ನಿಮ್ಮ ಸಂಸಾರ ಹೇಗಿದೆ? ಪತ್ನಿ ಹೇಳಿದಂತೆಯೇ ಕೇಳಬೇಕಾ? ಪತ್ನಿ ನಿಮ್ಮ ಅಭಿಪ್ರಾಯ ಪಡೆದೇ ತನ್ನ ಅಧಿಕಾರ ಚಲಾಯಿಸುತ್ತಾರಾ? ಸಂಸಾರದಲ್ಲಿ ಪುರುಷರದ್ದು ಯಾವ ಸ್ಥಾನ ಎನ್ನುವುದರ ಮೇಲೆ ಅದು ಮಹಿಳಾ ನೇತೃತ್ವದ ಸಂಬಂಧವೋ ಅಲ್ಲವೋ ಎನ್ನುವುದನ್ನು ಹೇಳಬಹುದು.
ಕೆಲ ಪುರುಷರ ಬಳಿ ಏನಾದರೂ ಕೇಳಿ ನೋಡಿ. “ಮನೆಯವರನ್ನು ಕೇಳಿ ಹೇಳ್ತೀನಿ’ ಅಂತಾರೆ. ಅವರಿಗೆ ಅಷ್ಟೂ ಹೇಳಲು ಬರುವುದಿಲ್ಲವೇ ಎಂದು ನಮಗನ್ನಿಸಬಹುದು. ಆದರೆ, ಅವರ ಮನೆಯಲ್ಲಿ ಮಹಿಳೆಯೇ ನಿರ್ಧಾರ ತೆಗೆದುಕೊಳ್ಳುತ್ತಿರಬಹುದು ಎನ್ನುವ ಸತ್ಯ ನಮಗೆ ಗೋಚರಿಸುವುದಿಲ್ಲ. ಅಷ್ಟಕ್ಕೂ ಅದು ಅವಮಾನವೇನೂ ಅಲ್ಲ. ಕೆಲವು ಸಂಬಂಧಗಳು ಹಾಗೇಯೇ ಇರುತ್ತವೆ. ಅಲ್ಲಿ, ಮಹಿಳೆಯರ ನಿರ್ಧಾರಗಳೇ ಅಂತಿಮವಾಗಿರುತ್ತದೆ. ಅವರ ಸಂಬಂಧ ಮಹಿಳೆಯ ನೇತೃತ್ವದಲ್ಲಿರುತ್ತದೆ. ಅಚ್ಚರಿಯಾಗಬಹುದು, ಇತ್ತೀಚೆಗೆ ಮಹಿಳಾ ನೇತೃತ್ವದ ಸಾಂಗತ್ಯಗಳು ಹೆಚ್ಚುತ್ತಿವೆ ಎನ್ನುತ್ತವೆ ಅಧ್ಯಯನಗಳು. ಇಂತಹ ಸಂಬಂಧಗಳಲ್ಲಿ ಮಹಿಳೆಯರು ಹೆಚ್ಚು ಪವರ್ ಹೊಂದಿರುತ್ತಾರೆ. ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಪುರುಷರ ಅಭಿಪ್ರಾಯಗಳಿಗೂ ಬೆಲೆ ನೀಡುತ್ತಲೇ ತಮ್ಮದೇ ಅಧಿಕಾರ ನಡೆಸುವ ಮಹಿಳೆಯರನ್ನು ನೋಡುತ್ತೇವೆ. ಅವರು ತಮ್ಮ ಸ್ವಾತಂತ್ರ್ಯದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸದೃಢವಾಗಿ ನಿಲುವುಗಳನ್ನು ಕೈಗೊಳ್ಳುತ್ತಾರೆ. ಸಮಾಜದ ಸಾಮಾನ್ಯ ಧೋರಣೆಗಳಿಗೆ ಹೊರತಾಗಿ ಅವರ ಸಂಸಾರವಿರುತ್ತದೆ. ಇದು ಕೆಲವೊಮ್ಮೆ ಪುರುಷರನ್ನು ಕುಗ್ಗಿಸಬಹುದಾದರೂ ತೀರ ಅಪರೂಪವೇನೂ ಆಗಿರುವುದಿಲ್ಲ. ಮನಸ್ಥಿತಿಯಲ್ಲಿ ಚೂರು ಬದಲಾವಣೆ ತಂದುಕೊಂಡರೆ ಇಂತಹ ಸಂಸಾರಗಳು ಬಹಳ ಚೆನ್ನಾಗಿ ನಡೆಯುತ್ತವೆ.
