
ಹೆತ್ತ ಅಮ್ಮನನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು, ನೋವುಂಡು ಮಗುವನ್ನು ಹೆರದೆ ಹೋದ್ರೂ ಮಕ್ಕಳ ಮೇಲೆ ತಂದೆಗೆ ಅಪಾರ ಪ್ರೀತಿ, ಜವಾಬ್ದಾರಿ ಬಿಡಿಸಲಾಗದ ಬಂಧವಿರುತ್ತದೆ. ತಾಯಿಯಷ್ಟೆ ತಂದೆಯೂ ಮಕ್ಕಳನ್ನು ಪ್ರೀತಿಸುತ್ತಾನೆ. ಮಕ್ಕಳ ಶಿಕ್ಷಣ, ಅವರ ಉತ್ತಮ ಭವಿಷ್ಯದ ಬಗ್ಗೆ ಹಗಲಿರುವ ಆಲೋಚನೆ ಮಾಡುವ ತಂದೆ, ಮನೆಯಿಂದ ದೂರವಿದ್ದು ದುಡಿಯುತ್ತಾನೆ. ಹಣ ಸಂಪಾದನೆ ಮಾಡ್ತಾನೆ. ತನ್ನ ಮಕ್ಕಳಿಗೆ ಯಾವುದೇ ತೊಂದರೆಯಾಗದಿರಲಿ ಎಂದು ದೇವರನ್ನು ಪ್ರಾರ್ಥಿಸುವ ತಂದೆ ಅವರಿಗಾಗಿ ಬೆಚ್ಚನೆ ಗೂಡು ಕಟ್ಟುವ ಹೋರಾಟದಲ್ಲಿ ಜೀವನ ಸೆವೆಸುತ್ತಾನೆ. ನೋವಿರಲಿ, ನಲಿವಿರಲಿ ಅದನ್ನು ಯಾರ ಮುಂದೆಯೂ ಹೇಳದ ಸ್ವಭಾವ ಅಪ್ಪನದ್ದು.
ಮಕ್ಕಳು (Children) ಬೆಳೆದು ದೊಡ್ಡವರಾದ್ಮೇಲೆ ಸ್ವತಂತ್ರವಾಗಿ ಹಕ್ಕಿಯಂತೆ ಹಾರಲು ಶುರುಮಾಡ್ತಾರೆ. ಮುಂದೊಂದು ದಿನ ಮಕ್ಕಳ ಜೊತೆ ಸಂತೋಷವಾಗಿ ಸಮಯ ಕಳೆದಯಬಹುದು ಎಂಬ ದೊಡ್ಡ ಆಸೆಯಲ್ಲಿ ಮಕ್ಕಳು ಚಿಕ್ಕವರಿರುವಾಗ ದುಡಿದ ತಂದೆ (Father) ಯೇ ಕೊನೆಗಾದಲ್ಲಿ ಮಕ್ಕಳಿಗೆ ಭಾರವಾಗ್ತಾರೆ. ತಂದೆಯನ್ನು ಮನೆಯಿಂದ ಹೊರಗೆ ಹಾಕಿದ್ರೆ ಸಾಕು ಎನ್ನುವವರು ಅನೇಕ ಮಂದಿ. ಮಕ್ಕಳು ದೊಡ್ಡವರಾಗ್ತಿದ್ದಂತೆ ಆಲೋಚನೆಯಲ್ಲಿ ಬೇಧ ಬರೋದು ಸಾಮಾನ್ಯ. ತಂದೆ – ಮಗನ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿರುತ್ತದೆ. ನಿರ್ಧಾರದಲ್ಲಿ ಸಂಘರ್ಷವಾಗುತ್ತಿರುತ್ತದೆ. ಮಗನಾದವನು ಈ ವೇಳೆ ಬಾಯಿತಪ್ಪಿಯೂ ಕೆಲ ಮಾತುಗಳನ್ನು ಹೇಳಬಾರದು. ಅದು ತಂದೆಯ ಮನಸ್ಸನ್ನು ಘಾಸಿಗೊಳಿಸುವ ಜೊತೆಗೆ ಆತ ಮಕ್ಕಳ ಜೊತೆ ಮೊದಲಿನ ಬಾಂಧವ್ಯದಲ್ಲಿ ಇರಲು ಸಾಧ್ಯವಾಗೋದಿಲ್ಲ.
Relationship Tips: ಉತ್ತಮ ಸಂಗಾತಿ, ದಾಂಪತ್ಯ ನಿಮ್ಮದಾಗ್ಬೇಕೇ? ಮಹಿಳೆಯರು ಹೀಗ್ಮಾಡಿದ್ರೆ ಒಳ್ಳೇದು
ನಿಮಗೆ ಏನೂ ತಿಳಿಯೋದಿಲ್ಲ, ಸುಮ್ಮನಿರಿ : ವೃದ್ಧ (Old) ತಂದೆ, ಮಕ್ಕಳ ಸಮಸ್ಯೆ ಪರಿಹರಿಸಲು ಮಧ್ಯ ಪ್ರವೇಶ ಮಾಡ್ತಿದ್ರೆ ಆಗ ಮಕ್ಕಳು ಈ ಮಾತನ್ನು ಸಹಜವಾಗಿ ಆಡ್ತಾರೆ. ಮಕ್ಕಳಿಗೆ ಇದು ಸಾಮಾನ್ಯ ಮಾತಾಗಿರಬಹುದು ಇಲ್ಲ ತಮಾಷೆಯಾಗಿರಬಹುದು. ಆದ್ರೆ ತಂದೆಗೆ ಇದು ಅವಮಾನದ ಮಾತು. ನನಗೆ ವಯಸ್ಸಾಗಿದೆ, ನನಗೆ ಈ ಮನೆಯಲ್ಲಿ ಇನ್ನು ಸ್ಥಾನವಿಲ್ಲವೆಂದು ತಂದೆ ಭಾವಿಸ್ತಾರೆ.
