ಹೆಂಡ್ತಿ ತೀರಿಹೋದ ನೋವಲ್ಲಿ ತಾನೇ ಅವಳಾದ ಪತಿ, ನ್ಯೂಯಾರ್ಕ್ ನಲ್ಲೊಂದು ವಿಲಕ್ಷಣ ಘಟನೆ!

Published : Jan 22, 2023, 04:20 PM IST
 ಹೆಂಡ್ತಿ ತೀರಿಹೋದ ನೋವಲ್ಲಿ ತಾನೇ ಅವಳಾದ ಪತಿ, ನ್ಯೂಯಾರ್ಕ್ ನಲ್ಲೊಂದು ವಿಲಕ್ಷಣ ಘಟನೆ!

ಸಾರಾಂಶ

ಶೆರ್ಲಿನ್ ಅನ್ನೋ ವ್ಯಕ್ತಿ ಈಗ ಹೆಣ್ಣು. ಮೊದಲು ಗಂಡಾಗಿದ್ದವರು. ಯಾವಾಗ ಇವರ ಹೆಂಡತಿ ಸ್ತನ ಕ್ಯಾನ್ಸರ್‌ನಿಂದ ಮೃತಪಟ್ಟರೋ ಆಗ ಬಹಳ ನೋವು ಪಟ್ಟರು. ಆಕೆಯಂತೇ ಬದಲಾಗಬೇಕು ಅಂದುಕೊಂಡು ಲಿಂಗಪರಿವರ್ತನೆಯನ್ನೂ ಮಾಡಿಸಿಕೊಂಡರು.

ಈಕೆಯ ಹೆಸರು ಈಗ ಶೆರ್ಲಿನ್‌. ಆದರೆ ಮೊದಲಿನ ಹೆಸರು ಟೋನಿ. ಇವರದು ವಿಚಿತ್ರ ಪ್ರಕರಣ. ಶುರುವಲ್ಲಿ ಹುಡುಗೀರನ್ನು ಕಂಡ್ರೆ ಆಗ್ತಿರಲಿಲ್ಲ. ಆದರೆ ಅವರ ಉಡುಗೆ ತೊಡುಗೆ ಬಗ್ಗೆ ಒಂಥರಾ ಆಕರ್ಷಣೆ. ಅವರ ಉಡುಗೆ ತೊಟ್ಟುಕೊಳ್ಳೋದರಲ್ಲಿ ಒಂಥರಾ ಖುಷಿ. ಆದರೆ ಅದು ಎಪ್ಪತ್ತರ ದಶಕ. ಯಾರು ಏನಂದುಕೊಳ್ತಾರೋ, ಎಲ್ಲಿ ಕೀಳಾಗಿ ಮಾತಾಡ್ತಾರೋ ಅಂತ ಭಯ ಪಟ್ಟು ಇಂಥಾ ಬಯಕೆಗಳನ್ನು ಎಲ್ಲೋ ಟೋನಿ ಹೇಳ್ಕೊಳ್ತಿರಲಿಲ್ಲ. ಆದರೆ ಹೆಣ್ಣಾಗಿ ಹುಟ್ಟಿ ಹೆಣ್ಣಾಗಿ ಖುಷಿಯಲ್ಲಿ ಬದುಕ್ತಿರೋ ಹೆಣ್ಣುಮಕ್ಕಳನ್ನು ಕಂಡಾಗ ಅಸೂಯೆ ಆಗ್ತಿತ್ತು. ಸಿಟ್ಟಲ್ಲಿ ಒದ್ದಾಡೋ ಹಾಗೆ ಆಗ್ತಿತ್ತು. ಆದರೆ ಎಲ್ಲೂ ತೋರಿಸಿಕೊಳ್ಳೋ ಹಾಗಿಲ್ಲ. ಹೆಂಗಸರು ಬಳಸುವ ಆಭರಣಗಳು, ಮೇಕಪ್‌ಗಳನ್ನು ತುಂಬಾ ಇಷ್ಟ ಪಡುತ್ತಾ ಇದ್ದ. ಇದಕ್ಕಾಗಿ ಈತ ಒಂದು ಬಾರಿ ಮಹಿಳೆಯರ ಆಭರಣವನ್ನು ಕಳ್ಳತನವನ್ನು ಮಾಡಿದ್ದ. ಬರ್ತಾ ಬರ್ತಾ ಈ ಟೋನಿ ತುಂಬಾ ಬದಲಾಗುತ್ತಾನೆ. ಮಹಿಳೆಯರ ಹಾಗೆಯೇ ಬಟ್ಟೆಗಳನ್ನು ತೊಡುತ್ತಾನೆ, ಮೇಕಪ್ ಮಾಡಿಕೊಳ್ಳುತ್ತಾನೆ. ಆದರೆ ಇದೆಲ್ಲ ತಾನೊಬ್ಬನೇ ಇದ್ದಾಗ. ಹೊರ ಪ್ರಪಂಚದಲ್ಲಿ ತಾನು ಒಬ್ಬ ಗಂಡಸಿನ ಹಾಗೆಯೇ ವರ್ತಿಸುತ್ತಿರುತ್ತಾನೆ.

