Latest Videos

ಪಾಲಿಕೆ ಕಚೇರಿಯಲ್ಲಿಯೇ ಅಧಿಕಾರಿಯಿಂದ ಹಸ್ತಮೈಥುನ, ಕರ್ತವ್ಯದಿಂದ ವಜಾ!

By Santosh NaikFirst Published Nov 8, 2023, 10:52 PM IST
Highlights

ತನ್ನ ಕಚೇರಿಯಲ್ಲಿಯೇ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ಇಮೇಲ್ ಅನ್ನು ತನ್ನ ಸಹೋದ್ಯೋಗಿಗಳ ನಡುವೆ ಹಂಚಿಕೆಯಾದ ಬೆನ್ನಲ್ಲೇ ಅಮೆರಿಕದ ಕನ್ನಾಸ್‌ ನಗರ ಪಾಲಿಕೆಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ನವದೆಹಲಿ (ನ.8): ಅಮೆರಿಕದ ಪ್ರಮುಖ ನಗರವಾದ ಕನ್ನಾಸ್‌ ನಗರದ ಪಾಲಿಕೆ ಅಧಿಕಾರಿಯೊಬ್ಬರು ತಮ್ಮ ಕಚೇರಿಯ ಆವರಣದಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ಇಮೇಲ್ ಅನ್ನು ಅವರ ಸಹೋದ್ಯೋಗಿಗಳಲ್ಲಿಯೇ ಹಂಚಿಕೆಯಾದ ಬಳಿಕ ಅಮಾನತುಗೊಳಿಸಲಾಗಿದೆ. ಅವರನ್ನು ಸೇವೆಯಿಂದ ಬಿಡುಗಡೆ ಮಾಡುವ ನಿರೀಕ್ಷೆಯೂ ಇದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಶಾವ್ನೀ ಸಿಟಿ ಮ್ಯಾನೇಜರ್ ಆಗಿರುವ ಡಾಗ್‌ ಗಾರ್ಬರ್‌ ಅವರಿಂದ ಈ ಈಮೇಲ್‌ ಬಂದಿದ್ದು, ಅವರು ಕಚೇರಿಯಲ್ಲಿಯೇ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋ ಇದರಲ್ಲಿದೆ. 'ಮೋಸ್ಟ್‌ ಇಂಪಾರ್ಟೆಂಟ್‌' ಎನ್ನುವ ವಿಷಯದೊಂದಿಗೆ ಅನಾಮಧೇಯ ಖಾತೆಯಿಂದ ಪಾಲಿಕೆಯ ಹಲವಾರು ಉದ್ಯೋಗಿಗಳಿಗೆ ಹಸ್ತಮೈಥುನದ ಈ ಮೇಲ್‌ಅನ್ನು ಕಳಿಸಲಾಗಿದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಗರ್ಬರ್ ಒಬ್ಬಂಟಿಯಾಗಿರುವಂತೆ ಕಾಣುತ್ತಿರುವುದರಿಂದ, ವೀಡಿಯೊವನ್ನು ಸ್ವತಃ ಚಿತ್ರೀಕರಿಸಿರಬಹುದು. ಆದರೆ ಈ ವಿಡಿಯೋವನ್ನು ಯಾರು ಶೇರ್ ಮಾಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಗರ್ಬರ್‌ನ ಇಂಥ ನಡವಳಿಕೆಯನ್ನು ಆನ್‌ಲೈನ್‌ನಲ್ಲಿಯೇ ಬಹಿರಂಗ ಮಾಡುವುದು ನನ್ನ ಉದ್ದೇಶವಾಗಿತ್ತು ಎಂದು ಈಮೇಲ್‌ ಹಂಚಿಕೊಂಡಿರುವ ಅನಾಮಧೇಯ ವ್ಯಕ್ತಿ ಸ್ಥಳೀಯ ದೈನಿಕ ಕನ್ನಾಸ್‌ ಸಿಟಿ ಸ್ಟಾರ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಈ ಸಂಶಯಾಸ್ಪದ ಮತ್ತು ಅನ್-ಕ್ಯಾಥೋಲಿಕ್ ಆಚರಣೆಗಳಲ್ಲಿ ತೊಡಗಿರುವ ಜನರನ್ನು ಬಹಿರಂಗಪಡಿಸಲು ನಾವು ಹಿಂಜರಿಯುವುದಿಲ್ಲ" ಎಂದು ಅನಾಮಧೇಯ ವ್ಯಕ್ತಿ ಮಾಧ್ಯಮಗಳಿಗೆ ಬರೆದಿರುವ ಈ ಮೇಲ್‌ನಲ್ಲಿ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಉದ್ಯೋಗಿಯೊಬ್ಬರು, "ಇದು ಕೇವಲ ಗೊಂದಲದ ವ್ಯಕ್ತಿಯಾಗಿದ್ದು, ನಗರದಲ್ಲಿ ಸಮಸ್ಯೆಗಳನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ಗರ್ಬರ್ ಅವರು ಶಾವ್ನಿಯ ಸಿಟಿ ಮ್ಯಾನೇಜರ್ ಆಗಿ ನೇಮಕಗೊಳ್ಳುವ ಮೊದಲು ಹಿಂದಿನ "ಅನುಚಿತ' ವರ್ತನೆಗಳ ಕುರಿತಾಗಿ ತನಿಖೆ ಎದುರಿಸಿದ್ದರು. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಶಾವ್ನಿ ಮೇಯರ್ ಮಿಚೆಲ್ ಡಿಸ್ಲರ್ ಅವರು ಟೊಪೆಕಾದಲ್ಲಿ ಅವರು ಕೆಲಸ ಮಾಡುವ ವೇಳೆಯಲ್ಲಿಯೇ ಗರ್ಬರ್‌ನಿಂದ ಇಂಥ ವರ್ತನೆಗಳು ಬಂದಿದ್ದವು. ಆದ್ದರಿಂದ ಈ ಬಾರಿ ಅವರಿಂದಲೇ ಈ ಘಟನೆ ಆಗಿರುವುದರಿಂದ ತೀರಾ ಅಚ್ಚರಿಯೂ ಆಗಲಿಲ್ಲ ಎಂದಿದ್ದಾರೆ.

