ವರನ ಗೆಳತಿ ಅಲ್ಲ ವಧುವಿನ ಗರ್ಲ್‌ಫ್ರೆಂಡ್‌ ಎಂಟ್ರಿಯಿಂದ ಮುರಿದು ಬಿತ್ತು ಮದುವೆ

Published : Mar 06, 2025, 03:52 PM ISTUpdated : Mar 06, 2025, 04:59 PM IST
ವರನ ಗೆಳತಿ ಅಲ್ಲ ವಧುವಿನ ಗರ್ಲ್‌ಫ್ರೆಂಡ್‌ ಎಂಟ್ರಿಯಿಂದ ಮುರಿದು ಬಿತ್ತು ಮದುವೆ

ಸಾರಾಂಶ

ಉತ್ತರ ಪ್ರದೇಶದಲ್ಲಿ ವಧುವಿನ ಗೆಳತಿಯಿಂದ ಮದುವೆ ಮುರಿದು ಬಿದ್ದಿದೆ. ವಧು ಮತ್ತು ಆಕೆಯ ಗೆಳತಿ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎಂದು ತಿಳಿದುಬಂದಿದೆ.

ಮದುವೆಗಳು ಮದುವೆ ಮಂಟಪದಲ್ಲೇ ಮುರಿದು ಬೀಳುವುದು ಈಗ ಸರ್ವೇಸಾಮಾನ್ಯ ಎನಿಸಿದೆ. ಊಟ ಚೆನ್ನಾಗಿಲ್ಲ ಎಂದು ವಧು ವರನ ಕಡೆಯವರು ಪರಸ್ಪರ ಕಿತ್ತಾಡಿಕೊಂಡು ಅಥವಾ ವರ ವಿಳಂಬವಾಗಿ ಬಂದ ಕಾರಣಕ್ಕೆ, ಕುಡಿದು ಬಂದ ಕಾರಣಕ್ಕೆ ವಧುವಿದೋ ಅಥವಾ ವರನದ್ದೋ ಮಾಜಿ ಪ್ರೇಮಿ ಎಂಟ್ರಿ ಕೊಟ್ಟ ಕಾರಣಕ್ಕೆ ಮದುವೆಗಳು ಮುರಿದು ಬೀಳುವುದನ್ನು ಇದುವರೆಗೆ ನೀವು ಕೇಳಿದ್ದಿರಬಹುದು. ಆದರೆ ಇಲ್ಲೊಂದು ಕಡೆ ಮದುವೆ ಮುರಿದು ಬಿದ್ದ ಕಾರಣ ಕೇಳಿದ್ರೆ ನಿಜಕ್ಕೂ ನೀವು ಶಾಕ್‌ ಆಗ್ತೀರಾ ಅಂತದ್ದೇನಾಯ್ತು ಅಂತಾನ ಈ ಸ್ಟೋರಿ ನೋಡಿ..

ಮದುವೆ ಮನೆಗೆ ಎಂಟ್ರಿ ಕೊಟ್ಟ ವಧುವಿನ ಗರ್ಲ್‌ಫ್ರೆಂಡ್‌
ಸಾಮಾನ್ಯವಾಗಿ ವರನ ಗರ್ಲ್‌ಫ್ರೆಂಡ್ ಮದುವೆ ಮನೆಗೆ ಎಂಟ್ರಿ ಕೊಟ್ಟ ಕಾರಣಕ್ಕೋ ಅಥವಾ ವಧುವಿನ ಬಾಯ್‌ಫ್ರೆಂಡ್ ಮದ್ವೆ ಮನೆಗೆ ಎಂಟ್ರಿ ಕೊಟ್ಟು ಗಲಾಟೆ ಎಬ್ಬಿಸಿದ ಕಾರಣಕ್ಕೋ ಮದುವೆ ನಿಂತ ಹಲವು ಘಟನೆಗಳು ನಡೆದಿವೆ. ಆದರೆ ಇಲ್ಲಿ ವಧುವಿನ ಗೆಳತಿ ಮದುವೆ ಮನೆಗೆ ಎಂಟ್ರಿಕೊಟ್ಟು ಮದುವೆ ನಿಲ್ಲಿಸಿದ್ದಾಳೆ. ಉತ್ತರ ಪ್ರದೇಶದ ಬುಲಂದ್ಶಹರ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.  ಮದುವೆ ಮನೆಗೆ ಎಂಟ್ರಿ ಕೊಟ್ಟ ವಧುವಿನ ಗರ್ಲ್‌ಫ್ರೆಂಡ್ ತಾನು ಹಾಗೂ ಆಕೆ ಕಳೆದ 4 ವರ್ಷಗಳಿಂದ ಸಂಬಂಧದಲ್ಲಿದ್ದೇವೆ ಎಂದು ರಾದ್ದಾಂತ ಎಬ್ಬಿಸಿದ್ದಾಳೆ ಇದರಿಂದ ಮದುವೆ ಮುರಿದು ಬಿದ್ದಿದೆ.  

