ಇಂದು Rose Day, ಹೂ ಕೊಡುವ ಮೂಲಕ ವ್ಯಾಲೆಂಟೈನ್ಸ್ ಡೇ ಆಚರಣೆ ಶುರು

Suvarna News   | Asianet News
Published : Feb 07, 2022, 03:07 PM IST
ಇಂದು Rose Day, ಹೂ ಕೊಡುವ ಮೂಲಕ ವ್ಯಾಲೆಂಟೈನ್ಸ್ ಡೇ ಆಚರಣೆ ಶುರು

ಸಾರಾಂಶ

ಫೆ.14ರ ವ್ಯಾಲೆಂಟೀನ್ ಡೇಗೆ ಕೌಂಟ್‌ಡೌನ್‌ ಶುರುವಾಗಿದೆ. ಈ ಇಡೀ ವಾರ ಪ್ರೇಮಿಗಳ ವಾರ. ವ್ಯಾಲೆಂಟೀನ್‌ ವೀಕ್‌. ತನ್ನ ಮನದುಂಬಿದವರಿಗೆ ಪ್ರೇಮದ ಕೆಂಗುಲಾಬಿ ನೋಡುವ ಈ ದಿನ ರೋಸ್‌ ಡೇ. ಪ್ರೇಮಿಗಳೆಲ್ಲ ಸಂಭ್ರಮಿಸಲೇ ಬೇಕಾದ ದಿನದ ಬಗ್ಗೆ ಒಂದಿಷ್ಟು ವಿವರ.  

ಫೆಬ್ರವರಿಯನ್ನು 'ದಿ ಮಂತ್‌ ಆಫ್‌ ಲವ್' (The month of love) ಅಂತ ಕರೀತಾರೆ. ಪ್ರತಿಯೊಬ್ಬ ಪ್ರೇಮಿ, ಪ್ರೇಮಿಯಾಗಲು ಹೊರಟವರು ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಪ್ರೀತಿಯಲ್ಲಿ ಬಿದ್ದವರಿಗೆ ಇದು ಪ್ರೇಮದ ಸಂಭ್ರಮಾಚರಣೆ. ಹಲವರಿಗೆ ಪ್ರೇಮದ ಆರಂಭ. ಪ್ರೇಮದ ಆರಂಭಕ್ಕೆ ಮುನ್ನುಡಿಯ ಹಾಗೆ ಬರೋದು ಈ ರೋಸ್‌ ಡೇ (Rose day) . ಇದು ವ್ಯಾಲೆಂಟೀನ್ ಡೇಗೂ (Valentine Day) ಒಂದು ವಾರ ಮೊದಲು ಬರುವ ದಿನ. ಅಂದರೆ ವ್ಯಾಲೆಂಟೀನ್‌ ಡೇ ಸೆಲೆಬ್ರೇಶನ್‌ನ ಮೊದಲ ದಿನವಿದು. ಗುಲಾಬಿ ಅನ್ನೋದು ಪ್ರೇಮಿಗಳ ಪಾಲಿಗೆ ಬರೀ ಒಂದು ಹೂವಲ್ಲ. ಬದಲಿಗೆ ಅದು ಅವರ ಪ್ರೇಮದ ಸಿಂಬಲ್‌. ಪ್ರೇಮದ ಹಿಂದಿನ ಭಾವನೆಗಳ ಸಂಕೇತ. ಅದೇ ಹಳದಿ ಬಣ್ಣದ ಗುಲಾಬಿ ನೀಡಿದರೆ ಅದು ಗೆಳೆತನದ, ಸ್ನೇಹದ ಸಂಕೇತ. 

ರೋಸ್‌ ಡೇ ಅಂದರೆ ಅದು ಬರೀ ಗುಲಾಬಿ ಹೂವನ್ನು ನೀಡುವ ದಿನವಷ್ಟೇ ಅಲ್ಲ. ಇದನ್ನು ಲವ್‌, ಲೈಫ್‌, ಹುಮ್ಮಸ್ಸು ಮತ್ತು ತೀವ್ರ ವ್ಯಾಮೋಹದ ದಿನವಾಗಿ ಆಚರಣೆ ಮಾಡುತ್ತಾರೆ. ಗುಲಾಬಿ ಹೂವಿನ ಜೊತೆಗೆ ಸುಂದರವಾದ ಉಡುಗೊರೆಯನ್ನು ಪ್ರೇಮಿಗಳು ಅಥವಾ ಭಾವೀ ಪ್ರೇಮಿಗಳು ಪರಸ್ಪರ ನೀಡೋದು ಈ ದಿನದ ಖುಷಿ ಹೆಚ್ಚಿಸುತ್ತೆ. 

