First Date : ಮೊದಲ ಭೇಟಿಯಲ್ಲಿ ಹುಡುಗ್ರು ಏನೆಲ್ಲ ಸುಳ್ಳು ಹೇಳ್ತಾರೆ ಗೊತ್ತಾ?

By Suvarna NewsFirst Published Jan 29, 2022, 4:17 PM IST
Highlights

ಸುಳ್ಳು ಮತ್ತು ಹುಡುಗ್ರ ಮಧ್ಯೆ ವಿಶೇಷ ನಂಟಿದೆ. ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ ಕಲೆ ಕೆಲ ಹುಡುಗ್ರಿಗೆ ಬಂದಿರುತ್ತದೆ. ಹುಟ್ಟಿದಾಗಿನಿಂದ ನೋಡಿರುವ ಪಾಲಕರಿಗೂ ಮಕ್ಕಳ ಸುಳ್ಳು ಪತ್ತೆ ಹಚ್ಚೋದು ಕಷ್ಟ. ಇನ್ನು ಮೊದಲ ಬಾರಿ ಭೇಟಿಯಾಗ್ತಿರುವ ಹುಡುಗಿ ಹೇಗೆ ಪತ್ತೆ ಮಾಡಿಯಾಳು?. 

ಮೊದಲ ಪ್ರೀತಿ (Love) ಮತ್ತು ಮೊದಲ ಡೇಟ್(Date) ತುಂಬಾ ವಿಶೇಷವಾಗಿರುತ್ತದೆ. ಸಂಬಂಧ ಮುಂದುವರೆದಲ್ಲಿ ಈ ಡೇಟ್ ಸದಾ ನೆನಪಿರಲಿ ಎನ್ನುವ ಕಾರಣಕ್ಕೆ ಎಲ್ಲರೂ ಇದಕ್ಕೆ ಹೆಚ್ಚಿನ ಆದ್ಯತೆ ನೀಡ್ತಾರೆ. ಮೊದಲ ಡೇಟಿಂಗ್(Dating) ನಲ್ಲಿ ಏನು ಮಾಡ್ಬೇಕೆಂಬ ಬಗ್ಗೆ ಅನೇಕರು ಪ್ಲಾನ್ (Plan )ಮಾಡ್ತಾರೆ. ನೋಡ್ತಿದ್ದಂತೆ, ಮಾತನಾಡ್ತಿದ್ದಂತೆ ಎದುರಿರುವವರಿಗೆ ತಾವು ಇಷ್ಟವಾಗಬೇಕೆಂಬ ಕಾರಣಕ್ಕೆ ಅವರನ್ನು ಸೆಳೆಯಲು ಸಾಕಷ್ಟು ಕಸರತ್ತು ನಡೆಸ್ತಾರೆ. ಆದಾಗ್ಯೂ, ಮೊದಲ ಡೇಟ್ ನಲ್ಲಿ ಎದುರಿರುವವರ  ಆಸೆ, ಇಷ್ಟವನ್ನರಿತು ನಡೆದುಕೊಳ್ಳುವುದು ಕಷ್ಟ.

ಹುಡುಗಿಯರನ್ನು ಮೆಚ್ಚಿಸಲು ಹುಡುಗ್ರು ಸುಳ್ಳಿನ ಮಳೆಗರಿಯುತ್ತಾರೆಂಬುದು ಎಲ್ಲರಿಗೂ ಗೊತ್ತು. ವಿಶೇಷವೆಂದ್ರೆ ಮೊದಲ ಡೇಟ್ ನಲ್ಲಿಯೇ ಹುಡುಗ್ರು ಸಾಕಷ್ಟು ಸುಳ್ಳುಗಳನ್ನು ಹೇಳ್ತಾರೆ. ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ ಅಧ್ಯಯನದಲ್ಲಿ ಇದು ಗೊತ್ತಾಗಿದೆ. ಮೊದಲ ಡೇಟಿಂಗ್ ನಲ್ಲಿಯೂ ನಾವು ಪ್ರಾಮಾಣಿಕವಾಗಿರಲಿಲ್ಲವೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 63 ರಷ್ಟು ಜನರು ಒಪ್ಪಿಕೊಂಡಿದ್ದಾರೆ. ಸಂಬಳದಿಂದ ಹವ್ಯಾಸದವರೆಗೆ ಅನೇಕ ವಿಷ್ಯಗಳ ಬಗ್ಗೆ ಸುಳ್ಳು ಹೇಳಿರುವುದಾಗಿ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಮೊದಲ ಡೇಟ್ ನಲ್ಲಿ ಹುಡುಗರು ಹೇಳುವ ಸಾಮಾನ್ಯ ಸುಳ್ಳುಗಳು ಯಾವುವು ಗೊತ್ತಾ?

