* ಈ ದಂಪತಿಯ ಆನಂದಕ್ಕೆ ಪಾರವೇ ಇಲ್ಲ
* 59ರ ಪತಿ 55 ರ ಪತ್ನಿಗೆ ಪೋಷಕರಾದ ಸಂಭ್ರಮ
* ಬಂಜೆತನ ಚಿಕಿತ್ಸೆಗೆ ಹೆಸರುವಾಸಿಯಾದ ಸಬೈನ್ ಆಸ್ಪತ್ರೆ
* ದೊಡ್ಡ ಸವಾಲನ್ನು ಗೆಲ್ಲಿಸಿದ ವೈದ್ಯರ ಪ್ರಯತ್ನ
ಕೊಚ್ಚಿ (ಆ. 06) ಸಿಸಿ ಮತ್ತು ಜಾರ್ಜ್ ಆಂಟನಿಗೆ ಇದು ಜೀವನದ ಅತ್ಯಂತ ಸಂತಸದ ಘಳಿಗೆ. ದಶಕಗಳನ್ನು ಕಾದು ಕೊನೆಗೂ ತಂದೆ-ತಾಯಿ ಆಗಿದ್ದಾರೆ. ಇದೀಗ ಒಂದೇ ಸಾರಿಗೆ ಮೂವರು ಮಕ್ಕಳ ಪೋಷಕರಾಗಿದ್ದಾರೆ. ಜುಲೈ 22 ರಂದು ಮೂವತ್ತುಪುಜಾದ ಸಬೈನ್ ಆಸ್ಪತ್ರೆಯಲ್ಲಿ ತ್ರಿವಳಿಗಳು ಜನಿಸಿವೆ. ದಂಪತಿಯ ಪ್ರಾರ್ಥನೆ ಫಲಿಸಿದೆ.
ಕಳೆದ 35 ವರ್ಷಗಳಿಂದ ನಾವು ಮಗುವಿಗಾಗಿ ಪ್ರಾರ್ಥಿಸುತ್ತಲೇ ಬಂದಿದ್ದೇವು. ದೇವರು ಈಗ ನಮಗೆ ಮೂರು ಮಕ್ಕಳನ್ನು ಆಶೀರ್ವದಿಸಿದ್ದಾನೆ. ತಾಯಿಯಾಗುವುದು ಮಹಿಳೆಯ ಸಂಪೂರ್ಣತೆಯನ್ನು ಗುರುತಿಸುತ್ತದೆ ಎಂದು ನಂಬಿರುವ ಸಮಾಜದಲ್ಲಿ ಗರ್ಭಧರಿಸಲು ಸಾಧ್ಯವಾಗದಿದ್ದಾಗ ಎದುರಾಗುವ ನೋವು ಮತ್ತು ಸಂಕಟ ಯಾರಿಗೂ ಬೇಡ ಎಂದು ತಾಯಿ ಯಾತನೆಯ ದಿನಗಳನ್ನು ಬಿಚ್ಚಿಡುತ್ತಾರೆ.
ಗುಪ್ತಾಂಗದ ಕೂದಲು ಅವನಿಗೆ ಇಷ್ಟವಿಲ್ಲ ಏನು ಮಾಡಲಿ?
ಮಹಿಳೆ ಭಾವನಾತ್ಮಕವಾಗಿ ಕುಗ್ಗಿಹೋಗುವ ಸಾಧ್ಯತೆ ಇರುತ್ತದೆ. ಇದೀಗ ಜೀವನದ ಅತ್ಯಂತ ಸಂತಸದ ಸಮಯಕ್ಕೆ ಬಂದಿದ್ದೇವೆ ಎಂದು ದಂಪತಿ ಹೇಳುತ್ತಾರೆ.
ಸಿಸಿಯ ಪತಿ ಜಾರ್ಜ್ ಆಂಟನಿ(59) ಮಗುವಿಗಾಗಿ ನಡೆಸಿದ ಹೋರಾಟಗಳನ್ನು ಹೇಳುತ್ತಾ ಹೋಗುತ್ತಾರೆ. ಕೇರಳದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಚಿಕಿತ್ಸೆ ನಡೆಸಿದ್ದೆವು. 34 ವರ್ಷಗಳ ಹೋರಾಟ ಈಗ ಫಲ ನೀಡಿದೆ ಎನ್ನುತ್ತಾರೆ.
ಸೈಸಿ ಮತ್ತು ಜಾರ್ಜ್ 1987 ರಲ್ಲಿ ವಿವಾಹವಾದರು. ಅವರು ಗಲ್ಫ್‌ನಲ್ಲಿ ಕೆಲಸ ಮಾಡಿದ್ದರಿಂದ, 18 ವರ್ಷಗಳಿಗೂ ಅಲ್ಲಿಯೇ ನೆಲೆಸಿದ್ದರು. ನಂತರ ಕೇರಳಕ್ಕೆ ಮರಳಿ ಬಂದು ತಮ್ಮದೇ ಸ್ವಂತ ಉದ್ಯಮವನ್ನು ಆರಂಭಿಸಿದರು.
ಮನೆಯಿಂದ ಹೊರಹೋದಾಗ ಮೂಡ್ ಬರುತ್ತದೆ!
