
ಪ್ರೀತಿ (Love) ಇದ್ದಲ್ಲಿ ಜಗಳ ಇದ್ದೇ ಇರುತ್ತದೆ. ಆದ್ರೆ ಜಗಳ ಅತಿಯಾದ್ರೆ ಪ್ರೀತಿ ಮಾಸಿಹೋಗಿ ದ್ವೇಷ (Hate) ಶುರುವಾಗುತ್ತದೆ. ಗಾಜು ಒಡೆದ್ರೆ ಅದನ್ನು ಜೋಡಿಸಲು ಸಾಧ್ಯವಿಲ್ಲ. ಹಾಗೆ ಪ್ರೀತಿಯ ಸಂಬಂಧ ಮುರಿದು ಬಿದ್ದಾಗ ಅದನ್ನು ಸರಿಪಡಿಸುವುದು ತುಂಬಾ ಕಷ್ಟ. ಜೋಡಿಸಿದ್ರೂ ಅದು ಮೊದಲಿನಂತಾಗಲು ಸಾಧ್ಯವಿಲ್ಲ. ಹಾಗಾಗಿ ಆರೋಗ್ಯಕರ ಸಂಬಂಧ (relationship) ಕ್ಕಾಗಿ ಸದಾ ಪ್ರಯತ್ನ ನಡೆಸುತ್ತಿರಬೇಕು. ಸಣ್ಣ ಗಲಾಟೆಯಾದಾಗ್ಲೇ ಅದನ್ನು ಪರಿಹರಿಸುವ ಪ್ರಯತ್ನ ನಡೆಸಬೇಕು. ಚಿಕ್ಕ ಗಲಾಟೆಯನ್ನೇ ದೊಡ್ಡದು ಮಾಡಿಕೊಂಡ್ರೆ ಅದು ಸಂಬಂಧ ಹಾಳು ಮಾಡುತ್ತದೆ. ದಾಂಪತ್ಯ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿರುತ್ತದೆ. ಸರಿಯಾಗಿ ಹುಡುಕಿದ್ರೆ ವಿಚ್ಛೇದನಕ್ಕೆ ಯಾವುದೇ ಕಾರಣವಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ದಾಂಪತ್ಯದ ಸಣ್ಣ ಹಾಗೂ ಸರಳ ವಿಷ್ಯಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡಿರಬೇಕು.
ಅಮೆರಿಕದ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ (ಎಫ್‌ಸಿಯು) ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಎಫ್‌ಸಿಯುನಲ್ಲಿ ಸೈಕಾಲಜಿ ಪ್ರೊಫೆಸರ್ ಜಿಮ್ ಮೆಕ್‌ನಾಲ್ಟಿ ತಮ್ಮ ಅಧ್ಯಯನದಲ್ಲಿ ಮಹತ್ವದ ಅಂಶವನ್ನು ಹೇಳಿದ್ದಾರೆ. ದಂಪತಿ ಮಧ್ಯೆ ಮಾತುಕತೆ ಮುಖ್ಯವಾಗುತ್ತದೆ. ಸಂಗಾತಿ ತಮ್ಮ ಅಸಮಾಧಾನವನ್ನು ಹೊರಗೆ ಹಾಕ್ಬೇಕು. ಒಂದು ವೇಳೆ ಅಸಮಾಧಾನವನ್ನು ಹೊರಗೆ ಹಾಕದೆ ಹೋದ್ರೆ ಅವರ ನಡುವಿನ ಅಂತರ ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದವರು ಹೇಳಿದ್ದಾರೆ.
ಸುಮಾರು 200 ಜೋಡಿಗಳ ಮೇಲೆ ಈ ಅಧ್ಯಯನ ನಡೆದಿದೆ. ಫಿಲಡೆಲ್ಫಿಯಾ ಮೂಲದ ಕಪಲ್ಸ್ ಥೆರಪಿಸ್ಟ್ ಕೈಟ್ಲಿನ್ ಕ್ಯಾಂಟರ್ ಪ್ರಕಾರ, ದಂಪತಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡರೆ, ಅದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
RELATIONSHIP TIPS : ಸಮಯ ನೀಡದ ಗಂಡ, ಮಾಜಿ ಲವರ್ ಜೊತೆ ಒಂದಾದ ಹೆಂಡತಿ
ಭಾವನೆಗಳ ಹಂಚಿಕೆ : ಭಾವನೆಗಳನ್ನು ಹಂಚಿಕೊಳ್ಳುವುದು ಬಹಳ ಮುಖ್ಯ. ಸಂಗಾತಿ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡಿಲ್ಲ ಎನ್ನುತ್ತ ದೂರವಾಗುವವರಿದ್ದಾರೆ. ಅನೇಕ ಬಾರಿ ಹೇಳಿಕೊಂಡಾಗಲೇ ಭಾವನೆಗಳು ಅರ್ಥವಾಗುತ್ತವೆ. ಯಾವ ಕಾರಣಕ್ಕೆ ಕೋಪ ಬಂದಿದೆ ಅಥವಾ ಯಾವ ಕಾರಣಕ್ಕೆ ಮನಸ್ಸು ಬೇಸರಗೊಂಡಿದೆ ಎಂಬುದನ್ನು ನೀವು ಹೇಳಬೇಕಾಗುತ್ತದೆ. ಜೊತೆಗೆ ಸಂಗಾತಿಯಿಂದ ನೀವು ಏನು ಬಯಸುತ್ತಿದ್ದೀರಿ ಎಂಬುದನ್ನು ಹೇಳಬೇಕು.
