ಒಂದು ವರ್ಷ ಕೈ-ಕೈ ಹಿಡಿದು ಪ್ರೀತಿಸಿ ಮದುವೆಯಾದ ಹೆಂಡತಿ, 12 ದಿನದ ಬಳಿಕ 'ಗಂಡಸು' ಎಂಬ ಸತ್ಯ ಹೊರಬಿತ್ತು!

Published : May 25, 2026, 03:07 PM IST
Indonesia marriage scam

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನಿಗೆ, 12 ದಿನಗಳ ನಂತರ ತನ್ನ ಪತ್ನಿ ಹೆಣ್ಣಲ್ಲ, ಬದಲಾಗಿ ಆಸ್ತಿಗಾಗಿ ವಂಚಿಸಲು ಬಂದ ಪುರುಷ ಎಂಬ ಆಘಾತಕಾರಿ ಸತ್ಯ ತಿಳಿದುಬಂದಿದೆ. ಒಂದು ವರ್ಷದ ಪ್ರೀತಿಯ ನಾಟಕ ಎಲ್ಲೆಡೆ ಚರ್ಚೆಯಲ್ಲಿದೆ.

ಪ್ರೀತಿ ಕುರುಡು ಎನ್ನುವ ಮಾತಿದೆ, ಆದರೆ ಇಲ್ಲೊಬ್ಬ ಯುವಕನ ಪ್ರೀತಿ ಅವನನ್ನೇ ದಾರಿ ತಪ್ಪಿಸಿ ಅಕ್ಷರಶಃ ಪಂಗನಾಮ ಹಾಕಿದೆ. ಒಂದು ವರ್ಷ ಕಾಲ ಪ್ರೀತಿಸಿ, ಸಂಪ್ರದಾಯಬದ್ಧವಾಗಿ ಮದುವೆಯಾದ 12 ದಿನಗಳ ನಂತರ, ತನ್ನ ಪತ್ನಿ ಹೆಣ್ಣಲ್ಲ ಬದಲಾಗಿ ಗಂಡು ಎಂಬ ಆಘಾತಕಾರಿ ಸತ್ಯ ಪತಿಗೆ ತಿಳಿದುಬಂದಿದೆ. ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ನಡೆದ ಈ ಘಟನೆ ಈಗ ವಿಶ್ವದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಪ್ರೀತಿ:

ಇಂಡೋನೇಷ್ಯಾದ ನಾರಿಂಗುಲ್ ನಿವಾಸಿಯಾಗಿರುವ 26 ವರ್ಷದ ಯುವಕ (ಹೆಸರು ಎಕೆ - AK), 2023 ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ 'ಅದಿನಾ ಕನ್ಜಾ' ಎಂಬ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಸುಮಾರು ಒಂದು ವರ್ಷ ಕಾಲ ಇಬ್ಬರೂ ಪರಸ್ಪರ ಭೇಟಿಯಾಗುತ್ತಿದ್ದರು. ಆದರೆ, ಪ್ರತಿ ಬಾರಿ ಭೇಟಿಯಾದಾಗಲೂ ಅದಿನಾ ಕನ್ಜಾ ಮುಖವನ್ನು ಪೂರ್ತಿಯಾಗಿ ಮುಚ್ಚುವ ಮುಸ್ಲಿಂ ಸಂಪ್ರದಾಯದ 'ನಿಕಾಬ್' ಧರಿಸುತ್ತಿದ್ದಳು. ತಾನು ಧರ್ಮನಿಷ್ಠ ಮಹಿಳೆಯಾದ್ದರಿಂದ ಮುಖ ತೋರಿಸುವುದಿಲ್ಲ ಎಂದು ಅವಳು ಹೇಳಿದಾಗ, ಎಕೆ ಅದನ್ನು ಗೌರವದಿಂದ ಒಪ್ಪಿಕೊಂಡಿದ್ದನು.

ಸರಳ ವಿವಾಹ:

ಒಂದು ವರ್ಷದ ಪ್ರೀತಿಯ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮದುವೆಯ ಮಾತುಕತೆ ಬಂದಾಗ, ತನಗೆ ಯಾರೂ ಕುಟುಂಬದವರಿಲ್ಲ, ತಾನೊಬ್ಬ ಅನಾಥೆ ಎಂದು ಅದಿನಾ ಕನ್ಜಾ ನಂಬಿಸಿದ್ದಳು. ಈ ಕಾರಣದಿಂದಾಗಿ ಏಪ್ರಿಲ್ 12 ರಂದು ಎಕೆ ಅವರ ಮನೆಯಲ್ಲೇ ಅತ್ಯಂತ ಸರಳವಾಗಿ ಮದುವೆ ಸಮಾರಂಭ ನಡೆಯಿತು. ಮದುವೆಯ ನಂತರವೂ ಅದಿನಾ ತನ್ನ ನಿಕಾಬ್ (ಹಿಜಾಬ್) ತೆಗೆಯಲು ನಿರಾಕರಿಸುತ್ತಿದ್ದಳು.