ಮದುವೆಯಾಗಿ ಎರಡು ವರ್ಷಗಳ ನಂತರ ಮಗು ಪಡೆದುಕೊಳ್ಳುವ ಆಸೆಯಿಂದ ಚಿಕಿತ್ಸೆ ಪಡೆದುಕೊಳ್ಳಲು ಮುಂದಾದರು. ಎಲ್ಲಿಯೂ ಫಲಿತಾಂಶ ಸಕಾರಾತ್ಮಕವಾಗಿ ಇರಲಿಲ್ಲ. ಎಲ್ಲವೂ ವಿಫಲವಾದ ನಂತರ, ಇಬ್ಬರೂ ಯಾವುದೇ ಹೆಚ್ಚಿನ ಚಿಕಿತ್ಸೆಗೆ ಹೋಗದಿರಲು ನಿರ್ಧರಿಸಿದರು.
ಆದರೆ ಕಳೆದ ಜೂನ್ ನಲ್ಲಿ ಸಿಸಿ ನಿರಂತರ ರಕ್ತಸ್ರಾವ ಅನುಭವಿಸತೊಡಗಿದರು. ಚಿಕಿತ್ಸೆಗೆ ಮುಂದಾದಾಗ ಕೊಚ್ಚಿಯ ಖಾಸಗಿ ಆಸ್ಪತ್ರೆ ವೈದ್ಯರು ಆಕೆಯ ಗರ್ಭಕೋಶ ತೆಗೆಯಬೇಕಾಗುತ್ತದೆ ಎಂಬ ಸಲಹೆ ನೀಡಿದರು. ಆದರೆ ನಂತರ ಸಿಸಿ ಸಬೈನ್ ಆಸ್ಪತ್ರೆಗೆ ತೆರಳಿ ಬಂಜೆತನ ನಿವಾರಣೆಗೆ ಮುಂದಾದರು.
ಬಂಜೆತನ ಚಿಕಿತ್ಸೆಗೆ ಹೆಸರುವಾಸಿಯಾದ ಸಬೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಆರಂಭಿಸಿದರು. ಹಿಂದೆ ಚಿಕಿತ್ಸೆ ಪಡೆದುಕೊಂಡ ಎಲ್ಲ ಆಸ್ಪತ್ರೆಗಳಿಗಿಂತ ಇಲ್ಲಿ ಭಿನ್ನವಾಗಿತ್ತು.
ಚಿಕಿತ್ಸೆ ಪಡೆಯಲು ಆರಂಭಿಸಿದ ನಾಲ್ಕು ತಿಂಗಳ ನಂತರ ಪಾಸಿಟಿವ್ ಸುದ್ದಿ ಅವರನ್ನು ತಲುಪಿತು. ನಿಮ್ಮ ಹೊಟ್ಟೆಯಲ್ಲಿ ಮೂವರು ಮಕ್ಕಳಿವೆ ಎಂಬ ಸುದ್ದಿ ಸಿಕ್ಕಿತ್ತು. ನಮಗೆ ಇನ್ನು ಮುಂದೆ ಪ್ರವಾಸ ಮಾಡುವುದು ಬೇಡ, ಆರೈಕೆ ಮಾಡಿಕೊಳ್ಳಿ ಎಂಬ ಸಲಹೆ ಸಿಕ್ಕಿತು
ಕಳೆದ ತಿಂಗಳು, ಸಿಸಿ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆರೋಗ್ಯವಾಗಿರುವ ಮಕ್ಕಳೊಂದಿಗೆ ಡಿಸ್ಚಾರ್ಜ್ ಆದರು. 55 ನೇ ವಯಸ್ಸಿನಲ್ಲಿ ತಾಯಿಯಾಗುವುದು ದೇವರ ಕೊಡುಗೆ. ಮಾತೃತ್ವವನ್ನು ಪಡೆಯಲು ಪ್ರಯತ್ನಿಸುವವರಿಗೆ, ಭರವಸೆಯನ್ನು ಬಿಡಬೇಡಿ ಮತ್ತು ಚಿಕಿತ್ಸೆಯನ್ನು ನಿಲ್ಲಿಸಬೇಡಿ ಎಂದು ಸಿಸಿ ಹೇಳುತ್ತಾರೆ.
2015 ರಲ್ಲಿ, ತ್ರಿಪುನಿಥುರಾ ಮೂಲದ ಸುಜಾತ ಸಸೀಂದರನ್ ತಮ್ಮ 51ನೇ ವಯಸ್ಸಿನಲ್ಲಿ ಇದೇ ಆಸ್ಪತ್ರೆಯಲ್ಲಿ ತ್ರಿವಳಿಗೆ ಜನ್ಮ ನೀಡಿದ್ದು ಇವರು ಆ ದಾಖಲೆಯನ್ನು ಮುರಿದಿದ್ದಾರೆ.
ಈ ದಂಪತಿಯ ಕನಸನ್ನು ನನಸು ಮಾಡುವುದು ನಮಗೆ ದೊಡ್ಡದೊಂದು ಸವಾಲಾಗಿತ್ತು. ವಯಸ್ಸು ಒಂದು ಸಂಖ್ಯೆ ಅಷ್ಟೇ ಎಂದು ಚಿಕಿತ್ಸೆ ನೀಡಿದ್ದೇವು. 62 ವರ್ಷದ ಮಹಿಳೆ ಜನ್ಮ ನೀಡಿದ್ದ ದಾಖಲೆಯೂ ಇದೆ. ಯಾವುದೇ ಕೃತಕ ಮಾದರಿ ಅಳವಡಿಕೆ ಮಾಡದೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಿದರೆ ಎಲ್ಲವೂ ಸಾಧ್ಯ ಎಂದು ಬಂಜೆತನ ತಜ್ಞೆ ಮತ್ತು ಸಬೈನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷೆ ಸಬಿನೆ ಶಿವದಾಸನ್ ಹೇಳುತ್ತಾರೆ.