ಎಲ್ಲ ಮೊದಲು ವಿಶೇಷವಾಗಿಯೇ ಇರುತ್ತೆ. ಮೊದಲ ಪ್ರೀತಿ, ಮೊದಲ ಮುತ್ತು, ಮೊದಲ ಸ್ನೇಹ ಹೀಗೆ ನಮ್ಮ ಜೀವನದಲ್ಲಿ ಮೊದಲು ನಡೆಯುವ ಪ್ರೀತಿಯ ಘಟನೆಗಳು ಖುಷಿ ನೀಡುತ್ತವೆ. ಮೊದಲ ಸ್ಪರ್ಶ ಕೂಡ ವಿಶೇಷವಾಗಿರುತ್ತದೆ. ಅದ್ರಲ್ಲೂ ಪ್ರೀತಿಸಿದ ವ್ಯಕ್ತಿಯ ಫಸ್ಟ್ ಟಚ್ ಬಗ್ಗೆ ಹುಡುಗಿಯರು ನಾನಾ ತರದಲ್ಲಿ ಆಲೋಚನೆ ಮಾಡ್ತಾರೆ.
ಸಾಮಾನ್ಯವಾಗಿ ಹುಡುಗಿ (Girl) ಯರು ತಮ್ಮ ಪ್ರೀತಿ (Love) ಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಅವರು ಸಣ್ಣಪುಟ್ಟ ವಿಷ್ಯಗಳನ್ನು ಗಮನಿಸ್ತಾರೆ. ಹಾಗೆಯೇ ಅದ್ರ ಬಗ್ಗೆ ಆಲೋಚನೆ ಮಾಡ್ತಾರೆ. ಅನೇಕ ಕನಸು (Dream) ಗಳನ್ನು ಕಾಣ್ತಾರೆ. ಪ್ರೀತಿಯಲ್ಲಿ ಬಿದ್ದ ಹುಡುಗಿ ಸಂಗಾತಿಯ ಮುಗುಳ ನಗೆಯಿಂದ ಹಿಡಿದು ಆತನ ನೋಟದವರೆಗೆ ಎಲ್ಲವನ್ನೂ ಗಮನಿಸ್ತಾಳೆ. ಹಾಗೆಯೇ ಆತನ ಪ್ರತಿಯೊಂದು ವರ್ತನೆಗೂ ಒಂದೊಂದು ಅರ್ಥ ನೀಡ್ತಾಳೆ. ಪ್ರೀತಿಗೆ ಬಿದ್ದ ಮೇಲೆ ಸ್ಪರ್ಶ, ಮುತ್ತು, ದೈಹಿಕ ಸಂಬಂಧ ಎಲ್ಲವೂ ಮಾಮೂಲಿ ಎನ್ನುವಂತಾಗುತ್ತದೆ. ಆದ್ರೆ ಎಲ್ಲ ಮೊದಲು ವಿಶೇಷವಾಗಿರುತ್ತದೆ. ಮೊದಲ ನೋಟ, ಮೊದಲ ಪ್ರೀತಿ, ಮೊದಲ ನಗು, ಮೊದಲ ಸ್ಪರ್ಶ.. ಹೀಗೆ ಎಲ್ಲ ಮೊದಲುಗಳು ಪ್ರೇಮಿಗಳಿಗೆ ವಿಶೇಷದಲ್ಲಿ ವಿಶೇವೆನ್ನಬಹುದು. ತಮ್ಮ ಸಂಗಾತಿಯ ಮೊದಲ ಸ್ಪರ್ಶದ ನಂತರ ಹುಡುಗಿಯರ ಮನಸ್ಸಿನಲ್ಲಿ ಯಾವ ಆಲೋಚನೆಗಳು ಮೊದಲು ಬರುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ವಾಸ್ತವವಾಗಿ ಎಲ್ಲರಂತೆ, ಹುಡುಗಿಯರಿಗೆ ಆ ಕ್ಷಣ ತುಂಬಾ ವಿಶೇಷವಾಗಿರುತ್ತದೆ. ಆದರೆ ಆ ಕ್ಷಣದಲ್ಲಿ ಅವರ ಮನಸ್ಸಿನಲ್ಲಿ ಹಲವಾರು ರೀತಿಯ ಆಲೋಚನೆಗಳು ಒಟ್ಟಿಗೆ ಬಂದು ಹೋಗ್ತವೆ. ಸಂಗಾತಿ ಮೊದಲ ಸ್ಪರ್ಶದ ನಂತ್ರ ಹುಡುಗಿಯರು ಏನು ಆಲೋಚನೆ ಮಾಡ್ತಾರೆ ಹಾಗೆ ಏಕೆ ಆ ಆಲೋಚನೆಗಳು ಬರ್ತವೆ ಎಂಬುದನ್ನು ಎಂದು ತಿಳಿಯೋಣ.
ಮೊದಲ ಬಾರಿ ಸಂಗಾತಿ ಕೈ ಹಿಡಿದಾಗ ಹುಡುಗಿರ ಆಲೋಚನೆ ಹೇಗಿರುತ್ತದೆ ಗೊತ್ತಾ? :
ಹೀಗೆ ಕೈ ಹಿಡಿದ್ರೆ ಚೆಂದ : ಹುಡುಗ ಮೊದಲ ಬಾರಿ ಹುಡುಗಿಯ ಕೈ ಹಿಡಿದಾಗ ಮೈ ಚುಮ್ಮೆನ್ನುವುದು ಸಹಜ. ಪ್ರೀತಿಸಿದ ಹುಡುಗನ ಮೊದಲ ಸ್ಪರ್ಶ ವಿಶೇಷವಾಗಿರುವುದಂತೂ ಸತ್ಯ. ಆತ ಮೊದಲ ಬಾರಿ ಕೈ ಹಿಡಿಯುತ್ತಿದ್ದಂತೆ ಆಕೆ ಒಮ್ಮೆ ಭಯಗೊಳ್ತಾಳೆ. ನಂತ್ರ ಹೀಗೆ ಸದಾ ಕೈ ಹಿಡಿದಿರಲಿ ಎಂದು ಬಯಸ್ತಾಳೆ.
