Relationship Tips : ಪರಾಕಾಷ್ಠೆ ಸಿಗ್ತಿಲ್ಲ ಅಂತಾ ಹೇಳೋದು ಹೇಗೆ?

Published : Apr 28, 2023, 04:33 PM IST
Relationship Tips : ಪರಾಕಾಷ್ಠೆ ಸಿಗ್ತಿಲ್ಲ ಅಂತಾ ಹೇಳೋದು ಹೇಗೆ?

ಸಾರಾಂಶ

ಲೈಂಗಿಕ ಕ್ರಿಯೆ ಬಗ್ಗೆ ಜನರಲ್ಲಿ ಜ್ಞಾನವಿರಬೇಕು. ಜನರು, ಸಂಭೋಗವನ್ನು ಮೈಲಿಗೆಯಂತೆ ನೋಡ್ತಾರೆ.  ಇದ್ರ ಬಗ್ಗೆ ಮುಕ್ತವಾಗಿ ಮಾತನಾಡೋದಿಲ್ಲ. ವೈದ್ಯರು, ಸ್ನೇಹಿತರ ಬಳಿ ಇರಲಿ, ಸಂಗಾತಿ ಮುಂದೆಯೂ ಸಮಸ್ಯೆ ಹೇಳಿಕೊಳ್ಳಲು ನಾಚಿಕೊಳ್ಳುವ ಜನರು ಸಂಭೋಗ ಸುಖದಿಂದ ವಂಚಿತರಾಗ್ತಾರೆ.   

ಲೈಂಗಿಕ  ಜೀವನದಲ್ಲಿ ಸಂತೋಷವಿಲ್ಲ ಅಂದ್ರೆ ಅದು ಅಪೂರ್ಣವಾದಂತೆ. ಬರೀ ದೈಹಿಕ ಸುಖಕ್ಕೆ ಒಂದಾದ್ರೆ ಆ ಸಂಬಂಧ ಅನೇಕ ದಿನ ಉಳಿಯೋದಿಲ್ಲ. ಸಂಬಂಧ ಗಟ್ಟಿಯಾಗಿರಬೇಕೆಂದ್ರೆ ಲೈಂಗಿಕ ಜೀವನದಲ್ಲಿ ಮಾನಸಿಕ ಸಂತೋಷ ಕೂಡ ಮುಖ್ಯವಾಗುತ್ತದೆ. ಪತಿ – ಪತ್ನಿ ಇಬ್ಬರಿಗೂ ಸಂತೋಷ ಸಿಗಬೇಕು. ಆದ್ರೆ ಇಬ್ಬರಿಗೂ ದೈಹಿಕ ಸುಖ ಪ್ರಾಪ್ತಿಯಾಗಿಲ್ಲ ಎಂದಾಗ ಇಬ್ಬರ ಮಧ್ಯೆ ಅಂತರ ಹೆಚ್ಚಾಗುತ್ತದೆ. ಇದೇ ಅಂತರ ಇಬ್ಬರು ದೂರವಾಗಲು ಕಾರಣವಾಗುತ್ತದೆ.  

