್ಟ್‌ವೊಂದು ಗಂಡನ ಲವ್ವಿಡವ್ವಿಯ ಬಗ್ಗೆ ಹೆಂಡ್ತಿಯೊಬ್ಬಳಿಗೆ ಹೀಗೆ ಜಗಜ್ಜಾಹೀರಾಗಿ ಕಣ್ಣು ತೆರೆಸುತ್ತದೆ ಅಂತ ಯಾರು ಅನ್ಕೊಂಡಿರಲಿಲ್ಲ. ಆಸ್ಟ್ರೋನಾಮರ್‌ ಕಂಪನಿಯ ಸಿಇಒ ಆಂಡಿ ಬೈರಾನ್‌ ಅವರು ತನ್ನ ಸಹೋದ್ಯೋಗಿಯ ಜೊತೆ ಲವ್ವಿಡವ್ವಿ ಆಡ್ತಿರುವ ದೃಶ್ಯ ಪ್ರಪಂಚದೆಲ್ಲೆಡೆಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದ್ದು, ಜನ ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. ಆದರೆ ತನ್ನ ಗಂಡ ಆತನ ಸಂಸ್ಥೆಯ ಹೆಚ್‌ ಆರ್ ಕ್ರಿಸ್ಟೀನಾ ಕ್ಯಾಬೊಟ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಚಾರ ಗೊತ್ತಾಗ್ತಿದ್ದಂಗೆ ಆಂಡಿ ಬೈರನ್ ಪತ್ನಿ ಮೇಗನ್ ಕೆರ್ರಿಗನ್ ತಮ್ಮ ಹೆಸರಿನ ಮುಂದಿದ್ದ ಗಂಡನ ಸರ್‌ನೇಮ್ ಅನ್ನು ತೆಗೆದು ಹಾಕಿದ್ದಾರೆ.

ಕ್ಲೌಡ್ ಪ್ಲೇ ಕಿಸ್ ಕ್ಯಾಮ್ ತನ್ನ ಕನ್ಸರ್ಟ್‌ನಲ್ಲಿರುವ ಪ್ರೇಮಿಗಳನ್ನು ಅಥವಾ ಸ್ಟೇಜ್,  ಹೊರತಾದ ಗ್ಯಾಲರಿಯಲ್ಲಿ ಕುಳಿತಿರುವ ಕೆಲವು ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದು ಸ್ಕ್ರೀನ್ ಮೇಲೆ ಪ್ಲೇ ಮಾಡುತ್ತದೆ. ಹಲವರು ಈ ಕ್ಲೌಡ್ ಪ್ಲೇ ಕನ್ಸರ್ಟ್‌ನಲ್ಲಿ ಭಾಗವಹಿಸಿ ಸ್ಕ್ರೀನ್ ಮೇಲೆ ಕಂಡಾಗ ಖುಷಿ ಪಡ್ತಾರೆ. ಅದರೆ ಕ್ಲೌಡ್‌ ಪ್ಲೇ ಬೋಸ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಸ್ ಕ್ಯಾಮ್‌ ಸೆರೆ ಹಿಡಿದಿದ್ದು, ಒಂದು ಅನೈತಿಕ ಸಂಬಂಧ ಹೊಂದಿದ್ದ ಜೋಡಿ ಎಂಬುದು ಆ ಕ್ಷಣಕ್ಕೆ ಗೊತ್ತಾಗಿರಲಿಲ್ಲ, ಅಲ್ಲದೇ ಆ ಕ್ಷಣದಲ್ಲಿ ತಾನು ಸೆರೆಹಿಡಿದ ವೀಡಿಯೋ ಈ ರೀತಿ ಪ್ರಪಂಚದೆಲ್ಲೆಡೆ ಸುಂಟರಗಾಳಿ ಎಬ್ಬಿಸುತ್ತಿದೆ ಎಂಬುದರ ಅರಿವು ಕಿಸ್ ಕ್ಯಾಮ್ ಕ್ಯಾಮರಾ ಮ್ಯಾನ್‌ಗೂ ಇರಲಿಲ್ಲವೆನಿಸುತ್ತದೆ.

