Relationship Tips: ಗಂಡ ನನ್ನನ್ನು ದ್ವೇಷಿಸ್ತಾನಾ? ಇಷ್ಟಪಡೋಲ್ವಾ? ಮಹಿಳೆಯರನ್ನ ಕಂಗಾಲು ಮಾಡೋ ಪ್ರಶ್ನೆ ಇದು

By Suvarna News  |  First Published May 27, 2023, 5:34 PM IST

ಪತಿ ತಮ್ಮನ್ನು ದ್ವೇಷಿಸುತ್ತಾನೆ, ಇಷ್ಟಪಡುವುದಿಲ್ಲ ಎನ್ನುವ ಕಲ್ಪನೆಯೇ ಮಹಿಳೆಯರನ್ನು ಕಂಗಾಲಾಗುವಂತೆ ಮಾಡಬಹುದು. ಆದರೆ, ಇದಕ್ಕೇನು ಕಾರಣ ಎಂದು ಯೋಚಿಸಿ. ನಿಮ್ಮ ವರ್ತನೆ, ಸ್ವಭಾವಗಳೇ ಅವರು ನಿಮ್ಮನ್ನು ಇಷ್ಟಪಡದಿರುವುದಕ್ಕೆ ಕಾರಣವಾಗಿರಬಹುದು. ವಿಮರ್ಶೆ ಮಾಡಿಕೊಂಡು ಸುಧಾರಿಸಿಕೊಳ್ಳಿ.
 


“ಗಂಡ ನನ್ನನ್ನು ದ್ವೇಷ ಮಾಡ್ತಾನಾ?’ ಎನ್ನುವ ಪ್ರಶ್ನೆ ಎಂದಾದರೊಮ್ಮೆ ಹೆಂಡತಿಯ ಮನದಲ್ಲಿ ಮೂಡಿರಬಹುದು. ಈ ಪ್ರಶ್ನೆ ಗಾಬರಿ, ಅಸಹಾಯಕತೆಯ ಭಾವನೆ, ಕಿರಿಕಿರಿ, ಉದ್ವೇಗಗಳನ್ನು ಸೃಷ್ಟಿಸಿರಲು ಸಾಧ್ಯ. ಪತಿಯ ಕುರಿತು ಭರವಸೆಗಳನ್ನು ನಾಶಪಡಿಸಿರಲು ಸಾಧ್ಯ. ಯಾಕಾಗಿ ಪತಿ ಹೆಂಡತಿಯನ್ನು ಕಂಡರೆ ಇಷ್ಟಪಡುವುದಿಲ್ಲ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ? ಹಲವಾರು ಕಾರಣಗಳು ನಿಮ್ಮ ಮನಸ್ಸಿಗೆ ಹೊಳೆಯಬಹುದು. ತಕ್ಷಣಕ್ಕೆ ಮುನ್ನೆಲೆಗೆ ಬರುವ ವಿಚಾರವೆಂದರೆ, ಆತನಿಗೆ ಬೇರೊಂದು ಸ್ನೇಹವಾಗಿರಬಹುದು, ಬೇರೊಂದು ಮಹಿಳೆಯ ಆಕರ್ಷಣೆಯಲ್ಲಿ ಇದ್ದಿರಬಹುದು ಎನ್ನುವುದು. ಆದರೆ, ಅದನ್ನು ಹೊರತುಪಡಿಸಿ ಬೇರೆ ಬೇರೆ ಕಾರಣಗಳೂ ಇರಲು ಸಾಧ್ಯವಿದೆ.

ಅವು ಮುಖ್ಯವಾಗಿ ಹೆಂಡತಿಯ ಸ್ವಭಾವಗಳನ್ನು ಆಧರಿಸಿವೆ. ಪತಿ ನಿಮ್ಮೊಂದಿಗೆ ಪ್ರೀತಿಯಿಂದ ಇಲ್ಲದಿರುವುದು ಖಂಡಿತವಾಗಿ ಹೃದಯಕ್ಕೆ ನೋವಾಗುವ ಸಂಗತಿ. ಆದರೆ, ಅದಕ್ಕೆ ಇರುವ ಕಾರಣಗಳು ಮತ್ತು ಲಕ್ಷಣಗಳನ್ನು ಅರಿತುಕೊಂಡು ರಿಪೇರಿ ಕಾರ್ಯ ಮಾಡುವುದು ಜಾಣತನ. ಸಂಬಂಧ ಸುಧಾರಣೆಗೆ ನೀವು ನಿಮ್ಮನ್ನೂ ತಿದ್ದಿಕೊಳ್ಳಬೇಕಾಗಿ ಬರಬಹುದು. 

