ಮೈಕ್ರೋಸಾಫ್ಟ್​ನಲ್ಲಿ 21 ವರ್ಷ ಕೆಲಸ ಮಾಡಿದ್ದ ಉದ್ಯೋಗಿಯ ವಜಾ, ಭಾವನಾತ್ಮಕ ಪತ್ರ ವೈರಲ್

Published : Jan 22, 2023, 05:05 PM ISTUpdated : Jan 22, 2023, 05:10 PM IST
ಮೈಕ್ರೋಸಾಫ್ಟ್​ನಲ್ಲಿ  21 ವರ್ಷ ಕೆಲಸ ಮಾಡಿದ್ದ ಉದ್ಯೋಗಿಯ ವಜಾ, ಭಾವನಾತ್ಮಕ ಪತ್ರ ವೈರಲ್

ಸಾರಾಂಶ

ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಅನೇಕ ಕಂಪೆನಿಗಳಲ್ಲಿ ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹಾಗೆಯೇ ಗೂಗಲ್‌, ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಅದರಲ್ಲೊಬ್ಬ ವ್ಯಕ್ತಿ ಬರೆದಿರುವ ಭಾವನಾತ್ಮಕ ಪತ್ರ ಎಲ್ಲೆಡೆ ವೈರಲ್ ಆಗಿದೆ.

ಕಳೆದ ಎರಡು ತಿಂಗಳುಗಳಲ್ಲಿ, ಟೆಕ್ ದೈತ್ಯರಾದ ಅಮೆಜಾನ್, ಮೆಟಾ, ಇಂಟೆಲ್, ಟ್ವಿಟರ್ , ಸಿಟಿ ಮತ್ತು ಮೋರ್ಗಾನ್ ಸ್ಟಾನ್ಲಿಯಂತಹ ಸೇರಿದಂತೆ  ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಭಾರಿ ಉದ್ಯೋಗ ಕಡಿತ ಘೋಷಿಸಿದೆ. ಹಾಗೆಯೇ ಹೆಸರಾಂತ ಕಂಪೆನಿ ಮೈಕ್ರೋಸಾಫ್ಟ್​ನಲ್ಲಿ ಈತನಕ ಸುಮಾರು 11,000 ಉದ್ಯೋಗಗಿಳನ್ನು ವಜಾಗೊಳಿಸಲಾಗಿದೆ. ಹಲವು ಉದ್ಯೋಗಿಗಳು ಇದರಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೆಲವರು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ಧಾರೆ. ಈ ಪೈಕಿ ಲಿಂಕ್ಡ್​ಇನ್​ನಲ್ಲಿ ಪ್ರಶಾಂತ ಕಮಾನಿ ಎನ್ನುವವರ ಪೋಸ್ಟ್​ ವೈರಲ್ ಆಗುತ್ತಿದೆ. ಅವರು ತಮ್ಮ ಪೋಸ್ಟ್‌ನಲ್ಲಿ ಭಾವನಾತ್ಮಕವಾಗಿ ಈ ರೀತಿ ಹೇಳಿಕೊಂಡಿದ್ದಾರೆ.

ಸಂಸ್ಥೆಗೆ ಭಾವನಾತ್ಮಕ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ ಉದ್ಯೋಗಿ
 'ನಾನು 21 ವರ್ಷಗಳ ಕಾಲ ಮೈಕ್ರೋಸಾಫ್ಟ್​ ಕಂಪೆನಿಯಲ್ಲಿ ಕೆಲಸ ಮಾಡಿ ಇದೀಗ ವಜಾಗೊಂಡಿದ್ದೇನೆ. ಈ ಕಂಪೆನಿ ವೃತ್ತಿ ಸಂಬಂಧದ ಬೆಳವಣಿಗೆಗೆ ಮಾತ್ರವಲ್ಲ, ಸಹೋದ್ಯೋಗಿಗಳೊಂದಿಗೆ ವೈಯಕ್ತಿಕ ಸಂಬಂಧ ಬೆಸೆಯಲೂ ಕಾರಣವಾಗಿದೆ. ಈ ಕಂಪೆನಿಯಿಂದ ನನ್ನನ್ನು ವಜಾ (Suspend)ಗೊಳಿಸಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ನನ್ನಲ್ಲಿ ಕೃತಜ್ಞತಾ (Gratitude) ಭಾವ ಮೂಡಿತು. ನನಗೆ ಇಷ್ಟು ವರ್ಷಗಳ ಕಾಲ ಕೆಲಸ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ' ಎಂದು ಹೇಳಿದ್ದಾರೆ.

