ಅಬ್ಬಬ್ಬಾ...! ಇಲ್ಲಿ ಮದುವೆಯಾದ 3 ದಿನಗಳವರೆಗೆ ವಧು, ವರ ಟಾಯ್ಲೆಟ್‌ಗೆ ಹೋಗುವಂತಿಲ್ಲ!

By Suvarna News  |  First Published Jul 13, 2022, 12:35 PM IST

* ವಿಶ್ವಾದ್ಯಂತ ಧರ್ಮ, ದೇಶದ ಅನ್ವಯ ವಿಭಿನ್ನವಾಗಿ ನಡೆಯುತ್ತೆ ಮದುವೆ ಸಂಪ್ರದಾಯ

* ಈ ಸಮುದಾಯದಲ್ಲಿ ಮದುವೆ ಬಳಿಕ ಇರುತ್ತೆ ವಿಚಿತ್ರ ಸಂಪ್ರದಾಯ

* ಮದುವೆಯಾದ 3 ದಿನಗಳವರೆಗೆ ವಧು, ವರ ಟಾಯ್ಲೆಟ್‌ಗೆ ಹೋಗುವಂತಿಲ್ಲ


ಜಕಾರ್ತ(ಜು.13): ವಿವಾಹವು ಪವಿತ್ರ ಬಂಧವಾಗಿದೆ ಮತ್ತು ಇದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಬಹಳ ಮುಖ್ಯವಾಗಿದೆ. ಅಲ್ಲದೆ, ಪ್ರಪಂಚದಾದ್ಯಂತ ಹಲವಾರು ರೀತಿಯ ವಿವಾಹಗಳಿವೆ ಮತ್ತು ಪ್ರತಿಯೊಂದು ಧರ್ಮದಲ್ಲೂ ವಿಭಿನ್ನ ಸಂಪ್ರದಾಯದಂತೆ ಮದುವೆ ಶಾಸ್ತ್ರ ನಡೆಯುತ್ತದೆ. ಆದರೆ ಇಲ್ಲೊಂದು ಕಡೆ ಮದುವೆ ಬಳಿಕ ನಡೆಯುವ ಸಂಪ್ರದಾಯ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಹೌದು ಇದು ನಂಬಲಸಾಧ್ಯವಾದರೂ, ನಂಬಲೇಬೇಕಾದ ವಿಚಾರ, ಮದುವೆಯಾದ ನಂತರ ವಧು-ವರರನ್ನು ಶೌಚಾಲಯಕ್ಕೆ ಹೋಗದಂತೆ ತಡೆಯುವ ದೇಶ ಜಗತ್ತಿನಲ್ಲಿದೆ, ಇದರ ಹಿಂದಿನ ಕಾರಣವನ್ನು ತಿಳಿದರೆ ನೀವೂ ಆಶ್ಚರ್ಯ ಪಡುತ್ತೀರಿ. ಹಾಗಾದರೆ ನವದಂಪತಿ ಜೊತೆ ಇಂತಹ ದೌರ್ಜನ್ಯ ಎಲ್ಲಿ ನಡೆಯುತ್ತದೆ? ಇಲ್ಲಿದೆ ವಿವರ

3 ದಿನಗಳ ಕಾಲ ವಧು-ವರ ಶೌಚಾಲಯಕ್ಕೆ ಹೋಗುವಂತಿಲ್ಲ

Tap to resize

Latest Videos

ಮದುವೆಗೆ ಸಂಬಂಧಿಸಿದ ಈ ಆಚರಣೆ ಇಂಡೋನೇಷ್ಯಾದ ಡಿಡಾಂಗ್ ಎಂಬ ಸಮುದಾಯದಲ್ಲಿ ನಡೆಯುತ್ತದೆ. ಇದರಲ್ಲಿ ಮದುವೆಯಾದ 3 ದಿನಗಳ ಕಾಲ ವರನಿಗೆ ಶೌಚಾಲಯಕ್ಕೆ ಹೋಗುವಂತಿಲ್ಲ. ಮದುವೆಯಂತಹ ಪವಿತ್ರ ಬಂಧನದ ನಂತರ ವಧು-ವರರು ಶೌಚಾಲಯಕ್ಕೆ ಹೋದರೆ, ಅವರ ಶುದ್ಧತೆಗೆ ಭಂಗವುಂಟಾಗುತ್ತದೆ ಮತ್ತು ಅವರು ಅಶುದ್ಧರಾಗುತ್ತಾರೆ ಎಂಬುದು ಇದರ ಹಿಂದಿನ ಕಾರಣ. ಈ ಕಾರಣಕ್ಕಾಗಿಯೇ ಮದುವೆಯ ಸಮಯದಲ್ಲಿ ಅಥವಾ ನಂತರ ವಧು-ವರರು ಶೌಚಾಲಯಕ್ಕೆ ಹೋಗಬಾರದು.

ಮದುಮಗನಿಗೆ ದೃಷ್ಟಿ ತಾಗಬಾರದು 

ಮದುವೆಯ ನಂತರ ವಧು-ವರನನ್ನು ಶೌಚಾಲಯಕ್ಕೆ ಹೋಗಲು ಬಿಡದಿರುವ ಮತ್ತೊಂದು ಕಾರಣವೆಂದರೆ ಮಲವಿಸರ್ಜನೆ ಮಾಡುವ ಸ್ಥಳದಲ್ಲಿ ಕೊಳಕು ಇರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವವಿದೆ ಎಂದು ಜನರು ಭಾವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಶೌಚಾಲಯಕ್ಕೆ ಹೋಗುವುದು ವಧುವರರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟುಮಾಡುತ್ತದೆ ಮತ್ತು ಅವರಿಗೆ ದೃಷ್ಟಿ ಬೀಳುತ್ತದೆ, ಆದ್ದರಿಂದ ಅವರು 3 ದಿನಗಳವರೆಗೆ ಶೌಚಾಲಯಕ್ಕೆ ಹೋಗಲು ಅನುಮತಿ ನೀಡುವುದಿಲ್ಲ. 

ತಿನ್ನುವುದು ಮತ್ತು ಕುಡಿಯುವುದಕ್ಕೂ ನಿಷೇಧ

ಅಷ್ಟೇ ಅಲ್ಲ, ಈ ಸಮುದಾಯದ ಜನರು ಮದುವೆಯ ನಂತರ ವಧು-ವರರಿಗೆ ಊಟ-ಕುಡಿತಕ್ಕೆ ನೀಡುವುದು ತೀರಾ ಕಡಿಮೆ, ಇದರಿಂದ ಅವರು ಶೌಚಾಲಯಕ್ಕೆ ಹೋಗುವ ಅನಿವಾರ್ಯ ಬರದಂತೆ ನೋಡಿಕೊಳ್ಳುತ್ತಾರೆ. ಇಂಡೋನೇಷ್ಯಾದಲ್ಲಿ ಈ ಆಚರಣೆಯನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಮತ್ತು ಯಾರಾದರೂ ಅದನ್ನು ಮುರಿದರೆ ಅದನ್ನು ಅತ್ಯಂತ ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.

click me!