ಈಗ ಎಲ್ಲ ಕಡೆ ಕೊರೋನ ಭಯ ಇದೆ. ಈ ಟೈಮ್ ನಲ್ಲಿ ಗಂಡ ಹೆಂಡತಿ ನಡುವೆಯೂ ಗ್ಯಾಪ್ ಬೇಕಾ? ಗಂಡ ಹೆಂಡತಿನೂ ಸೆಕ್ಸ್ ಮಾಡಬಾರದಾ?
ಪ್ರಶ್ನೆ : ನಾವಿಬ್ಬರೂ ಮದುವೆಯಾಗಿ ಐದಾರು ತಿಂಗಳು ಕಳೆದಿದೆ. ಈಗ ಯಜಮಾನ್ರಿಗೆ ಆಫೀಸ್ ಇರಲ್ಲ. ಮನೆಯಿಂದಲೇ ಕೆಲಸ. ಹಾಗಾಗಿ ಇಡೀ ದಿನ ಮನೆಯಲ್ಲೇ ಇರ್ತಾರೆ. ಮನೆಯಲ್ಲಿ ಒಬ್ಬಳೇ ಇರೋದಕ್ಕಿಂತ ಅವರ ಜೊತೆಗೆ ಇರೋದು ಚೆನ್ನಾಗಿಯೇನೋ ಇರುತ್ತದೆ. ಆದರೆ ಅವರು ಬಹಳ ರೊಮ್ಯಾಂಟಿಕ್ ಆಗಿ ವರ್ತಿಸುತ್ತಾರೆ. ಪದೇ ಪದೇ ಸೆಕ್ಸಿಗೂ ಪೀಡಿಸುತ್ತಾರೆ. ಇದೆಲ್ಲ ನನಗೆ ಇಷ್ಟವಿಲ್ಲದ್ದೇನೂ ಅಲ್ಲ. ಆದರೆ ಈಗ ಎಲ್ಲ ಕಡೆ ಕೊರೋನ ಭಯ ಇದೆ. ಮನೆಯವರ ನಡುವೆಯೂ ಅಂತರ ಇರಬೇಕು ಅಂತ ಟಿವಿಯಲ್ಲೆಲ್ಲ ಹೇಳೋದನ್ನು ಕೇಳಿದ್ದೀನಿ. ಹಾಗಾಗಿ ಇವರು ಹತ್ತಿರ ಬಂದ ಕೂಡಲೇ ಭಯ ಶುರುವಾಗುತ್ತೆ. ಈ ಟೈಮ್ ನಲ್ಲಿ ಗಂಡ ಹೆಂಡತಿ ನಡುವೆಯೂ ಗ್ಯಾಪ್ ಬೇಕಾ? ಗಂಡ ಹೆಂಡತಿನೂ ಸೆಕ್ಸ್ ಮಾಡಬಾರದಾ? ನಾನೀಗ ಅವರಿಗೆ ಇಲ್ಲ ಅಂತ ಸ್ಟ್ರಿಕ್ಟ್ ಆಗಿ ಹೇಳಿದರೆ ಬಹಳ ಬೇಜಾರು ಮಾಡಿಕೊಳ್ಳುತ್ತಾರೆ. ಇದರಿಂದ ಪಾರಾಗೋದು ಹೇಗೆ? ಇನ್ನೊಂದು ವಿಷಯ ಅಂದರೆ, ಅವರಿಗೆ ಕೊರೋನಾದ ಯಾವ ಲಕ್ಷಣಗಳೂ ಇಲ್ಲ. ಅವರ ಆಫೀಸ್ ನಲ್ಲೂ ಯಾರಿಗೂ ಬಂದಿಲ್ಲ. ಹಾಗಾಗಿ ಸೇಫು ಅಂದುಕೊಳ್ಳಬಹುದಾ?
ಕೊರೋನಾ ಗಲಾಟೆಯಲ್ಲಿ ಹಸ್ತ ಮೈಥುನ ಮಾಡೋರ ಗಲಾಟೆ ಹೆಚ್ಚಾಗಿದ್ಯಾ?