ಆದರೆ ಯಾವಾಗ 1980ರಲ್ಲಿ ಅಂದರೆ ತನಗೆ 23 ವರ್ಷದವರಾಗಿದ್ದಾಗ ಥೆರೆಸಾ ಎಂಬ ಹುಡುಗಿಯನ್ನು ಮೀಟ್ ಮಾಡ್ತಾನೋ ಆಗ ಮೊದಲ ಬಾರಿ ಹುಡುಗಿಯ ಬಗ್ಗೆ ಸಿಟ್ಟಿನ ಬದಲು ಅಪ್ಯಾಯಮಾನ ಭಾವ ಹುಟ್ಟಿತು. ಆಕೆಯ ಬಗ್ಗೆ ಪ್ರೇಮ ಶುರುವಾಯ್ತು. ಅಲ್ಲಿಂದ ಬದುಕೂ ಬದಲಾಯ್ತು. ತನ್ನ ಹೆಣ್ಣಂತಿರಬೇಕು ಅನ್ನೋ ಬಯಕೆಯನ್ನೆಲ್ಲ ಒತ್ತಟ್ಟಿಗಿಟ್ಟು ಗಂಡಸಿನ ಹಾಗೆಯೇ ಇರುತ್ತಾನೆ. ಬರುಬರುತ್ತಾ ಥೆರೆಸಾಳಿಗೆ ಟೋನಿ ಮೊದಲು ಹೆಂಗಸರ ಹಾಗೆ ಬಟ್ಟೆಗಳನ್ನು ಧರಿಸುತ್ತಾ ಇದ್ದ ಮತ್ತು ಆತನಿಗೆ ಹಾಗೆ ಇರೋದು ತುಂಬಾ ಇಷ್ಟ ಎಂಬ ವಿಷಯ ತಿಳಿಯಿತು. ಆದರೂ ಆಕೆ ಏನು ಹೇಳೋದಿಲ್ಲ. ಆದರೆ ಟೋನಿ ಓರ್ವ ಗಂಡಸಿನ ಹಾಗೆಯೇ ಇರುತ್ತಾನೆ. ಅವರಿಬ್ಬರ ಬದುಕು ಚೆನ್ನಾಗಿಯೇ ನಡೆಯುತ್ತಿರುತ್ತದೆ. ಹೆಂಡತಿಯ ಬಗ್ಗೆ ಟೋನಿಗೆ ಬಹಳ ಪ್ರೀತಿ. ಅಷ್ಟು ವರ್ಷದ ದಾಂಪತ್ಯದಲ್ಲಿ ಅವರ ನಡುವೆ ಜಗಳ, ವೈಮನಸ್ಸು ಬಂದಿದ್ದು ತುಂಬ ಕಡಿಮೆ.

ದಾಂಪತ್ಯದಲ್ಲಿ ಎಲ್ಲವೂ ಸರಿ ಇದೆ ಅಂದ್ರೆ ಹೀಗಿರುತ್ತೆ ಬದುಕು!

