ರೋಲ್ಸ್​ ರಾಯ್​ ಕಾರಿನ ಜೊತೆ 70ರ ಅಜ್ಜ ಫ್ರೀ: 20ರ ಸುಂದ್ರಿಯ ಭರ್ಜರಿ ಮದುವೆ- ಯುವಕರ ಹೊಟ್ಟೆಯಲ್ಲಿ ಬೆಂಕಿ

Published : May 25, 2026, 02:15 PM IST
Strange Marriage

ಸಾರಾಂಶ

ಸೌದಿ ಅರೇಬಿಯಾದಲ್ಲಿ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಯುವತಿಯನ್ನು ಒಪ್ಪಿಸಲು, ವರನು ರೋಲ್ಸ್ ರಾಯ್ಸ್ ಕಾರು ಮತ್ತು 5 ಕೆ.ಜಿ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು, ಈ ಸುದ್ದಿ ವೈರಲ್ ಆಗಿದೆ.

ಇಂದು ಎಷ್ಟೋ ಗಂಡುಮಕ್ಕಳು ಹೆಣ್ಣೇ ಸಿಕ್ತಿಲ್ಲ ಎಂದು ಗೋಳೋ ಎನ್ನುತ್ತಿದ್ದಾರೆ. ಇಂದಿನ ಬಹುತೇಕ ಹೆಣ್ಣುಮಕ್ಕಳ ಡಿಮಾಂಡ್​ ಕೇಳಿ ಗಂಡುಮಕ್ಕಳು ಮದ್ವೆನೇ ಬೇಡ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವು ಗಂಡುಮಕ್ಕಳು ಲಕ್ಷ ಲಕ್ಷ ದುಡಿದರೂ, ಸುರಸುಂದರ ಆಗಿದ್ರೂ ಯಾಕೋ ಮದುವೆಗೆ ಕಂಕಣ ಭಾಗ್ಯ ಕೂಡಿ ಬರುವುದೇ ಇಲ್ಲ. ಅದಕ್ಕೇ ಹೇಳೋದು ಮದುವೆ ಸ್ವರ್ಗದಲ್ಲಿಯೇ ಆಗಿರತ್ತೆ ಅಂತ. ಆದರೆ ಕೆಲವು ಗಂಡಸರಿಗೆ ಮಾತ್ರ ಒಂದಲ್ಲ, ಸ್ವರ್ಗದಲ್ಲಿಯೇ ನಾಲ್ಕೈದು ಮದುವೆನೂ ಆಗಿರುತ್ತೋ ಗೊತ್ತಿಲ್ಲ, ಅದಕ್ಕಾಗಿಯೇ ಈ ಭೂಮಿಯ ಮೇಲೂ ಅಷ್ಟೇ ಮಕ್ಕಳಾದರೆ, ಒಂದು ಡಜನ್​ಗೂ ಹೆಚ್ಚು ಮಕ್ಕಳು ಹುಟ್ಟುತ್ತಾರೆ.

ಅಜ್ಜನ ಮದುವೆ

ಅದಕ್ಕಿಂತಲೂ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಇಲ್ಲಿ ವರನಿಗೆ 70 ವರ್ಷ, ವಧುವಿಗೆ 20 ವರ್ಷ. ಕೆಲ ದಿನಗಳ ಹಿಂದಷ್ಟೇ ಇಂಥದ್ದೊಂದು ಕೇಸ್​, ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದ ಕೈಲಾ ಭಟ್ಟ ಪ್ರದೇಶದಲ್ಲಿ ನಡೆದಿತ್ತು. ಸಮಾಜವಾದಿ ಪಕ್ಷದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಹಾಜಿ ಖಲೀಲ್ ಅವರ ನಾಲ್ಕನೇ ಮದುವೆಯ ಬಗ್ಗೆ ಇದೀಗ ಭಾರಿ ವಿವಾದ ಸೃಷ್ಟಿಸಿತ್ತು. ಹಾಜಿ ಖಲೀಲ್​ ಅವರ ಎರಡನೇ ಪತ್ನಿ ನಜ್ರೀನ್ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿರುವ ಕಾರಣ ವಿಷಯ ಬೆಳಕಿಗೆ ಬಂದಿತ್ತು.

20ರ ಚೆಲುವೆ

ಆದರೆ ಈ ಕೇಸ್​ನಲ್ಲಿ ಸದ್ಯ ಯಾರೂ ದೂರು ಕೊಡಲಿಲ್ಲ. ಏಕೆಂದ್ರೆ ಇದು ನಡೆದಿರುವುದು ಸೌದಿ ಅರೇಬಿಯಾದಲ್ಲಿ. ಹಕೀಮ್ ಬಾಬರ್ ಜಿಯಾ ಎಂಬ 70 ವರ್ಷದ ಅಜ್ಜನ ಮದುವೆ ಮೊಮ್ಮಗಳ ವಯಸ್ಸಿನ ಅರ್ಥಾತ್​ 20ರ ಚೆಲುವೆಯ ಜೊತೆ ಆಗಿದೆ. ಹಾಗೆಂದು ಆಕೆ ಏನೂ ಈ ಮದುವೆಗೆ ಸುಮ್ಮನೇ ಒಪ್ಪಿಕೊಳ್ಳಲಿಲ್ಲ ಬಿಡಿ. ಹಕೀಮ್​ ಬಾಬಾ ಈಕೆಗೆ ರೋಲ್ಸ್​ ರಾಯ್ಸ್​ ಕಾರಿನ ಜೊತೆ 5 ಕೆ.ಜಿ ಚಿನ್ನ ಗಿಫ್ಟ್​ ಕೊಟ್ಟಿದ್ದಾನಂತೆ. ಅದಕ್ಕಾಗಿ ಮದುವೆಯಾಗಿದ್ದು, ಈ ಕಾರಿನ ಜೊತೆನೋ ಅಥ್ವಾ ಅಜ್ಜನ ಜೊತೆನೋ ಅನ್ನೋದು ಕನ್​ಫ್ಯೂಸ್​ ಇದೆ. ಅದೇನೇ ಆದ್ರೂ, ಇದರ ಸುದ್ದಿ ವೈರಲ್​ ಆಗುತ್ತಲೇ ಯುವಕರಂತೂ ಹೊಟ್ಟೆ ಉರಿದುಕೊಂಡದ್ದು ನಿಜ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಂಡ ರಶ್ಮಿಕಾ ಮಂದಣ್ಣ; ದೇವರಕೊಂಡ ಫ್ಯಾಮಿಲಿ ರಿಯಾಕ್ಷನ್ ಏನ್ ಗೊತ್ತಾ?
ಹೊಸದಾಗಿ ಮದುವೆಯಾಗಿರೋ ಹೆಣ್ಣುಮಗಳು 'ಗೂಗಲ್‌ ಸರ್ಚ್‌' ಮಾಡಿ ಕೇಳೋ ಪ್ರಶ್ನೆಗಳೇನು? ಈ ಸೀಕ್ರೆಟ್ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!