ನಿಮ್ಮ ಮುಖ ಹೀಗ್ಯಾಕೆ? ಜಾಹೀರಾತು ನೋಡಿ ಮಗ ಕೇಳಿದ ಪ್ರಶ್ನೆಗೆ Kareena Kapoor​ ಕಕ್ಕಾಬಿಕ್ಕಿ: ನಟಿ ಓಪನ್​ ಮಾತು

Published : Sep 17, 2026, 06:43 PM IST
Kareena Kapoor's Family

ಸಾರಾಂಶ

ವಿಮಾನ ನಿಲ್ದಾಣದಲ್ಲಿರುವ ತಮ್ಮ ಬೃಹತ್ ಜಾಹೀರಾತುಗಳನ್ನು ನೋಡಿ ಮಗ ತೈಮೂರ್ ಕೇಳಿದ ಪ್ರಶ್ನೆಗೆ ನಟಿ ಕರೀನಾ ಕಪೂರ್ ಮುಜುಗರಕ್ಕೊಳಗಾಗಿದ್ದಾರೆ. ಜಾಹೀರಾತಿನಲ್ಲಿ ಮುಖ ಗಂಟಿಕ್ಕಿರುವುದು ಏಕೆ ಎಂಬ ಮಗನ ಪ್ರಶ್ನೆಗೆ ಉತ್ತರಿಸಲಾಗದೆ ಅವರು ಪರದಾಡಿದ್ದಾರೆ. ಅಲ್ಲದೆ, ಮಕ್ಕಳ ಮೊಬೈಲ್ ಬಳಕೆಯ ಬಗ್ಗೆ ತಾವು ಕಟ್ಟುನಿಟ್ಟಾಗಿರುವುದಾಗಿ ಅವರು ತಿಳಿಸಿದ್ದಾರೆ.

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareena Kapoor Khan) ಅವರು ತಮ್ಮ ಪುತ್ರರಾದ ತೈಮೂರ್ ಮತ್ತು ಜೆಹ್ ಬಗ್ಗೆ ಸ್ವಾರಸ್ಯಕರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಮ್ಮ ಒಂದು ಜಾಹೀರಾತಿನ ಬಗ್ಗೆ ಹಿರಿಯ ಮಗ ತೈಮೂರ್ ಪ್ರಶ್ನಿಸಿದ್ದನ್ನು ನೋಡಿ ಬೇಸ್ತು ಬಿದ್ದ ನಟಿ ಕರೀನಾ ಕಪೂರ್ ಅವರು, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ಆಗದೆ ತಾವು ಪರದಾಡಿದ ಪರಿಸ್ಥಿತಿಯ ಬಗ್ಗೆ ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ರಸ್ತೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಇರುವ ತಮ್ಮ ಬೃಹತ್ ಜಾಹೀರಾತುಗಳನ್ನು ಮಕ್ಕಳು ನೋಡಿದಾಗ ತಮಗೆ ಸಂಕಟ ಮತ್ತು ಮುಜುಗರವಾಗುತ್ತದೆ ಎಂದು ನಟಿ ಹೇಳಿದ್ದಾರೆ.

ತುಂಬಾ ಮುಜುಗರವಾಗುತ್ತದೆ

ಸ್ಕ್ರೀನ್‌ಗೆ ನೀಡಿದ ಸಂದರ್ಶನದಲ್ಲಿ, ತೈಮೂರ್ ಮತ್ತು ಜೆಹ್ ತಮ್ಮ ಜಾಹೀರಾತುಗಳನ್ನು ಎಲ್ಲೆಡೆ ನೋಡುತ್ತಿರುವುದನ್ನು ನೋಡಿ ನನಗೆ ತುಂಬಾ ವಿಚಿತ್ರ ಹಾಗೂ ಮುಜುಗರವಾಗುತ್ತದೆ. ಈಗ ಮಕ್ಕಳು ನಿರಂತರವಾಗಿ ಜಾಹೀರಾತುಗಳನ್ನು ನೋಡುತ್ತಿದ್ದಾರೆ. ನನ್ನ ಜಾಹೀರಾತುಗಳು ಅವರ ಮುಂದೆ ಕಾಣಿಸಿಕೊಂಡಾಗ ನನ್ನೊಳಗೆ ತುಮುಲ ಶುರುವಾಗುತ್ತದೆ. ಅವೆಲ್ಲಾ ಅವರಿಗೆ ತೋರಿಸಬೇಕೋ, ಬೇಡವೋ ಎಂದು ಕನ್​ಫ್ಯೂಷನ್​ ಆಗುತ್ತದೆ. ಈ ನಿಟ್ಟಿನಲ್ಲಿ ನನ್ನೊಳಗೆ ನಿರಂತರ ಯುದ್ಧ ನಡೆಯುತ್ತಿರುತ್ತದೆ ಎಂದಿದ್ದಾರೆ.