LOVE BREAK UP ಆಯಿತಾ? ಏನೂ ಆಗದಂತೆ ಇರಲು ಇಲ್ಲಿವೆ ಟಿಪ್ಸ್
ಭವಿಷ್ಯದ ಬಗ್ಗೆ ಚಿಂತೆ : ಹುಡುಗ ಕೈ ಹಿಡಿದ ನಂತರ ಹುಡುಗಿ ಭವಿಷ್ಯದಲ್ಲಿ ಈ ಹುಡುಗ ತನ್ನೊಂದಿಗೆ ಸದಾ ಇರ್ತಾನೆಯೇ ಎನ್ನುವ ಬಗ್ಗೆ ಯೋಚಿಸುತ್ತಾಳೆ. ಮೋಸ ಮಾಡಿದ್ರೆ ಎಂಬ ಚಿಂತೆಯೂ ಆಕೆ ಮನದಲ್ಲಿ ಮೂಡುತ್ತದೆ. ಆದ್ರೆ ಅದನ್ನು ಅದುಮಿಡುವ ಪ್ರಯತ್ನ ನಡೆಸ್ತಾಳೆ.
ಈತ ಸಿಕ್ಕಿದ್ದು ನನ್ನ ಅದೃಷ್ಟ : ಬಾಯ್ ಫ್ರೆಂಡ್ ಹುಡುಗಿ ಕೈಯನ್ನು ಬಿಗಿಯಾಗಿ ಹಿಡಿದುಕೊಂಡ್ರೆ ಆಕೆ ತಾನು ಲಕ್ಕಿ ಎಂದುಕೊಳ್ತಾಳೆ. ಹುಡುಗ ತುಂಬಾ ಒಳ್ಳೆಯವನೆಂದು ಭಾವಿಸ್ತಾಳೆ. ಬಿಗಿಯಾಗಿ ಕೈ ಹಿಡಿದ ಹುಡುಗನನ್ನು ಹುಡುಗಿ ಕಣ್ಮುಚ್ಚಿ ನಂಬುತ್ತಾಳೆ ಎಂಬುದು ಸಂಶೋಧನೆಗಳಲ್ಲೂ ಸಾಭೀತಾಗಿದೆ. ನಿಜವಾಗ್ಲೂ ನಿಮ್ಮ ಹುಡುಗಿಯನ್ನು ಪ್ರೀತಿಸ್ತಿದ್ದರೆ ಆಕೆ ಕೈ ಹಿಡಿಯುವ ಮೂಲಕವೇ ನಿಮ್ಮ ಪ್ರೀತಿಯನ್ನು ನೀವು ವ್ಯಕ್ತಪಡಿಸಬಹುದು.
ಆರೈಕೆ ಮಾಡುವ ವ್ಯಕ್ತಿತ್ವ (Personality) : ರಸ್ತೆ ದಾಟುವಾಗ ಅಥವಾ ಜನನಿಬಿಡ ಪ್ರದೇಶದಲ್ಲಿ ಹುಡುಗನು ಹುಡುಗಿಯ ಕೈಯನ್ನು ಬಿಡದಿದ್ದರೆ ತನ್ನ ಸಂಗಾತಿ ತನ್ನ ಬಗ್ಗೆ ಕಾಳಜಿ ವಹಿಸುತ್ತಾನೆ ಎಂದು ಅವಳು ಭಾವಿಸುತ್ತಾಳೆ. ಎಂಥ ಸಂದರ್ಭದಲ್ಲೂ ಸಂಗಾತಿ ತನ್ನ ಕೈ ಬಿಡಲಾರ ಎಂದು ಆಕೆ ನಂಬುತ್ತಾಳೆ.
Real Story: ಬೆಡ್ ರೂಮಲ್ಲಿ ಪರಪುರುಷನ ಜೊತೆ ಪತ್ನಿ! ಇದಕ್ಕೆ ಕಾರಣ ನಾನೇ ಎಂದ ಪತಿ
ತಪ್ಪು ಮಾಡಿಲ್ಲ ಅಲ್ವಾ? : ಸಂಗಾತಿ ಜೊತೆ ನಿಕಟವಾದ ನಂತ್ರ ಹುಡುಗಿಯರ ತಲೆಯಲ್ಲಿ ಓಡುವ ಮೊದಲ ಹಾಗೂ ಒಂದೇ ಒಂದು ಪ್ರಶ್ನೆ ನಾನು ತಪ್ಪು ಮಾಡಿಲ್ಲ ಅಲ್ವಾ ಎನ್ನುವುದು. ಬಹುತೇಕ ಎಲ್ಲ ಹುಡುಗಿಯರೂ ಸಂಗಾತಿ ಜೊತೆ ಮೊದಲ ಬಾರಿ ಇಂಟರ್ ಕೋರ್ಸ್ ನಡೆಸಿದಾಗ ಇದೇ ಭಾವನೆಯಲ್ಲಿರುತ್ತಾರೆ. ಹಾಗೆಯೇ ತಮ್ಮ ಬಾಯ್ ಫ್ರೆಂಡ್ ನನ್ನ ಬಗ್ಗೆ ಏನಂದುಕೊಂಡಿರಬಹುದು ಎಂಬ ಪ್ರಶ್ನೆ ಕೂಡ ಅವರನ್ನು ಕಾಡ್ತಿರುತ್ತದೆ.