ಆದರೆ ಈ ತುಣುಕೊಂದು ಹೆಂಡತಿಯ ಕಣ್ಣು ತೆರೆಸಿದೆ. ಜೊತೆಗೆ ಸಂಸಾರವೊಂದರ ಅಂತ್ಯಕ್ಕೆ ನಾಂದಿ ಹಾಡಿರುವುದಂತು ನಿಜ.ಪ್ರಪಂಚದೆಲ್ಲೆಡೆ ತನ್ನ ಗಂಡ ಹಾಗೂ ಆತನ ಸಹೋದ್ಯೋಗಿಯ ಸರಸ ಸಲ್ಲಾಪದ ವೀಡಿಯೋ ವೈರಲ್ ಆಗ್ತಿದ್ದಂಗೆ ಮುಜುಗರವನ್ನು ತಪ್ಪಿಸುವುದಕ್ಕಾಗಿ ಆಂಡಿ ಬೈರನ್ ಪತ್ನಿ ಮೇಗನ್ ಕೆರ್ರಿಗನ್ ಅವರು ತಮ್ಮ ಹೆಸರಿನ ಮುಂದಿದ್ದ ಗಂಡನ ಹೆಸರನ್ನು ಕಿತ್ತೆಸೆದಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಮ್ಮ ಹೆಸರಿನ ಮುಂದಿದ್ದ ತಮ್ಮ ಪತಿ ಬೈರನ್ ಹೆಸರನ್ನು ಅವರು ಡಿಲೀಟ್ ಮಾಡಿದ್ದಾರೆ.

 

 

ಆಸ್ಟ್ರೋನಾಮರ್ ಸಂಸ್ಥೆಯ ಸಿಇಒ ಕೂಡ ಆಗಿರುವ ಖಗೋಳ ಶಾಸ್ತ್ರಜ್ಞ ಆಂಡಿ ಬೈರನ್ ಹಾಗೂ ಆ ಸಂಸ್ಥೆಯ ಹೆಚ್‌ಆರ್ ಕ್ರಿಸ್ಟೀನಾ ಕ್ಯಾಬೊಟ್ ಅವರು ಪರಸ್ಪರ ತಬ್ಬಿಕೊಂಡಿದ್ದನ್ನು ಕ್ಲೌಡ್ ಪ್ಲೇ ಕನ್ಸರ್ಟ್‌ನಲ್ಲಿ ಕಿಸ್ ಕ್ಯಾಮ್ ಸೆರೆಹಿಡಿದ ನಂತರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಕ್ಲೌಡ್ ಪ್ಲೇ ಸಿಂಗರ್ ಕ್ರಿಸ್ ಮಾರ್ಟಿನ್ ಕೂಡ ಇವರನ್ನು ನೋಡಿ, ಓಹ್ ದಿಸ್ ಟು... ಎಂದು ಹೇಳಿ ಅಚ್ಚರಿ ವ್ಯಕ್ತಪಡಿಸಿದ್ದರು. ಆಗಲೇ ತಮ್ಮಿಬ್ಬರ ಸಲ್ಲಾಪ ಸ್ಕ್ರೀನ್ ಮೇಲೆ ಕಂಡಿದೆ ಎಂಬುದು ಗೊತ್ತಾಗಿ ಇಬ್ಬರು ಮುಖ ಮುಚ್ಚಿಕೊಂಡಿದ್ದಾರೆ.

