ಭಾರತದಲ್ಲೂ ಬೆತ್ತಲೆ ಕಮ್ಯುನಿಟಿಗಳಿವೆ, ಬಟ್ಟೆ ಅಂದ್ರೆ ಆಗೋಲ್ಲ ಇವರಿಗೆ!

By Suvarna News  |  First Published Jul 1, 2022, 3:35 PM IST

ಜಗತ್ತಿನಾದ್ಯಂತ nudist community ಅಥವಾ ನಗ್ನ ಸಮುದಾಯಗಳು ಸಾಕಷ್ಟಿವೆ. ಭಾರತದಲ್ಲೂ ಸಾವಿರಾರು ಮಂದಿ ಗುಟ್ಟಾಗಿ ಇದ್ದಾರೆ ಎಂಬುದು ನಿಮಗೆ ಗೊತ್ತಿರಲಿ.


ಪೂಜಾ ಪ್ರತಿದಿನ ಮುಂಜಾನೆ ತನ್ನದೊಂದು ಬೆತ್ತಲೆ ಫೋಟೋವನ್ನು ತನ್ನ Instagram ಅಕೌಂಟಿನಲ್ಲಿ ಹಾಕುತ್ತಾಳೆ. ಚಾ, ಪೇಪರ್ ಜತೆಗೆ. ಕ್ರಿಯೇಟಿವ್ ಆದ ರೀತಿಯಲ್ಲಿ. ಆಕೆಯ ಪರಿಚಿತ nudist communityಯ ಹಲವು‌ ಮಂದಿ ಅದಕ್ಕೆ ರಿಯಾಕ್ಷನ್ ಹಾಕುತ್ತಾರೆ. ನಿಮಗೆ ಗೊತ್ತಿರಲಿ, ಭಾರತದಲ್ಲಿ ಕೆಲವು ಸಾವಿರ ಮಂದಿಯಾದರೂ ಸದಾ ನಗ್ನವಾಗಿ ಇರುವುದನ್ನು ಇಷ್ಟಪಡುವ ಮಂದಿ ಇದ್ದಾರೆ. ಅಲ್ಲಲ್ಲಿ ಆಗಾಗ ರಹಸ್ಯವಾಗಿ ಸೇರುತ್ತಾರೆ. ಟೀ ಸೇವಿಸುತ್ತ ನಮ್ಮ ನಿಮ್ಮಂತೆಯೇ ಲೋಕಾಭಿರಾಮವಾಗಿ ಬೆರೆಯುತ್ತಾರೆ. ಮರುದಿನ ಎಂದಿನಂತೆ ಬಟ್ಟೆ ಧರಿಸಿ ತಮ್ಮ ಕಚೇರಿಗಳಿಗೆ ತೆರಳುತ್ತಾರೆ. ಇವರು nudistಗಳು ಎಂಬುದು ಹೊರಲೋಕಕ್ಕೆ ಗೊತ್ತೇ ಆಗುವುದಿಲ್ಲ. ಪೂಜಾ ಕೂಡ ತನ್ನ ಮುಖವನ್ನು ಫೋಟೋದಲ್ಲಿ ಕಾಣಿಸುವುದಿಲ್ಲ. ಆಕೆಯ ಗಂಡನಿಗೂ ಅವಳು nudist ಅನ್ನುವುದು ಗೊತ್ತಿಲ್ಲ.

ಏನು ಈ nudist ಅಂದರೆ?
ಇವರು ಸಹಜವಾಗಿ, ಬೆತ್ತಲೆಯಾಗಿ, ಪ್ರಕೃತಿಯ ಜತೆ ಬೆರೆತಂತೆ ಇರಲು ಬಯಸುವವರು. ಇದಕ್ಕೂ sexಗೂ ಸಂಬಂಧವಿಲ್ಲ. Nudist meetಗಳಲ್ಲಿ ಸೆಕ್ಸ್(Sex) ನಡೆಯುವುದಿಲ್ಲ. ನಮ್ಮ ಮೀಟಿಂಗ್‌(Meeting)ಗಳಲ್ಲಿ ಬಟ್ಟೆ ಧರಿಸಿರುತ್ತೇವೆ, ಇವರು ಧರಿಸಿರುವುದಿಲ್ಲ ಅಷ್ಟೆ. ಇವರೇಕೆ ಬಟ್ಟೆ ನಿರಾಕರಿಸುತ್ತಾರೆ? ಒಬ್ಬೊಬ್ಬರಿಗೆ ಒಂದೊಂದು ಕಾರಣ. ಕೆಲವರಿಗೆ ಬಟ್ಟೆಯೇ ಉಸಿರುಗಟ್ಟಿಸುತ್ತದೆ. ಕೆಲವರಿಗೆ ನಿಸರ್ಗದ ಜತೆ ಒಂದಾಗಲು ದಿರಿಸು ಅಡ್ಡಿ. ಕೆಲವರಿಗೆ ಅದೊಂದು ಯೋಗ ಅಥವಾ ಧ್ಯಾನ.

