#FeelFree: ಹಸ್ತ ಮೈಥುನದಿಂದ ನಾನು ಪ್ರೆಗ್ನೆಂಟ್‌ ಆಗಿರಬಹುದಾ?

By Suvarna News  |  First Published Apr 11, 2020, 6:26 PM IST

ಹಸ್ತ ಮೈಥುನ ಮಾಡಿಕೊಳ್ಳುವುದರಿಂದ ಯಾವ ಸಮಸ್ಯೆಯೂ ಇಲ್ಲ. ಅದು ಬಹುತೇಕ ಎಲ್ಲರೂ ಮಾಡಿಕೊಳ್ಳುವಂಥದ್ದೇ. ಅದರಲ್ಲೂ ನೂರಕ್ಕೆ ತೊಂಬತ್ತು ಮಂದಿ ಗಂಡಸರು ಇದನ್ನು ಮಾಡಿಕೊಳ್ಳುತ್ತಾರೆ.


ಪ್ರಶ್ನೆ: ನಾನು ಇಪ್ಪತ್ತೈದು ವರ್ಷದ ಯುವತಿ. ಬೆಂಗಳೂರಿನಲ್ಲಿ ವಾಸ. ಮದುವೆಯಾಗಿಲ್ಲ. ನಾನು ಮತ್ತು ನನ್ನ ಬಾಯ್‌ಫ್ರೆಂಡ್‌ ಕನಿಷ್ಠ ಪಕ್ಷ ಎರಡು ದಿನಕ್ಕೊಮ್ಮೆಯಾದರೂ ಭೇಟಿಯಾಗುತ್ತಿದ್ದೆವು. ಇಬ್ಬರೂ ದೇಹ ಸುಖ ಹಂಚಿಕೊಳ್ಳುತ್ತಿದ್ದೆವು. ಆದರೆ ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್ ಪರಿಣಾಮ ಆತನನ್ನು ಭೇಟಿ ಮಾಡಲಾಗಿಲ್ಲ. ಹೀಗಾಗಿ ಹಸ್ತಮೈಥುನ ಮಾಡಿಕೊಳ್ಳುತ್ತ ಸುಖ ಅನುಭವಿಸುತ್ತಿದ್ದೇನೆ. ಇದರಿಂದ ಏನಾದರೂ ಸಮಸ್ಯೆ ಆಗಬಹುದಾ? ಒಂದು ತಿಂಗಳಿನಿಂದ ನಾನು ಮುಟ್ಟಾಗಿಲ್ಲ. ನಾನು ಗರ್ಭಿಣಿ ಆಗಿರೋ ಚಾನ್ಸ್ ಇದೆಯಾ?

ಉತ್ತರ: ನಿಮ್ಮಲ್ಲಿ ಕೆಲವು ಪ್ರಾಥಮಿಕ ಮಾಹಿತಿಗಳ ಕೊರತೆ ಇರುವಂತಿದೆ. ಕೆಲವು ಗೊಂದಲಗಳೂ ಇರುವಂತಿದೆ. ಉದಾಹರಣೆಗೆ, ನೀವು ಹಸ್ತಮೈಥುನ ಮಾಡಿಕೊಳ್ಳುವುದರಿಂದ ಯಾವ ಸಮಸ್ಯೆಯೂ ಇಲ್ಲ. ಅದು ಬಹುತೇಕ ಎಲ್ಲರೂ ಮಾಡಿಕೊಳ್ಳುವಂಥದ್ದೇ. ಅದರಲ್ಲೂ ನೂರಕ್ಕೆ ತೊಂಬತ್ತು ಮಂದಿ ಗಂಡಸರು ಇದನ್ನು ಮಾಡಿಕೊಳ್ಳುತ್ತಾರೆ. ನೂರಕ್ಕೆ ಎಂಬತ್ತರಷ್ಟು ಮಹಿಳೆಯರು ಕೂಡ ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಇದರಿಂದ ನೀವು ಸುಖ ಅನುಭವಿಸುತ್ತಿದ್ದರೆ, ಇದರ ಬಗ್ಗೆ ನಿಮಗೆ ಯಾವ ಬಗೆಯ ಕೀಳರಿಮೆಯೂ ಇಲ್ಲದೆ ಇದ್ದರೆ ಅದರಿಂದ ಏನೂ ಸಮಸ್ಯೆ ಇಲ್ಲ. 

ಲಾಕ್‌ಡೌನ್ ನಡುವೆ ಲಜ್ಜೆಗೆಟ್ಟ ಜೋಡಿ: ಬಯಲಲ್ಲೇ ಕಾಮದಾಟ

ಇನ್ನು ಹಸ್ತಮೈಥುನದಿಂದ ಯಾರೂ ಗರ್ಭಿಣಿ ಆಗುವುದಿಲ್ಲ. ಕೈ ಬೆರಳುಗಳು ವೀರ್ಯವನ್ನು ಹೊರಸೂಸುವುದಿಲ್ಲ! ಅದು ಗಂಡಸಿನ ಶಿಶ್ನಕ್ಕೆ ಮಾತ್ರವೇ ಇರುವ ಸಾಮರ್ಥ್ಯ! ಹೀಗಾಗಿ ನೀವು ಹಸ್ತಮೈಥುನದಿಂದ ಗರ್ಭಿಣಿಯಾದೆ ಎಂದು ಭಯಪಟ್ಟುಕೊಳ್ಳುವ ಚಾನ್ಸೇ ಇಲ್ಲ. ಇನ್ನು, ಒಂದು ತಿಂಗಳ ಹಿಂದೆ ನೀವು ಗೆಳೆಯನ ಜೊತೆ ಕೂಡಿದ ಸಂದರ್ಭದಲ್ಲಿ, ನೀವು ಪೀರಿಯಡ್ಸ್ ಆಗಿ ಎಷ್ಟು ದಿನವಾಗಿತ್ತು ಎಂದು ಲೆಕ್ಕ ಹಾಕಿಕೊಳ್ಳಿ. ನಿಮ್ಮ ಪೀರಿಯಡ್ಸ್‌ನ ನಂತರದ ಹತ್ತನೇ ದಿನದಿಂದ ಇಪ್ಪತ್ತನೇ ದಿನದವರೆಗಿನ ನಡುವಿನ ದಿನಗಳಲ್ಲಿ ನೀವು ಸೆಕ್ಸ್ ನಡೆಸಿದ್ದರೆ, ಆಗ ಗರ್ಭಿಣಿಯಾಗಿರುವ ಚಾನ್ಸ್ ಇದೆ. ಇಲ್ಲವಾದರೆ ಇಲ್ಲ. ನಿಮ್ಮ ಪೀರಿಯಡ್ಸ್ ಅವಧಿಯಲ್ಲಿ ನಿಗದಿತವಾಗಿ ಹೆಚ್ಚು ಕಡಿಮೆ ಆಗುತ್ತಿದ್ದರೆ, ಆಗ ನೀವು ಕಳವಳ ಪಡುವ ಕಾರಣವಿಲ್ಲ. ಈ ಲೆಕ್ಕಾಚಾರಕ್ಕಿಂತಲೂ ಸುಲಭದ ಒಂದು ಕೆಲಸ ಎಂದರೆ, ಮೆಡಿಕಲ್‌ಗೆ ಹೋಗಿ ಪ್ರೆಗ್ನೆನ್ಸಿ ಕಿಟ್‌ ತೆಗೆದುಕೊಂಡು ಬಂದು ಸ್ವತಃ ಚೆಕ್‌ ಮಾಡಿಕೊಳ್ಳುವುದು. ಚೆಕ್‌ ಮಾಡಿಕೊಳ್ಳುವ ಬಗೆಯನ್ನು ನೀವು ಇಂಟರ್‌ನೆಟ್‌ನಿಂದ ತಿಳಿಯಬಹುದು. ಲಾಕ್‌ಡೌನ್‌ ಆಗಿರಬಹುದು, ಆದರೆ ಮೆಡಿಕಲ್‌ಗಳು ಓಪನ್‌ ಇವೆಯಲ್ಲ. 

ಸುಖಾ ಸುಮ್ಮನೆ ಆತಂಕ ಪಡೋ ಅಗತ್ಯವಿಲ್ಲ. ಮನಸ್ಸನ್ನು ಸಾಕಷ್ಟು ಖುಷಿಯಾಗಿಡಲು ಯತ್ನಿಸಿ, ಕೆಲವು ಒಳ್ಳೆಯ ವಿಷಯಗಳೆಡೆಗೆ ಧ್ಯಾನ ನೀಡಿ. ಎಲ್ಲವೂ ಸರಿ ಹೋಗುತ್ತದೆ. 

ಸೆಕ್ಸ್‌ನಿಂದ ಪತ್ನಿಗೆ ವಿಚಿತ್ರ ಅಲರ್ಜ, ಕಾರಣ ತಿಳಿಯದ ಪತಿ ಕಂಗಾಲು

ಪ್ರಶ್ನೆ: ನಾನೊಬ್ಬ ಗಾರ್ಮೆಂಟ್‌ ನೌಕರ. ಊರಿನಿಂಧ ದೂರ ಒಂದು ಪಿಜಿಯಲ್ಲಿದ್ದೇನೆ. ಮದುವೆಯಾಗಿಲ್ಲ. ಲಾಕ್‌ಡೌನ್‌ ಪರಿಣಾಮ ಹಗಲು ರಾತ್ರಿ ಕೆಲಸವಿಲ್ಲದೆ ರೂಮಿನಲ್ಲೇ ಇರುವ ಕಾರಣ ನಾನು ಇಂಟರ್‌ನೆಟ್‌ನಲ್ಲಿ ಪೋರ್ನ್‌ ನೋಡುವುದು ಹೆಚ್ಚಾಗಿದೆ ಎಂದು ನನಗೆ ಭಾಸವಾಗುತ್ತಿದೆ. ಯಾವಾಗಲೂ ಅದೇ ಯೋಚನೆ ಕಾಡುತ್ತಿದೆ. ಇದರಿಂಧ ಏನಾದರೂ ಸಮಸ್ಯೆಯಾದೀತಾ? ಪಾರಾಗುವುದು ಹೇಗೆ?

ಉತ್ತರ: ನಿಮ್ಮ ಪ್ರಶ್ನೆ, ಒಬ್ಬಂಟಿಯಾಗಿ ದೂರದೂರಿನಲ್ಲಿರುವ ಹಲವರ ಪ್ರಶ್ನೆಯೂ ಆಗಿರುವ ಸಂಭವ ಇದೆ. ಇದು ಸಾವಿರಾರು ಜನರ ಸಮಸ್ಯೆ ಆಗಿರಬಹುದು. ನಿಜ. ಹೆಚ್ಚಾಗಿ ಪೋರ್ನ್‌ ನೋಡುವುದು ಅಪಾಯಕಾರಿ. ಆದರೆ ಎಷ್ಟಾದರೆ ಹೆಚ್ಚು, ಎಷ್ಟಾದರೆ ಕಡಿಮೆ ಎಂದು ನಿರ್ಧರಿಸುವುದು ಅಷ್ಟೊಂದು ಸುಲಭವೇನಲ್ಲ. ನಿಮಗೆ ನೀವೇ ಒಂದು ಲಕ್ಷ್ಮಣರೇಖೆ ಹಾಕಿಕೊಳ್ಳಿ. ಉದಾಹರಣೆಗೆ, ಬೆಳಗ್ಗೆ ಎದ್ದ ಮೇಲೆ ಮಧ್ಯಾಹ್ನದ ವರೆಗೆ ನಾನು ಇಂಟರ್‌ನೆಟ್‌ ಮುಟ್ಟುವುದಿಲ್ಲ. ಹೀಗೆಂದು ನಿರ್ಧರಿಸಿ. ಯಾಕೆಂದರೆ ಇಂಟರ್‌ನೆಟ್‌ ಮುಟ್ಟದಿದ್ದರೆ ಪೋರ್ನ್‌ ಕಡೆಗೂ ಗಮನ ಹೋಗುವುದಿಲ್ಲ. ಪೋರ್ನ್‌ ನೋಡದೇ ನಿಭಾಯಿಸಲು ಸಾಧ್ಯವಾಗುತ್ತದೆಯೋ ಪ್ರಯತ್ನಿಸಿ.

ಲಾಕ್‌ಡೌನ್ ಮಧ್ಯೆ ಗರ್ಲ್ ಫ್ರೆಂಡ್ಸ್ ಜೊತೆ ಸೆಕ್ಸ್ ಪಾರ್ಟಿ

ಗೆಳೆಯರೊಡನೆ ಫೋನ್‌ನಲ್ಲಿ ಮಾತನಾಡಿ, ತುಂಬ ಹಿಂದಿನ ಗೆಳೆಯರನ್ನು ನಂಬರ್‌ ಕಂಡುಹುಡುಕಿ ಮಾತನಾಡಿಸಲು ಯತ್ನಿಸಿ. ನಿಮ್ಮ ಮರೆತುಹೋದ ಯಾವುದಾದರೂ ಹವ್ಯಾಸಗಳಿದ್ದರೆ ಅದನ್ನು ಪುನಃ ಅಭ್ಯಾಸ ಮಾಡಿ. ಉದಾಹರಣೆಗೆ, ಹಾಡುವುದು ಇತ್ಯಾದಿ. ಒಳ್ಲೆಯ ಪುಸ್ತಕ ಓದಿ, ಸಂಗೀತ ಕೇಳಿ. ಅಡುಗೆ ಮಾಡಿಕೊಳ್ಳಿ. ಇದ್ಯಾವುದರಿಂದಲೂ ಮನಸ್ಸು ಚಂಚಲವಾಗುವುದನ್ನು ನಿಗ್ರಹಿಸಲು ಸಾಧ್ಯವಾಗದಿದ್ದರೆ, ದಿನದ ಒಂದು ಹೊತ್ತನ್ನು ಮಾತ್ರ ಪೋರ್ನ್‌ಗೆ ನಿಗದಿಪಡಿಸಿ. ಉದಾಹರಣೆಗೆ, ಮಲಗುವ ಮೊದಲಿನ ಒಂದು ಗಂಟೆ. ಅಷ್ಟಕ್ಕೇ ಅದನ್ನು ಸೀಮಿತಗೊಳಿಸಲು ಪ್ರಯತ್ನಿಸಿ. ಖಂಡಿತ ಗೆಲ್ಲುತ್ತೀರಿ. 

"

click me!