ಸೌಂದರ್ಯಕ್ಕಲ್ಲ, ಬುದ್ಧಿವಂತಿಕೆಗೆ ಆಕರ್ಷಿತರಾಗೋದೀಗ ಹೆಚ್ಚು!

By Suvarna NewsFirst Published Dec 19, 2019, 3:34 PM IST
Highlights

ಸೆಪಿಯೋಸೆಕ್ಷುಯಲ್‌ಗಳು ದೈಹಿಕ ಸೌಂದರ್ಯಕ್ಕೆ ಮಣೆ ಹಾಕುವುದಿಲ್ಲ. ಬದಲಿಗೆ ಬೌದ್ಧಿಕ ಮಟ್ಟ ಮ್ಯಾಚ್ ಆಗುವವರಿಗೆ ಮನ್ನಣೆ ನೀಡುತ್ತಾರೆ. ಆಕರ್ಷಣೆಗೆ ಹೃದಯವಷ್ಟೇ ಸಾಲದು, ಮೆದುಳು ಕೂಡಾ ಮುಖ್ಯ ಎನ್ನುವವರು ಇವರು. 

ನೀವು ಸುಂದರವಾಗಿರಬೇಕಿಲ್ಲ, ಮೈ ಬಣ್ಣ ಮುಖ್ಯವಾಗುವುದಿಲ್ಲ, ನಿಮ್ಮ ಕೂದಲ ವಿನ್ಯಾಸ ಇವರಿಗೆ ವಿಶೇಷವೆನಿಸುವುದಿಲ್ಲ, ಅಲ್ಲಲ್ಲಿ ಇಣುಕುವ ಬೊಜ್ಜಿಗೆ ಕೂಡಾ ಇವರು ಗಮನ ವಹಿಸುವುದಿಲ್ಲ. ಆದರೆ, ಇವರು ಆಕರ್ಷಿತರಾಗುವುದು, ಉದ್ರೇಕಗೊಳ್ಳುವುದು ನಿಮ್ಮ ಬುದ್ಧಿವಂತಿಕೆಗೆ. 

ಹೌದು, ಆಕರ್ಷಣೆಯ ರೀತಿರಿವಾಜುಗಳು ಬದಲಾಗುತ್ತಿವೆ. ವರ್ಷಗರುಳಿದಂತೆಲ್ಲ ಈ ಟ್ರೆಂಡ್ ಹೆಚ್ಚುತ್ತಿದೆ. ಈಗ ಬಹಳಷ್ಟು ಜನರು ದೇಹ ಸೌಂದರ್ಯಕ್ಕೆ ಕೆರಳುವುದಕ್ಕಿಂತ ಹೆಚ್ಚಾಗಿ ಆಸಕ್ತಿಕರ ಮಾತುಕತೆಯಿಂದಾಗಿ ಮತ್ತೊಬ್ಬರ ಮೇಲೆ ಲೈಂಗಿಕವಾಗಿಯೂ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಇಂಥ ವರ್ಗಕ್ಕೆ ಸೆಪಿಯೋಸೆಕ್ಷುಯಲ್ ಎಂದು ಹೆಸರು. 
ಮತ್ತೊಬ್ಬ ವ್ಯಕ್ತಿಯ ಬುದ್ಧಿವಂತಿಕೆಗೆ ಮರುಳಾಗಿ ಅವರತ್ತ ಆಕರ್ಷಿತರಾಗುತ್ತಾರೆ ಸೆಪಿಯೋಸೆಕ್ಷುಯಲ್ಸ್. ಅಂದರೆ ಇವರಿಗೆ ಆಸಕ್ತಿಕರವಾದ ಮಾತುಕತೆಯೇ ಮಾನಸಿಕವಾಗಿ ಫೋರ್‌ಪ್ಲೇಯಾದರೆ, ಬುದ್ಧಿವಂತಿಕೆಯ ಅತ್ಯುತ್ತಮ ಮರುಳು ಮಾಡುವ ನಡೆ. 

ಶವದ ಜೊತೆ ಸೆಕ್ಸ್‌ಗಿಳಿಯುವಷ್ಟು ಸ್ಯಾಡಿಸ್ಟ್ ಆಗೋದಾದ್ರೂ ಯಾಕೆ?

ಉದ್ರೇಕತೆ ಹಾಗೂ ಬುದ್ಧಿವಂತಿಕೆ ನಡುವೆ ಬಹಳ ಹಿಂದಿನಿಂದಲೂ ಕನೆಕ್ಷನ್ ಇದೆ. ಆದರೆ, ಈಗೀಗ ಉಳಿದೆಲ್ಲ ವಿಷಯಗಳಿಗಿಂತಲೂ ಬುದ್ಧಿಮತ್ತೆಯೇ ಹೆಚ್ಚು ಕೆರಳಿಸುವ, ಆಕರ್ಷಿಸುವ ಸ್ವಭಾವವೆನಿಸಿಕೊಳ್ಳುತ್ತಿದೆ. ಇದನ್ನು ವೈಜ್ಞಾನಿಕ ಸಮುದಾಯ ಗುರುತಿಸಿ ಹೆಸರಿಟ್ಟಿದೆ ಕೂಡಾ. 