Tap to resize

Latest Videos

ಐಫೆಲ್‌ ಟವರ್‌ನ್ನು ಮದ್ವೆಯಾಗಿದ್ದ ಮಹಿಳೆಗೆ ಈಗ ಬೇಲಿಯಂದ್ರೆ ಸಿಕ್ಕಾಪಟ್ಟೆ ಪ್ರೀತಿಯಂತೆ !

ಇವರು ಹೇಗೆ ಒಂದಾಗುತ್ತಾರೆ? ಸಾಮಾನ್ಯವಾಗಿ ಒಬ್ಬರಿಂದ ಒಬ್ಬರಿಗೆ ಪರಿಚಯವಾಗಿ ಕಮ್ಯುನಿಟಿ ಬೆಳೆದಿರುವುದೇ ಹೆಚ್ಚು. ಮೊದಮೊದಲು ಯಾರೂ ಸುಲಭವಾಗಿ ತೆರೆದುಕೊಳ್ಳುವುದಿಲ್ಲ. ಪೂಜಾ ತನ್ನ ಮೊದಲ ಮೀಟಿಂಗ್‌ನಲ್ಲಿ ಬಟ್ಟೆ ಧರಿಸಿದ್ದಳು. ಆದರೆ ಎಲ್ಲರೂ ನಗ್ನವಾಗಿರುವಾಗ ಬಟ್ಟೆ ಧರಿಸಿರುವುದೇ ಅಸಹಜವೆನಿಸಿತು. ತಾನೂ ಕಳಚಿದಳು. ಈಗ ಇದೇ ಸುಖ ಅನಿಸುತ್ತದೆ.

ಈ nude meetingಗಳಲ್ಲಿ ಇನ್ನೊಬ್ಬರ ದೇಹ ನೋಡಿ ಯಾರಿಗೂ ಉದ್ರೇಕ ಆಗುವುದಿಲ್ಲವಾ? ಆಗಬಹುದು. ಇದೂ ಅಸಹಜವಲ್ಲ. ಸಹಜವಾಗಿ ಸ್ವೀಕರಿಸುತ್ತಾರೆ. ಆದರೆ ಜತೆಗೆ ಒಂದು ಟವೆಲ್ ಇಟ್ಟುಕೊಂಡಿರುತ್ತಾರೆ. ಅಂಥ ಸಂದರ್ಭದಲ್ಲಿ ಶಿಶ್ನದ ತುದಿಯಲ್ಲಿ ವೀರ್ಯದ್ರವ ಒಸರಿದರೆ ಅದನ್ನು ಒರೆಸಿಕೊಳ್ಳಬೇಕಂತೆ. ಇದು ಮೊದಮೊದಲು ಆಗಬಹುದು. ನಂತರ ಅಭ್ಯಾಸವಾಗುತ್ತದೆ. ಮೀಟಿಂಗ್‌ಗಳಲ್ಲಿ ಕೆಲವು ಶಿಷ್ಟಾಚಾರಗಳಿರುತ್ತವೆ. ಯಾರೂ ಶೇಕ್‌ಹ್ಯಾಂಡ್ ಹೊರತುಪಡಿಸಿ ಬೇರೆ ಅನಗತ್ಯ ಮೈ ಸ್ಪರ್ಶ ಮಾಡುವುದಿಲ್ಲ. ಇನ್ನೊಬ್ಬರ ಮೈಯನ್ನು ದುರುಗುಟ್ಟಿ ನೋಡುವುದಿಲ್ಲ.

World Social Media Day 2022: ಸಾಮಾಜಿಕ ಮಾಧ್ಯಮದಿಂದ ಸಂಬಂಧ ಹಾಳಾಗುತ್ತಾ ?

ಮೀಟಿಂಗ್‌ಗಳ ನಡುವೆ ಯಾರೂ ಸ್ಮಾರ್ಟ್‌ಫೋನ್(Smartphone) ತರುವಂತಿಲ್ಲ. ಅದನ್ನು ಬೇರೆ ಕೋಣೆಯಲ್ಲಿ ಇಟ್ಟಿರಬೇಕು. ಫೋಟೋ ವಿಡಿಯೋ ಮಾಡುವಂತಿಲ್ಲ. ಮಾಡಿದರೆ ಮುಖ ಕಾಣಿಸುವಂತಿಲ್ಲ.

Nudist meetಗಳಿಗೆ ಬರುವ ಸಮಯಸಾಧಕರು, pervertಗಳು, ಸೈಕೋಗಳು ಇರುತ್ತಾರೆ. ಒಂದೆರಡು ಭೇಟಿಗಳಲ್ಲಿ ಇವರ ಬಣ್ಣ ಬಯಲಾಗುತ್ತದೆ. ಅವರನ್ನು ದೂರ ಇಡಲಾಗುತ್ತದೆ.