ಸರಿಯಾದ ಸಮಯ : ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರ ಯಾವಾಗ್ಲೂ ತಪ್ಪಾಗಿರುತ್ತದೆ. ಹಾಗೆ ಕೋಪದಲ್ಲಿ ಆಡಿದ ಮಾತು ಕೂಡ ತಪ್ಪಾಗಿರುತ್ತದೆ. ಹಾಗಾಗಿ ಸರಿಯಾದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಸಂಗಾತಿಗೆ ಹೇಳಬೇಕು. ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿದ್ದಾಗ ಏನೇ ಹೇಳಿದ್ರೂ ಅರ್ಥವಾಗುವುದಿಲ್ಲ. ಅದರ ಬದಲು ಮನಸ್ಸು ಶಾಂತವಾದ್ಮೇಲೆ, ಪರಿಸ್ಥಿತಿ ತಿಳಿಯಾದ್ಮೇಲೆ ನಿಧಾನವಾಗಿ ಅವರ ಬಳಿ ಹೋಗಿ ಪರಿಸ್ಥಿತಿಯನ್ನು ಅರ್ಥೈಸಬೇಕು. ಇದ್ರಿಂದ ಮನಸ್ಸಿನಲ್ಲಿರುವ ವಿಷ್ಯ ಹೊರಬರುತ್ತದೆ. ಹಲವಾರು ಬಾರಿ ಪರಸ್ಪರ ಚರ್ಚೆ ಮಾಡಿದ ನಂತರ, ಸಮಸ್ಯೆಯು ತುಂಬಾ ಚಿಕ್ಕದಾಗಿ ಕಾಣುತ್ತದೆ.
ಸುಖ ಪ್ರಸವಕ್ಕಾಗಿ 9 ಮಾಸಗಳಿಗೆ 9 ಗ್ರಹಗಳನ್ನು ಮೆಚ್ಚಿಸಿ..
ಒಳ್ಳೆಯ ಕೇಳುಗರಾಗಲು ಪ್ರಯತ್ನಿಸಿ : ಬರೀ ಚರ್ಚೆ ಮಾತ್ರ ಮುಖ್ಯವಾಗುವುದಿಲ್ಲ. ಒಳ್ಳೆಯ ಕೇಳುಗರಾಗುವುದೂ ಮುಖ್ಯವಾಗುತ್ತದೆ. ಒಬ್ಬ ಒಳ್ಳೆಯ ಕೇಳುಗನು ತನ್ನ ಸಂಗಾತಿಯ ಭಾವನೆಗಳನ್ನು ಮತ್ತು ಮನಸ್ಸನ್ನು ಅರ್ಥಮಾಡಿಕೊಳ್ಳಬಹುದು. ನಿಂದನೀಯ ಭಾಷೆಯಲ್ಲಿ ಹೇಳುವುದಕ್ಕಿಂತ ಸನ್ನೆಗಳಲ್ಲಿ ಹೇಳುವುದು ಉತ್ತಮ ಎಂದು ಅನೇಕ ತಜ್ಞರು ಹೇಳುತ್ತಾರೆ. ಸಂಗಾತಿ ಮಾತನಾಡುವಾಗ ಮನಸ್ಸನ್ನು ಶಾಂತವಾಗಿಟ್ಟುಕೊಂಡು ಕೇಳಿದಾಗ ಸಂಗಾತಿಯ ದೃಷ್ಟಿಕೋನವನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಅನೇಕ ಬಾರಿ ಮುಂದಿರುವವರಿಗೆ ಹೇಳಲು ಅವಕಾಶ ನೀಡುವುದಿಲ್ಲ. ಅವರು ಹೇಳಿದ್ದನ್ನು ಕೇಳುವ ತಾಳ್ಮೆ ಇರುವುದಿಲ್ಲ. ಇದೇ ಕಾರಣಕ್ಕೆ ಸಣ್ಣ ವಿಷ್ಯ ದೊಡ್ಡದಾಗುತ್ತದೆ. ಇದು ಸಂಬಂಧವನ್ನು ಹಾಳು ಮಾಡುತ್ತದೆ.
ಸಂಶೋಧಕರ ಪ್ರಕಾರ, ದಂಪತಿ ಮಧ್ಯೆ ಜಗಳವಾಗುವುದು ದೊಡ್ಡ ವಿಷ್ಯವಲ್ಲ. ಅನೇಕ ಬಾರಿ ಜಗಳವಾಗ್ಬೇಕು. ಆಗ ಪರಸ್ಪರರ ಭಾವನೆ ಹೊರಗೆ ಬರುತ್ತದೆ. ಜಗಳವಾಡದೆ ಎಲ್ಲವನ್ನೂ ಮನಸ್ಸಿನಲ್ಲಿ ಮುಚ್ಚಿಟ್ಟುಕೊಂಡಾಗ ಜೀವನ, ನಾಟಕವಾಗುತ್ತದೆ. ಜೊತೆಗೆ ಮನಸ್ಸಿನಲ್ಲಿರುವ ಬೇಸರ ಒಂದು ಬಾರಿ ಸ್ಫೋಟಗೊಳ್ಳುವುದಲ್ಲದೆ ದಾಂಪತ್ಯ ಮುರಿದು ಬೀಳುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ಮಿತಿ ಮೀರಿ ಜಗಳ ಮಾಡಲು ಹೋಗ್ಬೇಡಿ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಗಲಾಟೆಯಿರಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.