
ಮದುವೆ (Marriage) ಜೀವನದ ಒಂದು ಘಟ್ಟವಾದ್ರೆ ಮಕ್ಕಳು (Children) ಜೀವನದ ದೊಡ್ಡ ಖುಷಿ. ಮದುವೆ ನಂತ್ರ ದಂಪತಿ ತಮ್ಮ ಕುಟುಂಬ ವಿಸ್ತರಿಸುವ ಆಲೋಚನೆ ಮಾಡ್ತಾರೆ. ಮನೆಯಲ್ಲಿ ಮಕ್ಕಳು ನಗು ಕೇಳುವ ಆತುರ ಅವರಿಗಿರುತ್ತದೆ. ಮಕ್ಕಳನ್ನು ಪಡೆಯಲು ನಿರಂತರ ಪ್ರಯತ್ನ ನಡೆಸಿದ್ರೂ ಅನೇಕರಿಗೆ ವಂಶಾಭಿವೃದ್ಧಿ ಮಾಡಲು ಸಾಧ್ಯವಾಗುವುದಿಲ್ಲ. ಅನಿವಾರ್ಯವಾಗಿ ದಂಪತಿ ವೈದ್ಯರ ಬಳಿ ಹೋಗ್ತಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಚಿಕಿತ್ಸೆಗಳು ಬಂದಿವೆ. ಆದರೆ ಎಲ್ಲಕ್ಕಿಂತ ಮೊದಲು ವೈದ್ಯರು ಫಲವತ್ತತೆ ಪರೀಕ್ಷೆ ಮಾಡ್ತಾರೆ. ಮಕ್ಕಳಾಗಿಲ್ಲ ಅಂದ್ರೆ ಮಹಿಳೆಯನ್ನು ದೋಷಿ ಮಾಡುವ ಸಮಾಜ ನಮ್ಮದು. ಸ್ತ್ರೀ ಬಂಜೆತನದ ನಮ್ಮ ಸಮಾಜದಲ್ಲಿ ಹೆಚ್ಚು ಗಮನ ಸೆಳೆದಿದೆ. ಕೆಲ ಮಹಿಳೆಯರನ್ನು ಇದೇ ಕಾರಣಕ್ಕೆ ಸಹಾನುಭೂತಿಯಿಂದ ನೋಡಲಾಗುತ್ತದೆ. ಆದ್ರೆ ಪುರುಷ ಬಂಜೆತನದ ಬಗ್ಗೆ ನಮ್ಮ ಸಮಾಜದಲ್ಲಿ ಮಾತನಾಡುವುದು ಕಡಿಮೆ ಪುರುಷ ಬಂಜೆತನ ದೊಡ್ಡ ಮಟ್ಟದಲ್ಲಿ ಘಾಸಿಗೊಳಿಸುತ್ತದೆ. ಏಕೆಂದರೆ ನಮ್ಮ ಸಂಪ್ರದಾಯವಾದಿ ಸಮಾಜದಲ್ಲಿ ಇದನ್ನು ಸಾಮಾನ್ಯವಾಗಿ ನಪುಂಸಕತೆ ಎಂದು ಕರೆಯಲಾಗುತ್ತದೆ. ಮಕ್ಕಳ ನಿರ್ಧಾರ ಇಬ್ಬರದ್ದೂ ಆಗಿರುತ್ತದೆ. ಹಾಗಾಗಿ ಫಲವತ್ತತೆ ವಿಷ್ಯ ಬಂದಾಗಲೂ ಇಬ್ಬರು ಒಂದಾಗಿರಬೇಕು. ಪುರುಷ ಸಂಗಾತಿ ಫಲವತ್ತತೆ ಕಡಿಮೆಯಿದೆ ಎಂಬುದು ಗೊತ್ತಾದ ನಂತ್ರ ಮಹಿಳಾ ಸಂಗಾತಿ ಜವಾಬ್ದಾರಿ ಹೆಚ್ಚಿರುತ್ತದೆ. ಪುರುಷ ಸಂಗಾತಿ ಬಂಜೆತನಕ್ಕೆ ಸಂಬಂಧಿಸಿದ ನೋವು ಮತ್ತು ದುಃಖದಲ್ಲಿ ಹೋರಾಡುತ್ತಿರುವಾಗ ಅವರನ್ನು ಬೆಂಬಲಿಸುವುದು ಮತ್ತು ಕಷ್ಟದ ಸಮಯದಲ್ಲಿ ಅವರೊಂದಿಗೆ ನಿಲ್ಲುವುದು ಅವಶ್ಯಕ. ಪುರುಷ ಬಂಜೆತನ ಗೊತ್ತಾಗ್ತಿದ್ದಂತೆ ಸಂಗಾತಿಯಾದವಳು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಯಾವುದೇ ಕಾರಣಕ್ಕೂ ವಿಷ್ಯ ಬಹಿರಂಗಗೊಳಿಸಬೇಡಿ : ಇದು ಇಬ್ಬರಿಗೂ ಸವಾಲಿನ ವಿಷ್ಯ. ಪುರುಷರು ಇಂಥ ವೈಯಕ್ತಿಕ ವಿಷ್ಯವನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಬೇರೆಯವರ ಬಾಯಿಗೆ ಬಿದ್ರೆ ಅವಮಾನ ಎಂದುಕೊಳ್ತಾರೆ. ಆದ್ರೆ ಮಹಿಳೆಯರು ಇಂಥ ವಿಷ್ಯವನ್ನು ಹೇಳಿ ಮನಸ್ಸು ಹಗುರಮಾಡಿಕೊಳ್ಳಲು ಬಯಸ್ತಾರೆ. ಆದ್ರೆ ಮಹಿಳೆಯಾದವಳು ಈ ವಿಷ್ಯವನ್ನು ಅಪ್ಪಿತಪ್ಪಿಯೂ ಯಾರಿಗೂ ಹೇಳ್ಬಾರದು. ಕುಟುಂಬಸ್ಥರಿರಲಿ, ಸ್ನೇಹಿತರಿರಲಿ, ಎಷ್ಟೇ ಆಪ್ತರಿರಲಿ ಈ ಸಂಗತಿ ಹೇಳ್ಬಾರದು. ಇದನ್ನು ಸೆರಗಿನಲ್ಲಿ ಮುಚ್ಚಿಟ್ಟುಕೊಂಡಿರಬೇಕು. ಏಕೆಂದರೆ ಇದು ನಿಮ್ಮ ಪತಿಗೆ ಒಳ್ಳೆಯದಲ್ಲ. ಈ ವಿಷಯವನ್ನು ಮೂರನೇ ವ್ಯಕ್ತಿಗೆ ಹೇಳಿದ್ರೆ ಅನಾನುಕೂಲತೆ ಎದುರಿಸಬೇಕಾಗುತ್ತದೆ. ಪತಿಗೆ ವಿನಃ ನೋವುಂಟು ಮಾಡಿದಂತಾಗುತ್ತದೆ.
ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಆಸಕ್ತಿ ಕಮ್ಮಿ ಆಗ್ತಿದ್ಯಾ? ಹೀಗ್ ತಿಳಿಯಿರಿ
ಮಾತುಕತೆ : ಸಂಗಾತಿಯಿಂದ ಮಕ್ಕಳಾಗ್ತಿಲ್ಲ ಎಂಬ ವಿಷ್ಯ ಗೊತ್ತಾಗ್ತಿದ್ದಂತೆ ಮನಸ್ಸನ್ನು ಗಟ್ಟಿಗೊಳಿಸಬೇಕು. ಸಂಗಾತಿ ಜೊತೆ ಮಾತನಾಡ್ಬೇಕು. ಮಕ್ಕಳಿಗಿಂತ ನಮ್ಮಿಬ್ಬರ ಪ್ರೀತಿ ಮುಖ್ಯ ಎಂಬುದನ್ನು ಮನವರಿಕೆ ಮಾಡ್ಬೇಕು. ಹಾಗೆಯೇ ಸದಾ ಅವರ ಜೊತೆಗಿದ್ದು, ಅವರನ್ನು ಬೆಂಬಲಿಸಬೇಕು. ಯಾವುದೇ ಕಾರಣಕ್ಕೂ ಅವರ ಮನಸ್ಸು ನೋಯಿಸುವ ಕೆಲಸ ಮಾಡಬಾರದು.
ಚೇತರಿಕೆಗೆ ಸಮಯ : ನನ್ನಿಂದ ಮಕ್ಕಳಾಗ್ತಿಲ್ಲ ಎಂಬ ಸಂಗತಿ ತಿಳಿದ್ರೆ ಎಲ್ಲ ಪುರುಷರು ಹತಾಶೆಗೊಳಗಾಗ್ತಾರೆ. ಹಾಗಾಗಿ ಅವರಿಗೆ ಸ್ವಲ್ಪ ಸಮಯ ನೀಡುವ ಅಗತ್ಯವಿದೆ. ವೈದ್ಯರ ಬಳಿ ಬರುವಂತೆ ಒತ್ತಡ ಹೇರುವ ಬದಲು ಅವರು ಚೇತರಿಸಿಕೊಳ್ಳಲು ಅವಕಾಶ ನೀಡ್ಬೇಕು.
ಮಾತಿನಲ್ಲಿ ಹಿಡಿತವಿರಲಿ : ಈ ಸಂದರ್ಭದಲ್ಲಿ ಇಬ್ಬರ ಮನಸ್ಸಿನ ಶಾಂತಿ ಕದಡಿರುತ್ತದೆ. ಆ ಸಂದರ್ಭದಲ್ಲಿ ಸಂಗಾತಿ ಜೊತೆ ಜಗಳಕ್ಕೆ ಇಳಿಯಬೇಡಿ. ಹಾಗೆ ಆಡುವ ಮಾತಿನ ಮೇಲೆ ಹಿಡಿತವಿರಲಿ. ಸಂಗಾತಿ ಜೊತೆ ಮಾತು ಮೃದುವಾಗಿರಲಿ. ಹಾಗಂತ ಸಹಾನುಭೂತಿ ತೋರಿಸುವ ಭಾವನೆ ಬೇಡ.
ಉದ್ದ ಕೂದಲಿನ ಜೊತೆ ಈ ಗುಣಗಳು ಹೆಣ್ಣಿನಲ್ಲಿದ್ದರೆ ಗಂಡಿಗಿಷ್ಟ!
ಮುಂದಿನ ದಾರಿ ಬಗ್ಗೆ ಚರ್ಚೆ : ಮೊದಲೇ ಹೇಳಿದಂತೆ ಮಕ್ಕಳನ್ನು ಪಡೆಯಲು ನಾನಾ ವಿಧಗಳಿವೆ. ಐವಿಎಫ್, ವೀರ್ಯ ದಾನ, ಮಗುವನ್ನು ದತ್ತು ಪಡೆಯುವುದು ಸೇರಿದಂತೆ ಅನೇಕ ಮಾರ್ಗಗಳಿದ್ದು ಅದನ್ನು ನಿಧಾನವಾಗಿ ಕುಳಿತು ಚರ್ಚೆ ಮಾಡಿ. ಸಂಗಾತಿ ಇದ್ರ ಬಗ್ಗೆ ಚರ್ಚಿಸಲು ಸಿದ್ಧವಿದ್ದರೆ ಮಾತ್ರ ಮಾತುಕತೆ ನಡೆಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.