ಪ್ರೀತಿಸಿದ ವ್ಯಕ್ತಿಗಳು ಭಾಷೆ, ಜಾತಿ, ದೇಶದ ಬಗ್ಗೆ ಗಮನ ಹರಿಸೋದಿಲ್ಲ. ಈಗ ಪಟ್ಟಣದಲ್ಲಿದ್ದ ಹುಡುಗಿಗೆ ಕಾಡಿನಲ್ಲಿರೋ ಹುಡುಗನ ಮೇಲೆ ಪ್ರೀತಿ ಚಿಗುರಿದೆ. ಎಲ್ಲವನ್ನೂ ಬಿಟ್ಟು ಕಾಡಿಗೆ ಹೋಗಿ ಬಾಯ್ ಫ್ರೆಂಡ್ ಜೊತೆ ಕಾಲಕಳೆದು ಬಂದಿದ್ದಾಳೆ ಹುಡುಗಿ.
ಪ್ರೀತಿಯಲ್ಲಿ ಬಿದ್ದ ವ್ಯಕ್ತಿಗೆ ಪ್ರೀತಿಗಿಂತ (Mental Status of Being in Love) ಮತ್ತ್ಯಾವುದೂ ಕಣ್ಣಿಗೆ ಕಾಣಿಸೋದಿಲ್ಲ. ಪ್ರೀತಿಸಿದ ವ್ಯಕ್ತಿಯ ಜೊತೆ ಸದಾ ಖುಷಿಯಲ್ಲಿರುವ ಕನಸು ಕಾಣ್ತಾ ಪ್ರಪಂಚವನ್ನು ಅವರು ಮರೆಯುತ್ತಾರೆ. ಅದೆಷ್ಟೇ ಕಷ್ಟವಾದ್ರೂ ಪ್ರೀತಿಸಿದ ವ್ಯಕ್ತಿಯನ್ನು ಸೇರಲು ನಿರಂತರ ಪ್ರಯತ್ನ ಮಾಡುತ್ತಾರೆ. ಏಳು ಸಮುದ್ರ ದಾಟಿಯಾದ್ರೂ ನಿನ್ನ ಪ್ರೀತಿ ಪಡೆಯುತ್ತೇನೆ ಎಂಬುದು ಬರೀ ಸಿನಿಮಾ ಡೈಲಾಗ್ ಅಲ್ಲ. ಅನೇಕರು ಇದನ್ನು ನಿಜ ಜೀವನದಲ್ಲಿ ಮಾಡಿ ತೋರಿಸಿದ್ದಾರೆ. ತಮ್ಮ ಪ್ರೀತಿ ಪಾತ್ರರನ್ನು ಸೇರಲು ಪರಿಚಯವಿಲ್ಲದ, ದೂರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೆ ಈ ಹುಡುಗಿ ಕೂಡ ಉದಾಹರಣೆ. ನಗರದ ಜೀವನ, ಕೈನಲ್ಲಿದ್ದ ಕೆಲಸವನ್ನು ಲೆಕ್ಕಿಸದೆ ಆಕೆ ತನ್ನ ಪ್ರೇಮಿ ಬಳಿ ಓಡಿದ್ದಾಳೆ. ಇಲ್ಲಿನ ವಿಶೇಷವೆಂದ್ರೆ ಆಕೆ ಪ್ರೇಮಿ ಇದ್ದಿದ್ದು ನಗರ, ಪಟ್ಟಣದಲ್ಲಿ ಅಲ್ಲ. ಒಂದು ಕಾಡಿನಲ್ಲಿ. ಆನ್ಲೈನ್ ನಲ್ಲಿಯೇ ಪರಿಚಯವಾಗಿ, ಪ್ರೀತಿ ಚಿಗುರಿದ ನಂತ್ರ ಗಲಾಟೆ, ಗಿಜಿಬಿಜಿ ಜೀವನದಿಂದ ಶಾಂತ ಜೀವನ ಅರಸಿದ ಹುಡುಗಿ, ಕಾಡಿನಲ್ಲಿ ಭಿನ್ನ ಜೀವನ ನಿರ್ವಹಣೆ ಮಾಡ್ತಿದ್ದ ಹುಡುಗನ ಬಳಿ ಹೋಗಿದ್ದಾಳೆ.