ಈ ಘಟನೆಯ ನಂತರ ಅಂಡಿ ಬೈರನ್ ಅವರ ವಿವಾಹೇತರ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅವರ ಪತ್ನಿ ಏಗನ್ ಕೆರ್ರಿಗನ್ ಅವರ ಬಗ್ಗೆ ನೆಟ್ಟಿಗರು ಬಹಳ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ ರಾತ್ರಿ ಬೆಳಗಾಗುವುದರೊಳಗೆ ಅವರ ಮುದ್ದಾದ ಸಂಸಾರ ಮುರಿದು ಬಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ನೆಟ್ಟಿಗರಿಂದ ವ್ಯಾಪಕವಾದ ಪ್ರತಿಕ್ರಿಯೆಗಳು ವ್ಯಕ್ತವಾದ ಬೆನ್ನಲ್ಲೇ ಅವರು ತಮ್ಮ ಹೆಸರಿನಿಂದ ಗಂಡನ ಹೆಸರನ್ನು ತೆಗೆದಿದ್ದಾರೆ. ಇತ್ತ ಆಂಡಿ ಬೈರನ್ ಜೊತೆ ಸಂಬಂಧ ಹೊಂದಿರುವ ಕ್ರಿಸ್ಟೀನಾ ಕ್ಯಾಬೋಟ್‌ ಕೂಡ ವಿವಾಹಿತಳೆ. ಆಕೆ ಕೆನೆತ್ ಸಿ ಥಾನ್ಬಿ ಎಂಬುವರ ಜೊತೆ ವಿವಾಹವಾಗಿದೆ.

ಅಂದಹಾಗೆ ಅಂಡಿ ಬೈರನ್ ಹಾಗೂ ಮೇಗನ್ ಕೆರ್ರಿಗನ್ ದಂಪತಿಗೆ ಇಬ್ಬರು ಮಕ್ಕಳಿದ್ದು ಇವರಿಬ್ಬರೂ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಮೇಗನ್ ಕೆರ್ರಿಗನ್ ಅವರು ಒಬ್ಬ ಶಿಕ್ಷಕಿಯಾಗಿದ್ದು ಬ್ಯಾನ್‌ಕ್ರಾಫ್ಟ್ ಶಾಲೆಯಲ್ಲಿ ಲೋವರ್ ಸ್ಕೂಲ್ ಮತ್ತು ಹೋಪ್ ಗ್ರಹಾಂ ಪ್ರೋಗ್ರಾಂ ಪ್ರವೇಶಗಳ ಅಸೋಸಿಯೇಟ್ ಡೈರೆಕ್ಟರ್ ಆಗಿ ಅವರು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಲೌಡ್‌ ಪ್ಲೇಯ ಕಿಸ್ ಕ್ಯಾಮೊಂದು ಹೈ ಪ್ರೊಫೈಲ್ ಅನೈತಿಕ ಸಂಬಂಧವನ್ನು ಬಯಲು ಮಾಡಿದ್ದು, ಪ್ರಪಂಚದೆಲ್ಲೆಡೆಯ ಸೋಶಿಯಲ್ ಮೀಡಿಯಾಗಳ ತುಂಬೆಲ್ಲಾ ಈ ವೀಡಿಯೋ ಹರಿದಾಡುತ್ತಿದೆ. ವೀಡಿಯೋ ನೋಡಿದ ಅನೇಕರು ಅಂಡಿ ಬೈರನ್ ಹಾಗೂ ಆತನ ಹೆಚ್‌ಆರ್ ಕ್ರಿಸ್ಟೀನಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇತ್ತ ಈ ಘಟನೆಯ ಬಳಿಕ ಹೀಗೆ ಕಿಸ್ ಕ್ಯಾಮ್‌ನಲ್ಲಿ ಸೆರೆಯಾದ ವಿವಿಧ ಜೋಡಿಗಳನ್ನು ಸಂಗೀತಗಾರ ಕ್ರಿಸ್ ಮಾರ್ಟಿನ್ ಅವರು ಕಿಸ್ ಕ್ಯಾಮ್‌ನಲ್ಲಿ ಸೆರೆಯಾದ ಎಲ್ಲಾ ಜೋಡಿಗಳು ಜೊತೆಯಾಗಿಯೇ ಇದ್ದರೋ ಇಲ್ಲವೋ ಎಂದು ಕಾರ್ಯಕ್ರಮದ ಉದ್ದಕ್ಕೂ ಕೇಳುತ್ತಲೇ ಇದ್ದರಂತೆ ಹೀಗಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯೊಬ್ಬರ ಪತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಈ ಹೈಪ್ರೊಫೈಲ್ ಅಕ್ರಮ ಸಂಬಂಧ ಈಗ ತೀವ್ರ ನಗೆಪಾಟಲೀಗೆ ಕಾರಣವಾಗಿದೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು