Latest Videos

Viral Video: ಒಂದು ಕೋಳಿ, ನಾಲ್ಕು ಹುಂಜ, ತಂದೆ ಯಾರು ಎನ್ನುತ್ತಿದ್ದಾರೆ ನೆಟ್ಟಿಗರು..!

By Roopa HegdeFirst Published Jun 15, 2024, 4:35 PM IST
Highlights

ಸಾಮಾಜಿಕ ಜಾಲತಾಣದಲ್ಲೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹುಂಜ ಹಾಗೂ ಕೋಳಿಯನ್ನು ನೋಡ್ಬಹುದು. ಒಂದು ಕೋಳಿ ಹಾಗೂ ನಾಲ್ಕು ಹುಂಜದ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
 

ಒಂದು ಹುಡುಗಿ ಹಿಂದೆ ನಾಲ್ಕೈದು ಹುಡುಗ್ರು ಬಂದ್ರೆ ಅವಳ ಕಥೆ ಮುಗಿದಂತೆ. ದೇಶದಲ್ಲಿ ಇಂಥ ಕ್ರೂರಿಗಳ ಸಂಖ್ಯೆ ಸಾಕಷ್ಟಿದೆ. ಒಂಟಿ ಹುಡುಗಿ ಸಿಕ್ಕಿದ್ರೆ ಆಕೆ ಮೇಲೆ ಅತ್ಯಾಚಾರವೆಸಗಿ ಸಾಯೋವವರೆಗೂ ಬಿಡದ ಜನರಿದ್ದಾರೆ. ಇಂಥ ಅನೇಕ ಘಟನೆ ಬೆಳಕಿಗೆ ಬರುತ್ತವೆ. ಮನುಷ್ಯರು ಮಾತ್ರವಲ್ಲ, ಹೆಣ್ಣು ಪ್ರಾಣಿಗಳಿಗೂ ನೆಮ್ಮದಿ ಇಲ್ಲ. ಒಂದು ಕೋಳಿ ಸಿಕ್ಕಿದ್ರೆ ನಾನು, ನಾನು ಅಂತ ನಾಲ್ಕೈದು ಹುಂಜ ಮುತ್ತುತ್ತೆ. ಇವರ ಸಹವಾಸದಿಂದ ಹೊರಗೆ ಬರೋಕಾಗದೆ ಕೋಳಿ ಒದ್ದಾಡುತ್ತೆ. ಆದ್ರೆ ಅವು ಮಾತು ಬಾರದ ಮೂಖ ಪ್ರಾಣಿಗಳು. ಅವರ ಇಂಥ ಜೀವನಕ್ಕೆ ವಿಶೇಷ ಮಹತ್ವವಿಲ್ಲ. ಮೂಖ ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜನರು ಈ ವಿಡಿಯೋ ನೋಡಿ ಸಾಕಷ್ಟು ಕಮೆಂಟ್ ಮಾಡಿದ್ದಾರೆ. 

ನಿತ್ಯ ಜೀವನದಲ್ಲಿ ಅದೇನೇ ಘಟನೆ ನಡೆಯಲಿ ಜನರು ಮೊದಲು ಮಾಡೋದು ಅದನ್ನು ವಿಡಿಯೋ (Video)  ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡೋದು. ಹಾಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ (social media) ಪ್ರತಿ ದಿನ ಒಂದಿಷ್ಟು ವಿಡಿಯೋಗಳು ಅಪ್ಲೋಡ್ ಆಗ್ತಿರುತ್ತವೆ. ಕೆಲವೊಂದು ವಿಡಿಯೋ ಏಕಾಏಕಿ ವೈರಲ್ (viral) ಆಗುತ್ವೆ. ನೂರಾರು ಮಂದಿ ಕಮೆಂಟ್ ಮಾಡ್ತಾರೆ. ರಿಲೇಶನ್ಶಿಪ್ ವಿಡಿಯೋಗಳು ಈಗಿನ ದಿನಗಳಲ್ಲಿ ಸಾಕಷ್ಟು ಅಪ್ಲೋಡ್ ಆಗ್ತಿದೆ. ಮನುಷ್ಯರು ನಾಚಿಕೆ ಬಿಟ್ಟು ವಿಡಿಯೋ ಮಾಡ್ತಿದ್ದಾರೆ. ಅದೇನೇ ಇರಲಿ ಈ ರಿಲೇಶನ್ಶಿಪ್ ಎಂಬ ವಿಷ್ಯ ಬಂದಾಗ ಅದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳ ಜೊತೆಯೂ ನಂಟು ಹೊಂದಿರುತ್ತೆ. ಪ್ರಾಣಿಗಳ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೀವು ನೋಡ್ಬಹುದು.

ಅಪ್ಪು ಅವ್ರು ಬಿಗ್ ಸ್ಟಾರ್, ಇಲ್ಲಿ ಇಷ್ಟು ಜನ ಕಾಯ್ತಾ ಇದೀವಿ; ಹೀಗಂದಿದ್ಯಾಕೆ 'ಕೋಟಿ' ಪರಮ್..?

ಈಗ  The Instigator @Am_Blujay ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ನಾಲ್ಕು ಹುಂಜವನ್ನು ನೀವು ನೋಡ್ಬಹುದು. ಬಿಳಿ ಬಣ್ಣದ ಹುಂಜಗಳು ಒಂದು ಕೋಳಿ ಮೇಲೆ ಆಕ್ರಮಣ ನಡೆಸಿವೆ. ಒಂದಾದ್ಮೇಲೆ ಒಂದರಂತೆ ಕೋಳಿ ಮೇಲೆರಗೋದನ್ನು ನೀವು ನೋಡ್ಬಹುದು. ಈ ವಿಡಿಯೋ ಹಂಚಿಕೊಂಡ ವ್ಯಕ್ತಿ, ಈ ಕೋಳಿಗಳು ಸಂಜೆ ಆರು ಗಂಟೆಯೊಳಗೆ ಜೈಲಿನಲ್ಲಿ ಇರಬೇಕು ಎಂದು ಶೀರ್ಷಿಕೆ ಹಾಕಿದ್ದಾನೆ. ಈ ವಿಡಿಯೋ ಈವರೆಗೆ 2.9 ಮಿಲಿಯನ್ಸ್ ವೀವ್ಸ್ ಪಡೆದಿದೆ. 13 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಕಮೆಂಟ್ ಈ ವಿಡಿಯೋಕ್ಕೆ ಬಂದಿದೆ. 

ಕೋಳಿಯ ರಿಯಾಕ್ಷನ್ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಮೈ ಕೊಡವಿ ಈ ಕೋಳಿ ಮುನ್ನುಗ್ಗುತ್ತಿದೆ. ಈ ಮೂಲಕ ಹಿಂದೆ ಆಗಿದ್ದನ್ನು ಅದು ನೆನಪಿಸಿಕೊಳ್ತಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಡಿಎನ್ಎ ಫಲಿತಾಂಶವು ಶಾಶ್ವತವಾಗಿ ಅನಿರ್ದಿಷ್ಟವಾಗಿ ಉಳಿಯುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ಬೇಬಿ ಕೋಳಿಯ ಮಗು ಯಾರದ್ದು ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.  ಇದು ಕೋಳಿ ಮೇಲಾಗ್ತಿರುವ ರೇಪ್ ಎಂದು ಮತ್ತೊಬ್ಬರು ಬರೆದಿದ್ದಾರೆ. ಅವರು ಜೈಲಿಗೆ ಹೋಗ್ತಾರೋ ಇಲ್ವೋ, ರಾತ್ರಿ ಟೈಂನಲ್ಲಿ ಪ್ಲೇಟ್ ನಲ್ಲಿರ್ತಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

Fathers Day : ಒಳ್ಳೆ ರಾಜನಾದ್ರೂ ಒಳ್ಳೆ ಅಪ್ಪನಾಗ್ಲಿಲ್ಲ… ಮಗನನ್ನೇ ಕೊಂದ ಈ ತಂದೆ

ಪ್ರಾಣಿಗಳ ಲೋಕದಲ್ಲೂ ತಮ್ಮ ಹಿಂದಿನದನ್ನು ಮರೆತುಬಿಡಿ ಎಂಬ ಹೆಣ್ಮಕ್ಕಳಿದ್ದಾರೆಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಒಳ್ಳೆಯ ಸಹಿಷ್ಣತೆಯನ್ನು ಕೋಳಿ ಹೊಂದಿದೆ ಎಂದು ಕಮೆಂಟ್ ಮಾಡಿದವರೂ ಇಲ್ಲಿದ್ದಾರೆ. ನೀವು ಅತ್ಯಾಚಾರವನ್ನು ತಪ್ಪಿಸಲು ಬಯಸಿದರೆ, ಮಲಗಿ ಮತ್ತು ಆನಂದಿಸಿ ಎನ್ನುವ ಹಳೆಯ ಮಾತು ಇದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. 

I want these chickens in jail by 6pm pic.twitter.com/P47x6E9xv9

— The Instigator (@Am_Blujay)
click me!