ಮೊದಲ ಡೇಟ್ ನಲ್ಲಿ ಹುಡುಗರ ಸುಳ್ಳು :

ಕೆಲಸದ ವಿವರ : ಮೊದಲ ಡೇಟ್ ನಲ್ಲಿ ಹೆಚ್ಚಿನ ಹುಡುಗರು ತಮ್ಮ ಕೆಲಸದ ಬಗ್ಗೆ ಉತ್ಪ್ರೇಕ್ಷಿತವಾಗಿ ಮಾತನಾಡುತ್ತಾರೆ. ತನ್ನ ಕಂಪನಿಗೆ ಸಂಬಂಧಿಸಿದ ವಿಷಯದ ಮೂಲಕ ಹುಡುಗಿಯರನ್ನು ಆಕರ್ಷಿಸಲು ಬಳಸುವುದಲ್ಲದೆ, ಆರ್ಥಿಕವಾಗಿ ತಮ್ಮ ಸ್ಥಿತಿ ಉತ್ತಮವಾಗಿದೆ ಎಂಬುದನ್ನು ತೋರಿಸಲು ಬಯಸ್ತಾರೆ. 

ಕುಟುಂಬ : ಅಪಾರ್ಟ್ಮೆಂಟ್ ನಲ್ಲಿ ಉತ್ತಮ ಮತ್ತು ಐಷಾರಾಮಿ ಮನೆಯಲ್ಲಿದ್ದರೆ, ಗೆಳತಿ ತಕ್ಷಣ ತನ್ನನ್ನು ಒಪ್ಪಿಕೊಳ್ತಾಳೆಂಬ ನಂಬಿಕೆಯಲ್ಲಿ ಅನೇಕ ಹುಡುಗರಿರ್ತಾರೆ. ಹುಡುಗಿಯರನ್ನು ಸೆಳೆಯಲು ಈ ಬಗ್ಗೆ ಸುಳ್ಳು ಹೇಳ್ತಾರೆ. ತಂದೆ-ತಾಯಿ ಸ್ವಭಾವದ ಬಗ್ಗೆ ಸುಂದರ ಕಥೆಗಳನ್ನು ಹೇಳುವ ಜೊತೆಗೆ ಅವರು ತನ್ನನ್ನು ಎಷ್ಟು ಪ್ರೀತಿಸ್ತಾರೆ ಎಂಬುದನ್ನು ಹುಡುಗಿಗೆ ಹೇಳಲು ಮರೆಯುವುದಿಲ್ಲ.  

ಕೂಲ್ ಆಟಿಟ್ಯೂಡ್ : ಮೊದಲ ಡೇಟಿಂಗ್ ನಲ್ಲಿ ಯಾವುದೇ ಹುಡುಗರು ತಮ್ಮ ಕೋಪ ಅಥವಾ ವ್ಯಕ್ತಿತ್ವವನ್ನು ಬಿಚ್ಚಿಡುವುದಿಲ್ಲ. ತಾವು ಶಾಂತ ಸ್ವಭಾವದವರು, ಸ್ವತಂತ್ರರು ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡ್ತಾರೆ. ಹೀಗೆ ನಟಿಸಿದಲ್ಲಿ ಗೆಳತಿ ಕಂಫರ್ಟ್ ಆಗಿರ್ತಾಳೆಂದು ಅವರು ಭಾವಿಸುತ್ತಾರೆ. ಅತಿಯಾಗಿ ಮಾತನಾಡುವ ಹುಡುಗರು ಕೆಲ ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಇದನ್ನು ತಿಳಿದಿರುವ ಹುಡುಗರು ಮೊದಲ ಭೇಟಿಯಲ್ಲಿ ಜಂಟಲ್ ಮನ್ ರೀತಿ ವರ್ತಿಸುತ್ತಾರೆ.

