ಅಂಕೋಲಾದ ಅಜ್ಜಿ ಅಂಗಡಿಗೆ ಪ್ರತೀದಿನ ಬಂದು ಐಸ್‌ಕ್ರೀಂ ತಿನ್ನುವ ಹಸು, ಹಣದ ಬದಲು ಪಪ್ಪಿ ಕೊಟ್ಟು ಮುದ್ದಿಸುವ ದನ!

Published : Sep 15, 2026, 04:51 PM IST
Ankola old woman and cow bond

ಸಾರಾಂಶ

ಉತ್ತರ ಕನ್ನಡದ ಅಂಕೋಲಾದಲ್ಲಿ, ಶಾರದಾ ಶೆಣೈ ಎಂಬ ಅಜ್ಜಿಯ ಅಂಗಡಿಗೆ ಪ್ರತಿದಿನ ಹಸುವೊಂದು ಭೇಟಿ ನೀಡುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಐಸ್‌ಕ್ರೀಂ ಹಾಗೂ ಬಿಸ್ಕತ್ ತಿಂದು, ಅಜ್ಜಿಗೆ ಪ್ರೀತಿಯಿಂದ ಮುತ್ತಿಟ್ಟು ಹೋಗುವ ಈ ಹಸುವಿನ ಕಥೆ ಮಾನವ-ಪ್ರಾಣಿ ಬಾಂಧವ್ಯಕ್ಕೆ ಉತ್ತಮ ಉದಾಹರಣೆಯಾಗಿದೆ.

ಉತ್ತರ ಕನ್ನಡ: ಮಾನವನಿಗಿಂತ ಪ್ರಾಣಿಗಳೇ ಮೇಲು ಎಂಬ ಮಾತಿನಂತೆ ಅಪರೂಪದ ಹಾಗೂ ಪ್ರೀತಿಪೂರ್ವಕ ಸನ್ನಿವೇಶವೊಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕಂಡುಬಂದಿದೆ. ಇಲ್ಲಿನ ಶಾರದಾ ಶೆಣೈ ಎಂಬ ಅಜ್ಜಿಯ ಅಂಗಡಿಗೆ ಪ್ರತಿದಿನವೂ ಹಸುವೊಂದು ಭೇಟಿ ನೀಡಿ ಐಸ್‌ಕ್ರೀಂ ಹಾಗೂ ಬಿಸ್ಕತ್ ತಿಂದು ಹೋಗುತ್ತದೆ. ಅಷ್ಟೇ ಅಲ್ಲ, ತನಗೆ ಮೇವು ನೀಡಿದ ಅಜ್ಜಿಗೆ ಪ್ರೀತಿಯಿಂದ ಮುತ್ತಿಟ್ಟು ಹೋಗುವ ಈ ದೃಶ್ಯ ನೋಡುಗರ ಮನಸೂರೆಗೊಳ್ಳುತ್ತಿದೆ.

ಅಂಕೋಲಾ ಪಟ್ಟಣದಲ್ಲಿ ಸಣ್ಣ ಐಸ್‌ಕ್ರೀಂ ಅಂಗಡಿ ನಡೆಸುತ್ತಿರುವ ಶಾರದಾ ಶೆಣೈ ಅವರಿಗೆ ಪ್ರಾಣಿಗಳೆಂದರೆ ಅಪಾರ ಪ್ರೀತಿ. ತಮ್ಮ ಅಂಗಡಿಯ ಮುಂಭಾಗಕ್ಕೆ ಬರುವ ಹಸು, ನಾಯಿ ಅಥವಾ ಇತರ ಯಾವುದೇ ಮೂಕಪ್ರಾಣಿಗಳಿಗೆ ನೀಡಲೆಂದೇ ಅವರು ವಿಶೇಷವಾಗಿ ಬಿಸ್ಕತ್‌ ಹಾಗೂ ಇತರ ತಿನಿಸುಗಳನ್ನು ತಮ್ಮ ಅಂಗಡಿಯಲ್ಲಿ ತಂದಿಟ್ಟಿದ್ದಾರೆ.

4 ವರ್ಷಗಳಿಂದ ಮುಂದುವರಿದ ಅಪರೂಪದ ಬಾಂಧವ್ಯ!