Valentine's day: ಪ್ರೇಮಿ ಇಲ್ಲವೇ? ಗೆಳೆಯರ ಜೊತೆಗೇ ಆಚರಿಸಿ!

ಪ್ರೀತಿ ಅನ್ನೋದು ಭೂಮಿ ಹುಟ್ಟಿದಾಗಿನಿಂದ ಇದೆ ಅಂತಾರೆ. ಜೀವ ಜೀವಗಳನ್ನು ಹತ್ತಿರಕ್ಕೆ ತರುವ, ಪ್ರೇಮದ ಮೂಲಕ ಎರಡು ಜೀವಗಳನ್ನು ಒಂದಾಗಿ ಬೆಸೆಯುವ, ಬಾಳ ಪಯಣವನ್ನು ಕಲರ್‌ಫುಲ್‌ ಆಗಿಸುವ ಈ ಪ್ರೀತಿ ಇಲ್ಲದಿದ್ದರೆ ಬದುಕೇ ಬರಡು ಅನ್ನುತ್ತಾರೆ. ಪ್ರೀತಿಯ ಸಾಗರದಲ್ಲಿ ಬಿದ್ದ ಮೇಲೆ ಕೈಕಾಲು ಬಡಿಯಲೇ ಬೇಕು. ಇಲ್ಲವಾದರೆ ಜೀವಕ್ಕೇ ಕುತ್ತು. ಪ್ರೇಮ ಅಂತ ಆರಂಭವಾದಾಗ ನಿರೀಕ್ಷೆ, ಕನಸುಗಳೆಲ್ಲ ಥೌಸಂಡ್‌ ಕಿಮೀಗೂ ವೇಗದಲ್ಲಿ ಬೆಳೆಯುತ್ತಾ ಹೋಗುತ್ತವೆ. ಅವೆಲ್ಲ ನಿಯಂತ್ರಣಕ್ಕೆ ಬಾರದ್ದು. ಕೂತಲ್ಲಿ, ನಿಂತಲ್ಲಿ ಪ್ರೇಮಿಯದೇ ನೆನಪು, ನಿಟ್ಟುಸಿರು. ಅವರ ಪ್ರತಿ ಸಣ್ಣ ನಡೆ ನುಡಿಯೂ ಬಲು ಸುಂದರವಾಗಿ ಕಾಣುತ್ತದೆ. ನೋಟ, ಕಣ್ಣೋಟ, ಸೌಂದರ್ಯ, ಸ್ವಭಾವ ಎಲ್ಲವನ್ನೂ ಒಟ್ಟಾಗಿ ಪ್ರೀತಿಸಲು ಶುರು ಮಾಡುತ್ತಾರೆ. ಹೀಗೆಲ್ಲ ಆಗುವಾಗ ಆಗಾಗ ಸಿಟ್ಟು ಬರೋದು, ಜಗಳ ಆಡೋದು, ದೂರ ಆಗೋದು ಇಂಥದ್ದೆಲ್ಲ ಇದ್ದಿದ್ದೇ. ಆದರೆ ಇಂಥಾ ಸಣ್ಣಪುಟ್ಟ ಬ್ರೇಕೇಜ್‌ಗಳನ್ನು ಸುಂದರವಾಗಿ ಮರುಜೋಡಿಸೋದು ಒಂದು ಕಡುಗೆಂಪು ಬಣ್ಣದ ಗುಲಾಬಿ ಹೂವು. ಬೆಳಗ್ಗೆ ಅರಳಿ, ಸಂಜೆ ತನ್ನ ಜರ್ನಿ ಮುಗಿಸುವ ಗುಲಾಬಿ ಅಷ್ಟರಲ್ಲೇ ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿ ಹೋಗೋದು ಗ್ರೇಟ್‌ ಅಲ್ವಾ.

Monthly Love Horoscope: ಈ ಪ್ರೀತಿಯ ತಿಂಗಳು ಯಾರಿಗುಂಟು ಯಾರಿಗಿಲ್ಲ ಪ್ರೇಮ?