After Divorce : ವಿಚ್ಛೇದನದ ನಂತ್ರ ಸಂಗಾತಿಯ ನೆನಪು ಕಾಡೋದು ತಪ್ಪಾ?

ಮದ್ಯ-ಸಿಗರೇಟ್ ಚಟ : ಈ ಕೆಟ್ಟ ಚಟದ ಬಗ್ಗೆ ಮೊದಲ ಡೇಟ್ ಇರಲಿ, ಮದುವೆಯಾಗುವವರೆಗೂ ಅನೇಕರು ಮುಚ್ಚಿಡುತ್ತಾರೆ. ಹುಡುಗಿ ಎಷ್ಟೇ ಮಾಡರ್ನ್ ಆಗಿರಲಿ,ತನ್ನ ಸಂಗಾತಿ ಮದ್ಯಪಾನ ಮಾಡುವುದನ್ನು ಆಕೆ ಇಷ್ಟಪಡುವುದಿಲ್ಲ. ಅನೇಕ ಹುಡುಗಿಯರಿಗೆ ಸಿಗರೇಟಿನ ಸ್ಮೆಲ್ ಆಗಿ ಬರುವುದಿಲ್ಲ. ಮದ್ಯಪಾನ ಮತ್ತು ಸಿಗರೇಟಿನ ವ್ಯಸನಿಯಾಗಿರುವ ಹುಡುಗ, ಮೊದಲ ಡೇಟ್ ನಲ್ಲಿ ಅಪ್ಪಿತಪ್ಪಿಯೂ ಈ ವಿಷ್ಯವನ್ನು ಗೆಳತಿ ಮುಂದೆ ಹೇಳುವುದಿಲ್ಲ. ತನ್ನ ಕೆಟ್ಟ ಚಟ ಆಕೆಗೆ ಗೊತ್ತಾದ್ರೆ ಆಕೆ ತನ್ನನ್ನು ಒಪ್ಪುವುದಿಲ್ಲ ಎಂಬುದು ಅವರಿಗೆ ತಿಳಿದಿರುತ್ತದೆ. 

ಸ್ವಚ್ಛತೆ: ಸಾಮಾನ್ಯವಾಗಿ ಹುಡುಗರು ಸ್ವಚ್ಛತೆಯಲ್ಲಿ ಹುಡುಗಿಯರಿಗಿಂತ ಹಿಂದಿರುತ್ತಾರೆ. ಕೆಲವ ಹುಡುಗರು ವಿಪರೀತ ಎನ್ನುವಷ್ಟು ಕೊಳಕಾಗಿರ್ತಾರೆ. ಆದ್ರೆ ಮೊದಲ ಡೇಟ್ ನಲ್ಲಿ ನಾನು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡ್ತೆನೆ ಎಂಬುದನ್ನು ತೋರಿಸಿಕೊಳ್ಳುವ ಪ್ರಯತ್ನ ನಡೆಸ್ತಾರೆ.

ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ, ಆತನೇ ಬಾಸ್ ಆಗಿ ಬಂದರೆ?

ಗೆಳತಿಯರ ಬಗ್ಗೆ : ಮಾಜಿ ಗೆಳತಿಯಾಗಿರಲಿ ಅಥವಾ ಹಾಲಿ ಇನ್ನೊಬ್ಬಳ ಜೊತೆ ಸಂಬಂಧವಿರಲಿ ಇದ್ಯಾವುದನ್ನೂ ಅವರು ಹೇಳುವುದಿಲ್ಲ. ಮಾಜಿ ಬಗ್ಗೆ ಹೇಳುವಾಗ್ಲೂ ಅವರ ಧ್ವನಿ ಬದಲಾಗಿರುತ್ತದೆ. ತನ್ನದೇನು ತಪ್ಪಿರಲಿಲ್ಲ,ನಾನು ಪ್ರಾಮಾಣಿಕ ಎಂಬ ದಾಟಿಯಲ್ಲಿ ವಿಷ್ಯ ತಲುಪಿಸುತ್ತಾರೆ.

click me!