ಅನುಮಾನ ಮೂಡಿದ್ದು ಹೇಗೆ?

ಮದುವೆಯಾದ 12 ದಿನಗಳ ಕಾಲ ಅದಿನಾ ಪತಿಯ ಕುಟುಂಬದವರೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದಳು ಮತ್ತು ಮನೆಯಲ್ಲೂ ಮುಖವನ್ನು ಮುಚ್ಚಿಕೊಂಡೇ ಇರುತ್ತಿದ್ದಳು. ಇದರಿಂದ ಅನುಮಾನಗೊಂಡ ಎಕೆ, ಅವಳ ಹಿನ್ನೆಲೆಯನ್ನು ಹುಡುಕುತ್ತಾ ಅವಳು ಹೇಳಿದ್ದ ಹಳೆಯ ವಿಳಾಸಕ್ಕೆ ಹೋದಾಗ ಆಘಾತಕಾರಿ ಸತ್ಯಗಳು ಹೊರಬಂದವು. ಅದಿನಾ ಹೇಳಿದಂತೆ ಅವಳು ಅನಾಥೆಯಲ್ಲ, ಅವಳ ತಂದೆ-ತಾಯಿ ಇಬ್ಬರೂ ಬದುಕಿದ್ದರು!

ಅದಿನಾ ಅಸಲಿಗೆ ವೇಷ ಮರೆಸಿಕೊಂಡ ಪುರುಷ:

ಎಕೆ ತನ್ನ ಪತ್ನಿಯ ಪೋಷಕರನ್ನು ಭೇಟಿಯಾದಾಗ, ಅವರಿಗೆ ತಮ್ಮ ಮಗನ ಮದುವೆಯ ಬಗ್ಗೆ ಕಿಂಚಿತ್ತೂ ಸುಳಿವಿರಲಿಲ್ಲ. ತನಿಖೆಯ ನಂತರ ತಿಳಿದುಬಂದ ವಿಷಯವೇನೆಂದರೆ, ಅದಿನಾ ಕನ್ಜಾ ಎಂಬ ಹೆಸರಿನಲ್ಲಿ ಎಕೆ ಜೊತೆ ಸಂಸಾರ ಮಾಡುತ್ತಿದ್ದವಳು ಹೆಣ್ಣಲ್ಲ, ಬದಲಾಗಿ 2020 ರಿಂದ ಹೆಣ್ಣಿನ ವೇಷ ಧರಿಸುತ್ತಿದ್ದ 'ಇಎಸ್ ಹೆಚ್' ಎಂಬ ವೇಷ ಮರೆಸಿಕೊಂಡ ಪುರುಷ ಎಂಬುದು ಪತ್ತೆಯಾಗಿದೆ.

ವಂಚನೆಯ ಉದ್ದೇಶ:

ತಕ್ಷಣ ಪೊಲೀಸರಿಗೆ ದೂರು ನೀಡಿದಾಗ, ಪುರುಷ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಎಕೆ ಕುಟುಂಬದ ಆಸ್ತಿಯನ್ನು ಲೂಟಿ ಮಾಡುವ ಉದ್ದೇಶದಿಂದ ತಾನು ಹೆಣ್ಣಿನ ವೇಷ ಧರಿಸಿ ಪ್ರೀತಿಯ ನಾಟಕವಾಡಿ ಮದುವೆಯಾಗಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ವರ್ಷ ಕಾಲ ಜೊತೆಯಲ್ಲಿದ್ದರೂ ತನ್ನ ಸಂಗಾತಿ ಗಂಡು ಎಂಬುದನ್ನು ಪತ್ತೆಹಚ್ಚಲು ಎಕೆಗೆ ಸಾಧ್ಯವಾಗದಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತ್ರಿಶಾ ಜೊತೆ ಸೂರ್ಯ ಅಲ್ಲ, ವಿಜಯ್ ನಟಿಸಬೇಕಿತ್ತು; ಆದ್ರೆ ದಳಪತಿ ಕೈತಪ್ಪಿ ಆ ಸ್ಟಾರ್ ಪಾಲಾಗಿದ್ದು ಹೇಗೆ?
ಮೊಮ್ಮಗಳ ವಯಸ್ಸಿನ 20ರ ಯುವತಿಯನ್ನ 4ನೇ ಮದುವೆಯಾದ 70ರ ಮಾಜಿ ಕಾರ್ಪೋರೇಟರ್ ಹಾಜಿ ಖಲೀಲ್!