ದೈಹಿಕ ಸುಖ ಎಂಬ ವಿಷ್ಯ ಬಂದಾಗ ಇಲ್ಲಿ  ಮಹಿಳೆಯರ ಪರಾಕಾಷ್ಠೆ  (Orgasm)ಮುಖ್ಯವಾಗುತ್ತದೆ. ನಮ್ಮ ಸಮಾಜದಲ್ಲಿ ಜನರು ಲೈಂಗಿಕ (Sex) ಜೀವನದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡೋದಿಲ್ಲ. ಸೆಕ್ಸ್ ಯಾವಾಗ್ಲೂ ಮುಚ್ಚಿಡುವ ವಿಷ್ಯವಾಗಿಯೇ ಇದೆ. ಇನ್ನು ಪರಾಕಾಷ್ಠೆ ವಿಷ್ಯದಲ್ಲಿ ಮಹಿಳೆಯರು ಯಾವುದೇ ಮಾತನಾಡೋದಿಲ್ಲ. ಪರಾಕಾಷ್ಠೆ ನನಗೆ ಸರಿಯಾಗಿ ಸಿಗ್ತಿಲ್ಲ ಎಂಬುದನ್ನು ಹೇಳಲು ಅವರು ಮುಜುಗರಪಟ್ಟುಕೊಳ್ತಾರೆ. ಇದ್ರಿಂದ ಸಂಬಂಧ ಹಾಳಾದ್ರೆ ಎನ್ನುವ ಭಯಕೂಡ ಅವರಿಗೆ ಇರುತ್ತದೆ. ಹಾಗೆಯೇ ಪತಿ ಮರ್ಯಾದೆ ಇದ್ರಿಂದ ನಾಶವಾಗುತ್ತದೆ ಎಂದು ಅವರು ನಂಬುತ್ತಾರೆ. ಒಳಗೊಳಗೆ ಈ ಬಗ್ಗೆ ನೊಂದುಕೊಳ್ಳುವ ಅಥವಾ ನಿರಾಸೆಗೊಳಗಾಗುವ ಮಹಿಳೆಯರು ನಿಧಾನವಾಗಿ ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಇದು ಲೈಂಗಿಕ ಅಂತರ ಹೆಚ್ಚಿಸಲು ಕಾರಣವಾಗುತ್ತದೆ. 

Zodiac Sign: ವಯಸ್ಸಾದವರ ಕಾಳಜಿ ಮಾಡೋಕೆ ಇವರು ಎತ್ತಿದ ಕೈ: ಇವರ ಸಮೀಪವರ್ತಿಗಳೇ ಧನ್ಯರು

ಸೆಕ್ಸ್ ಅಂತರ ಕಡಿಮೆಯಾಗ್ಬೇಕು ಎಂದ್ರೆ ಕೆಲ ಟಿಪ್ಸ್ (Tips) ಫಾಲೋ ಮಾಡ್ಬೇಕು : 

ನಿಮ್ಮ ಅನುಭವವನ್ನು ಹಂಚಿಕೊಳ್ಳಿ : ಲೈಂಗಿಕತೆ ಎನ್ನುವುದು ಪತಿ – ಪತ್ನಿ ಇಬ್ಬರಿಗೂ ಮುಖ್ಯ. ನಮ್ಮಲ್ಲಿ ಏನು ಸಮಸ್ಯೆಯಿದೆ ಅಥವಾ ಸಂಗಾತಿಯಲ್ಲಿ ಏನು ಸಮಸ್ಯೆಯಿದೆ ಎಂಬುದನ್ನು ಇಬ್ಬರೂ ಹಂಚಿಕೊಳ್ಳಬೇಕು. ಮನಸ್ಸು ಬಿಚ್ಚಿ ಮಾತನಾಡಬೇಕು. ಮೊದಲ ಬಾರಿ ಇರಲಿ ಇಲ್ಲ ಅನೇಕ ಬಾರಿ ಸಂಭೋಗ ನಡೆಸಿರಲಿ, ನಿಮಗೆ ಪರಾಕಾಷ್ಠೆ ಸಿಗ್ತಿಲ್ಲವೆಂದ್ರೆ ಪತಿಗೆ ಈ ವಿಷ್ಯವನ್ನು ಹೇಳಬೇಕು. ಇಬ್ಬರೂ ಸೇರಿ ಇದಕ್ಕೆ ಪರಿಹಾರ ಕಂಡುಕೊಳ್ಳಿ. ಲೈಂಗಿಕ ಭಂಗಿಯ ಬಗ್ಗೆ ಚರ್ಚೆ ನಡೆಸಿ.

ನಿಮ್ಮ ಇಷ್ಟ, ನಷ್ಟ, ಕಷ್ಟದ ಬಗ್ಗೆ ಮಾತನಾಡಿ : ಪ್ರತಿ ಬಾರಿ ಒಂದೇ ಭಂಗಿ ಪರಾಕಾಷ್ಠೆ ನೀಡದೆ ಇರಬಹುದು. ಸಂಗಾತಿ ಬೆಡ್ ನಲ್ಲಿ ಅನುಸರಿಸುವ ವಿಧಾನ, ಮಹಿಳೆಗೆ ಕಷ್ಟವಾಗಬಹುದು. ಕೆಲವೊಮ್ಮೆ ನೋವು ನೀಡಬಹುದು. ಅದನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಯಾವ ಅಂಗವನ್ನು ಸ್ಪರ್ಶಿಸಿದ್ರೆ ಪರಾಕಾಷ್ಠೆ ತಲುಪೋದು ಸುಲಭ ಎಂಬುದನ್ನು ನೀವು ನಿಮ್ಮ ಸಂಗಾತಿಗೆ ಹೇಳಿದ್ರೆ ಇಬ್ಬರೂ ಸೆಕ್ಸ್ ಆನಂದಿಸಬಹುದು.