ಇಂಥವರು ಯಾರಿಗಿಷ್ಟವಿಲ್ಲ?

ಈ ಹಿಂದೆ ಯುವತಿಯರು ಹೆಚ್ಚು ಓದಿದ್ದರೆ, ಕೆಲಸಕ್ಕೆ ಹೋಗುತ್ತಿದ್ದರೆ, ಅತಿಯಾದ ಬುದ್ಧಿವಂತರಾಗಿದ್ದರೆ, ನೇರ ಮಾತನಾಡುತ್ತಿದ್ದರೆ- ಅವರನ್ನು ಪುರುಷರು ತಮ್ಮ ಸಂಗಾತಿಯಾಗಿ ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದರು. ಹೆಚ್ಚು ಓದಿದ ಹೆಣ್ಣುಮಕ್ಕಳನ್ನು ಯಾರೂ ಮದುವೆಯಾಗುವುದಿಲ್ಲ ಎಂಬ ಕಾರಣಕ್ಕೆ ಅವರಿಗೆ ಶಿಕ್ಷಣ ಹೆಚ್ಚು ನೀಡದಿದ್ದ ಸಮಯವೊಂದಿತ್ತು. ಆದರೆ ಈಗ ಹಾಗಲ್ಲ, ಯುವಕರಾಗಲಿ, ಯುವತಿಯರಾಗಲಿ, ಒಬ್ಬರು ಮತ್ತೊಬ್ಬರ ವಿಷಯ ಜ್ಞಾನ, ಅದನ್ನು ವ್ಯಕ್ತಪಡಿಸುವ ರೀತಿ, ಬುದ್ಧಿವಂತಿಕೆ, ತಮ್ಮನ್ನು ಅವರು ಯೋಚನೆಗೆ ಹಚ್ಚುವ ಬಗೆಯಿಂದಾಗಿ ಹೆಚ್ಚು ಆಕರ್ಷಿತರಾಗುತ್ತಾರೆ. ಇದರಿಂದ ಪರಸ್ಪರ ಅವರ ಬಗ್ಗೆ ತಿಳಿದುಕೊಳ್ಳುವ ಕೌತುಕ ಹೆಚ್ಚುತ್ತದೆ. ಕುತೂಹಲ ಮೆಚ್ಚುಗೆಯಾಗಿ ಬದಲಾಗುತ್ತದೆ. ನಂತರ ಈ ಮೆಚ್ಚುಗೆಯೇ ಆಳವಾದ ಆಕರ್ಷಣೆಗೆ ಒಡ್ಡುತ್ತದೆ. 

ಮೈಂಡ್‌ಗಿಂತ ಸೆಕ್ಸಿಯಾದುದು ಬೇರಿಲ್ಲ

ಈ ಟ್ರೆಂಡ್‌ಗೊಂದು ವಿರೋಧವಿದೆ, ಐಕ್ಯೂ ಮೇಲೆ ಆಕರ್ಷಣೆ ಎಂಬುದು ಅವಲಂಬಿತವಾದರೆ ಸುಮಾರಿಗೆ ಬುದ್ಧಿವಂತರಾಗಿರುವವರು, ಬೌದ್ಧಿಕವಾಗಿ ಹಿಂದುಳಿದವರು ಸಂಪೂರ್ಣವಾಗಿ ಈ ಆಕರ್ಷಣೆಯ ಸರ್ಕಲ್‌ನಿಂದ ಹೊರಗುಳಿಯುತ್ತಾರೆ ಎಂದು. ಆದರೆ, ಸೆಪಿಯೋಸೆಕ್ಷುಯಲ್ಸ್ ಇದನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಇದು ಸ್ಮಾರ್ಟೆಸ್ಟ್ ವ್ಯಕ್ತಿಯೊಡನೆ ಇರುವುದಲ್ಲ, ಪದಗಳು ಹಾಗೂ ಜ್ಞಾನದ ಮೂಲಕ ಯಾರೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತೇವೆಯೋ ಅಂಥವರನ್ನು ಹುಡುಕಿಕೊಳ್ಳುವುದು. 

ಸಂಪೂರ್ಣ ಬುದ್ದಿಮತ್ತೆಯ ಆಕರ್ಷಣೆ ಸಾಧ್ಯವೇ?

