
ಫೆಬ್ರವರಿ (February) ಅಂದ್ರೆ ಪ್ರೇಮಿ(Lover)ಗಳಿಗೆ ಹಬ್ಬ. ಫೆಬ್ರವರಿಯ ಎರಡನೇ ವಾರವನ್ನು ಪ್ರೇಮಿಗಳ ವಾರ (Week)ವಾಗಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳ ವಾರವು ರೋಸ್ ಡೇ(Rose Day)ಯಿಂದ ಪ್ರಾರಂಭವಾಗುತ್ತದೆ. ಫೆಬ್ರವರಿ 7 ರಂದು ರೋಸ್ ಡೇ ಆಚರಣೆ ಮಾಡಲಾಗುತ್ತದೆ. ಸಂಗಾತಿ ಪರಸ್ಪರ ಗುಲಾಬಿ ನೀಡುವ ಮೂಲಕ ಶುಭಕೋರುತ್ತಾರೆ. ತಮ್ಮ ಪ್ರೀತಿಯನ್ನು ಗುಲಾಬಿ ನೀಡುವ ಮೂಲಕ ವ್ಯಕ್ತಪಡಿಸುತ್ತಾರೆ. ಗುಲಾಬಿ ಯಾರಿಗೆ ಇಷ್ಟವಿಲ್ಲ. ಗುಲಾಬಿಯನ್ನು ಪ್ರೀತಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ರೋಸ್ ಡೇ ಕೇವಲ ಪ್ರೇಮಿಗಳ ಹಬ್ಬವಲ್ಲ. ದಂಪತಿ ಮಾತ್ರ ತಮ್ಮ ಸಂಗಾತಿಗೆ ಗುಲಾಬಿಗಳನ್ನು ನೀಡುವ ಮೂಲಕ ಗುಲಾಬಿ ದಿನವನ್ನು ಆಚರಿಸುವುದಿಲ್ಲ. ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ಗುಲಾಬಿ ದಿನವನ್ನು ಆಚರಿಸಬಹುದು.
ಒಂದು ವೇಳೆ ನೀವು ನಿಮ್ಮ ಸಂಗಾತಿಯನ್ನು ಹೊರತುಪಡಿಸಿ ಬೇರೆಯವರಿಗೆ ಗುಲಾಬಿಗಳನ್ನು ನೀಡುತ್ತಿದ್ದರೆ, ಗುಲಾಬಿಯ ಬಣ್ಣವನ್ನು ಸರಿಯಾಗಿ ಆರಿಸಿ. ಗುಲಾಬಿ ಹೂವುಗಳು ಹಲವು ಬಣ್ಣಗಳನ್ನು ಹೊಂದಿವೆ. ಆದರೆ, ಪ್ರತಿಯೊಂದು ಬಣ್ಣದ ಗುಲಾಬಿಯು ವಿಭಿನ್ನ ಅರ್ಥವನ್ನು ಹೊಂದಿದೆ. ಮನಸ್ಸಿಗೆ ಕಂಡ ಬಣ್ಣದ ಗುಲಾಬಿಯನ್ನು ಯಾರ್ಯಾರಿಗೋ ನೀಡಲಾಗುವುದಿಲ್ಲ. ನೀವು ಗುಲಾಬಿ ನೀಡುತ್ತಿದ್ದರೆ ಅಥವಾ ಗುಲಾಬಿ ಪಡೆಯಲು ಮುಂದಾಗಿದ್ದರೆ, ಮೊದಲು ಯಾವ ಬಣ್ಣ ಯಾವ ಅರ್ಥ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಆಗ ಮುಂದಿನವರು ಯಾವ ಉದ್ದೇಶಕ್ಕೆ ನಿಮಗೆ ಗುಲಾಬಿ ನೀಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ.
ಯಾವ ಬಣ್ಣದ ರೋಸ್ ಗೆ ಯಾವ ಅರ್ಥ
ಕೆಂಪು ಗುಲಾಬಿ : ಕೆಂಪು ಗುಲಾಬಿಯನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪ್ರೀತಿಸಿದ ವ್ಯಕ್ತಿಗೆ ಕೆಂಪು ಗುಲಾಬಿ ನೀಡಿ ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಬಹುದು. ಯಾವುದೋ ವ್ಯಕ್ತಿ ನಿಮಗೆ ಕೆಂಪು ಗುಲಾಬಿ ನೀಡಿದರೆ, ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆಂದು ಅರ್ಥೈಸಿಕೊಳ್ಳಿ. ಅವರಿಂದ ಗುಲಾಬಿ ಪಡೆದಲ್ಲಿ ನೀವೂ ಪ್ರೀತಿಸುತ್ತಿದ್ದೀರೆಂಬ ಅರ್ಥವಾಗುತ್ತದೆ.