ಉತ್ತರ: ನಿಮ್ಮ ಪ್ರಶ್ನೆಗೆ ಹೇಗೆ ಉತ್ತರಿಸೋದೋ ಗೊತ್ತಾಗುತ್ತಿಲ್ಲ. ಆದರೆ ಈಗಿನದು ನೀವು ಅಂದುಕೊಂಡದ್ದಕ್ಕಿಂತಲೂ ಸೂಕ್ಷ್ಮ ಪರಿಸ್ಥಿತಿ. ನಿಮ್ಮ ಯಜಮಾನರ ಆಫೀಸ್ ನಲ್ಲಿ ಯಾರಿಗೂ ಈ ಸಮಸ್ಯೆ ಬಂದಿಲ್ಲ ಅಂತೀರ. ಆದರೆ ಆಫೀಸ್ ನಿಂದ, ಮನೆಗೆ ಓಡಾಡುವಾಗ ಅನೇಕರು ಸಂಪರ್ಕಕ್ಕೆ ಬಂದಿರುತ್ತಾರೆ. ಅವರಿಗೆ ಅರಿವಿಲ್ಲದ ಹಾಗೆ ಯಾರನ್ನೋ ಮುಟ್ಟಿರುತ್ತಾರೆ. ಅಲ್ಲಿ ಕೋರೋನಾ ವೈರಾಣು ಜೀವಂತ ಇದ್ದಿರಬಹುದು. ದಾರಿಯಲ್ಲಿ ಓಡಾಡುವಾಗ ಏನಾದರೂ ಆಗಿರಬಹುದು. ಅವರು ಮಾತ್ರವಲ್ಲ ನೀವೂ ಹೊರಗೆ ಒಂದಿಲ್ಲೊಂದು ಕಾರಣಕ್ಕೆ ಓಡಾಡಿಕೊಂಡಿರುತ್ತೀರಿ. ಹಾಗಾಗಿ ರಿಸ್ಕ್ ನಿಂದ ನೀವೂ ಹೊರತಲ್ಲ. ಹಾಗಂತ ಈ ಸಮಸ್ಯೆ ಬಂದೇ ಬರುತ್ತೆ ಅಂತ ಹೇಳಕ್ಕಾಗಲ್ಲ. ಆದರೂ ನಿಮ್ಮ ಹುಷಾರಲ್ಲ ನೀವಿರೋದು ಒಳ್ಳೆಯದು. ಯಾವುದಕ್ಕೂ ಹದಿನಾಲ್ಕು ದಿನ ಪತಿ ಹಾಗೂ ನೀವು ದೂರವೇ ಇರೋದು ಒಳ್ಳೆಯದು. ನೀವು ಹೇಳಿದ್ದು ನೋಡಿದರೆ ಆಲ್ ಮೋಸ್ಟ್ ನೀವಿಬ್ಬರೂ ಸೇಫ್ ಆಗಿಯೇ ಇರ್ತೀರಿ. ಹೇಗೂ ಲಾಕ್ ಡೌನ್ ಆಗಿರುವ ಕಾರಣ ಆಮೇಲೂ ಒಂದಿಷ್ಟು ದಿನ ಯಜಮಾನ್ರು ಮನೆಯಲ್ಲೇ ಇರುತ್ತಾರೆ. ಆಗ ನಿಮ್ಮಿಬ್ಬರಿಗೂ ಹೊರಗಿನವರ ಸಂಪರ್ಕ ಇರಲ್ಲ. ಆಗ ಎಷ್ಟು ಬೇಕಿದ್ರೂ ರೊಮ್ಯಾನ್ಸ್ ಮಾಡೋದಕ್ಕೆ ಅಡ್ಡಿಯಿಲ್ಲ. ನಿರ್ಭಯದಿಂದ ನಿಸ್ಸಂಕೋಚದಿಂದ ಬೆರೆಯಬಹುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ನೀವು ಗಂಡ ಹೆಂಡತಿಯೇ ಆಗಿದ್ದರೂ ಕೂಡ ದೂರ ದೂರ ಇರುವುದು ಬಹಳ ಒಳ್ಳೆಯದು. ಈ ಬಗ್ಗೆ ನಿಮ್ಮ ಪತಿಗೂ ತಿಳಿ ಹೇಳಿ.
ಕೊರೋನಾಗೆ ಸೆಕ್ಸ್ ಇಂಡಸ್ಟ್ರಿಯೇ ಮಟಾಷ್
ಪ್ರಶ್ನೆ : ನನಗೆ ಮೂವತ್ತು ವರ್ಷ. ಮಹಿಳೆ. ಮದುವೆ ಆಗಿದೆ. ಮಕ್ಕಳಿಲ್ಲ. ಸೆಕ್ಸ್ ಬಗ್ಗೆ ಆಸಕ್ತಿಯೇ ಬರುತ್ತಿಲ್ಲ. ಸೆಕ್ಸ್ ವೇಳೆಗೂ ಫೀಲ್ ಇರಲ್ಲ. ಕೆಲವೊಮ್ಮೆ ಜಿಗುಪ್ಸೆ ಅನಿಸುತ್ತೆ. ನಮಗೆ ಮದುವೆಯಾಗಿ ಒಂದು ವರ್ಷವಾಗಿದೆ. ಗಂಡನ ಬಳಿ ನನ್ನ ನಿರಾಸಕ್ತಿ ಹೇಳಿಕೊಂಡಿಲ್ಲ. ಹೇಳಿದರೆ ಎಲ್ಲಿ ತಪ್ಪು ತಿಳ್ಕೊಳ್ತಾನೋ ಅಂತ ಭಯ. ಇದರ ಜೊತೆಗೆ ಇನ್ನೊಂದು ಟೆನ್ಶನ್ ಅಂತ. ಸೆಕ್ಸ್ ಬಗ್ಗೆ ಆಸಕ್ತಿಯೇ ಇಲ್ಲದ ನನಗೆ ಮಕ್ಕಳಾಗದೇ ಇರುವ ಸಾಧ್ಯತೆ ಇದೆಯಾ? ಈಗಾಗಲೇ ನೆಂಟರಿಷ್ಟರು ಗುಡ್ ನ್ಯೂಸ್ ಇದೆಯಾ ಅಂತೆಲ್ಲ ಕೇಳ್ತಿದ್ದಾರೆ. ನನಗೆ ಯಾಕೋ ಭಯವಾಗ್ತಿದೆ.
ಬೀದಿಯಲ್ಲೇ ಸೆಕ್ಸ್‌ಗಿಳಿದ ಜೋಡಿ ಅರೆಸ್ಟ್
ಉತ್ತರ: ಎಷ್ಟೋ ಸಲ ಹೆಣ್ಣಿನ ಆಸಕ್ತಿಯನ್ನು ಗಮನಿಸದೇ ಗಂಡಸರು ಸಂಭೋಗಕ್ಕೆ ಮುಂದಾಗುತ್ತಾರೆ. ಇದು ಹೆಣ್ಣಿಗೆ ಸೆಕ್ಸ್ ಬಗೆಗಿನ ಆಸಕ್ತಿಯನ್ನೇ ಕಡಿಮೆ ಮಾಡುತ್ತದೆ. ನಿಮ್ಮ ಮನಸ್ಸಲ್ಲಿ ಸೆಕ್ಸ್ ಬಗ್ಗೆ ಭಯ ಇರಬಹುದು. ಸೆಕ್ಸ್ ಕೆಟ್ಟದು ಅನ್ನುವ ಮನಸ್ಥಿತಿಯಲ್ಲಿ ಬೆಳೆದಿರಬಹುದು. ಅಥವಾ ನಿಮ್ಮ ಆಸಕ್ತಿಯನ್ನು ನೀವು ಕಂಡುಕೊಳ್ಳಲು ಸಾಧ್ಯವಾಗದೇ ಇದ್ದಿರಬಹುದು. ಅದು ಮೇಲ್ನೋಟಕ್ಕೆ ಕಾಣುವುದಿಲ್ಲ. ಯಾವುದಕ್ಕೂ ನೀವೊಮ್ಮೆ ಗೈನಾಕಾಲಜಿಸ್ಟ್ ಅವರನ್ನು ಸಂಪರ್ಕಿಸುವುದು ಉತ್ತಮ. ಏನಾದರೂ ದೈಹಿಕ ಸಮಸ್ಯೆಗಳಿದ್ದರೆ ಅವರು ಗುರುತಿಸಿ ಹೇಳುತ್ತಾರೆ. ಮಗುವಾಗುವ ಸಾಧ್ಯತೆಯನ್ನೂ ಅವರೇ ಪರೀಕ್ಷಿಸುತ್ತಾರೆ.