ಅಷ್ಟಕ್ಕೂ ಪ್ರೀತಿಯ ಸಂಕೇತವಾಗಿ ಈ ಗುಲಾಬಿ ಹೂವನ್ನೇ ಯಾಕಿಡ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಅದಕ್ಕೆ ಒಬ್ಬೊಬ್ರು ಒಂದೊಂಥರ ಉತ್ತರ ಕೊಡ್ತಾರೆ. ಆದರೆ ಎಂಥಾ ದಡ್ಡನಿಗೂ ಅರ್ಥವಾಗೋ ಸಂಗತಿ ಅಂದರೆ ಗುಲಾಬಿಯಲ್ಲಿರುವ ಮಾಧುರ್ಯ, ಸೌಂದರ್ಯ, ರಸಿಕತೆ, ಹದವಾದ ಕಂಪು ಪ್ರೀತಿಯಷ್ಟೇ ನವಿರು ಅನ್ನೋದು. ಗುಲಾಬಿಯಲ್ಲಿ ಅದೆಷ್ಟು ಪಕಳೆಗಳಿರುತ್ತವಲ್ಲಾ. ಹಾಗೇ ಪ್ರೀತಿಯಲ್ಲೂ ಹಲವು ಲೇಯರ್‌ಗಳು. ಅವೆಲ್ಲ ಸುಂದರವಾಗಿ ಜೋಡಣೆಯಾಗಿ ಪ್ರೀತಿ ಅನ್ನುವ ಚಂದದ ಸಂಬಂಧವಾಗಿ ರೂಪುಗೊಳ್ಳುವ ಬಗೆಯೇ ರೋಮಾಂಚಕ. 

ಬೋಳುತಲೆಯ ಪುರುಷರಲ್ಲಿ ಹೆಚ್ಚು ಕಾಮಾಸಕ್ತಿ ಇರುತ್ತಾ?

ರೋಸ್‌ ಡೇ ಅನ್ನೋದು ಸುಮ್‌ ಸುಮ್ನೇ ಬಂದಿದ್ದಲ್ಲ. ಅದಕ್ಕೊಂದು ಹಿಸ್ಟರಿ ಇದೆ. ಜಗದೇಕ ಸುಂದರಿ ಕ್ಲಿಯೋಪಾತ್ರ ಹಾಗೂ ಆಂಟನಿಯ ಪ್ರೇಮದ ಸಂಕೇತವಾಗಿ ಈ ರೋಸ್‌ ಡೇ ಅಸ್ತಿತ್ವಕ್ಕೆ ಬಂದು ಅನ್ನುತ್ತಾರೆ. ರೋಮನ್‌ ಕತೆಗಳ ಪ್ರಕಾರ ಈ ಜೋಡಿ ಈ ದಿನ ಗುಲಾಬಿ ಹೂಗಳ ನಡುವೆ ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಕಳೆದಿದ್ದಂತೆ. ಗುಲಾಬಿಯ ನಸುಗಂಪು ಆವರಿಸಿದ ಆ ವಾತಾವರಣವಿಡೀ ಪ್ರೇಮದ ಗಾಳಿಯಿಂದ ತುಂಬಿತ್ತಂತೆ. ಇನ್ನೊಂದು ಕತೆ ಅಂದರೆ, ರೋಮನ್ ಪ್ರೇಮ ದೇವತೆ ಅಫ್ರೋದಿತೆ ತನ್ನ ಪ್ರೇಮಿ ಅಡೋನಿಸ್‌ನ ಮುಂದೆ ಬಂದಾಗ, ಆತನನ್ನು ಕಾಡುಹಂದಿಯೊಂದು ತಿವಿದು ಗಾಯಗೊಳಿಸುತ್ತದೆ. ಆತನ ರಕ್ತ ಹಾಗೂ ಅಫ್ರೋದಿತೆಯ ಕಣ್ಣೀರು ಬೆರೆತು ಅಲ್ಲಿ ಕೆಂಪು ಗುಲಾಬಿ ಹೂವು ಸೃಷ್ಟಿಯಾಯಿತು ಎಂದು ಕತೆ ಹೇಳುತ್ತದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಕ್ಯಾಂಡಿನೇವಿಯನ್ ವಿಧಾನ: ಸಂಗಾತಿಗಳು ಒಟ್ಟಿಗೆ ಉತ್ತಮವಾಗಿ ನಿದ್ರಿಸಲು ಸೂಕ್ತ!
ಚಳಿಗಾಲದಲ್ಲಿ ಹೆಂಡ್ತಿ ಕಾಲು ಕೋಲ್ಡ್​ ಆಗಿದ್ರೆ ಗಂಡನ ಕಾಲು ಬೆಚ್ಚಗಿರೋದು ಯಾಕೆ? ಕಾರಣ ಇಲ್ಲಿದೆ