2017ರಲ್ಲಿ ಸೆಪಿಯೋಸೆಕ್ಷುಯಲ್ಸ್‌ನ್ನು ಸಂದರ್ಶಿಸಿ ಮಾಡಿದ ಲೇಖನವೊಂದನ್ನು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿತ್ತು. ಅದರಂತೆ, ಈಗ ಆನ್‌ಲೈನ್ ಮೂಲಕವೇ ಸಾಕಷ್ಟು ಸಂಬಂಧಗಳು ಏರ್ಪಡುತ್ತಿದ್ದು, ಇಲ್ಲಿ ಫೋಟೋಗಳನ್ನು ಕೇಳುವ, ಸುಖಾಸುಮ್ಮನೆ ದೈಹಿಕ ಸಂದರ್ಯದ ಕುರಿತು ಟೈಂಪಾಸ್ ಮಾತಾಡುವ ಮಾತುಕತೆಗಳು ಅವರನ್ನು ಸಂಪೂರ್ಣ ಬೇಸರಪಡಿಸುತ್ತಿದ್ದವು. ಆದರೆ, ಯಾರೊಂದಿಗಾದರೂ ಆಳದ, ಗಂಭೀರ, ಲಾಜಿಕಲ್ ಆಗಿ ಮಾತುಕತೆಯಾಡಲು ಸಾಧ್ಯವಾದಾಗ, ಅದು ಅವರನ್ನು ಆಕರ್ಷಣೆಗೆ ಒಳಪಡಿಸುತ್ತಿತ್ತು. 

ಅಷ್ಟೆಲ್ಲ ಹೇಳಿದ ಮೇಲೂ ಕೇವಲ ಮಾತುಕತೆಯಿಂದಾಗಿ ಯಾರ ಬಗ್ಗೆಯಾದರೂ ಲೈಂಗಿಕ ಆಕರ್ಷಣೆ ಹೊಂದುವುದು ಸಾಧ್ಯವೇ ಎಂಬ ಗೊಂದಲ ಕಾಡಬಹುದು. ಈ ಬಗ್ಗೆ ಪಶ್ಚಿಮ ಆಸ್ಟ್ರೇಲಿಯ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ 18-35 ವಯೋಮಾನದವರಲ್ಲಿ ಶೇ.8ರಂಷ್ಟು ಜನ ಸೆಪಿಯೋಸೆಕ್ಷುಯಲ್‌ಗಳಿರುತ್ತಾರೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇನ್ನು 30ರಿಂದ 45 ವಯಸ್ಸಿನವರು ಡೇಟಿಂಗ್ ವೆಬ್‌ಸೈಟ್‌ಗಳಲ್ಲಿ ಹೀಗೆ ಸೆಪಿಯೋಸೆಕ್ಷುಯಲ್ ರೀತಿಯಲ್ಲಿ ಪಾರ್ಟ್ನರ್‌ ಹುಡುಕುವುದು ಹೆಚ್ಚು ಎಂಬುದು ಕಂಡುಬಂದಿದೆ. 

ಗುದ್ದಾಟಕ್ಕಿಂತ ಹೆಚ್ಚು ಮುದ್ದಾಟವಿದ್ದರೆ ಸಂಬಂಧ ಚೆಂದ!

ಬುದ್ದಿವಂತಿಕೆಯೇ ಸೌಂದರ್ಯ

ಬುದ್ಧಿವಂತಿಕೆಯನ್ನು ನಾವು ಯಾವಾಗಲೂ ಗೌರವಯುತವಾಗಿ ಕಾಣುತ್ತೇವೆ. ಜೊತೆಗೆ ಬುದ್ಧಿವಂತರು ಯಾವಾಗಲೂ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ, ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ, ಯಶಸ್ಸು ಕೂಡಾ ಇವರ ಬೆನ್ನ ಹಿಂದಿರುತ್ತದೆ ಎಂಬುದು ತಿಳಿದಿದೆಯಷ್ಟೇ. ಹಾಗಾಗಿ, ಬುದ್ಧಿವಂತಿಕೆಯು ಮತ್ತೊಂದು ರೀತಿಯ ಸೌಂದರ್ಯವಾಗಿ ಪರಿಗಣಿಸಲ್ಪಡುತ್ತದೆ. ಹಾಗಂಥ ಸೆಪಿಯೋಸೆಕ್ಷುಯಲ್ ಸೌಂದರ್ಯವನ್ನು ನೋಡುವುದೇ ಇಲ್ಲ ಎಂದಲ್ಲ. ಆದರೆ ಅವರಿಗೆ ದೈಹಿಕ ಸೌಂದರ್ಯವು ಬುದ್ಧಿವಂತಿಕೆಯಷ್ಟು ಸೆಳೆಯುವುದಿಲ್ಲ. 

click me!