ಪತಿಯ ನೆನಪು ಹಸಿರಾಗಿಡಲು 73 ಸಾವಿರ ಸಸಿ ನೆಟ್ಟ ಪತ್ನಿ!

By Web Desk  |  First Published Jun 6, 2019, 2:50 PM IST

ಪತಿಯ ನೆನಪಲ್ಲಿ ನಗರವನ್ನು ಹಸಿರಾಗಿಸಿದ ಪತ್ನಿ| ಸಸಿಗಳಲ್ಲಿ ಇಲ್ಲದ ಪತಿಯ ಇರುವಿಕೆ ಗುರುತಿಸಿದ ಪತ್ನಿ| ಪತಿಯ ನೆನಪಲ್ಲಿ ನಗರದಾದ್ಯಂತ ಸಸಿ ನೆಟ್ಟ ಜೆನೆಟ್ ಯಜ್ಞೇಶ್ವರನ್| ರಾಜಾನೆಟ್ ಯಜ್ಞೇಶ್ವರನ್ ಚಾರಿಟೆಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಕಳಕಳಿ| 13 ವರ್ಷಗಳಲ್ಲಿ ಬರೋಬ್ಬರಿ 73 ಸಾವಿರ ಸಾವಿರ ಸಸಿ ನೆಟ್ಟ ಜೆನೆಟ್| ಹಸಿರು ಬೆಂಗಳೂರಿಗಾಗಿ ಜೆನೆಟ್ ನಿತ್ಯ ಹೋರಾಟ| 


ಬೆಂಗಳೂರು(ಜೂ.06): ಜೀವನದ ಪ್ರತಿ ಹೆಜ್ಜೆಯಲ್ಲೂ ಒಟ್ಟಾಗಿ ನಡೆಯುವ ವಾಗ್ದಾನ ಮಾಡಿದ್ದ ಪತಿ, ಏಕಾಏಕಿ ಇನ್ನಿಲ್ಲವಾದರೆ ಪತ್ನಿಗಾಗುವ ನೋವು, ಕಾಡುವ ಒಂಟಿತನವನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ.

ಆದರೆ ಪತಿ ಇಲ್ಲದ ಬದುಕನ್ನು ಬದುಕುವುದನ್ನು ಕಲಿತ ಇವರು, ಸಸಿಗಳನ್ನು ನೆಡುವ ಮೂಲಕ ಅದರಲ್ಲಿ ತಮ್ಮ ಪತಿಯ ಇರುವಿಕೆಯನ್ನು ಸಾರಿದ ಪರಿ ಮಾತ್ರ ಅನನ್ಯ.

Tap to resize

Latest Videos

ಬೆಂಗಳೂರಿನ 68 ವರ್ಷದ ಜೆನೆಟ್ ಯಜ್ಞೇಶ್ವರನ್, ತಮ್ಮ ಅಗಲಿದ ಪತಿಯ ನೆನಪಿಗಾಗಿ ನಗರದಾದ್ಯಂತ ಸಾವಿರಾರು ಸಸಿಗಳನ್ನು ನೆಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 

2005ರಿಂದ ಸಸಿಗಳನ್ನು ನೆಡಲು ಪ್ರಾರಂಭಿಸಿದ ಜೆನೆಟ್, ಬರೋಬ್ಬರಿ 13 ವರ್ಷಗಳ ಕಾಲ ನಿರಂತರವಾಗಿ ಸಸಿಗಳನ್ನು ನೆಡುತ್ತಾ ನಗರವನ್ನು ಹಸಿರಾಗಿಸುತ್ತಿದ್ದಾರೆ.

ಮೆಜೆಸ್ಟಿಕ್‌ನಿಂದ ತಮ್ಮ ಸಸಿ ನಡೆವ ಕೆಲಸ ಆರಂಭಿಸಿದ್ದ ಜೆನಟ್, ಇದೀಗ ನಗರದಾದ್ಯಂತ ಸುಮಾರು 73 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ. 

ರಾಜಾನೆಟ್ ಯಜ್ಞೇಶ್ವರನ್ ಎಂಬ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿರುವ ಜನೆಟ್, ಇದರ ಮುಖಾಂತರ ನಗರವನ್ನು ಹಸಿರಾಗಿಡುವ ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ.

ನಗರದಲ್ಲಿ ಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕಡಿಯವುದು ಸಾಮಾನ್ಯ. ಆದರೆ ಇದರ ವಿರುದ್ಧ ಹೋರಾಟ ಮಾಡುವ ಬದಲು ತಾವೇ ಸ್ವತಃ ಸಸಿಗಳನ್ನು ನೆಟ್ಟು ಬೆಂಗಳೂರನ್ನು ಮತ್ತೆ ಹಸಿರಾಗಿಸುವುದು ಜೆನೆಟ್ ಅವರ ಉದ್ದೇಶ.

ಕಳೆದ 13 ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್‌ ಸಿಟಿ, ಕೃಷ್ಣರಾಜಪುರ, ಜಕ್ಕೂರು, ತಾತಗುಣಿ, ಪೈ ಲೇಔಟ್‌, ತಲಘಟ್ಟಪುರ, ಕೋರಮಂಗಲ, ಕೇಂಬ್ರಿಡ್ಜ್ ಲೇಔಟ್‌, ಸೇರಿದಂತೆ ವಿವಿಧೆಡೆ ಸುಮಾರು 73 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಿದ್ದಾರೆ.

click me!