ತನ್ನದೇ ನಿರ್ಧಾರ ಕೈಗೊಳ್ಳುವ ಮಹಿಳೆ ಪತಿಯ ಮೇಲೆ ದಬ್ಬಾಳಿಕೆ ನಡೆಸುತ್ತಾಳೆ ಎಂದೇನೂ ಅಲ್ಲ. ಆಕೆ ಕೇವಲ ಲೀಡ್ ಮಾಡುತ್ತಾಳೆ. ಪತಿಗೆ ನೀಡಬೇಕಾದ ಗೌರವ ನೀಡುತ್ತಾಳೆ. ಕುಟುಂಬದ ಹಣಕಾಸು ವ್ಯವಸ್ಥೆ, ಮಕ್ಕಳ ಆರೈಕೆಯನ್ನೂ ಆಕೆ ನಿರ್ವಹಿಸುತ್ತಾಳೆ. ಪತಿಯ ಮೇಲೆ ನಿಯಂತ್ರಣವನ್ನೂ ಹೊಂದಿರುವ ಮಹಿಳೆಯರಿದ್ದಾರೆ. ವಿಶೇಷವೆಂದರೆ, ಪುರುಷರು ಈಗೋ ಬಿಟ್ಟರೆ ಇವರದ್ದು ಉತ್ತಮ ಆರೋಗ್ಯಕರ ಸಂಬಂಧವಾಗುತ್ತದೆ. ಪರಸ್ಪರ ಉತ್ತೇಜನ, ಬೆಳಗಣಿಗೆಗೆ ಈ ದಂಪತಿ ಆದ್ಯತೆ ನೀಡುತ್ತಾರೆ. ಅಂದ ಹಾಗೆ, ಮಹಿಳಾ ನೇತೃತ್ವದ ಸಂಬಂಧಗಳಲ್ಲಿ ಮುಖ್ಯವಾಗಿ 4 ವಿಧಗಳನ್ನು ಗುರುತಿಸಲಾಗಿದೆ.
ನಿಮ್ಮವರ ಜೊತೆ ಜಗಳ ಮಾಡಿ ಮಾತು ಬಿಟ್ಟಿದ್ದೀರಾ? ಮತ್ತೆ ಮಾತನಾಡಲು ಟಿಪ್ಸ್ ಹೀಗೆ ಮಾಡಿ
undefined
• ಕಡಿಮೆ ನಿಯಂತ್ರಣ (Low Control)
ಡೈನಮಿಕ್ (Dynamic) ಆಗಿರುವ ಪತ್ನಿ (Wife) ತಾನು ಅಧಿಕಾರ (Power) ನಿರ್ವಹಿಸುತ್ತಿದ್ದರೂ ಪತಿಯ ಮೇಲೆ ಹೆಚ್ಚು ನಿಯಂತ್ರಣ ಮಾಡಲು ಹೋಗುವುದಿಲ್ಲ. ಏನಾದರೂ ಮಾಡುವುದಿದ್ದರೆ ಪತಿಯ (Husband) ಗಮನಕ್ಕೆ ತಂದೇ ಮಾಡುತ್ತಾಳೆ. ಬಹಳಷ್ಟು ಸಮಯಗಳಲ್ಲಿ ತಾನೇ ಪ್ರಮುಖ ಪಾತ್ರ ವಹಿಸುತ್ತಾಳೆ. ಆಗಾಗ ಪತಿಯಿಂದ ಈ ಬಗ್ಗೆ ಪ್ರಶ್ನೆಯನ್ನೂ ಎದುರಿಸುತ್ತಾಳೆ.
• ಮಧ್ಯಮ (Moderate) ಹತೋಟಿ
ಕೆಲವು ಮಹಿಳೆಯರು ಪತಿಯ ಮೇಲೆ ಸ್ವಲ್ಪ ಹತೋಟಿ ಹೊಂದಿರುತ್ತಾರೆ. ಡಾಮಿನೇಟ್ (Dominate) ಮಾಡುತ್ತಾರೆ. ಆತ್ಮವಿಶ್ವಾಸದಿಂದ ಕುಟುಂಬ (Family) ಮುನ್ನಡೆಸುತ್ತಾರೆ. ಪುರುಷರಿಗೆ ಇವರ ಡಾಮಿನೇಟ್ ಮಾಡುವ ಗುಣದ ಬಗ್ಗೆ ಅಸಮಾಧಾನವಿದ್ದರೂ ತಮಗೂ ಅಷ್ಟೇ ಅಧಿಕಾರ ಸಿಗುವುದರಿಂದ ಸುಮ್ಮನಿರುತ್ತಾರೆ.