ನಿಮ್ಮ ಹೆಂಡ್ತಿ ಮೇಲಿನ ಭಾವ ನೀವು ಮಲಗೋ ಭಂಗೀಲೇ ಗೊತ್ತಾಗುತ್ತೆ, ಮೋಸ ಮಾಡೋರ ಶೈಲಿ ಇದು!

"ಸಿಟಿ ಮ್ಯಾನೇಜರ್ ನೇಮಕ ಪ್ರಕ್ರಿಯೆಯ ಸಮಯದಲ್ಲಿ, ಹಿಂದಿನ ಸಮಸ್ಯೆಗಳು ಮತ್ತು ಗರ್ಬರ್‌ ವಿರುದ್ಧದ ಆರೋಪಗಳ ಬಗ್ಗೆ ಆಡಳಿತ ಮಂಡಳಿಗೆ ಅರಿವು ಮೂಡಿಸಲಾಗಿದೆ ಎಂದು ನನಗೆ ತಿಳಿದಿದೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆ ಚರ್ಚೆಗಳ ಸಮಯದಲ್ಲಿ ನಾನು ಎತ್ತಿದ ಹೆಚ್ಚುವರಿ ಕಾಳಜಿಗಳನ್ನು ತಳ್ಳಿಹಾಕಲಾಯಿತು, ಮತ್ತು ಕೌನ್ಸಿಲ್ ಗರ್ಬರ್ ಅವರನ್ನು ಆಯ್ಕೆ ಮಾಡಲು ಮುಂದಾಯಿತು, ಅವರು ತಮ್ಮ ಮೌಲ್ಯಗಳೊಂದಿಗೆ ಹೆಚ್ಚು ನಿಕಟವಾಗಿ ಜೋಡಿಸಲ್ಪಟ್ಟಿದ್ದಾರೆ ಎಂದು ಹೇಳಿದರು," ಡಿಸ್ಲರ್ ತಿಳಿಸಿದ್ದಾರೆ.

ಸಂಗಾತಿ ಮುಂದೆ ಸೈ ಎನ್ನಿಸಿಕೊಳ್ಬೇಕೆಂದ್ರೆ ಸೆಕ್ಸ್ ಮುನ್ನ ಈ ತಪ್ಪು ಮಾಡ್ಬೇಡಿ

click me!