ಗಂಟಿಕ್ಕುವ ಮುಖದ ಪ್ರಶ್ನೆ

‘ನನ್ನ ಮಕ್ಕಳು ಈಗ ಜಾಹೀರಾತುಗಳನ್ನು ಜಾಸ್ತಿ ಗಮನಿಸುತ್ತಿದ್ದಾರೆ. ನನ್ನ ಜಾಹೀರಾತುಗಳು ಅವರ ಕಣ್ಣಿಗೆ ಬಿದ್ದಾಗ ನನಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಅವರು ಅದನ್ನು ನೋಡಬೇಕೋ ಬೇಡವೋ ಎಂಬ ಗೊಂದಲ ನನ್ನಲ್ಲಿ ಸದಾ ಇರುತ್ತದೆ’ ಎಂದಿದ್ದಾರೆ ನಟಿ. ವಿಮಾನ ನಿಲ್ದಾಣದಲ್ಲಿ ನನ್ನ ಜಾಹೀರಾತನ್ನು ನೋಡಿದ ತೈಮೂರ್‌, ನೀವ್ಯಾಕೆ ಎಲ್ಲಾ ಜಾಹೀರಾತಿನಲ್ಲಿ ಮುಖ ಗಂಟಿಕ್ಕಿಕೊಂಡು ಇರುತ್ತೀರಿ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಏನು ಹೇಳಬೇಕು ಎಂದು ನನಗೆ ತಿಳಿಯುವುದಿಲ್ಲ. ಕೊನೆಗೆ ಅದು ಕೇವಲ ಜಾಹೀರಾತು ಎನ್ನುತ್ತೇನೆಯೇ ವಿನಾ, ಆ ರೀತಿ ನಾನು ಅದನ್ನು ಏಕೆ ಮಾಡುತ್ತಿದ್ದೇನೆ ಎಂದು ಅವನು ಮೇಲಿಂದ ಮೇಲೆ ಪ್ರಶ್ನೆ ಕೇಳಿದಾಗ, ಪ್ಲೀಸ್​ ನನ್ನನ್ನು ಬಿಟ್ಟುಬಿಡು ಎಂದಷ್ಟೇ ಹೇಳುತ್ತೇನೆ ಎಂದಿದ್ದಾರೆ.

ಇದೇ ವೇಳೆ, ತಮ್ಮ ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ತಾನು ಸ್ವಲ್ಪ ಕಟ್ಟುನಿಟ್ಟಾಗಿರುತ್ತೇನೆ ಎಂದು ನಟಿ ಹೇಳಿಕೊಂಡಿದ್ದಾರೆ, ಆದರೆ ಸೈಫ್ ಹೆಚ್ಚು ಶಾಂತ ವಿಧಾನವನ್ನು ಹೊಂದಿದ್ದಾರೆ. ಫೋನ್‌ಗಳು ಮತ್ತು ಡಿಜಿಟಲ್ ಪ್ರಪಂಚದ ಬಗ್ಗೆ ನಾನು ತುಂಬಾ ಕಟ್ಟುನಿಟ್ಟಾಗಿರುತ್ತೇನೆ ಎಂದು ಹೇಳಿದ್ದಾರೆ. ತೈಮೂರ್ ಮತ್ತು ಜೆಹ್ ಅವರ ಫೋನ್ ಮತ್ತು ಲ್ಯಾಪ್‌ಟಾಪ್ ಬಳಕೆಯ ಬಗ್ಗೆ ನಾನು ತುಂಬಾ ಜಾಗರೂಕಳಾಗಿದ್ದೇನೆ ಎಂದು ಕರೀನಾ ಕಪೂರ್ ಬಹಿರಂಗಪಡಿಸಿದ್ದಾರೆ. "ಅವರ ಬಳಿ ಫೋನ್‌ಗಳಿಲ್ಲ. ತೈಮೂರ್‌ನ ದಾದಿ ಬಳಿ ಫೋನ್ ಇದೆ, ಅದನ್ನು ಅವನು ತನ್ನದಾಗಿ ಕರೆಯುತ್ತಾನೆ. ನನ್ನ ಬಳಿ ಫೋನ್​ ಇಲ್ಲ ಎಂದು ಸ್ನೇಹಿತರಿಗೆ ಹೇಳಲೇ ಎಂದು ಕೇಳುತ್ತಾನೆ. ಆದರೆ ನಾನು ಅದೆಲ್ಲಾ ಹೇಳಬಾರದು ಎನ್ನುತ್ತೇನೆ ಎಂದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲವ್ ಮಾಡಲಿಲ್ಲ, ಬ್ರೇಕಪ್ ಕೂಡ ಆಗಲಿಲ್ಲ.. ಆದರೂ ಮರೆಯೋಕೆ ಆಗ್ತಿಲ್ವಾ? ಯಾಕೆ ಹೀಗೆ?
ಚಾಣಕ್ಯ ನೀತಿ: ನಿಮ್ಮ ಯಶಸ್ಸು ನೋಡಿ ಹೊಟ್ಟೆಕಿಚ್ಚು ಪಡೋರನ್ನು ಗುರುತಿಸೋದು ಹೇಗೆ? ಈ 3 ಲಕ್ಷಣ ನೋಡಿ