ಈ ಕೆಲಸ ಬರಲ್ಲ ಅಂದ್ಮೇಲೂ ಏಕೆ ಮಾಡ್ಬೇಕು : ಮಕ್ಕಳು ಹಾಗೂ ಪಾಲಕರ ಮಧ್ಯೆ ಜನರೇಷನ್ ಗ್ಯಾಪ್ ಸಾಮಾನ್ಯ. ಮಕ್ಕಳನ್ನು ಕೈಹಿಡಿದು ನಡೆಸಿದ್ದ ಪಾಲಕರು ವಯಸ್ಸಾದಂತೆ ಕೆಲವೊಂದನ್ನು ಮರೆಯುತ್ತಾರೆ. ಮತ್ತೆ ಕೆಲ ಕೆಲಸ ಮಾಡುವ ವೇಳೆ ಯಡವಟ್ಟು ಮಾಡ್ತಾರೆ. ಮಕ್ಕಳು, ಪಾಲಕರಿಗೆ ಕಲಿಸಬೇಕು. ಆದ್ರೆ ಶಾಂತವಾಗಿ ಪಾಲಕರಿಗೆ ತಿಳಿಸದ ಮಕ್ಕಳು, ನಿನಗೆ ಇದು ಅರ್ಥವಾಗೋದಿಲ್ಲ, ಕೆಲಸ ಬರಲ್ಲ ಅಂದ್ಮೇಲೆ ಮಾಡೋಕೆ ಹೋಗಿ ಹಾಳು ಮಾಡಿದ್ದು ಏಕೆ ಎಂದೆಲ್ಲ ಕೇಳ್ತಿರುತ್ತಾರೆ. ತಾಯಿ, ಮಕ್ಕಳ ಬಾಯಿಂದ ಬರುವ ಈ ಮಾತನ್ನು ಸುಲಭವಾಗಿ ಮರೆಯುತ್ತಾಳೆ. ತಂದೆಯಾದವನು ಹಾಗಲ್ಲ. ಮಕ್ಕಳ ಈ ಮಾತು ಅವರ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟು ಮಾಡುತ್ತದೆ.
ನಮ್ಮ ಮಕ್ಕಳನ್ನು ಹಾಳ್ಮಾಡಿದ್ದೀರಿ : ಮೊಮ್ಮಕ್ಕಳೆಂದ್ರೆ ಅಜ್ಜ – ಅಜ್ಜಿಗೆ ಪ್ರೀತಿ ಜಾಸ್ತಿ. ತಮ್ಮ ರೀತಿಯಲ್ಲೇ ಅವರಿಗೆ ಕಲಿಸಲು ಅಜ್ಜ –ಅಜ್ಜಿ ಮುಂದಾಗ್ತಾರೆ. ಮಕ್ಕಳಾಗಿ ತಮ್ಮ ಹಳೆ ಜೀವನವನ್ನು ಮೆಲುಕು ಹಾಕ್ತಾರೆ. ಆದ್ರೆ ಇದು ಅವರ ಮಕ್ಕಳಿಗೆ ಅರ್ಥವಾಗೋದಿಲ್ಲ. ಮಕ್ಕಳು ಹೆಚ್ಚು ಗಲಾಟೆ ಮಾಡಿದಾಗ, ನಿಂದಿಂದಲೇ ಮಗು ಹಾಳಾಗಿದ್ದು ಎಂದು ಸುಲಭವಾಗಿ ಅಪ್ಪನ ಮೇಲೆ ಆರೋಪ ಹೊರಿಸ್ತಾರೆ. ಇದು ತಂದೆಯನ್ನು ಹರ್ಟ್ ಮಾಡುತ್ತದೆ. ಮಕ್ಕಳು, ಮೊಮ್ಮಕ್ಕಳಿಂದ ದೂರವಿರಲು ಅವರು ನಿರ್ಧರಿಸುತ್ತಾರೆ.
ನೀವು ನಮಗೆ ಮಾಡಿದ್ದೇನು? : ಪಾಲಕರು ನಮಗೆ ಏನು ಮಾಡಿದ್ದಾರೆ ಎಂಬ ಅರಿವು ನಮಗಿರೋದಿಲ್ಲ. ನಾವು ವೃದ್ಧಾಪ್ಯಕ್ಕೆ ಬಂದಾಗ, ನಮ್ಮ ಮಕ್ಕಳ ಬಾಯಿಂದ ಇದೇ ಮಾತು ಬಂದಾಗ ನೋವಾಗುತ್ತದೆ. ಯಾವುದೇ ಮಕ್ಕಳು, ತಂದೆ ಮುಂದೆ ಈ ಮಾತನ್ನು ಆಡಬಾರದು. ತಂದೆಯ ಹೃದಯವನ್ನು ಇದು ಘಾಸಿಗೊಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.