ಕೂಲರ್‌ನಿಂದ ಮದುವೆ ಮಂಟಪ ಕೂಲ್ ಕೂಲ್ ಆದರೆ ಮದುವೆ ಕ್ಯಾನ್ಸಲ್!

4 ವರ್ಷದಿಂದ ಲೀವಿಂಗ್‌ ರಿಲೇಷನ್‌ಶಿಪ್
ಬುಲಂದ್ಶಹರ್‌ನ ಗಾಂಧಿ ಪಾರ್ಕ್ ಪ್ರದೇಶದ ರೂಬಿ ಎಂಬ ಹೊಟೇಲ್‌ನಲ್ಲಿ ಈ ಗಟನೆ ನಡೆದಿದೆ. ವಿವಾಹ ನಿಶ್ಚಿತಾರ್ಥ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಬೀನಾ ಎಂಬ ಯುವತಿ ತಾನು ವಧುವಿನೊಂದಿಗೆ 4 ವರ್ಷಗಳಿಂದ ಸಂಬಂಧದಲ್ಲಿದ್ದೇನೆ ಎಂದು ಘೋಷಿಸಿದ್ದಾಳೆ. ಇತ್ತ ವಧು ಅಲಿಘರ್‌ನ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥಕ್ಕೆ ಸಿದ್ಧಗೊಳ್ಳುತ್ತಿದ್ದಳು. ಆದರೆ ವಧುವಿನ ಗರ್ಲ್‌ಫ್ರೆಂಡ್ ಮಂಟಪಕ್ಕೆ ಬಂದು ಈ ಘೋಷಣೆ ಮಾಡುತ್ತಿದ್ದಂತೆ ವರನ ಕಡೆಯವರು ಈ ಸಲಿಂಗಿ ಸಂಬಂಧ ಹೊಂದಿರುವ ವಧು ನಮಗೆ ಬೇಡ ಎಂದು ಹೇಳಿ ಮದುವೆಯನ್ನು ರದ್ದುಗೊಳಿಸಿ ಹೊರಟು ಹೋಗಿದ್ದಾರೆ. 