ಗುಲಾಬಿ ಬಣ್ಣದ ರೋಸ್ : ಯಾರನ್ನಾದರೂ ಇಷ್ಟಪಟ್ಟರೆ, ನೀವು ಅವರಿಗೆ ಗುಲಾಬಿ ರೋಸ್ ನೀಡಬಹುದು. ಗುಲಾಬಿ ಬಣ್ಣಕ್ಕೆ ಮತ್ತೊಂದು ಅರ್ಥವಿದೆ. ಅದು ಸ್ನೇಹ. ನಿಮ್ಮ ಸ್ನೇಹಿತ ನಿಮಗೆ ಗುಲಾಬಿ ರೋನ್ ನೀಡಿದರೆ, ಅವನು ನಿಮ್ಮ ಸ್ನೇಹಕ್ಕೆ ಮಹತ್ವ ನೀಡುತ್ತಿದ್ದಾನೆಂದಾಗುತ್ತದೆ. ನಿಮ್ಮ ಸ್ನೇಹಕ್ಕೆ ಗುಲಾಬಿ ರೋಸ್ ನೀಡುವ ಮೂಲಕ ಧನ್ಯವಾದ ಹೇಳುತ್ತಿದ್ದಾನೆಂದರ್ಥ.
ಹಳದಿ ಗುಲಾಬಿ : ಯಾರಾದರೂ ನಿಮಗೆ ಹಳದಿ ಗುಲಾಬಿಯನ್ನು ನೀಡಿದರೆ, ಅವರು ನಿಮ್ಮ ಸ್ನೇಹ ಬಯಸುತ್ತಿದ್ದಾರೆ ಎಂದರ್ಥ. ಹಳದಿ ಗುಲಾಬಿಗಳು ಸ್ನೇಹ ಮತ್ತು ಹೊಸ ಆರಂಭದ ಸಂಕೇತವಾಗಿರುತ್ತದೆ.
Parenting Tips: ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸುವ ಅಮ್ಮನಿಗ್ಯಾಕೆ ದೂಷಣೆಯ ಉಡುಗೊರೆ?
ಕಿತ್ತಳೆ ಗುಲಾಬಿ : ಕಿತ್ತಳೆ ಬಣ್ಣದ ಗುಲಾಬಿ ಕೂಡ ಪ್ರೀತಿ ಅಭಿವ್ಯಕ್ತಿಯ ಸಂಕೇತವಾಗಿದೆ. ಅಂದರೆ, ನೀವು ಯಾರನ್ನಾದರೂ ಇಷ್ಟಪಟ್ಟರೆ, ಅವರಿಗೆ ಕಿತ್ತಳೆ ಬಣ್ಣದ ಗುಲಾಬಿ ಹೂವನ್ನು ನೀಡುವ ಮೂಲಕ ನಿಮ್ಮ ಮನಸ್ಸಿನಲ್ಲಿರುವುದನ್ನು ಅವರಿಗೆ ಹೇಳಬಹುದು.
ಬಿಳಿ ಗುಲಾಬಿ : ಬಿಳಿ ಬಣ್ಣವು ಶಾಂತಿಯ ಸಂಕೇತವಾಗಿದೆ. ಅಂತೆಯೇ, ಬಿಳಿ ಗುಲಾಬಿಯು ಕುಂದುಕೊರತೆಗಳನ್ನು ಅಳಿಸಿ ಮುನ್ನಡೆಯುವ ಸಂಕೇತವಾಗಿದೆ. ನೀವು ಯಾರಿಗಾದರೂ ಕ್ಷಮೆ ಕೇಳಲು ಬಯಸಿದರೆ, ನೀವು ರೋಸ್ ಡೇ ದಿನದಂದು ಅವರಿಗೆ ಬಿಳಿ ಗುಲಾಬಿಯನ್ನು ನೀಡಬಹುದು. ಈ ಮೂಲಕ ಇಬ್ಬರಲ್ಲಿ ಶಾಂತಿ ಬಯಸಬಹುದು.
ಕ್ರಶ್ ಎದುರು ಬಂದಾಗ FEELINGS ಮುಚ್ಚಿಡಲಾಗದವರು ಇವರು!
ಕಪ್ಪು ಗುಲಾಬಿ : ಕಪ್ಪು ಗುಲಾಬಿ ದ್ವೇಷದ ಸಂಕೇತವಾಗಿದೆ. ಈ ಬಣ್ಣದ ಗುಲಾಬಿ ದ್ವೇಷವನ್ನು ಪ್ರತಿನಿಧಿಸುತ್ತದೆ. ಪ್ರೇಮಿಗಳ ದಿನವು ಪ್ರೀತಿಯ ವಾರ. ಹಾಗಾಗಿ ಆ ದಿನಗಳಲ್ಲಿ ನೀವು ಯಾರಿಗೂ ಕಪ್ಪು ಗುಲಾಬಿಯನ್ನು ನೀಡಬೇಡಿ. ಪ್ರೀತಿ ಬೇಡ ಎನ್ನುವವರು ಬಿಳಿ ಅಥವಾ ಹಳದಿ ಗುಲಾಬಿ ನೀಡುವ ಮೂಲಕ ಹೊಸ ಸಂಬಂಧ ಶುರು ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.