ಅದೆಷ್ಟೇ ದೂರದಲ್ಲಿದ್ದರೂ ಈಗ ಸಾಮಾಜಿಕ ಜಾಲತಾಣಗಳು ಅವರನ್ನು ಹತ್ತಿರ ತರುವ ಕೆಲಸ ಮಾಡುತ್ತವೆ. ಎಲ್ಲೋ ಇದ್ದ ಹುಡುಗಿಯನ್ನು ಇಲ್ಲೆಲ್ಲೋ ಇದ್ದ ಹುಡುಗನಿಗೆ ಪರಿಚಯಿಸಿದೆ. ಕ್ವೀನ್ಸ್‌ಲ್ಯಾಂಡ್ (Queensland) ನ ವಾಸಿ ಜೋರ್ಡಾನ್ ಗೆ ದಕ್ಷಿಣ ಅಮೆರಿಕಾದ ಈಕ್ವೆಡಾರ್‌ನ ನಿವಾಸಿ ಪಿಟಿಯುರುಕ್ ಪರಿಚಯವಾಗಿದ್ದು ಹೀಗೆಯೆ. ಜೋರ್ಡಾನ್, ಇನ್ಸ್ಟಾಗ್ರಾಮ್ (Instagram) ನಲ್ಲಿ ಎಕ್ಸ್ಪ್ಲೋರ್ ಪುಟವನ್ನು ನೋಡ್ತಿದ್ದಳು. ಕಳೆದ ಡಿಸೆಂಬರ್ ನಲ್ಲಿ ಒಂದು ರಾತ್ರಿ ಆಕೆ ಕಣ್ಣಿಗೆ 24 ವರ್ಷದ ಕಂಟೆಂಟ್ ಕ್ರಿಯೆಟರ್ (Content Creator) ಪಿಟಿಯುರುಕ್ ಬಿದ್ದಿದ್ದಾನೆ. ಆತನ ಜೀವನಶೈಲಿ (Lifestyle) ಜೋರ್ಡಾನ್ ಗಮನ ಸೆಳೆದಿದೆ. ತಕ್ಷಣ ಆಕೆ ಪಿಟಿಯುರುಕ್ಗೆ ಮೆಸ್ಸೇಜ್ ಹಾಕಿದ್ದಾಳೆ. ಆತ ತಿರುಗಿ ಮೆಸ್ಸೇಜ್ ಕಳಿಸ್ತಾನೆ ಎನ್ನುವ ಬರವಸೆ ಜೋರ್ಡಾನ್ ಗೆ ಇರಲಿಲ್ಲ. ಆದ್ರೆ ಆಕೆ ಅಂದುಕೊಂಡಂತೆ ಆಗ್ಲಿಲ್ಲ. ಪಿಟಿಯುರುಕ್ ಹಾಯ್ ಅಂತ ಮೆಸ್ಸೇಜ್ ಕಳುಹಿಸಿದ್ದಾನೆ. ಹೀಗೆ ಇಬ್ಬರ ಮಧ್ಯೆ ಚಾಟ್ ಶುರುವಾಗಿದೆ. ನಂತ್ರ ಇಬ್ಬರು ವಿಡಿಯೋ ಕಾಲ್ (Video Call) ಮಾಡಿ ಮಾತನಾಡಲು ಶುರು ಮಾಡಿದ್ದಾರೆ.
ಇನ್ಮುಂದೆ ಜನನ ನಿಯಂತ್ರಣಕ್ಕೆ ಕಾಂಡೋಮ್ ಬೇಕಿಲ್ಲ, ಮಾರುಕಟ್ಟೆ ಬರ್ತಿದೆ ಹೊಸ ಜೆಲ್; ಇದು ಹಚ್ಚಿದ್ರೆ ಸಾಕು!