• ವ್ಯಾಖ್ಯಾನಿಸಬಲ್ಲ ನಿಯಂತ್ರಣ
ಬಹುತೇಕ ನಿರ್ಧಾರಗಳನ್ನು (Decision) ಮಹಿಳೆಯೇ ಕೈಗೊಳ್ಳುವ ಸಂಬಂಧದಲ್ಲಿ (Relation) ಇಂತಹ ನಿಯಂತ್ರಣ ಕಾಣಬಹುದು. ಸಾಮಾನ್ಯವಾಗಿ ಪುರುಷ (Male) ನಿಭಾಯಿಸುವ ಎಲ್ಲವನ್ನೂ ಆಕೆಯೇ ನಿಭಾಯಿಸುವುದು ಕಂಡುಬರುತ್ತದೆ. ಆದರೂ ದಂಪತಿ ತಮ್ಮ ತಮ್ಮ ಅಧಿಕಾರಗಳ ವ್ಯಾಪ್ತಿಯಲ್ಲೇ ವರ್ತಿಸುತ್ತಾರೆ.
• ಅತ್ಯಧಿಕ ನಿಯಂತ್ರಣ
ಈ ಸಂಬಂಧದಲ್ಲಿ ಮಹಿಳೆಗೆ (Woman) ಸಂಪೂರ್ಣವಾದ ಅಧಿಕಾರ ಇರುತ್ತದೆ ಹಾಗೂ ಆಕೆ ಪತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಾಳೆ. ಪತ್ನಿಯ ಎಲ್ಲ ಅಗತ್ಯಗಳನ್ನು ವಿಧೇಯನಾಗಿ ಪೂರೈಕೆ ಮಾಡುವುದಷ್ಟೇ ಪುರುಷನ ಕಾರ್ಯವಾಗಿರುತ್ತದೆ.
Relationship Tips: ಸಂಗಾತಿ ಮಾತು ಕೇಳಿಸ್ಕೊಳ್ಳೋಕೆ ತಲೆನೋವಾ? ಸಂಬಂಧ ಸುಧಾರಣೆ ಹೇಗೆ?
ಲಾಭವೇನು ಗೊತ್ತಾ?
• ಕಮಾಂಡಿಂಗ್ (Commanding) ಗುಣ ಹೊಂದಿರುವ ಮಹಿಳೆಯರಿಗೆ ಇಂತಹ ಸಂಬಂಧ ಉತ್ತಮ.
• ಕೆಲವು ಬದ್ಧತೆಯುಳ್ಳ ಪುರುಷರಿಗೂ ಮಹಿಳಾ ನೇತೃತ್ವದ (Lead) ಸಂಬಂಧ ಸೂಕ್ತ.
• ಸೂಕ್ತ ಸಂವಹನ, ಸಮತೋಲನ ಹೊಂದಿದ್ದರೆ ಇದು ಆರೋಗ್ಯಕರ ಸಂಬಂಧ.
• ಸಂಬಂಧದಲ್ಲಿ ಒತ್ತಡ ಕಡಿಮೆ.
• ಆತ್ಮೀಯತೆ ಹೆಚ್ಚು
ಅನನುಕೂಲವೂ ಇದೆ
• ಪುರುಷರ ಪಾರಮ್ಯಕ್ಕೆ ಧಕ್ಕೆ ಆಗುವುದರಿಂದ ಅವರಿಗೆ ಇರಿಸುಮುರಿಸಾಗುತ್ತದೆ.
• ಮಹಿಳೆಯರು ಟೀಕೆ ಎದುರಿಸಬೇಕಾಗುತ್ತದೆ. ಕಿರಿಕಿರಿ (Irritation) ಹೆಚ್ಚಬಹುದು. ಅಸಮಾಧಾನಕ್ಕೆ ಕಾರಣವಾಗಬಹುದು.