ಒಂದೇ ಕಡೆ ಅಧ್ಯಯನ ಮಾಡ್ತಿದ್ದ ಬೀನಾ ಹಾಗೂ ವಧು
ವರದಿಗಳ ಪ್ರಕಾರ ಬೀನಾ ಹಾಗೂ ವಧು ಒಂದೇ ಕೋಚಿಂಗ್ ಕ್ಲಾಸ್‌ನಲ್ಲಿ ಅಧ್ಯಯನ ನಡೆಸುತ್ತಿದ್ದು, ಅಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. 2012ರಿಂದಲೂ ಅವರು ಜೊತೆಯಾಗಿ ಜೀವಿಸುವ ಬಗ್ಗೆ ಪರಸ್ಪರ ಭರವಸೆ ನೀಡಿಕೊಂಡಿದ್ದು,  ಇಬ್ಬರು ತಮಗೆ ಬಂದ ಮದುವೆ ಪ್ರಪೋಸಲ್‌ಗಳನ್ನು ತಿರಸ್ಕರಿಸಿದ್ದರು.  ಅಲ್ಲದೇ ಈ ಹಿಂದೆ ಬೀನಾಗೆ ಮದುವೆ ಪ್ರಪೋಸಲ್‌ಗಳು ಬಂದಾಗ ತನ್ನನ್ನು ಬಿಟ್ಟು ಮದುವೆಯಾದಲ್ಲಿ ಸಾವಿಗೆ ಶರಣಾಗುವುದಾಗಿ ಈಗ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧಳಾಗುತ್ತಿದ್ದ ವಧು ಆಕೆಗೆ ಬೆದರಿಸಿದ್ದಳಂತೆ, ಅಲ್ಲದೇ ತಮ್ಮ ಕುಟುಂಬಕ್ಕೆ ಈ ತಮ್ಮ ಈ ಸಲಿಂಗಿ ಸಂಬಂಧದ ಬಗ್ಗೆ ಯಾವುದೇ ಮಾಹಿತಿ ನೀಡದೇ ಈ ಇಬ್ಬರೂ ಜೊತೆಯಾಗಿ ವಾಸಿಸುತ್ತಿದ್ದರು ಎಂದು ಬೀನಾ ಮಾಧ್ಯಮಗಳಿಗೆ ಹೇಳಿದ್ದಾಳೆ. 

ಮೀನು, ಮಟನ್ ಯಾಕಿಲ್ಲ? ತಾಳಿ ಕಟ್ಟಿದ ಬೆನ್ನಲ್ಲೇ ವಧುವಿನ ಕಪಾಳಕ್ಕೆ ಬಾರಿಸಿದ ವರ!

ವಿಚಾರ ತಿಳಿದು ಮದುವೆ ಮುರಿದುಕೊಂಡ ವರ
ಆದರೆ ಈ ಮಧ್ಯೆ ಬೀನಾಳ ಗೆಳತಿ ಬೇರೆ ಹುಡುಗನೊಂದಿಗೆ ಆಕೆಗೆ ತಿಳಿಸದೇ ಮದುವೆಯಾಗಲು ಸಿದ್ಧಳಾಗುತ್ತಿದ್ದಂತೆ ನಿಶ್ಚಿತಾರ್ಥ ನಡೆಯುತ್ತಿದ್ದ ಹೊಟೇಲ್‌ಗೆ ದೌಡಾಯಿಸಿದ ಬೀನಾ ತನ್ನ ಗೆಳತಿಯ ಮದುವೆಯನ್ನು ನಿಲ್ಲಿಸಿಬಿಟ್ಟಿದ್ದಾಳೆ. ಅಲ್ಲದೇ ಆಕೆಯ ಮದುವೆ ಸಿದ್ಧತೆ ಹಾಗೂ ನಡೆಯುತ್ತಿದ್ದ ಸಂಪ್ರದಾಯಗಳನ್ನು ವಿರೋಧಿಸಿದ್ದಾಳೆ. ಆದರೆ ಇತ್ತ ಬೀನಾ ಮಾಡಿದ ಆರೋಪಗಳೆಲ್ಲವನ್ನು ವಧು ನಿರಾಕರಿಸಿದ್ದಾಳೆ. ಆದರೆ ವಧುವಿನ ಗೆಳತಿಯ ಗಲಾಟೆಯಿಂದ ಗಾಬರಿಗೊಂಡ ವಧುವಿನ ಮನೆಯವರು ಸ್ಥಳಕ್ಕೆ ಪೊಲೀಸರನ್ನು ಕರೆಸಿದ್ದಾರೆ. ಇತ್ತ ವರನ ಕಡೆಯವರು ಈ ಎಲ್ಲಾ ವಿಚಾರ ತಿಳಿದು ಈ ಹುಡುಗಿ ನಮಗೆ ಬೇಡ ಎಂದು ಹೊರಟು ಹೋಗಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?