ಈ ಅಪರೂಪದ ಪ್ರೀತಿಯ ಕುರಿತು ಶಾರದಾ ಅಜ್ಜಿ ಮಾತನಾಡುತ್ತಾ, ನಾನು ಏನು ಹೇಳಿದರೂ ಈ ಹಸುವಿಗೆ ಪೂರ್ತಿಯಾಗಿ ಅರ್ಥವಾಗುತ್ತದೆ. 'ಪಪ್ಪಿ ಕೊಡು' ಎಂದರೆ ಸಾಕು, ತಕ್ಷಣ ಮುಖ ಹತ್ತಿರ ತಂದು ಮುದ್ದಿಸುತ್ತದೆ! ಕಳೆದ 4 ವರ್ಷಗಳಿಂದ ಇದು ಪ್ರತಿದಿನ ತಪ್ಪದೇ ನಮ್ಮ ಅಂಗಡಿಗೆ ಬರುತ್ತಿದೆ. ಆದರೆ, ಇದು ಯಾರ ಮನೆಯ ಹಸು ಎಂಬುದು ಮಾತ್ರ ನನಗಿನ್ನೂ ತಿಳಿದಿಲ್ಲ ಎಂದು ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಿದ್ದಾರೆ..

ಮೂಕಪ್ರಾಣಿಗಳಿಗಾಗಿ ದಿನವೂ ಸಾವಿರಾರು ರೂಪಾಯಿ ಖರ್ಚು:

ಶಾರದಾ ಶೆಣೈ ಅವರ ಪ್ರಾಣಿಪ್ರೀತಿ ಬರಿ ಈ ಹಸುವಿಗೆ ಮಾತ್ರ ಸೀಮಿತವಾಗಿಲ್ಲ. ತಮ್ಮ ಮನೆಯಲ್ಲಿಯೂ ಅವರು 5 ರಿಂದ 6 ಬೆಕ್ಕುಗಳನ್ನು ಸಾಕಿದ್ದಾರೆ. ನನಗೆ ಪ್ರಾಣಿಗಳೆಂದರೆ ಬಲು ಇಷ್ಟ. ಬೆಕ್ಕುಗಳಿಗೆ ಪ್ರತಿದಿನ ಮೀನು, ಕ್ಯಾಟ್ ಫುಡ್, ಚಿಕನ್ ಲಿವರ್, ಕ್ರೀಮ್ ಮತ್ತು ಹಾಲಿಗಾಗಿ ದಿನಕ್ಕೆ 500 ರಿಂದ 600 ರೂಪಾಯಿಗಳನ್ನು ಸಂತೋಷದಿಂದ ಖರ್ಚು ಮಾಡುತ್ತೇನೆ ಎಂದು ಹೇಳಿದ್ದಾರೆ.

'ಲಹರಿ ಮಾಧ್ಯಮ' ಎಂಬ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಈ ಭಾವನಾತ್ಮಕ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಾರದಾ ಅಜ್ಜಿಯ ಈ ಪ್ರಾಣಿ ಪ್ರೇಮ ಹಾಗೂ ಹಸುವಿನ ನಿಷ್ಠೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೂಕ ಪ್ರಾಣಿಗಳ ನಿಯತ್ತು ಎಷ್ಟಿದೆ ಮಾತ್ರವಲ್ಲ ಅದು ತನ್ನನ್ನು ಪ್ರೀತಿಸಿದವರನ್ನು ಎಂದಿಗೂ ಮರೆಯವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾರನ್ನು ಕಂಡಕಂಡೋರು ನ್ಯಾಷನಲ್​ ಕ್ರಷ್​ ಅಂತಿದ್ರೆ ವಿಜಯ್​ಗೆ ಹೊಟ್ಟೆ ಉರಿ ಆಗತ್ತಾ? ನಟನ ಓಪನ್​ ಟಾಕ್​
'ಗೋವಿಂದಾ ಗೋವಿಂದಾ..' ಏನಪ್ಪಾ ನಿನ್ನ ಲೀಲೆ..!? ಹೆಂಡ್ತಿ ಹೇಳಿದ್ದಾಯ್ತು, 'ರೂಪಾ' ಕೋಮಲ್ ರಾಣಿ ಆಯ್ತು.. ಈಗ ಮಗಳ ಸರದಿ..!!