Hindu Religion : ಪತಿಯ ಯಾವ ಭಾಗದಲ್ಲಿ ಪತ್ನಿ ಮಲಗ್ಬೇಕು ಗೊತ್ತಾ?

ಪರಾಕಾಷ್ಠೆ ಬಗ್ಗೆ ಚರ್ಚಿಸಿ : ಪರಾಕಾಷ್ಠೆ ಮಹಿಳೆಯರ ಸಂತೋಷ, ಲೈಂಗಿಕ ತೃಪ್ತಿ ಮತ್ತು ಸಾಮಾನ್ಯ ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ. ಬಹುತೇಕ ಮಹಿಳೆಯರು ಸೆಕ್ಸ್ ಗಿಂತ ಹಸ್ತಮೈಥುನದಲ್ಲಿ ಹೆಚ್ಚು ಪರಾಕಾಷ್ಠೆ ಪಡೆಯುತ್ತಾರಂತೆ. ಹೀಗಾಗಬಾರದು ಅಂದ್ರೆ ಪರಾಕಾಷ್ಠೆ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಅನೇಕ ಪುರುಷರಿಗೆ ಸಂಗಾತಿ ಪರಾಕಾಷ್ಠೆ ಬಗ್ಗೆ ಜ್ಞಾನವೇ ಇರೋದಿಲ್ಲ. 

ಆತ್ಮ ತೃಪ್ತಿ ಮುಖ್ಯ : ಲೈಂಗಿಕತೆಯಲ್ಲಿ ಇಬ್ಬರ ಸಂತೋಷವೂ ಮುಖ್ಯ. ಆದ್ರೆ ಅಂಕಿಅಂಶ ಇದ್ರ ವಿರುದ್ಧವಾಗಿದೆ. ಶೇಕಡಾ 39 ರಷ್ಟು ಮಹಿಳೆಯರು ಲೈಂಗಿಕ ಸಮಯದಲ್ಲಿ ನಿಯಮಿತವಾಗಿ ಪರಾಕಾಷ್ಠೆ ಹೊಂದುತ್ತಾರೆ. ಆದರೆ ಪುರುಷರ ಸಂಖ್ಯೆ ಶೇಕಡಾ 91 ರಷ್ಟಿದೆ. ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಮಹಿಳೆಯರು ಕಡಿಮೆ ತೃಪ್ತಿಯನ್ನು ಹೊಂದುವುದು ಕಂಡು ಬಂದಿದೆ.  

ಪರಸ್ಪರರನ್ನು ಬೆಂಬಲಿಸಿ : ದಂಪತಿ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಒಬ್ಬರ ಸಮಸ್ಯೆಗೆ ಇನ್ನೊಬ್ಬರು ಸ್ಪಂದಿಸಬೇಕು. ವೈಯಕ್ತಿಕ ಸಮಸ್ಯೆ ಲೈಂಗಿಕ ಸಮಯದಲ್ಲಿ ಬರದಂತೆ ನೋಡಿಕೊಳ್ಳಿ.  ಪ್ರತ್ಯೇಕವಾಗಿ ಕುಳಿತು ಬಗೆಹರಿಸಿಕೊಳ್ಳಿ. ಸಂಬಂಧದಲ್ಲಿ ಬರುವ ಅಂತರವನ್ನು ಕುಳಿತು ಬಗೆಹರಿಸಿದ್ರೆ ಅಂತರ ಕಡಿಮೆಯಾಗಿ ಸಂತೋಷ ಪ್ರಾಪ್ತಿಯಾಗಲು ಶುರುವಾಗುತ್ತದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