
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ಕರ್ಣ ಮತ್ತು ನಿಧಿ ಹನಿಮೂನ್ನಲ್ಲಿದ್ದರೆ, ಇತ್ತ ಬಹು ದಿನಗಳ ಬಳಿಕ ನಿತ್ಯಾ ಪ್ರವೇಶವಾಗಿದೆ. ಸೀಮಂತದ ಸಂಭ್ರಮದಲ್ಲಿದ್ದರೂ ನಿತ್ಯಾಗೆ ವೈದ್ಯರು ಹೇಳಿದ ಮಾತಿನಿಂದ ಸಾವು ಕಣ್ಮುಂದೆ ಬಂದಂತಿದೆ. ಇಂಥ ಪ್ರಕರಣಗಳಲ್ಲಿ ಮಗು ಅಥವಾ ಅಮ್ಮ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಉಳಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಅತ್ತ ನಿತ್ಯಾಳಿಗೆ ನಿಧಿ ಕಾಲ್ ಮಾಡಿದಾಗ, ನಿತ್ಯಾ ಏನೂ ವಿಷಯವನ್ನು ಹೇಳುವುದಿಲ್ಲ. ಆದರೆ ವೈದ್ಯನಾಗಿರುವ ಕರ್ಣನಿಗೆ ನಿತ್ಯಾಳ ಮುಖದಲ್ಲಿನ ನೋವು ಕಂಡು ಮತ್ತೆ ಒಬ್ಬನೇವಾಪಸ್ ಹೋಗಿ ಕಾಲ್ ಮಾಡುತ್ತಾನೆ. ಕರ್ಣನ ಕಾಲ್ ಬಂದಿದ್ದೇ ಖುಷಿಯಿಂದ ಚಿಮ್ಮುತ್ತಾಳೆ ನಿತ್ಯಾ. ನಿನ್ನ ನಗುವಿಗೆ ಇವರೇ ಕಾರಣ ಎಂದು ಮಗುವಿನ ಜೊತೆಮಾತನಾಡಿ, ಕರ್ಣನ ಕಾಲ್ ರಿಸೀವ್ ಮಾಡುತ್ತಾಳೆ.
ಕರ್ಣ ನಿತ್ಯಾಳ ಸಮಸ್ಯೆ ವಿಚಾರಿಸಿಕೊಂಡಾಗ, ನಿತ್ಯಾ ಡೆಲವರಿ ಸಮಯದಲ್ಲಿ, ನನಗೆ ಏನಾದ್ರೂ ಆದರೆ ಮಗುವನ್ನು ನೀವು ಮತ್ತು ನಿಧಿ ನೋಡಿಕೊಳ್ತೀರಲ್ವಾ ಎಂದಾಗ ಗದರುವ ಕರ್ಣ, ನಿಮಗೆ ಏನೂ ಆಗುವುದಿಲ್ಲ. ಮಗುವಿಗೆ ಅಪ್ಪನ ಚಿಂತೆ ಬಿಡಿ. ಮೊದಲೇ ಹೇಳಿದ್ದೇನೆ. ಆ ಮಗುವಿಗೆ ನಾನೇ ಅಪ್ಪನ ಪ್ರೀತಿ ಕೊಡುತ್ತೇನೆ. ನಿಮಗೆ ಏನೂ ಆಗುವುದಿಲ್ಲ. ಏನೂ ಆಗಲು ಬಿಡುವುದಿಲ್ಲ ಎಂದಾಗ, ಹೊಟ್ಟೆಯಲ್ಲಿ ಇರುವ ಮಗು ಒದೆಯುತ್ತದೆ. ಆಗ ನಿತ್ಯಾಳಿಗೆ ಖುಷಿಯಾಗುತ್ತದೆ.
ಅಷ್ಟಕ್ಕೂ ನಿತ್ಯಾ, ಈ ಮೊದಲು ಕರ್ಣನನ್ನು ಇಷ್ಟಪಟ್ಟಾಕೆ. ನಿಧಿ ಮತ್ತು ಕರ್ಣ ಲವ್ ಮಾಡುವ ವಿಷ್ಯ ತಿಳಿಯದೇ ಇದ್ದಾಗ, ಕರ್ಣನನ್ನೇ ಮದುವೆಯಾಗಲು ಹೊರಟವಳು. ಕೊನೆಗೆ ತಂಗಿಯ ವಿಷ್ಯ ಗೊತ್ತಾಗಿ ತ್ಯಾಗ ಮಾಡಿದವಳು. ಇನ್ನೂ ನಿತ್ಯಾಗೆ ಕರ್ಣನ ಮೇಲೆ ಪ್ರೀತಿ ಇದ್ದೇ ಇದೆ. ಅದರಲ್ಲಿಯೂ ಮಗುವಿಗೆ ತಾನೇ ಅಪ್ಪನ ಪ್ರೀತಿ ಕೊಡುತ್ತೇನೆ ಎಂದು ಹೇಳಿದ್ದರಿಂದ ಮತ್ತೂ ಆತನ ಮೇಲೆ ಪ್ರೀತಿ ಮರೆಯಾಗುತ್ತಿಲ್ಲ. ಕರ್ಣ ತನ್ನ ತಂಗಿಯ ಗಂಡ ಎಂದು ತಿಳಿದರೂ, ಅವರಿಬ್ಬರೂ ಚೆನ್ನಾಗಿ ಇರಲಿ ಎಂದು ಬಯಸಿದರೂ, ಒಳ ಮನಸ್ಸು ಕರ್ಣನಿಗಾಗಿ ಹಾತೊರೆಯುತ್ತಿದೆ. ತನಗಿಂತ ಮಗುವಿನ ಭವಿಷ್ಯದ ಬಗ್ಗೆ ಯೋಚಿಸೋ ಅವಳಿಗೆ ಸಹಜವಾಗಿ ಕರ್ಣನಂಥ ಒಳ್ಳೆ ಮನಸ್ಸಿನವ ಮೇಲೆ ಮನಸ್ಸು ವಾಲುವುದು ಸಹಜವೇ.
ಇದೀಗ ನಿಜಕ್ಕೂ ಅವಳಿಗೆ ಕರ್ಣನ ಮೇಲೆ ಮತ್ತೆ ಲವ್ ಆಗುತ್ತಾ? ಮಗುವನ್ನು ಉಳಿಸಿಕೊಳ್ಳಲು ಕರ್ಣ ಹೇಗೆ ಸಹಾಯಮಾಡುತ್ತಾನೆ? ಒಂದು ವೇಳೆ ಕರ್ಣನ ಮೇಲಿನ ಪ್ರೀತಿ ಬೇರೆ ರೂಪಕ್ಕೆ ತಿರುಗಿ ಅದು ತಂಗಿಯನ್ನೇ ಬಲಿಪಡೆಯುತ್ತಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.