Tap to resize

Latest Videos

ನೀವು ತೀರ ಸ್ವಾರ್ಥಿಯಾಗಿದ್ದಿರಬಹುದು (Selfish):  ಅತಿಯಾದ ಸ್ವಾರ್ಥ ಹೊಂದಿರುವ ಸಂಗಾತಿಗಳನ್ನು (Partner) ಇಷ್ಟಪಡದಿರುವುದು ಸಹಜ. ಪತಿಯಾಗಲೀ (Husband), ಪತ್ನಿಯಾಗಲೀ (Wife) ಅತಿಯಾಗಿ ಸ್ವಾರ್ಥಿಗಳಾಗಿದ್ದರೆ ಕೊಡು-ಕೊಳ್ಳುವಿಕೆ ಸಮಾನವಾಗಿರುವುದಿಲ್ಲ. 

Relationship Tips: ಅತಿಯಾಗಿ ಹೊಂದಾಣಿಕೆ ಮಾಡ್ಕೊಳ್ತಾ ಇದೀರಾ? ಎಚ್ಚರಿಕೆ ಹಂತ ಯಾವ್ದು?

ಸಿಕ್ಕಾಪಟ್ಟೆ ಟೀಕೆ (Criticism) ಮಾಡ್ತೀರಾ?:  ಕುಳಿತಲ್ಲಿ, ನಿಂತಲ್ಲಿ, ಊಟ ಮಾಡುವಾಗ, ಕೆಲಸಕ್ಕೆ ಸಂಬಂಧಿಸಿ ನೀವು ಟೀಕೆ ಮಾಡುತ್ತಿದ್ದರೆ ಸಂಗಾತಿ ನಿಮ್ಮನ್ನು ದ್ವೇಷಿಸುವ (Hate) ಸಾಧ್ಯತೆ ಅಧಿಕ. ಪುರುಷರು ಸಾಮಾನ್ಯವಾಗಿ ರಚನಾತ್ಮಕ ಟೀಕೆ ಹಾಗೂ ನೆಗೆಟಿವ್ ಟೀಕೆಗಳ ನಡುವಿನ ವ್ಯತ್ಯಾಸ ಅರಿಯುವುದಿಲ್ಲ. ನೀವು ಸದಾಕಾಲ ಟೀಕಿಸುತ್ತಿರುವುದೊಂದೇ ಅವರ ಗಮನಕ್ಕೆ ಬರುತ್ತದೆ. ತಾವೇನು ಹೇಳಿದರೂ, ಮಾಡಿದರೂ ತಪ್ಪು ಎನ್ನುತ್ತಾರೆ ಎನ್ನುವ ಭಾವನೆ ಮೂಡುತ್ತದೆ. ಅವರಲ್ಲಿ ಅಭದ್ರತೆ, ಕೀಳರಿಮೆ (Inferior) ಕಾಡುತ್ತದೆ.

ಅವರ ಅಗತ್ಯವನ್ನು (Needs) ನೆಗ್ಲೆಕ್ಟ್ (Neglect) ಮಾಡಿದ್ದೀರಾ?: ಪುರುಷರು ಪ್ರಶಂಸೆಯನ್ನು ಬಯಸುತ್ತಾರೆ. ಅದರೊಂದಿಗೆ ತಮ್ಮ ಅಗತ್ಯಗಳನ್ನು ಪತ್ನಿ ಪೂರೈಸಬೇಕು ಎಂದುಕೊಳ್ಳುತ್ತಾರೆ. ನೀವು ಪದೇ ಪದೆ ಅವರ ಅಗತ್ಯಗಳನ್ನು ನೆಗ್ಲೆಕ್ಟ್ ಮಾಡಿದರೆ, ತಿರಸ್ಕರಿಸಿದರೆ ಅವರಲ್ಲಿ ವಿರಕ್ತ ಭಾವನೆ ಹೆಚ್ಚುತ್ತದೆ. ಅವರ ವಿಚಾರ, ಭಾವನೆಗಳಿಗೆ ಗೌರವ ನೀಡದೆ ಇದ್ದಾಗ ನಿಮ್ಮ ಕುರಿತು ದ್ವೇಷ ಉಂಟಾಗಬಹುದು.