380 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ವಿಗ್ಗಿ: ಸಂಸ್ಥೆಯ ಸಿಇಒ ಬರೆದ ಭಾವುಕ ಪತ್ರ ಇಲ್ಲಿದೆ

ಉದ್ಯೋಗಿಯ ಪತ್ರಕ್ಕೆ ನೆಟ್ಟಿಗರ ಮೆಚ್ಚುಗೆ
ಮಾತ್ರವಲ್ಲ 'ಕಾಲೇಜು ಶಿಕ್ಷಣ ಮುಗಿಸಿ ಸೇರಿದ ಮೊದಲ ಕೆಲಸ ಇದಾಗಿತ್ತು. ಮೊದಲ ಕೆಲಸವೆಂದಮೇಲೆ ಆತಂಕ, ಉತ್ಸಾಹ ಎರಡೂ ಇದ್ದದ್ದೇ. ಆದರೆ ಈ ಕಂಪೆನಿಯ ಅನೇಕ ಪ್ರತಿಭಾವಂತ, ಸ್ಮಾರ್ಟ್​ ಜನರೊಂದಿಗಿನ ಒಡನಾಟ ನನ್ನನ್ನು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುವಂತೆ ಮಾಡಿತು. ಈ ಪ್ರಯಾಣದಲ್ಲಿ ಅನೇಕರೊಂದಿಗೆ ವೈಯಕ್ತಿಕ ಒಡನಾಟ ಬೆಳೆಯಿತು. ಒಳ್ಳೆಯ ಮತ್ತು ಸವಾಲಿನ ಸಂದರ್ಭಗಳು ಬಂದಾಗೆಲ್ಲ ಅವರು ಜೊತೆಯಾದರು. ಒಂದು ದೊಡ್ಡ ಕುಟುಂಬವೇ ನಿರ್ಮಾಣವಾಯಿತು. ಅವರೆಲ್ಲರಿಗೂ ನನ್ನ ಧನ್ಯವಾದಗಳು (Thank you)' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್​ ಅನ್ನು ಈತನಕ 26,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 'ನೀವು ವಿಶಾಲ ಹೃದಯಿಗಳು. ನಿಮ್ಮೊಳಗಿನ ವೈಶಾಲ್ಯವನ್ನು ಯಾರೂ ಕಡಿಮೆಗೊಳಿಸಲು ಸಾಧ್ಯವಿಲ್ಲ. 20 ವರ್ಷಗಳ ನಂತರ ನಿಮ್ಮನ್ನು ಕಂಪೆನಿಯಿಂದ ವಜಾಗೊಳಿಸಿದರೂ ಕಂಪೆನಿಯ ಬಗ್ಗೆ ಇನ್ನೂ ವಿನಮ್ರತೆ ಹೊಂದಿದ್ದೀರಿ. ನಮಗೆ ನೀವೇ ಸ್ಫೂರ್ತಿ ಸರ್. ನಿಮಗೆ ಒಳ್ಳೆಯದಾಗಿಲಿ ಎಂದಿದ್ಧಾರೆ ಕೆಲವರು. ಇನ್ನು ಕೆಲವರು ಕೆಲಸದ (Work) ಬಗೆಗಿನ ವ್ಯಕ್ತಿಯ ಪ್ರೀತಿಗೆ ಹ್ಯಾಟ್ಸಾಫ್ ಅಂದಿದ್ದಾರೆ. ದಯವಿಟ್ಟು ನಿಮ್ಮ ಪ್ರೊಫೈಲ್​ ಅನ್ನು ನನಗೆ ಕಳಿಸಿ, ಸರಿಯಾದ ಅವಕಾಶವಿದ್ದಾಗ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂದು ಮತ್ತೊಬ್ಬರು ಹೇಳಿದ್ಧಾರೆ. ಅನೇಕರು ಇವರ ಶಾಂತ ಮತ್ತು ವಿನಮ್ರ ಸ್ವಭಾವವನ್ನು ಶ್ಲಾಘಿಸಿದ್ದಾರೆ. ಭವಿಷ್ಯದಲ್ಲಿ ಶುಭವಾಗಲಿ ಎಂದು ಹಾರೈಸಿದ್ಧಾರೆ.

ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ 6 ತಿಂಗಳಲ್ಲೇ ಉದ್ಯೋಗದಿಂದ ವಜಾಗೊಂಡ ಐಐಟಿ ಪದವೀಧರ!

16 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಯನ್ನೂ ವಜಾಗೊಳಿಸಿದ ಗೂಗಲ್
ಇನ್ನೊಂದೆಡೆ ಗೂಗಲ್‌ನ ಮೂಲ ಕಂಪನಿ Alphabet Inc 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಟೆಕ್ ದೈತ್ಯ ಸಂಸ್ಥೆಯ ಸಿಇಒ ಸುಂದರ್ ಪಿಚೈ ಅವರು ಮೆಮೊದಲ್ಲಿ ಸಾಮೂಹಿಕ ಉದ್ಯೋಗ ಕಡಿತದ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಿದರು.ಇವರಲ್ಲಿ ಜಸ್ಟಿನ್ ಮೂರ್ ಎಂಬ ಸಾಫ್ಟ್‌ವೇರ್ ಇಂಜಿನಿಯರಿಂಗ್ ಮ್ಯಾನೇಜರ್ ಕೂಡ ಸೇರಿದ್ದಾರೆ. ಜಸ್ಟಿನ್ 16.5 ವರ್ಷಗಳ ಕಾಲ Google ನಲ್ಲಿ ಕೆಲಸ ಮಾಡಿದ್ದಾರೆ. ಮೂರ್ 2006 ರಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಗೂಗಲ್‌ನಲ್ಲಿ ಕೆಲಸ ಪ್ರಾರಂಭಿಸಿದರು ಎಂದು ತಿಳಿದುಬಂದಿದೆ.. 2019 ರಲ್ಲಿ ಅವರನ್ನು ಸಾಫ್ಟ್‌ವೇರ್ ಇಂಜಿನಿಯರಿಂಗ್ ಮ್ಯಾನೇಜರ್ ಹುದ್ದೆಗೆ ಬಡ್ತಿ ಪಡೆದರು. ಆದ್ರೆ, ಇದೀಗ ಅವರನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ. 

ಈ ಬಗ್ಗೆ ಪೋಸ್ಟ್‌ ಮಾಡಿರುವ ಜಸ್ಟಿನ್, ಗೂಗಲ್‌ನಲ್ಲಿ 16.5 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನಾನು ಇಂದು ಬೆಳಗಿನ ಜಾವ 3 ಗಂಟೆಗೆ ಸ್ವಯಂಚಾಲಿತ ಖಾತೆಯನ್ನು ನಿಷ್ಕ್ರಿಯಗೊಳಿಸುವುದರ ಮೂಲಕ  12,000 ರಲ್ಲಿ ಒಬ್ಬನಾಗಿ ಕೆಲಸ ಬಿಡಲ್ಪಟ್ಟಿದ್ದೇನೆ. ನನ್ನ ಬಳಿ ಬೇರೆ ಯಾವುದೇ ಮಾಹಿತಿ ಇಲ್ಲ. ಏಕೆಂದರೆ ನಾನು ಯಾವುದೇ ಇತರ ಸಂವಹನಗಳನ್ನು ಸ್ವೀಕರಿಸಿಲ್ಲ. ಈಗ ನಾನು ಅದರ ವೆಬ್‌ಸೈಟ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