ಈ ಸಮಯದಲ್ಲಿ ಇಬ್ಬರೂ ತಮ್ಮ ಜೀವನದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಪಿಟಿಯುರುಕ್, ತಾನಿರುವ ಕಾಡು, ತನ್ನ ಕೆಲಸ, ತಮ್ಮವರ ಬಗ್ಗೆ ಪರಿಚಯ ಮಾಡಿದ್ದಾನೆ. ಜೋರ್ಡಾನ್ ಕೂಡ ತನ್ನ ಮನೆ, ಕೆಲಸ ಎಲ್ಲವನ್ನೂ ಪಿಟಿಯುರುಕ್ ಗೆ ಹೇಳಿದ್ದಾಳೆ. ಪಿಟಿಯುರುಕ್ ಕುಟುಂಬ, ಈಕ್ವೆಡಾರ್ ನಲ್ಲಿ ವಾಸಿಸುತ್ತದೆ. ಅಮೆಜಾನ್ ಕಾಡಿಗೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಮಾಡುತ್ತದೆ. ಈ ವಿಷ್ಯ ತಿಳಿದ ಜೋರ್ಡಾನ್, ಕೆಲಸ, ಪಟ್ಟಣ ತೊರೆದು ಸ್ವಲ್ಪ ದಿನ ಪಿಟಿಯುರುಕ್ ಜೊತೆಗಿರುವ ನಿರ್ಧಾರಕ್ಕೆ ಬಂದಿದ್ದಾಳೆ. ಈ ವಿಷ್ಯವನ್ನು ಪಿಟಿಯುರುಕ್ ಗೆ ಹೇಳ್ತಿದ್ದಂತೆ ಆತ ಒಪ್ಪಿಕೊಂಡಿದ್ದಾನೆ. ಇಬ್ಬರೂ ಅರ್ಜೆಂಟಿನಾ, ಬ್ರೆಜಿಲ್, ಪೆರು ಸುತ್ತವ ಪ್ಲಾನ್ ಮಾಡಿದ್ದಾರೆ.
ಹೆಂಡತಿ ಗರ್ಭಿಣಿಯಾದಾಗ ಗಂಡ ಈ ಕೆಲಸಗಳನ್ನ ಮಾಡಬಾರದು
ಪ್ಲಾನ್‌ನಂತೆ ಜೋರ್ಡಾನ್, ಪಿಟಿಯುರುಕ್ ಇರುವ ಜಾಗ ತಲುಪಿದ್ದಾಳೆ. ಪಿಟಿಯುರುಕ್ ಮನೆ, ಆತನ ಕೆಲಸ, ಕಾಡುಗಳನ್ನು ಸುತ್ತಿದ್ದಾಳೆ. ಪಿಟಿಯುರುಕ್ ಕುಟುಂಬಸ್ಥರು ನನ್ನನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ್ರು. ಇಬ್ಬರಿಗೂ ಭಾಷೆ ಸಮಸ್ಯೆ ಇತ್ತು. ಒಬ್ಬರ ಭಾಷೆ ಇನ್ನೊಬ್ಬರಿಗೆ ಅರ್ಥವಾಗ್ತಿರಲಿಲ್ಲ. ಅನೇಕ ಬಾರಿ ಸಂಜ್ಞೆ ಮೂಲಕವೇ ತನ್ನ ಭಾವನೆಯನ್ನು ಜೋರ್ಡಾನ್ ಹಂಚಿಕೊಂಡಿದ್ದಾಗಿ ತಿಳಿಸಿದ್ದಾಳೆ. ಪ್ರೀತಿಗೆ ಭಾಷೆ ಅಗತ್ಯವಿಲ್ಲ ಎಂದು ಪಿಟಿಯುರುಕ್ ಹೇಳುತ್ತಾನೆ. ಪಿಟಿಯುರುಕ್ ಜೊತೆ ಒಂದು ತಿಂಗಳು ಕಳೆದ ಜೋರ್ಡಾನ್ , ದುಃಖದಲ್ಲಿಯೇ ಆಸ್ಟ್ರೇಲಿಯಾಕ್ಕೆ ವಾಪಸ್ ಆಗಿದ್ದಾಳೆ. ಮತ್ತೆ ಕೆಲ ತಿಂಗಳು ಪಿಟಿಯುರುಕ್ ಜೊತೆ ವಾಸಿಸುವ ಪ್ಲಾನ್ ಮಾಡಿ ಕಾಡಿಗೆ ಹೋಗೋದಾಗಿ ಹೇಳಿದ್ದಾಳೆ.