ನಲವತ್ತು ವರ್ಷ ಜೊತೆಗಿದ್ದ ಈ ಜೋಡಿ 2019ರಲ್ಲಿ ಅಗಲಬೇಕಾಗುತ್ತದೆ. ಇದಕ್ಕೆ ಕಾರಣ ಪತ್ನಿ ಥೆರಸಾ ನಿಧನ. ಹೌದು, 2016ರಲ್ಲಿ ಥೆರೆಸಾಳಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. 2019ರಲ್ಲಿ ಆಕೆ ನಿಧನ ಹೊಂದುತ್ತಾರೆ. ಹೆಚ್ಚು ಕಮ್ಮಿ ನಲವತ್ತು ವರ್ಷ ಕಾಲ ತನ್ನ ಸರ್ವಸ್ವವೂ ಆಗಿದ್ದ ಆಕೆ ಇನ್ನಿಲ್ಲ ಅನ್ನೋದು ಟೋನಿಗೆ ತುಂಬಾ ಘಾಸಿಯಾಗುತ್ತದೆ. ಜೀವನವೇ ಶೂನ್ಯ ಎಂದು ಅನಿಸಿಬಿಡುತ್ತದೆ. ಆತ ಮಾನಸಿಕವಾಗಿ ಬಹಳ ಕುಗ್ಗಿ ಹೋಗುತ್ತಾರೆ. ಮತ್ತೆ ಹಳೆಯ ನೆನಪು ಬರತೊಡಗುತ್ತದೆ. ತಾನು ಹೆಣ್ಣಂತೆ ಬದುಕಬೇಕು ಅಂತ ಬಯಸಿದ್ದೆಲ್ಲ ಮನಸ್ಸಿಗೆ ಬರುತ್ತದೆ.

ಈಗ ಕಾಲ ಬದಲಾಗಿರುತ್ತದೆ. ಟ್ರಾನ್ಸ್‌ ಜೆಂಡರ್ಸ್ ಬಗೆಗೆ ಜನ ಗೌರವದಿಂದ ನೋಡುತ್ತಿದ್ದಾರೆ ಅನ್ನೋದು ಟೋನಿ ಗಮನಕ್ಕೆ ಬರುತ್ತೆ. ಆತ ವೈದ್ಯರ ಬಳಿ ಹೋಗಿ ಅಲ್ಲಿ ತನ್ನ ಲಿಂಗವನ್ನೇ ಬದಲಾಯಿಸಿಕೊಳ್ತಾರೆ. ಅಂದ್ರೆ ಟೋನಿ ಹೆಣ್ಣಾಗಿ ಬದಲಾಗುತ್ತಾರೆ. ಶೆರ್ಲಿನ್ ಅನ್ನೋ ಹೆಸರು ಇಟ್ಟುಕೊಳ್ಳುತ್ತಾರೆ. ಇವರ ಹೆಂಡತಿ ಯಾವ ಬಟ್ಟೆಗಳನ್ನು ಧರಿಸುತ್ತಾ ಇದ್ದರೋ ಅದೇ ರೀತಿ ಬಟ್ಟೆ ಧರಿಸುತ್ತಾರೆ. ಆಕೆಯ ತಲೆಗೂದಲಿನ ಬಣ್ಣದ ವಿಗ್ ಮಾಡಿಸಿಕೊಂಡು ಹಾಕಿಕೊಳ್ಳುತ್ತಾರೆ. ಒಟ್ಟಿನಲ್ಲಿ ಟೋನಿ ತನ್ನ ಪತ್ನಿಯಂತೇ ಬದಲಾಗುತ್ತಾರೆ. ಇದಕ್ಕೆ ಅವರ ಮಕ್ಕಳು ಕೂಡ ಇದಕ್ಕೆ ಸಾತ್ ನೀಡುತ್ತಾರೆ. ಹೀಗೆ ಪತ್ನಿಯ ನಿಧನದ ಬಳಿಕ ಪತ್ನಿಯೇ ಆಗಿ ಬದಲಾಗುವ ಈ ವ್ಯಕ್ತಿಯನ್ನು ಜಗತ್ತೇ ಅಚ್ಚರಿಯಿಂದ ನೋಡುತ್ತೆ.

ತವರಿನಿಂದ ಬಾರದ ಹೆಂಡ್ತಿ, ಸಿಟ್ಟಿಗೆದ್ದು ಖಾಸಗಿ ಅಂಗವನ್ನೇ ಕತ್ತರಿಸಿಕೊಂಡ ಗಂಡ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