 

 
 
 
 
 
 
 
 
 
 
 
 
 
 
 

A post shared by VICE India (@viceindia)

ಆದರೆ ಭಾರತದಂಥ ದೇಶದಲ್ಲಿ nudist communityಗಳು ಕಾರ್ಯಾಚರಿಸುವುದು ಕಡು ಕಷ್ಟ. ಇಲ್ಲಿ ಹೆಚ್ಚಿನವರದು ಸಾಂಪ್ರದಾಯಿಕ ಮನಸ್ಥಿತಿ. ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸುವುದನ್ನು ಕಾನೂನು ಕಟುವಾಗಿ ಶಿಕ್ಷಿಸುತ್ತದೆ. ಅಥವಾ ಸಾರ್ವಜನಿಕರೇ ಹಿಡಿದು ಬಡಿಯುತ್ತಾರೆ. ಹೀಗಾಗಿ ಈ ಸಮುದಾಯ ಏಕಾಂತ ಸ್ಥಳಗಳನ್ನು ಹುಡುಕಿಕೊಳ್ಳುತ್ತದೆ. ಯಾರೂ ಇಲ್ಲದ ಬೀಚುಗಳು, ಅಪಾರ್ಟ್‌ಮೆಂಟ್‌ಗಳು, ಕಾಡಿನ ನಡುವೆ- ಹೀಗೆ ಇವರ ಜಮಾಯಿತಿ. ಮನವೊಲಿಸಿದರೆ ಕೆಲವು ರೆಸಾರ್ಟ್ ಮಾಲಿಕರು ಅನುಮತಿ ಕೊಡುವುದುಂಟು.

Relationship Tips : ನಿಮ್ಮ ಹುಡುಗ ವರ್ಜಿನ್ನಾ? ಹೀಗೆ ಪರೀಕ್ಷೆ ಮಾಡಿ

Nudist communityಗಳು ಜಗತ್ತಿನಾದ್ಯಂತ ಬೆಳೆಯುತ್ತಿವೆ. ಒಂಟಿಯಾಗಿ ಭಾಗವಹಿಸುವವರೂ, ದಂಪತಿಗಳೂ ಸಾಕಷ್ಟು ಇದ್ದಾರೆ. Nude ಫ್ಯಾಮಿಲಿಗಳೂ ತಯಾರಾಗುತ್ತಿವೆ. ಅಂದರೆ ಮನೆಯಲ್ಲಿ ಎಲ್ಲರೂ ನಗ್ನವಾಗಿರುವುದು. ಫ್ರಾನ್ಸ್, ಅಮೆರಿಕದಲ್ಲಿ ಮೊದಮೊದಲು ಆರಂಭವಾದ ಈ ರೂಢಿ ಈಗ ಭಾರತದಲ್ಲೂ ವ್ಯಾಪಕವಾಗಿದೆ. ಪಶ್ಚಿಮ ಬಂಗಾಳದಲ್ಲಿ ಹೆಚ್ಚಿದೆ. ಬೆಂಗಳೂರಿನಲ್ಲೂ ಬಹಳಷ್ಟಿದ್ದಾರೆ. ನಿಮ್ಮ ಸುತ್ತಮುತ್ತಲೂ ನಿಮಗರಿಯದಂತೆ ಇರಬಹುದು. ಸದಾ ಗುಪ್ತತೆ ಕಾಪಾಡಿಕೊಳ್ಳುತ್ತಾರೆ.

ಕೊನೆಗೂ ಈ nudism ಏನು? ಕೆಲವರು ಇದನ್ನು exhibitionism ಅಥವಾ naturismಗೆ ಹೋಲಿಸುವುದುಂಟು. ಇದು ಅವೆರಡೂ ಅಲ್ಲ. ಪ್ರಕೃತಿಗೆ ಹತ್ತಿರವಾಗಿರುವ Naturismನ ಅಂಶಗಳು ಇದರಲ್ಲಿವೆ. ಆದರೆ ಅದೇ ಅಲ್ಲ. ಇನ್ನು ಪ್ರದರ್ಶನಪ್ರಿಯತೆ ಇವರ ಉದ್ದೇಶವಲ್ಲ. ಅಂಥವರಿಗೆ ಇಲ್ಲಿ ತಾಣವಲ್ಲ. ಇದು ತಮ್ಮ ದೇಹವನ್ನು ಪ್ರೀತಿಸುವ ಒಂದು ರೀತಿ. ಬೇರೆ ಬೇರೆ ಬಗೆಯ ದೇಹಗಳನ್ನು ನೋಡಿ ಅರಿತುಕೊಳ್ಳುವ ಒಂದು celebration ಅಷ್ಟೆ.

click me!