ಆತ್ಮೀಯತೆಯ (Intimacy) ಕೊರತೆ: ದಂಪತಿಯಲ್ಲಿ ಆತ್ಮೀಯತೆ ಇರಬೇಕಾದುದು ಅಗತ್ಯ. ಮದುವೆಯಾದಾಗ ಪ್ರೀತಿ (Love), ಸ್ಪರ್ಶ, ಆತ್ಮೀಯತೆಯನ್ನು ಎಲ್ಲರೂ ಬಯಸುತ್ತಾರೆ. ಆದರೆ, ನಿಮ್ಮ ನಡುವೆ ಅದಿಲ್ಲದೆ ಹೋದರೆ ಮನದಲ್ಲಿ ಪರಸ್ಪರ ಬೆಚ್ಚಗಿನ ಭಾವನೆಯೇ ಇರುವುದಿಲ್ಲ. ಇದರಿಂದಲೂ ಕ್ರಮೇಣ ದೂರ ಹೆಚ್ಚುತ್ತದೆ.

ಬರೀ ದೌರ್ಜನ್ಯ (Abuse): ದೌರ್ಜನ್ಯವೆಂದರೆ, ಕೇವಲ ದೈಹಿಕ ದಾಳಿಯಷ್ಟೇ ಅಲ್ಲ. ನೀವು ಭಾವನಾತ್ಮಕವಾಗಿ ಅವರ ಮೇಲೆ ದೌರ್ಜನ್ಯ ಮಾಡುತ್ತೀರಾ ನೋಡ್ಕೊಳಿ. ದೀರ್ಘಕಾಲ ಸೆಕ್ಸ್ ಗೆ ಕಾಯುವಂತೆ ಮಾಡುವುದು ಸಹ ದೌರ್ಜನ್ಯ ಎಂದು ಇತ್ತೀಚೆಗೆ ನ್ಯಾಯಾಲಯವೂ ಹೇಳಿದೆ. ಅಂದರೆ, ಇದರಿಂದ ಅವರು ಮಾನಸಿಕವಾಗಿ ಕುಗ್ಗುತ್ತಾರೆ. ತೀರ ಅಗ್ರೆಸ್ಸಿವ್ (Aggressive) ಆಗಿ ಬಿಹೇವ್ ಮಾಡುವುದು, ಪದೇ ಪದೆ ಜಗಳ ಮಾಡುವ ಅಭ್ಯಾಸಗಳಿಂದ ಪುರುಷರು ಹೈರಾಣಾಗುತ್ತಾರೆ.

ದೀರ್ಘಕಾಲದವರೆಗೆ ಸಂಗಾತಿಯನ್ನು ಸೆಕ್ಸ್‌ಗೆ ಕಾಯಿಸೋದು ಮಾನಸಿಕ ಕ್ರೌರ್ಯ: ಅಲಹಾಬಾದ್‌ ಹೈಕೋರ್ಟ್‌!

ಹೊಂದಾಣಿಕೆಗೆ (Adjustment) ಮನಸ್ಸಿಲ್ಲ: ಕೆಲವು ಮಹಿಳೆಯರು (Woman) ಏನು ಮಾಡಿದರೂ ಹೊಂದಾಣಿಕೆಗೆ ಮನಸ್ಸು ಮಾಡುವುದಿಲ್ಲ. ಉತ್ತಮ ಬಾಂಧವ್ಯಕ್ಕೆ ಹೊಂದಾಣಿಕೆಯೂ ಭಾರೀ ಅಗತ್ಯ. ಎಲ್ಲದರಲ್ಲೂ ಹೊಂದಾಣಿಕೆ ಮಾಡಿಕೊಳ್ಳಬೇಕಿಲ್ಲ. ಆದರೆ, ಚೂರೇ ಚೂರೂ ಹೊಂದಾಣಿಕೆಯೂ ಇಲ್ಲವಾದರೆ ಪುರುಷರು (Men) ನಿಮ್ಮನ್ನು ಕ್ರಮೇಣ ದ್ವೇಷಿಸಲು ಆರಂಭಿಸಬಹುದು.

ಒತ್ತಡ (Stress):  ನಿಮ್ಮ ಪತಿ ಕೆಲಸ, ಕುಟುಂಬ, ಹಣಕಾಸು ಒತ್ತಡದಲ್ಲಿರಬಹುದು. ಅದರಿಂದ ನಿಮ್ಮೊಂದಿಗೂ ಒರಟಾಗಿ ವರ್ತಿಸಬಹುದು. ನಿಮ್ಮ ಬಗ್ಗೆ ಇರುವ ಚಿಕ್ಕ ಕೋಪ ಈ ಸಮಯದಲ್ಲಿ ಹೆಚ್ಚಬಹುದು. 

click me!